
ವರದಿ; ಮಮತಾ ಮರ್ಧಾಳ ಏಷ್ಯಾನೆಟ್ ಸುವರ್ಣನ್ಯೂಸ್
ಬೆಂಗಳೂರು (ಜು16); ಮಂಕಿಪಾಕ್ಸ್ ಮೊದಲ ಪ್ರಕರಣ ಕೇರಳದಲ್ಲಿ ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ. ಕೇರಳದಲ್ಲಿ ಸಾಕಷ್ಟು ನಿಗಾ ಇಡಲಾಗಿದೆ. ಇನ್ನೂ ಪಕ್ಕದ ನಮ್ಮ ಕರ್ನಾಟಕಕ್ಕೂ ಸಹ ಮಂಕಿಪಾಕ್ಸ್ ಭೀತಿ ಹೆಚ್ಚಾಗಿದೆ. ಹೀಗಾಗಿ ರಾಜ್ಯದಲ್ಲಿ ಮುನ್ನೆಚ್ಚರಿಕಾ ಕ್ರಮ ವಹಿಸಲಾಗಿದೆ.
ಕೊರೋನಾ ಭೀತಿ ಕಡಿಮೆ ಆಗ್ತಿದ್ದಂತೆ, ಈಗ ಮತ್ತೊಂದು ವೈರಸ್ ಭಯ ಎದುರಾಗಿದೆ. ಅದೇ ಮಂಕಿ ಪಾಕ್ಸ್. ಯೆಸ್ ಪಶ್ಚಿಮ ಆಫ್ರೀಕಾ ,ಯುರೋಪ್ ರಾಷ್ಟ್ರಗಳಲ್ಲಿ ಭಾರಿ ಅಟ್ಟಹಾಸ ತೋರಿದ್ದ ಮಂಕಿಪಾಕ್ಸ್ ಭಾರತದಲ್ಲಿ ಕಾಣಿಸಿಕೊಂಡಿದೆ. ವಿದೇಶದಿಂದ ಕೇರಳಕ್ಕೆ ವಾಪಸ್ಸಾದ ವ್ಯಕ್ತಿಯಲ್ಲಿ ಮಂಕಿಪಾಕ್ಸ್ ಕಾಣಿಕೊಂಡಿದ್ದು ದೇಶಾದ್ಯಂತ ಆತಂಕ ಹೆಚ್ಚಿದೆ.
ಕೇರಳದಲ್ಲಿ ಮೊದಲ ಶಂಕಿತ Monkeypox ಪ್ರಕರಣ ಮತ್ತೆ
ದೇಶದ ಹೊರ ರಾಜ್ಯದಲ್ಲಿ ಶಂಕೆ ವ್ಯಕ್ತವಾಗ್ತಿದ್ದಂತೆ ರಾಜ್ಯದಲ್ಲೂ ಕಟ್ಟೆಚ್ಚರ ವಹಿಸಲು ಆರೋಗ್ಯ ಇಲಾಖೆ ಮುಂದಾಗಿದೆ. ಕೊವಿಡ್ ನಷ್ಟು ವೇಗದಲ್ಲಿ ಮಂಕಿಪಾಕ್ಸ್ ವೈರಸ್ ಹರಡಲ್ಲ ಆದರೆ ನಿರ್ಲಕ್ಷ್ಯ ಮಾಡೋದು ಬೇಡ ಅಂತಾ ಆರೋಗ್ಯ ಇಲಾಖೆ ಜನರಲ್ಲಿ ಮನವಿ ಮಾಡಿದೆ. ಹೀಗಾಗಿ ಆರೋಗ್ಯ ಇಲಾಖೆ ಮಂಕಿಪಾಕ್ಸ್ ಎದುರಿಸಲು ಕೆಲ ಕ್ರಮಗಳನ್ನ ಕೈಗೊಳ್ಳುವ ನಿರ್ಧಾರ ಮಾಡಿದೆ.
