ಎಕ್ಸ್‌ಪೈರಿ ಡೇಟ್‌ ಮಾತ್ರ ಚೆಕ್‌ ಮಾಡೋದಲ್ಲ, ಔಷಧದ ಮೇಲಿನ ಕೆಂಪು ಪಟ್ಟಿಯ ರಹಸ್ಯ ಏನು?

Published : Nov 02, 2026, 07:42 AM IST
Red Line On Medicine Strips

ಸಾರಾಂಶ

ಔಷಧಿಯ ಪ್ಯಾಕೆಟ್ ಮೇಲೆ ಮುದ್ರಿಸಲಾಗಿರುವ ಕೆಂಪು ರೇಖೆಯು ಕೇವಲ ವಿನ್ಯಾಸವಲ್ಲ, ಅದು ವೈದ್ಯರ ಚೀಟಿ ಇಲ್ಲದೆ ಔಷಧ ನೀಡಬಾರದು ಎಂಬ ಎಚ್ಚರಿಕೆಯಾಗಿದೆ. ವೈದ್ಯರನ್ನು ಸಂಪರ್ಕಿಸದೆ ಸ್ವಯಂ-ಔಷಧಿ ಮಾಡಿಕೊಳ್ಳುವುದು ಅಪಾಯಕಾರಿ. ಆದ್ದರಿಂದ ಯಾವಾಗಲೂ ವೈದ್ಯರ ಸಲಹೆಯ ಮೇರೆಗೆ ಮಾತ್ರ ಔಷಧಿಗಳನ್ನು ತೆಗೆದುಕೊಳ್ಳಬೇಕು.

ನವದೆಹಲಿ: ಅನಾರೋಗ್ಯ ಕಾಡಿದಾಗ ಔಷಧಿ ಖರೀದಿಸಲು ಮೆಡಿಕಲ್‌ ಸ್ಟೋರ್‌ಗೆ ಹೋಗ್ತೇವೆ. ವೈದ್ಯರು ನೀಡಿದ್ದ ಚೀಟಿಯನ್ನ ನೀಡುತ್ತೇವೆ. ಮೆಡಿಕಲ್‌ ಸಿಬ್ಬಂದಿ ನೀಡಿದ್ದ ಔಷಧಿಯನ್ನ ಕೊಂಡು ಬರುತ್ತೇವೆ. ಕೆಲವರು ಔಷಧಿ ನೀಡಿದ ಬೆನ್ನಲ್ಲೇ ಮೆಡಿಸಿನ್‌ ಮೇಲೆ ಬರೆಯಲಾಗಿರುವ ಹೆಸರು ಓದುತ್ತಾರೆ. ಎಕ್ಸ್‌ಪೈರಿ ಡೇಟ್‌ ನೋಡಿ ಮನೆಗೆ ತರುತ್ತಾರೆ. ನಿಮಗೆ ಗೊತ್ತಾ? ಔಷಧದ ಪ್ಯಾಕೆಟ್‌ ಮೇಲೆ ಮುದ್ರಿಸಲಾಗಿರುವ ಕೆಂಪು ರೇಖೆಯಲ್ಲಿ ಏನು ಬರೆದಿರುತ್ತದೆ ಎಂದು?

ಕೆಂಪು ರೇಖೆಯ ಅರ್ಥ ಏನು ಗೊತ್ತಾ

ಕೆಲವರು ಇದನ್ನು ಗಮನಿಸುತ್ತಾರೆ. ಇನ್ನು ಕೆಲವರು ನಿರ್ಲಕ್ಷ್ಯ ಮಾಡಿಬಿಡುತ್ತಾರೆ. ಹಾಗಿದ್ದರೆ ಅದರ ಮೇಲೆ ಏನು ಬರೆಯಲಾಗಿರುತ್ತದೆ? ಅನೇಕರು ಈ ಕೆಂಪು ಲೈನ್‌ ಅನ್ನು ಕಂಪನಿಯ ಚಿಹ್ನೆ ಎಂದು ಭಾವಿಸುತ್ತಾರೆ. ಇದು ಸಾಮಾನ್ಯ ವಿನ್ಯಾಸವಲ್ಲ. ಈ ಕೆಂಪು ಪಟ್ಟಿಯು ನಿಮ್ಮ ಸುರಕ್ಷತೆ ಮತ್ತು ನಿಮ್ಮ ಔಷಧಿಗಳ ಸರಿಯಾದ ಬಳಕೆಗೆ ಸಂಬಂಧ ಹೊಂದಿದೆ. ಭಾರತದ ಔಷಧ ನಿಯಮಗಳು.. 1945, ಔಷಧಿಗಳ ಪ್ಯಾಕೇಜಿಂಗ್ ಮತ್ತು ಲೇಬಲ್ ಮಾಡುವ ಬಗ್ಗೆ ನಿರ್ದಿಷ್ಟ ನಿಯಮಗಳು ಇವೆ. ಇದರ ಅಡಿಯಲ್ಲಿ ಕೆಲವು ಔಷಧಿಗಳಿಗೆ ಲೇಬಲ್‌ನ ಎಡಭಾಗದಲ್ಲಿ ನೇರವಾದ ಕೆಂಪು ಪಟ್ಟಿ ಬಳಸಲಾಗುತ್ತದೆ.

