ವೀರ್ಯ ಉತ್ಪಾದಿಸುವ ಪ್ರಾಸ್ಟೇಟ್‌ನ ಕ್ಯಾನ್ಸರ್‌ ಪತ್ತೆಗೆ ನೂತನ ತಂತ್ರಜ್ಞಾನ

By Kannadaprabha NewsFirst Published Jan 17, 2023, 9:17 AM IST
Highlights

ವೀರ್ಯ ಉತ್ಪಾದಿಸುವ ಪ್ರಾಸ್ಟೇಟ್‌ನ ಕ್ಯಾನ್ಸರ್‌ ಪತ್ತೆಗೆ ನೂತನ ತಂತ್ರಜ್ಞಾನವನ್ನು ನಗರದ ಫೋರ್ಟಿಸ್‌ ಆಸ್ಪತ್ರೆಯಲ್ಲಿಅಳವಡಿಸಲಾಗಿದ್ದು, ಏನಿದು ಟೆಕ್ನೋಲಜಿ? ಇಲ್ಲಿದೆ ಮಾಹಿತಿ. 

ಬೆಂಗಳೂರು: ದೇಶದಲ್ಲಿಯೇ ಮೊದಲ ಬಾರಿಗೆ ಪ್ರಾಸ್ಟೆಟ್‌ ಕ್ಯಾನ್ಸರ್‌ ಶೀಘ್ರ ಪತ್ತೆ ಹಚ್ಚುವ ಅಲ್ಟಾ್ರಸೌಂಡ್‌ ಎಂಆರ್‌ಐ ಸೌಲಭ್ಯವನ್ನು ನಗರದ ಪೋರ್ಟಿಸ್‌ ಆಸ್ಪತ್ರೆ ಪರಿಚಯಿಸಿದೆ. ಜತೆಗೆ ಆಸ್ಪತ್ರೆಯಲ್ಲಿ ನಾಲ್ಕು ವರ್ಷಗಳಲ್ಲಿ ರೋಬೊಟಿಕ್‌ ತಂತ್ರಜ್ಞಾನ ಬಳಸಿ 500 ಮಂದಿಗೆ ಯಶಸ್ವಿಯಾಗಿ ಮೂತ್ರನಾಳ ಶಸ್ತ್ರಚಿಕಿತ್ಸೆ ಮಾಡಲಾಗಿದೆ.

ಈ ಕುರಿತು ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಫೋರ್ಟಿಸ್‌ ಆಸ್ಪತ್ರೆಯ ಮೂತ್ರಶಾಸ್ತ್ರ ತಜ್ಞ ಡಾ ಮೋಹನ್‌ ಕೇಶವಮೂರ್ತಿ, ಪುರುಷರಲ್ಲಿ ವೀರ್ಯವನ್ನು ಉತ್ಪಾದಿಸುವ ಗ್ರಂಧಿ ಪ್ರಾಸ್ಟೇಟ್‌. ಇದರ ಕ್ಯಾನ್ಸರ್‌ ಪುರುಷರನ್ನು ಅತಿ ಹೆಚ್ಚು ಬಾಧಿಸುವ ಪ್ರಮುಖ ಖಾಯಿಲೆ. ಆರಂಭದಲ್ಲಿಯೇ ಪತ್ತೆ ಹಚ್ಚಿದರೆ ಜೀವ ಉಳಿಸಬಹುದು. ನಿಖರವಾದ ತಂತ್ರಜ್ಞಾನ ಇಲ್ಲದಿರುವುದು, ಪ್ರಾರಂಭದಲ್ಲಿಯೇ ಪತ್ತೆ ಹಚ್ಚಲು ಕಷ್ಟವಾಗುತ್ತಿತ್ತು. ಸದ್ಯ ಟ್ರಾನ್ಸ್‌ರೆಕ್ಟಲ್‌ ಬಿಕೆ ಅಲ್ಟಾ್ರಸೌಂಡ್‌ ಎಂಆರ್‌ಐ ಫ್ಯೂಷನ್ ಬಯಾಪ್ಸಿ ಎಂಬ ತಂತ್ರಜ್ಞಾನ ಪರಿಚಯಿಸಲಾಗಿದೆ. ಕ್ಯಾನ್ಸರ್‌ ಗಡ್ಡೆಯನ್ನು ಈ ಎಂಆರ್‌ಐನ ಮೂಲಕ ಸ್ಪಷ್ಟವಾಗಿ ನೋಡಬಹುದು. ಇದರಿಂದ ಆ ಕ್ಯಾನ್ಸರ್‌ ಗಡ್ಡೆಯನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆದು ಹಾಕಬಹುದು ಎಂದರು.

