ಮಕ್ಕಳಲ್ಲಿ ಪತ್ತೆಯಾಗುತ್ತಿದೆ ವಿಚಿತ್ರ ಪಿತ್ತಜನಕಾಂಗದ ಕಾಯಿಲೆ, ರೋಗಲಕ್ಷಣಗಳೇನು ?

By Suvarna News  |  First Published Apr 16, 2022, 4:02 PM IST

ಕೊರೋನಾ (Corona) ಸೋಂಕಿನ ಸತತ ಅಲೆಯಿಂದ ಜನರು ಕಂಗೆಟ್ಟಿದ್ದಾಯ್ತು. ಈ ಮಧ್ಯೆ ಕೋವಿಡ್ ಎಕ್ಸ್‌ಇ ವೇರಿಯೆಂಟ್ ಸಹ ಜನರಲ್ಲಿ ಭೀತಿ ಹುಟ್ಟಿಸಿದೆ. ಅಷ್ಟೇ ಅಲ್ಲ, ಗ್ಲೆಂಡ್, ಅಮೇರಿಕಾದಲ್ಲಿ ಮಕ್ಕಳಲ್ಲಿ ವಿಚಿತ್ರ ಕಾಯಿಲೆ (Disease)ಯೊಂದು ಪತ್ತೆಯಾಗುತ್ತದೆ. ಆರಂಭದಲ್ಲಿ ಕೆಲವೇ ಮಕ್ಕಳಲ್ಲಿ ಈ ಕಾಯಿಲೆ ಕಾಣಿಸಿಕೊಂಡಿದ್ದರೂ ಪೋಷಕರಲ್ಲಿ (Parents) ಆತಂಕ ಹೆಚ್ಚಾಗಿದೆ.


ಮಕ್ಕಳ ಆರೋಗ್ಯ (Health) ತುಂಬಾ ಸೂಕ್ಷ್ಮವಾದ ವಿಚಾರ. ಹೀಗಾಗಿ ಪ್ರತಿ ಹಂತದಲ್ಲು ಅವರ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾದುದು ಅಗತ್ಯ. ಅದರಲ್ಲೂ ಇತ್ತೀಚಿಗೆ ಒಂದೊಂದಾಗಿ ಕಾಣಿಸಿಕೊಳ್ಳುತ್ತಿರುವ ಸೋಂಕಿನ ಅಲೆಗಳ ಹಾವಳಿಯಿಂದ ಮಕ್ಕಳ (Children) ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ. ಕೋವಿಡ್ ಎಕ್ಸ್‌ಇ ವೆರೇಯೆಂಟ್ ಹಲವೆಡೆ ಪತ್ತೆಯಾಗಿರುವ ಬೆನ್ನಲ್ಲೇ ಇಂಗ್ಲೆಂಡ್, ಅಮೇರಿಕಾದಲ್ಲಿ ಮಕ್ಕಳಲ್ಲಿ ವಿಚಿತ್ರ ಕಾಯಿಲೆ (Disease)ಯೊಂದು ಪತ್ತೆಯಾಗುತ್ತದೆ. ಆರಂಭದಲ್ಲಿ ಕೆಲವೇ ಮಕ್ಕಳಲ್ಲಿ ಈ ಕಾಯಿಲೆ ಕಾಣಿಸಿಕೊಂಡಿದ್ದರೂ ಪೋಷಕರಲ್ಲಿ ಆತಂಕ ಹೆಚ್ಚಾಗಿದೆ.