ಈ ಲೇಬಲ್ ಹೊಂದಿರುವ ಔಷಧಿಯು ಪ್ರಿಸ್ಕ್ರಿಪ್ಷನ್ ಮೆಡಿಸಿನ್ ಎಂದರ್ಥ. ಸರಳವಾಗಿ ಹೇಳುವುದಾದರೆ..‌ ಈ ಔಷಧಿಯನ್ನು ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೇ ವಿತರಿಸುವುದಿಲ್ಲ. ಪ್ಯಾಕೇಜಿಂಗ್‌ನಲ್ಲಿ ಎಚ್ಚರಿಕೆಯನ್ನೂ ನೀಡಲಾಗುತ್ತದೆ. ಇದನ್ನು ನಿಯಮಿತ ಔಷಧಿ ಎಂದು ಪರಿಗಣಿಸಿರೋದ್ರಿಂದ ನೀವೇ ತೆಗೆದುಕೊಳ್ಳುವುದು ಕೆಟ್ಟ ನಿರ್ಧಾರ.

ಔಷಧಿ ಪ್ಯಾಕೇಜ್‌ನಲ್ಲಿರುವ ಪ್ರತಿಯೊಂದು ಕೆಂಪು ಲೇಬಲ್ ಈ ವಿಶೇಷ ಪ್ರಿಸ್ಕ್ರಿಪ್ಷನ್ ಪಟ್ಟಿಯನ್ನು ಪ್ರತಿನಿಧಿಸುವುದಿಲ್ಲ. ಔಷಧಿ ಲೇಬಲ್‌ಗಳು ವಿಭಿನ್ನ ಎಚ್ಚರಿಕೆಗಳು ಮತ್ತು ಚಿಹ್ನೆಗಳನ್ನು ಹೊಂದಿರುತ್ತದೆ. ಹಾಗಾಗಿ ಕೇವಲ ಕೆಂಪು ಬಣ್ಣವನ್ನು ಆಧರಿಸಿ ಔಷಧದ ಬಗ್ಗೆ ಯಾವುದೇ ಊಹೆಗಳನ್ನು ಮಾಡಬಾರದು. ಯಾವುದೇ ಔಷಧಗಳನ್ನ ಬಳಸುವ ಮೊದಲು ಲೇಬಲ್‌ನಲ್ಲಿರುವ ಹೆಸರು, ಡೋಸೇಜ್, ಸಂಯೋಜನೆ, ಮುಕ್ತಾಯ ದಿನಾಂಕ ಮತ್ತು ಸೂಚನೆಗಳನ್ನು ಓದುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು.

ವೈದ್ಯರನ್ನು ಸಂಪರ್ಕಿಸದೆ ಸ್ವಯಂ-ಔಷಧಿ ಸುರಕ್ಷಿತವಲ್ಲ. ನಮ್ಮಲ್ಲಿ ಅನೇಕರು ವೈದ್ಯರು ಯಾವತ್ತೋ ನೀಡಿದ ಪ್ರಿಸ್ಕ್ರಿಪ್ಷನ್ ತೋರಿಸಿ ಮೆಡಿಸಿನ್‌ ಖರೀದಿಸುತ್ತಾರೆ. ಇದು ಸರಿಯಾದ ವಿಧಾನವಲ್ಲ. ಯಾವುದೇ ಆರೋಗ್ಯ ಸಮಸ್ಯೆ ಕಾಡಿದಾಗ ವೈದ್ಯರನ್ನು ಸಂಪರ್ಕಿಸಬೇಕು. ವೈದ್ಯರು ಸೂಚಿಸಿದ ಔಷಧಿಗಳನ್ನು ಮಾತ್ರ ತೆಗೆದುಕೊಳ್ಳಿ. ಬಳಸುವ ಮೊದಲು ಮುಕ್ತಾಯ ದಿನಾಂಕವನ್ನು ತಪ್ಪದೇ ಪರಿಶೀಲಿಸಿಕೊಳ್ಳಿ. ಇನ್ನು, ವೈದ್ಯರ ಸಂಪರ್ಕ ಇಲ್ಲದೇ ಮೆಡಿಕಲ್‌ ಸ್ಟೋರ್‌ಗೆ ಹೋಗಿ ಔಷಧಿ ತಂದು ಅದರ ಸೇವನೆ ತುಂಬಾ ಡೇಂಜರ್.‌

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಫ್ರಿಜ್‌ನಿಂದ ತೆಗೆದ ತಣ್ಣನೆಯ ಮೊಸರು ತಿನ್ನುತ್ತೀರಾ? ಆರೋಗ್ಯದ ಮೇಲೆ ಬೀರುತ್ತೆ ಸಿಕ್ಕಾಪಟ್ಟೆ ಪರಿಣಾಮ!!
ಡಾಂಬರು ಗುಳಿಗೆ ಬಳಸ್ತೀರಾ? ಅದರಲ್ಲಿ ಏನಿದೆ, ಮನುಷ್ಯನ ದೇಹಕ್ಕೆ ಅದೆಷ್ಟು ಡೇಂಜರ್? A ಟು Z ಮಾಹಿತಿ ಇಲ್ಲಿದೆ!