1. ಮತ್ತು ಸರ್ಕಾರಿ ಆಸ್ಫತ್ರೆಯಲ್ಲಿ ತಲಾ ಒಂದೊಂದು ಐಸೂಲೇಷನ್ ಓಪನ್ ಮಾಡಲು ತೀರ್ಮಾನ
2. ವಿದೇಶದಿಂದ ಬರುವ ಪ್ರಜೆಗಳಲ್ಲಿ ಸೊಂಕಿನ ಲಕ್ಷಣ ಇದ್ದರೆ ಐಸೂಲೇಟ್ ಶೀಘ್ರದಲ್ಲೇ ಸುತ್ತೋಲೆ
3. ಏರ್ ಪೋರ್ಟ್ ಗಳಲ್ಲಿ ಸರ್ವಲೆಯನ್ಸ್ ಚುರುಕುಗೊಳಿಸಲು ಡಿಹೆಚ್ ಓ ಗಳಿಗೆ ಸೂಚನೆ
4. ರಾಜ್ಯದ ಯಾವುದಾದರು ಆಸ್ಫತ್ರೆಗಳಲ್ಲಿ ಈ ರೋಗ ಲಕ್ಷಣ ಇರುವ ರೋಗಿಗಳು ಪತ್ತೆ ಆದರೆ ಅಧಿಕಾರಿಗಳಿಗೆ ತಿಳಿಸಲು ಸೂಚನೆ
5 ಖಾಯಿಲೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಜಾಗೃತಿ ಮೂಡಿಸುವುದು
6. ಹೊರ ರಾಜ್ಯದ ಪ್ರಯಾಣಿಕರ ಮೇಲೆ ಗಮನ ಹರಿಸಲು ಡಿಹೆಚ್ ಓ ಗಳಿಗೆ ಸೂಚನೆ
ಮಂಕಿಪಾಕ್ಸ್ ವಿರುದ್ಧ ಕಟ್ಟೆಚ್ಚರ ವಹಿಸಲು ಮತ್ತಷ್ಟು ಕ್ರಮಗಳು ಅವಶ್ಯಕತೆ ಇದೆ. ಹೀಗಾಗಿ ತಾಂತ್ರಿಕ ಸಲಹಾ ಸಮಿತಿ ನಾಳೆ ಸಭೆ ಮಾಡಲಿದೆ. ಸಭೆ ಬಳಿಕ ಸಲಹಾ ಸಮಿತಿ ಮತ್ತಷ್ಟು ಕ್ರಮಗಳನ್ನ ಶಿಫಾರಸ್ಸು ಮಾಡುವ ಸಾಧ್ಯತೆ ಇದೆ. ಅದನ್ನ ನೋಡಿಕೊಂಡು ಮತ್ತಷ್ಟು ಗೈಡ್ ಲೈನ್ಸ್ ಬಿಡುಗಡೆಯಾಗಲಿದೆ.
ಇನ್ನು ಆರೋಗ್ಯ ಸಚಿವ ಸುಧಾಕರ್ ಮಂಕಿ ಪಾಕ್ಸ್ ಬಗ್ಗೆ ಜನರಲ್ಲಿ ಗೊಂದಲ ಬೇಡ ಅಂದಿದ್ದಾರೆ. ಕೇರಳದಲ್ಲಿ ಪತ್ತೆಯಾದ ಕೇಸನ್ನು ಏರ್ ಪೋರ್ಟ್ ನಲ್ಲಿ ಪತ್ತೆ ಮಾಡಿದ್ದಾರೆ, ಆದ್ರೆ ಯಾರ ಸಂಪರ್ಕಕ್ಕೂ ಬಂದಿಲ್ಲ. ಸೊಂಕಿನ ಲಕ್ಷಣ ಕಂಡು ಬಂದ ಕೂಡಲೇ ಕ್ರಮ ವಹಿಸೋದು ಒಳ್ಳೆಯದು, ಏರ್ ಪೋರ್ಟ್ ಗಳಲ್ಲಿ ಸರ್ವೆಲೆಯನ್ಸ್ ಮಾಡ್ತಾ ಇದ್ದೆವೆ ಯಾರೂ ಕೂಡ ಭಯಪಡಬೇಕಿಲ್ಲ ಅಂದಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.