ಮಕ್ಕಳಲ್ಲಿ ನಿಗೂಢ ಪಿತ್ತಜನಕಾಂಗದ ಕಾಯಿಲೆ ಪತ್ತೆ
ಸದ್ಯ ವಿದೇಶಗಳಲ್ಲಿ ಮಕ್ಕಳಲ್ಲಿ ವಿಚಿತ್ರವಾದ ಲಕ್ಷಣಗಳನ್ನು ಹೊಂದಿರುವ ಪಿತ್ತಜನಕಾಂಗದ ಕಾಯಿಲೆ ಪತ್ತೆಯಾಗುತ್ತಿದೆ. ಯುಎಸ್, ಯುಕೆ, ಸ್ಪೇನ್ ಮತ್ತು ಐರ್ಲೆಂಡ್ ಮಕ್ಕಳಲ್ಲಿ ನಿಗೂಢ ಅನಾರೋಗ್ಯವು ಅವರ ಯಕೃತ್ತಿನ ಮೇಲೆ ತೀವ್ರವಾಗಿ ಪರಿಣಾಮ ಬೀರಿದೆ ಎಂದು ವರದಿ ಮಾಡಿದೆ, ಇದರಿಂದಾಗಿ ಕೆಲವರಿಗೆ ಯಕೃತ್ತಿನ ಕಸಿ ಅಗತ್ಯ ಎಂದು ವೈದ್ಯರು ಸೂಚಿಸಿದ್ದಾರೆ. ಇಂಗ್ಲೆಂಡ್‌ನಲ್ಲಿ ಕನಿಷ್ಠ 74 ನಿಗೂಢ ಪಿತ್ತಜನಕಾಂಗದ ಕಾಯಿಲೆಯ ಪ್ರಕರಣಗಳನ್ನು ತನಿಖೆ ನಡೆಸಲಾಗುತ್ತಿದೆ. ಆದರೆ ಯುನೈಟೆಡ್ ಸ್ಟೇಟ್ಸ್ ಅಲಬಾಮಾದಿಂದ ಮಾತ್ರ 9 ರೀತಿಯ ಪ್ರಕರಣಗಳನ್ನು ವರದಿ ಮಾಡಿದೆ. ಮಕ್ಕಳಲ್ಲಿ ಮಾತ್ರ ಕಂಡುಬರುತ್ತಿರುವ ಈ ನಿಗೂಢ ಪಿತ್ತಜನಕಾಂಗದ ಕಾಯಿಲೆಯನ್ನು ಈ ತಿಂಗಳ ಆರಂಭದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಗಮನಕ್ಕೆ ತರಲಾಗಿದೆ ಎಂದು ತಿಳಿದುಬಂದಿದೆ.

Tap to resize

Latest Videos

Parenting Tips : ಫೋನ್‌ನಿಂದ ಮಕ್ಕಳನ್ನು ದೂರವಿಡಲು ಇಲ್ಲಿದೆ ಉಪಾಯ

ಇಂಗ್ಲೆಂಡ್ ಮತ್ತು ಅಮೇರಿಕಾ ಹೊರತುಪಡಿಸಿ, ಸ್ಪೇನ್ ಮತ್ತು ಐರ್ಲೆಂಡ್ ಕೂಡ ಇದೇ ರೀತಿಯ ಕೆಲವು ಪ್ರಕರಣಗಳನ್ನು ತನಿಖೆ ನಡೆಸುತ್ತಿವೆ ಎಂದು ವರದಿ ಹೇಳಿದೆ. ಕಳೆದ ಒಂದು ತಿಂಗಳಲ್ಲಿ ವರದಿಯಾದ ಪ್ರಕರಣಗಳ ಹೆಚ್ಚಳ ಮತ್ತು ಮಕ್ಕಳಲ್ಲಿ ಹೆಚ್ಚಾಗುತ್ತಿರುವ ರೋಗ ಲಕ್ಷಣಗಳನ್ನು ಗಮನಿಸಿದರೆ, ಮುಂಬರುವ ದಿನಗಳಲ್ಲಿ ಹೆಚ್ಚಿನ ಪ್ರಕರಣಗಳು ವರದಿಯಾಗುವ ಸಾಧ್ಯತೆಯಿದೆ" ಎಂದುವಿಶ್ವ ಆರೋಗ್ಯ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ. ಆರು ಪ್ರಕರಣಗಳು ತುಂಬಾ ತೀವ್ರವಾಗಿದ್ದು, ಅವರಿಗೆ ಯಕೃತ್ತಿನ ಕಸಿ ಅಗತ್ಯವಿದೆ ಎಂದು ತಜ್ಞರು ತಿಳಿಸಿದ್ದಾರೆ..

