ಚಾಕೋಲೇಟ್‌ನಿಂದ ಬೆಳ್ಳುಳ್ಳಿವರೆಗೆ.. ಆಹಾರದ ಮೂಲಕ Anxiety ನಿವಾರಿಸಿಕೊಳ್ಳಿ

By Suvarna News  |  First Published Apr 15, 2022, 4:21 PM IST

ಅನಗತ್ಯವಾಗಿ ಭಯಪಡುವ, ಆತಂಕಪಡುವ ಸ್ವಭಾವ ನಿಮ್ಮದಾಗಿದ್ದಲ್ಲಿ ನಿಮ್ಮ ಆಹಾರದಲ್ಲಿ ಕೆಲವು ಪದಾರ್ಥಗಳನ್ನು ಅಗತ್ಯವಾಗಿ ಸೇರಿಸಿಕೊಳ್ಳಿ. ಇವುಗಳ ಸೇವನೆಯಿಂದ ಖಂಡಿತವಾಗಿ ನಿಮ್ಮ ಆತಂಕ ನಿವಾರಣೆಯಾಗಿ ಖುಷಿಖುಷಿಯಾಗಿರುತ್ತೀರಿ.
 


ದೈನಂದಿನ ಕೆಲಸ ಕಾರ್ಯಗಳ ಕುರಿತಾಗಿಯೂ ಆತಂಕ (Anxiety) ಪಡುವುದು, ಸುಖಾಸುಮ್ಮನೆ ಭಯ (Fear) ವಾಗುವುದು, ಮನೆ, ಪತಿ ಅಥವಾ ಪತ್ನಿಯ ಆರೋಗ್ಯ, ಮಕ್ಕಳ ಶಿಕ್ಷಣ ಹೀಗೆ ಎಲ್ಲ ವಿಚಾರಕ್ಕೂ ಅನಗತ್ಯವಾಗಿ ಚಿಂತೆಯಾಗುವುದು…ಇಂಥವೆಲ್ಲ ಭಾವನೆಗಳನ್ನು ನಾವೇ ಪ್ರಯತ್ನಪಟ್ಟು ನಿಯಂತ್ರಿಸಿಕೊಳ್ಳಬೇಕಾಗುತ್ತದೆ. ಇದನ್ನೇ ಮನೋರೋಗ ತಜ್ಞರು ಆತಂಕದ ಮನಸ್ಥಿತಿ ಎಂಬುದಾಗಿ ಹೇಳುತ್ತಾರೆ. ಇದಕ್ಕೆ ಧ್ಯಾನ, ವ್ಯಾಯಾಮ (Exercise) ಹಾಗೂ ಉಸಿರಾಟದ ವ್ಯಾಯಾಮಗಳನ್ನು (Breathing Exercise) ಮಾಡುವಂತೆ ಸಲಹೆ ನೀಡಲಾಗುತ್ತದೆ. ಜತೆಗೆ, ಇಲ್ಲಿ ಆಹಾರದ ಪಾತ್ರವೂ ಇರುತ್ತದೆ. ಕೆಲವು ರೀತಿಯ ಆಹಾರ ಸೇವನೆ (Food Intake) ಮಾಡುವುದರಿಂದ ಆತಂಕವನ್ನು ನಿಯಂತ್ರಿಸಬಹುದು ಎನ್ನುತ್ತಾರೆ ತಜ್ಞರು.

ಕೆಲವು ರೀತಿಯ ಆಹಾರಗಳು ಮಿದುಳಿನ (Brain) ಕಾರ್ಯಕ್ಷಮತೆಗೆ ಉತ್ತೇಜನ ನೀಡುತ್ತವೆ. ಮಿದುಳಿನ ಅನೇಕ ಸಮಸ್ಯೆಗಳನ್ನು ಕಡಿಮೆ ಮಾಡುತ್ತವೆ. ಹಾಗೆಯೇ ಆತಂಕವೂ ಸಹ ಇಂತಹ ಆಹಾರಗಳಿಂದ ಕಡಿಮೆಯಾಗುವುದನ್ನು ಇದುವರೆಗಿನ ಹಲವಾರು ಸಂಶೋಧನೆಗಳು ದೃಢಪಡಿಸಿವೆ.

•    ತರಕಾರಿಗಳು (Vegetables)
ಬಸಳೆ, ಬೀಟ್‌ ರೂಟ್‌, ಬ್ರೊಕೊಲಿ, ಎಲೆಕೋಸು ಮುಂತಾದ ತರಕಾರಿಗಳು ಆತಂಕವನ್ನು ನಿವಾರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. 

