Ghee Massage: ತುಪ್ಪದಿಂದ ತಲೆ ಮಸಾಜ್‌ ಮಾಡಿಕೊಳ್ಳಿ ಅದ್ಭುತ ಪರಿಣಾಮ ನೀವೇ ನೋಡಿ

By Suvarna NewsFirst Published Apr 16, 2022, 4:44 PM IST
Highlights

ತುಪ್ಪದಿಂದ ಕಾಲು ಮತ್ತು ತಲೆ ಮಸಾಜ್‌ ಮಾಡಿಕೊಳ್ಳುವುದರಿಂದ ನರಗಳು ಸದೃಢಗೊಳ್ಳುತ್ತವೆ. ಕೂದಲು ಚೆನ್ನಾಗಿ ಬೆಳೆಯುತ್ತದೆ. ಪಾದಗಳಿಗೆ ಮಸಾಜ್‌ ಮಾಡುವುದರಿಂದ ಆಸಿಡಿಟಿ (Acidity) ಸಮಸ್ಯೆಯಿಂದ ಬಚಾವಾಗಬಹುದು. ಕೊಬ್ಬು ಕರಗುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ನಿದ್ರೆ (Sleep) ಚೆನ್ನಾಗಿ ಬರುತ್ತದೆ ಹಾಗೂ ಚರ್ಮಕ್ಕೂ (Skin) ಉತ್ತಮವಾಗಿದೆ. 

ತುಪ್ಪವನ್ನು (Ghee) ದಿನವೂ ಸ್ವಲ್ಪವಾದರೂ ಸೇವಿಸಬೇಕು ಎನ್ನುವುದನ್ನು ಕೇಳಿದ್ದೇವೆ. ಹಲವರು ಅದನ್ನು ಪಾಲಿಸುತ್ತಲೂ ಇರಬಹುದು. ವಯಸ್ಸಾದಂತೆ ಕಾಡುವ ಅನೇಕ ಸಮಸ್ಯೆಗಳನ್ನು ತುಪ್ಪ ಸೇವಿಸುವುದರ ಮೂಲಕ ನಿವಾರಿಸಿಕೊಳ್ಳಬಹುದು ಹಾಗೂ ಆ ಸಮಸ್ಯೆಗಳು ಬಾರದಂತೆ ನೋಡಿಕೊಳ್ಳಬಹುದು. ಹಳ್ಳಿಗಳಲ್ಲಿರುವ ಅಜ್ಜ-ಅಜ್ಜಿಯರನ್ನು ನೋಡಿ. ನಮಗಿಂತ ಸಾಕಷ್ಟು ಕೆಲಸ ಕಾರ್ಯಗಳಲ್ಲಿ ನಿರತರಾಗಿರುತ್ತಾರೆ. ಅವರ ಮೂಳೆಗಳು (Bones), ಹಲ್ಲುಗಳು (Teeth) ಸದೃಢವಾಗಿರುತ್ತವೆ. ಮರೆವಿನ ಸಮಸ್ಯೆಯೂ ಅತಿ ಕಡಿಮೆ ಇರುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ ಅವರು ಯುವಕರನ್ನೂ ನಾಚಿಸುವಂತೆ ಹೊಟ್ಟೆತುಂಬ ಊಟ-ತಿಂಡಿ ಮಾಡುವುದನ್ನು ನೋಡಬಹುದು. ದಿನವೂ ಬೆಳಗ್ಗೆ ಒಂದೆರಡು ಚಮಚ ತುಪ್ಪ ತಿಂದರೆ ಹೀಗೆಯೇ ಸದೃಢವಾಗಿ ಇರಬಹುದು.