ನಾಲ್ಕು ವರ್ಷಗಳಿಂದ ರೋಬೋಟಿಕ್‌ ತಂತ್ರಜ್ಞಾನವನ್ನು ಬಳಸಿಕೊಂಡು ಮೂತ್ರಶಾಸ್ತ್ರಕ್ಕೆ ಸಂಬಂಧಿಸಿದ 500 ಮೂತ್ರಶಾಸ್ತ್ರ ಸಂಬಂಧಿಸಿದ ಶಸ್ತ್ರಚಿಕಿತ್ಸೆಯನ್ನು ಪೂರ್ಣಗೊಳಿಸುವ ಮೂಲಕ ಫೆäರ್ಟಿಸ್‌ ಆಸ್ಪತ್ರೆ ಮೈಲುಗಲ್ಲು ಸಾಧಿಸಿದೆ. ಕಡಿಮೆ ಅವಧಿ, ನೋವುರಹಿತ, ಹೆಚ್ಚಿನ ಅಪಾಯವಿಲ್ಲದ, ಸುಲಭ, ಯಶಸ್ವಿ ಶಸ್ತ್ರಚಿಕಿತ್ಸೆಯನ್ನು ನಡೆಸಲು ರೋಬೊಟಿಕ್‌ ತಂತ್ರಜ್ಞಾನ ಸಹಾಯ ಮಾಡಿದೆ. ಕೆಲವರಿಗೆ ಹಳೆ ಮಾದರಿಯ ಶಸ್ತ್ರಚಿಕಿತ್ಸೆಯ ನಂತರ ಡಯಾಬಿಟಿಸ್‌ ಬರುವ ಸಾಧ್ಯತೆ ಇರುತ್ತಿತ್ತು. ಆದರೆ, ರೋಬೋಟಿಕ್‌ ಚಿಕಿತ್ಸೆಯು ಆ ಅಪಾಯವನ್ನೂ ಕಡಿಮೆ ಮಾಡಿದೆ ಎಂದು ತಿಳಿಸಿದರು.

ಹೇಗಿರುತ್ತೆ ಪ್ಲಾಸ್ಟೇಟ್ ಕ್ಯಾನ್ಸರ್ ಸೂಚನೆ

ಯುವಕರನ್ನೂ ಕಾಡುತ್ತಿದೆ ಈ ಕ್ಯಾನ್ಸರ್:
ಈ ಮೊದಲು ಪ್ರಾಸ್ಟೇಟ್ ಕ್ಯಾನ್ಸರ್ ರೋಗ ಬರುವ ಸರಾಸರಿ ವಯಸ್ಸು 68 ಎಂದು ಇತ್ತು. ಆದರೆ, ಈಗ ಯುವಕರಿಗೂ ಪ್ರಾಸ್ಟೇಟ್ ಕ್ಯಾನ್ಸರ್ ಬರಬಹುದಾಗಿದೆ. ಜಾಗತಿಕವಾಗಿ, 15 ಮತ್ತು 40ರ ನಡುವಿನ ವಯಸ್ಸಿನ ಪುರುಷರಲ್ಲೂ ಆರಂಭಿಕ ಪ್ರಾಸ್ಟೇಟ್ ಕ್ಯಾನ್ಸರ್ ಹೆಚ್ಚಳ ಕಂಡುಬಂದಿದೆ. ನಿಯಮಿತ ಪರೀಕ್ಷೆ ಮಾಡಿಸುವುದು, ರೋಗಲಕ್ಷಣಗಳನ್ನು ತಿಳಿದುಕೊಳ್ಳುವುದು ಬದುಕುಳಿಯಲು ಸಹಕರಿಸುತ್ತದೆ. ವಯಸ್ಸಾದ ಪುರುಷರಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್ ರೋಗ ನಿರ್ಣಯಕ್ಕಿಂತ ಯುವಕರಲ್ಲಿಯೇ ಈ ಕ್ಯಾನ್ಸರ್ ರೋಗನಿರ್ಣಯ ಬೇಗ ಸಾಧ್ಯ.

ಅಪಾಯ ತಗ್ಗಿಸುವುದು ಹೇಗೆ?
ಸಾಕಷ್ಟು ಹಣ್ಣುಗಳು ಮತ್ತು ತರಕಾರಿಗಳಿಂದ ಕೂಡಿದ ಆರೋಗ್ಯಕರ ಆಹಾರ, ನಿಯಮಿತ ವ್ಯಾಯಾಮ (Regular Exercie), ಆರೋಗ್ಯಕರ ತೂಕವನ್ನು (Health Weight) ಕಾಪಾಡಿಕೊಳ್ಳುವುದು ಪ್ರಾಸ್ಟೇಟ್ ಕ್ಯಾನ್ಸರ್ ಅಪಾಯ ಕಡಿಮೆ ಮಾಡುತ್ತದೆ. ಕಡಿಮೆ ಕೊಬ್ಬಿನ ಆಹಾರವನ್ನು ಸೇವಿಸುವುದು, ದೈನಂದಿನ ಡೈರಿ ಪದಾರ್ಥ ಸೇವನೆ ಪ್ರಮಾಣವನ್ನು ಕಡಿಮೆ ಮಾಡುವುದರಿಂದ ನಿಮ್ಮ ಒಟ್ಟಾರೆ ಆರೋಗ್ಯ ಸುಧಾರಿಸಬಹುದು. ದೈಹಿಕವಾಗಿ ಸಕ್ರಿಯವಾಗಿರುವುದು ಮುಖ್ಯ. ನಿಯಮಿತ ಸ್ಕ್ರೀನಿಂಗ್ ಮಾಡಿಸಿಕೊಳ್ಳುವುದು ನಿಮ್ಮ ಅಪಾಯವನ್ನು ಗಣನೀಯವಾಗಿ ಕಡಿಮೆ ಮಾಡಬಹುದು. 

ಪ್ರಾಸ್ಟೇಟ್ ಕ್ಯಾನ್ಸರ್ ಅಪಾಯ ಯಾರಿಗೆ ಜಾಸ್ತಿ? ಯಾರಿಗೆ ಕಡಿಮೆ? ನಿತ್ಯ ಸ್ಖಲನ ಪರಿಹಾರವೇ?

click me!