•    ಬ್ಲೂಬೆರಿ ಹಾಗೂ ವಿಟಮಿನ್‌ ಸಿ (Blue Berry and Vitamin C) ಇರುವ ಹಣ್ಣುಗಳು (Fruits)
ಬ್ಲೂಬೆರಿ ಹಣ್ಣು ಹಾಗೂ ಇತರೆ ವಿಟಮಿನ್‌ ಸಿ ಇರುವ ಹಣ್ಣುಗಳಿಂದ ಆರೋಗ್ಯಕ್ಕೆ ಭಾರೀ ಲಾಭವಿದೆ. ಇವುಗಳಲ್ಲಿ ಆಂಟಿಆಕ್ಸಿಡಂಟ್‌ ಹಾಗೂ ಮಿನರಲ್‌ (Minaral) ಗಳೂ ಭರಪೂರವಾಗಿರುತ್ತವೆ. ಇವುಗಳಿಂದ ಆತಂಕ ನಿವಾರಣೆಯಾಗುತ್ತದೆ.

•    ಹುದುಗಿಸಿದ ಆಹಾರ (Fermented Food)
ತಜ್ಞರ ಪ್ರಕಾರ, ಹುದುಗಿಸಿದ ಆಹಾರ ಮಿದುಳಿನ ಆರೋಗ್ಯಕ್ಕೆ ಉತ್ತಮ. ಆತಂಕವು ಎಷ್ಟೋ ಬಾರಿ ಗ್ಯಾಸ್ಟ್ರೊಇಂಟೆಸ್ಟೈನಲ್‌ ಸಮಸ್ಯೆಗಳಿಂದಲೂ ಉಂಟಾಗುತ್ತದೆ. ಹೀಗಾಗಿ, ಇದಕ್ಕೆ ಹುದುಗಿಸಿದ ಆಹಾರ ಪರಿಹಾರವಾಗಬಲ್ಲದು. ಹೊಟ್ಟೆಯ ತಳಮಳ ಕಡಿಮೆ ಮಾಡುವಲ್ಲಿ ಇಂತಹ ಆಹಾರ ಸಹಕಾರಿಯಾಗಿದ್ದು, ಕರುಳನ್ನು ಸುಸ್ಥಿತಿಯಲ್ಲಿ ಇಡುತ್ತವೆ. ಕರುಳಿನಲ್ಲಿ (Gut) ಉರಿಯೂತ ಉಂಟಾಗದಂತೆ ತಡೆಯುತ್ತವೆ. ಹುದುಗಿಸಿದ ಆಹಾರವೆಂದರೆ, ನಮ್ಮ ಇಡ್ಲಿ (Idly), ದೋಸೆ (Dosa), ಖಡಿ, ಮಜ್ಜಿಗೆ ಬೆರೆಸಿ ಮಾಡುವ ಆಹಾರಗಳೆಲ್ಲವೂ ಇದರಲ್ಲಿ ಬರುತ್ತವೆ.

•    ನಟ್ಸ್‌ ಮತ್ತು ಸೀಡ್ಸ್‌ (Nuts and Seeds)
ಬೀಜಗಳಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಪ್ರೊಟೀನ್‌ ಅಂಶ ಇರುತ್ತದೆ. ಹಾಗೆಯೇ ಅಮೈನೋ ಆಸಿಡ್‌ (Amino Acid) ಕೂಡ ಇರುತ್ತದೆ. ಇದರಿಂದ ದೇಹದಲ್ಲಿ ಸಕಾರಾತ್ಮಕ ಬದಲಾವಣೆಯಾಗುತ್ತದೆ. ಸೆರೊಟೋನಿನ್‌ ಅಂತಹ ಹಾರ್ಮೋನ್‌ ಸ್ರವಿಕೆ ಉತ್ತಮವಾಗುತ್ತದೆ. ಈ ಮೂಲಕ ದೇಹದ ಮೂಡ್‌ ಉತ್ತೇಜಿಸುವ ನ್ಯೂರೋಟ್ರಾನ್ಸ್‌ ಮೀಟರ್ಸ್‌ ಚಾಲನೆಗೊಳ್ಳುತ್ತವೆ. 

•    ದ್ವಿದಳ ಧಾನ್ಯ (Legumes)
ಕಾಬೂಲ್‌ ಕಡಲೆ, ಬೀನ್ಸ್‌, ಸೋಯಾಬೀನ್‌ ನಂತಹ ದ್ವಿದಳ ಧಾನ್ಯಗಳು ಆತಂಕ ನಿವಾರಣೆಗೆ ಸಹಕಾರಿ.

