ಚೆನ್ನಾಗಿ ನಿದ್ರೆ ಬರುತ್ತಿರುತ್ತೆ ರಾತ್ರಿ ಯಾವುದೋ ಒಂದು ಸಮಯದಲ್ಲಿ ಏನಾದರು ತಿನ್ನಬೇಕು ಅನಿಸುತ್ತದೆ. ಆದರೆ ಅದು ಹಸಿವಲ್ಲ ಬದಲಾಗಿ ತಿನ್ನಬೇಕೆಂಬ ತೊಡು. ಅಡುಗೆ ಮನೆಗೆ ಹೋದರೆ ಏನು ತಿನ್ನಬೇಕು ಎನ್ನುವುದೇ ತಿಳಿಯುವುದಿಲ್ಲ. ಈ ರೀತಿ ಸಮಸ್ಯೆ ನಿಮಗೂ ಕಾಡುತ್ತಿದ್ದರೆ ಇಲ್ಲಿದೆ ದಿಢೀರ್ ತಯಾರಿಸಬಹುದಾದ ಪದಾರ್ಥಗಳ ರೆಸಿಪಿ.
ವಿವಿಧ ಕಾರಣಗಳಿಗಾಗಿ ಮಧ್ಯರಾತ್ರಿಯ ಸ್ನಾö್ಯಕ್ಸ್ ಬೇಕೆಂದು ಅನಿಸಬಹುದು. ಇದು ಬಹಳಷ್ಟು ಜನರಿಗೆ ಹಸಿವಿನೊಂದಿಗೆ ಯಾವುದೇ ಸಂಬAಧವಿಲ್ಲ. ಸಾಕಷ್ಟು ನಿದ್ರೆ ಹೊಂದಿಲ್ಲದಿರಬಹುದು. ಹಸಿವಿನ ಕಡುಬಯಕೆಗಳು ನಿದ್ರೆಯ ಕೊರತೆಯಿಂದಾಗಿ ಹಾರ್ಮೋನ್ ಅಸಮತೋಲನದ ಕಾರಣದಿಂದಾಗಿರಬಹುದು. ರಾತ್ರಿಯಲ್ಲಿ ನಿಮಗೆ ಹಸಿವಾಗುವಂತೆ ಮಾಡುವ ಇತರೆ ವಿಷಯಗಳು, ಒತ್ತಡ ಮತ್ತು ಬೇಸರವೂ ಒಳಗೊಂಡಿರುತ್ತವೆ. ಒರೆಗಾನ್ ಹೆಲ್ತ್ ಆಯಂಡ್ ಸೈನ್ಸ್ ವಿಶ್ವವಿದ್ಯಾಲಯ ಈ ಕುರಿತು ಅಧ್ಯಯನ ನಡೆಸಿತ್ತು. ಈ ಪ್ರಕಾರ ಸಿರ್ಕಾಡಿಯನ್ ರಿದಮ್, ದೇಹದ ಆಂತರಿಕ ಗಡಿಯಾರ, ಉಪ್ಪು, ಸಿಹಿ ಮತ್ತು ಪಿಷ್ಟದ ಊಟಕ್ಕಾಗಿ ತಡರಾತ್ರಿಯ ಕಡುಬಯಕೆಗಳನ್ನು ಪ್ರೇರೇಪಿಸುತ್ತದೆ. ಈ ರೀತಿಯ ಸಂದರ್ಭಗಳು ರಾತ್ರಿಯ ಹಸಿವು ತೂಕ ಹೆಚ್ಚಾಗಲು ಕಾರಣವಾಗುವ ಪ್ರಮುಖ ಅಂಶಗಳಲ್ಲಿ ಒಂದಾಗಿದೆ. ಏಕೆಂದರೆ ಸಾಮಾನ್ಯವಾಗಿ ಜನರು ತಿನ್ನಲು ಅನುಚಿತ ಆಹಾರವನ್ನು ಆರಿಸಿಕೊಳ್ಳುತ್ತಾರೆ. ನಿಮ್ಮ ತಡರಾತ್ರಿಯ ಹಸಿವಿನ ಕಡುಬಯಕೆಗಳನ್ನು ಪೂರೈಸಲು ಸುಲಭವಾದ ಅಡುಗೆ ಮತ್ತು ಆರೋಗ್ಯಕರ ಪಾಕವಿಧಾನಗಳು ಇಲ್ಲಿವೆ.
1. ಓಟ್ ಮೀಲ್ ಚಾಕೋಲೇಟ್ ಬಾಲ್ಸ್
ಬೇಕಾಗುವ ಸಾಮಗ್ರಿಗಳು: 3 ಕಪ್ ಓಟ್ಸ್, 1 ಕಪ್ ಪೀನಟ್ ಬಟರ್, 1/3 ಕಪ್ ಡಾರ್ಕ್ ಚಾಕೋಲೇಟ್ ಚಿಪ್ಸ್, 1 ಚಮಚ ಫ್ಲಕ್ಸ್ ಸೀಡ್ಸ್, 1/2 ಕಪ್ ಜೇನು ತುಪ್ಪ.