ಈ ನಿಗೂಢ ಕಾಯಿಲೆ ಏನು? ರೋಗಲಕ್ಷಣಗಳು ಯಾವುವು ?
ಇಂಗ್ಲೆಂಡ್ ಮತ್ತು ಅಮೇರಿಕಾದಲ್ಲಿ ಹೆಚ್ಚಾಗಿ ಕಂಡುಬರುತ್ತಿರುವ ಈ ಕಾಯಿಲೆ ಮಕ್ಕಳಲ್ಲಿ ಮಾತ್ರ ಕಂಡುಬರುತ್ತಿದೆ. 1 ರಿಂದ 6 ವರ್ಷದೊಳಗಿನ ಮಕ್ಕಳು ಈ ರೋಗದಿಂದ ಬಳಲುತ್ತಿದ್ದಾರೆ. ಇದು ಹೆಪಟೈಟಿಸ್ ಅಥವಾ ಯಕೃತ್ತಿನ ಉರಿಯೂತದಂತಹ ಸಾಮಾನ್ಯ ಯಕೃತ್ತಿನ ರೋಗಗಳಾಗಿವೆ. ಮಕ್ಕಳಲ್ಲಿ ಮೊದಲಿಗೆ ಕಾಮಾಲೆ, ಅತಿಸಾರ ಮತ್ತು ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ. ವರದಿಗಳ ಪ್ರಕಾರ, ರೋಗವು ಸಾಮಾನ್ಯವಾಗಿ ಶೀತಗಳಿಗೆ ಸಂಬಂಧಿಸಿದ ಕೆಲವು ರೀತಿಯ ವೈರಸ್‌ಗೆ ಸಂಬಂಧಿಸಿರಬಹುದು ಎಂದು ಹೇಳಲಾಗಿದೆ. 

ಮಕ್ಕಳ ಅಸ್ತಮಾ ಸಮಸ್ಯೆಗೆ ಆರಂಭದಲ್ಲೇ ಚಿಕಿತ್ಸೆ ಪಡೆದರೆ ಆರೋಗ್ಯಕ್ಕೆ ಅಪಾಯವಿಲ್ಲ

ನಿರ್ಧಿಷ್ಟ ಮಕ್ಕಳನ್ನು ಆಧರಿಸಿ ನಡೆಸಿದ ಪ್ರಯೋಗಾಲಯ ಪರೀಕ್ಷೆಯು ಸಾಮಾನ್ಯವಾಗಿ ಇಂತಹ ಕಾಯಿಲೆಗಳನ್ನು ಉಂಟುಮಾಡುವ ಹೆಪಟೈಟಿಸ್ ಟೈಪ್ A, B, C ಮತ್ತು E ವೈರಸ್‌ನಿಂದ ಇದು ಉಂಟಾಗಿಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ. ಅಂತರಾಷ್ಟ್ರೀಯ ಪ್ರಯಾಣದಿಂದ ಈ ಹೊಸ ಕಾಯಿಲೆ ಹರಡಿರಬಹುದೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಕೆಲವು ಯುರೋಪಿಯನ್ ಮಕ್ಕಳು ಅಡೆನೊವೈರಸ್‌ ಮತ್ತು ಕೆಲವರು ಕೋವಿಡ್ -19 ಗೆ ಪಾಸಿಟಿವ್ ವರದಿ ಪಡೆದಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ವರದಿಗಳ ಪ್ರಕಾರ, ಯುಕೆ ಜನವರಿಯಿಂದ ಮಕ್ಕಳಲ್ಲಿ ತೀವ್ರವಾದ ಹೆಪಟೈಟಿಸ್‌ನ ಹೆಚ್ಚಳವನ್ನು ವರದಿ ಮಾಡಿದೆ. ಕಳೆದ ವರ್ಷ ನವೆಂಬರ್‌ನಿಂದ ರೋಗಿಗಳ ಪ್ರಮಾಣ ಏರಿಕೆಯಾಗಿರುವುದಾಗಿ ತಿಳಿಸಲಾಗಿದೆ.

click me!