•    ಮೀನು (Fish)
ಅನೇಕ ಅಧ್ಯಯನಗಳ ಪ್ರಕಾರ, ಸಾಲ್ಮನ್‌ ಸೇರಿದಂತೆ ಬಹಳಷ್ಟು ಜಾತಿಯ ಮೀನುಗಳಿಂದ ಮಿದುಳಿನ ಕ್ಷಮತೆ ಬಲಗೊಳ್ಳುತ್ತದೆ. ಇದರಿಂದ ಆತಂಕ ನಿವಾರಣೆಯಾಗುವುದು ಖಚಿತ ಎನ್ನಲಾಗುತ್ತದೆ.

ಎದೆಹಾಲು ಸಾಲ್ತಿಲ್ವೇ? ಮೊಳಕೆಯೊಡೆದ ರಾಗಿ ಸೇವಿಸಿ

•    ಧಾನ್ಯಗಳು (Whole Grains)
ಧಾನ್ಯಗಳಲ್ಲಿ ಮ್ಯಾಗ್ನೆಸಿಯಂ ಪ್ರಮಾಣ ಅಧಿಕವಾಗಿರುತ್ತದೆ. ಟ್ರೈಪ್ಟೊಫಾನ್‌ ಎನ್ನುವ ಅಂಶವೂ ಸಾಕಷ್ಟಿರುತ್ತವೆ. ಇವೆರಡೂ ಮೂಡ್‌ ಉತ್ತೇಜಿಸುವ ಹಾಗೂ ಆತಂಕ ಕಡಿಮೆ ಮಾಡುವ ಗುಣ ಹೊಂದಿವೆ.

•    ಔಷಧೀಯ ಸಸ್ಯಗಳು (Herbs) ಹಾಗೂ ಮಸಾಲೆ ಪದಾರ್ಥ (Spices)
ನಮ್ಮ ಅಡುಗೆಮನೆಯಲ್ಲಿರುವ ಅನೇಕ ಪದಾರ್ಥಗಳು ಖಿನ್ನತೆ ಹಾಗೂ ಆತಂಕ ನಿವಾರಣೆಗೆ ಸಾಕಷ್ಟು ಪೂರಕವಾಗಿವೆ. ಜೀರಿಗೆ, ಅಶ್ವಗಂಧ, ಬೆಳ್ಳುಳ್ಳಿ, ಅರಿಶಿಣ, ಲಿಂಬೆ ಹಾಗೂ ತುಳಸಿಗಳು ಇದರಲ್ಲಿ ಪ್ರಮುಖವಾಗಿವೆ. ಇವುಗಳ ನಿಯಮಿತ ಸೇವನೆಯಿಂದ ಮಾನಸಿಕ ಆರೋಗ್ಯ ಚೆನ್ನಾಗಿರುತ್ತದೆ.

Tap to resize

Latest Videos

ನಿಂಬೆ ಬೆಲೆ ಏರಿಕೆಯಾಯ್ತು ಅಂತ ತಲೆ ಕೆಡಿಸ್ಕೋಬೇಡಿ, ಪರ್ಯಾಯವಾಗಿ ಅಡುಗೆಯಲ್ಲಿ ಇದನ್ನು ಬಳಸಿ

•    ಡಾರ್ಕ್‌ ಚಾಕೊಲೇಟ್‌ (Dark Chocolate)
ಡಾರ್ಕ್‌ ಚಾಕೊಲೇಟ್‌ ಗಳಲ್ಲಿ ಫ್ಲವನಾಯ್ಡ್‌ ಗಳಿರುತ್ತವೆ. ಎಪಿಕ್ಯಾಟೆಚಿನ್‌ ಹಾಗೂ ಕ್ಯಾಟೆಚಿನ್‌ ಎನ್ನುವ ಫ್ಲವನಾಯ್ಡ್‌ ಗಳು ಆಂಟಿಆಕ್ಸಿಡಂಟ್‌ ಗಳಂತೆ ಕಾರ್ಯ ನಿರ್ವಹಿಸುತ್ತವೆ. ಇವು ಕೃತಕವಾದವುಗಳಲ್ಲ, ಸಸ್ಯಜನ್ಯ ಅಂಶಗಳು. ಆತಂಕ ಕಡಿಮೆಗೊಳಿಸಲು ಸಹಕಾರಿಯಾಗಿವೆ.  

click me!