ಮಾಡುವ ವಿಧಾನ: ಎಲ್ಲಾ ಸಾಮಗ್ರಿಗಳನ್ನು ಒಂದು ಬೌಲ್‌ಗೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಸಣ್ಣ ಉಂಡೆಗಳನ್ನಾಗಿ ಮಾಡಿ ಒಂದು ಗಂಟೆ ಫ್ರಿಡ್ಜನಲ್ಲಿಟ್ಟು ನಂತರ ತಿನ್ನಿ.
2. ರೋಸ್ಟ್ ಮಾಡಿದ ಟೊಮೆಟೊ ಪಾಸ್ಟಾ
ಬೇಕಾಗುವ ಸಾಮಗ್ರಿಗಳು: 1 ಪಿಂಟ್ ಕತ್ತರಿಸಿದ ಚರ‍್ರಿ ಅಥವಾ ದ್ರಾಕ್ಷಿ ಟೊಮ್ಯಾಟೊ, 1 ಚಮಚ ಆಲಿವ್ ಆಯಿಲ್, ಉಪ್ಪು, ಕಾಳುಮೆಣಸಿನ ಪುಡಿ, ಓರೆಗಾನೊ, 8 ಸಣ್ಣಗೆ ಕತ್ತರಿಸಿದ ಮಶ್ರೂಮ್, 1 ಚಮಚ ಎಣ್ಣೆ, 1/2 ಕಪ್ ಒಣಗಿಸಿದ, ಸಣ್ಣಗೆ ಹೆಚ್ಚಿದ ಟೊಮೆಟೊ, 1 ಚಮಚ ಕೋಷರ್ ಉಪ್ಪು, 1/2 ಚಮಚ ಕಾಳುಮೆಣಸಿನ ಪುಡಿ, 1 ಚಮಚ ಬೆಳ್ಳುಳ್ಳಿ ಪುಡಿ, 2 ಚಮಚ ಒಣಗಿದ ಓರೆಗಾನೊ, 1 ಕಪ್ ಬೇಯಿಸಿದ ಪಾಸ್ಟಾ, 1/3 ಕಪ್ ಸಣ್ಣಗೆ ಕತ್ತರಿಸಿದ ಗಿಡಮೂಲಿಕೆಗಳು (ಪುದೀನ, ಕೊತ್ತಂಬರಿ ಸೊಪ್ಪು), 1/2 ಲಿಂಬೆ ಹಣ್ಣಿನ ರಸ.
ಐದೇ ನಿಮಿಷದಲ್ಲಿ ರುಚಿಕರವಾದ ಸೋಯಾ ಟಿಕ್ಕಾ ಮಾಡಿ
ಮಾಡುವ ವಿಧಾನ: ಮೊದಲು ಒಲೆಯ ಮೇಲೆ ಪ್ಯಾನ್ ಇಟ್ಟು 400 ಡಿಗ್ರಿ ಎಫ್‌ಗೆ ಮೊದಲು ಕಾಯಿಸಿಕೊಳ್ಳಿ. ಟೊಮೆಟೊಗಳನ್ನು ಸ್ಲೆöÊಸ್ ಮಾಡಿ ಮತ್ತು ಬೇಕಿಂಗ್ ಡಿಶ್‌ಗೆ ಸೇರಿಸಿ. 1 ಚಮಚ ಆಲಿವ್ ಎಣ್ಣೆ, ಟಾಸ್ ಮಾಡಿ. ನಂತರ ಉಪ್ಪು, ಮೆಣಸು ಮತ್ತು ಒಣಗಿದ ಓರೆಗಾನೊವನ್ನು ಹಾಕಿ. ಟೊಮ್ಯಾಟೊ ರಸ ಬಿಡುವವರೆಗೂ 20 ನಿಮಿಷಗಳ ಕಾಲ ಬೇಯಿಸಿ. ಈ ಮಧ್ಯೆ ಪಾಸ್ಟಾಗೆ ನೀರನ್ನು ಕುದಿಸಿ. ನೀರಿಗೆ ಉಪ್ಪು ಹಾಕಿ ನೀರು ಕುದಿ ಬಂದ ನಂತರ ಪಾಸ್ಟಾ ಹಾಕಿ ಬೇಯಿಸಿ. ಮತ್ತೊಂದು ಪ್ಯಾನ್‌ಗೆ ನೀರು ಹಾಕಿ ಅದಕ್ಕೆ ಕತ್ತರಿಸಿದ ಅಣಬೆ, ಎಣ್ಣೆ ಹಾಕಿ ಫ್ರೆöÊ ಮಾಡಿ. ಅಣಬೆ ಕಂದು ಬಣ್ಣಕ್ಕೆ ಬಂದ ನಂತರ 10 ನಿಮಷ ಬೇಯಿಸಿ. ನಂತರ ಆಲೂಟ್ ಸೇರಿಸಿ 5 ನಿಮಿಷ ಬೇಯಿಸಿ. ಬೆಂದ ನಂತರ ಒಣಗಿದ ಟೊಮೆಟೊ, ಎಲ್ಲಾ ಮಸಾಲೆಗಳು ಮತ್ತು ಟೊಮೆಟೊ ಪೇಸ್ಟ್ ಅನ್ನು ಸೇರಿಸಿ 5 ನಿಮಿಷ ಬೇಯಿಸಿ. ಇದಕ್ಕೆ ಬೆಂದ ಪಾಸ್ಟಾ ಹಾಕಿ ಕೈಯ್ಯಾಡಿದ ನಂತರ ಪುದೀನ ಮತ್ತು ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಬೆರೆಸಿ. ಸ್ಟೌ ಆಫ್ ಮಾಡಿದ ನಂತರ ನಿಂಬೆ ರಸ ಹಾಕಿ ಹುರಿದ ಟೊಮೆಟೊ ಬೆರೆಸಿದರೆ ರೊಸ್ಟೆಡ್ ಟೊಮೆಟೊ ಪಾಸ್ಟಾ ರೆಡಿ.
ಜಿಟಿಜಿಟಿ ಮಳೆಗೆ ಬಿಸಿಬಿಸಿ ಪಕೋಡಾ, ಇಲ್ಲಿದೆ ಸಿಂಪಲ್ ರೆಸಿಪಿ
3. ಮೂಂಗ್ಲೆಟ್
ಬೇಕಾಗುವ ಸಾಮಗ್ರಿಗಳು: 1 ಕಪ್ ಹೆಸರು ಬೇಳೆ, 1 ಈರುಳ್ಳಿ, 1 ಸಣ್ಣಗೆ ಹೆಚ್ಚಿದ ಹಸಿಮೆಣಸು, 1/4 ಕಪ್ ಸಣ್ಣಗೆ ಹೆಚ್ಚಿದ ಕ್ಯಾಪ್ಸಿಕಮ್, 1/4 ಕಪ್ ಹೆಚ್ಚಿಕೊಂಡ ಕೊತ್ತಂಬರಿ ಸೊಪ್ಪು, 1/4 ಕಪ್ ಸ್ವೀಟ್ ಕಾರ್ನ್, 1/4 ಚಮಚ ಅಡುಗೆ ಸೋಡ, 1/4 ಚಮಚ ಹಿಂಗ್, ಉಪ್ಪು, ಚಾಟ್ ಮಸಾಲ.
ಮಾಡುವ ವಿಧಾನ: ಹೆಸರು ಬೇಳೆಯನ್ನು ಚೆನ್ನಾಗಿ ತೊಳೆದು 1 ಗಂಟೆಗಳ ಕಾಲ ನೆನೆಸಿಟ್ಟುಕೊಳ್ಳಿ. ನಂತರ ಅದನ್ನು ಮಿಕ್ಸಿ ಜಾರ್‌ನಲ್ಲಿ ಗಟ್ಟಿಯಾಗಿ ದೋಸೆ ಹಿಟ್ಟಿನಂತೆ ನುಣ್ಣಗೆ ರುಬ್ಬಿಕೊಳ್ಳಿ. ಒಂದು ಬೌಲ್‌ಗೆ ಹೆಚ್ಚಿಕೊಂಡ ಸಾಮಗ್ರಿಗಳನ್ನು, ಅಡುಗೆ ಸೋಡ, ರುಬ್ಬಿಕೊಂಡ ಹಿಟ್ಟು ಹಾಕಿ ಚೆನ್ನಾಗಿ ಕಲಸಿಕೊಳ್ಳಿ. ಒಂದು ಪ್ಯಾನ್‌ಗೆ ಎಣ್ಣೆ ಅಥವಾ ತುಪ್ಪ, ಬೆಣ್ಣೆ ಹಾಕಿ. ಈ ಪ್ಯಾನ್‌ಗೆ ರೆಡಿ ಮಾಡಿಟ್ಟುಕೊಂಡ ಹಿಟ್ಟಿನ ಮಿಶ್ರಣವನ್ನು ದಪ್ಪನಾಗಿ ಹಾಕಿಕೊಳ್ಳಿ. ಗೋಲ್ಡನ್ ಬ್ರೌನ್ ಬರುವವರೆಗೂ ಎರಡೂ ಬದಿ ಬೇಯಿಸಿದರೆ ಮೂಂಗ್ಲೆಟ್ ರೆಡಿ.