ಆಯುರ್ವೇದಲ್ಲಂತೂ (Ayurveda) ತುಪ್ಪಕ್ಕೆ ಬಹಳ ಪ್ರಾಶಸ್ತ್ಯವಿದೆ. ಹಲವಾರು ರೀತಿಯಲ್ಲಿ ಸೇವನೆ ಮಾಡಲು ಸೂಚಿಸಲಾಗುತ್ತದೆ. ವಿವಿಧ ಚಿಕಿತ್ಸೆಗಳನ್ನೂ ಇದನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಲಾಗುತ್ತದೆ. ಹಲವರು ದಿನವೂ ತುಪ್ಪದಿಂದ ಅಂಗಾಲು(Feet)ಗಳನ್ನು ಮಸಾಜ್‌ (Massage) ಮಾಡಿಕೊಳ್ಳುತ್ತಾರೆ. ಕೆಲವು ದಿನಗಳ ಹಿಂದೆ ಶಾಹೀದ್‌ ಕಪೂರ್‌ (Shahid Kapoor) ಪತ್ನಿ ಮೀರಾ ರಜಪೂತ್‌ (Mira Rajput) ಅವರು ತುಪ್ಪದಿಂದ ತಮ್ಮ ಪಾದಗಳನ್ನು ಮಸಾಜ್‌ ಮಾಡಿಕೊಳ್ಳುವ ಬಗ್ಗೆ ಸುದ್ದಿಯಾಗಿತ್ತು. ನಾವು ನೀವೆಲ್ಲ ಎಣ್ಣೆಯಿಂದ ಪಾದಗಳನ್ನು ಮಸಾಜ್‌ ಮಾಡಿಕೊಳ್ಳುವುದನ್ನು ಕಂಡಿದ್ದೇವೆ. ಆದರೆ, ಅವರು ಪ್ರತಿದಿನ ರಾತ್ರಿ ಹಾಸಿಗೆಗೆ (Bed) ಹೋಗುವ ಮುನ್ನ ತುಪ್ಪದಿಂದ ಕಾಲುಗಳನ್ನು ಮಸಾಜ್‌ ಮಾಡಿಕೊಳ್ಳುತ್ತಾರಂತೆ. ಈ ಕುರಿತು ವಿಡಿಯೋವೊಂದನ್ನು ಸಹ ಅವರು ತಮ್ಮ ಇನ್‌ ಸ್ಟಾಗ್ರಾಮ್‌ (Instagram) ಖಾತೆಯಲ್ಲಿ ಶೇರ್‌ (Share) ಮಾಡಿಕೊಂಡಿದ್ದರು. 

ತಲೆಗೂ (Head) ತುಪ್ಪದಿಂದ ಮಸಾಜ್
ಕಾಲುಗಳಿಗೆ ತುಪ್ಪದಿಂದ ಮಸಾಜ್‌ ಮಾಡಿಕೊಳ್ಳುವಂತೆಯೇ ತಲೆಗೂ ಸಹ ತುಪ್ಪದಿಂದ ಮಸಾಜ್‌ ಮಾಡಿಕೊಳ್ಳುವುದು ಉತ್ತಮ ವಿಧಾನಗಳಲ್ಲಿ ಒಂದು. ತಲೆಗೆ ದಿನವೂ ಎಣ್ಣೆ ಹಾಕಿ ಮಸಾಜ್‌ ಮಾಡಿಕೊಳ್ಳುವವರನ್ನು ನಾವು ಕಂಡಿದ್ದೇವೆ. ವಾರಕ್ಕೊಮ್ಮೆ ಸಾಮಾನ್ಯವಾಗಿ ನಾವೆಲ್ಲ ಇದನ್ನು ಅನುಸರಿಸುತ್ತೇವೆ. ಹಾಗೆಯೇ ತಲೆಗೆ ತುಪ್ಪದಿಂದ ಮಸಾಜ್‌ ಮಾಡಿಕೊಳ್ಳಬೇಕು. ತಲೆ ಹಾಗೂ ಕೂದಲಿನ (Hair) ಆರೋಗ್ಯಕ್ಕೆ ತುಪ್ಪದ ಮಸಾಜ್‌ ಅತ್ಯುತ್ತಮ.

ಇದನ್ನೂ ಓದಿ: ಊಟ ಮಾಡುವಾಗಲ್ಲೆಲ್ಲಾ ಹಪ್ಪಳ ತಿನ್ನುತ್ತೀರಾ ? ಈ ಸಮಸ್ಯೆಗಳು ಕಾಡಬಹುದು ಎಚ್ಚರ

ಕೂದಲ ಆರೋಗ್ಯಕ್ಕೂ ತುಪ್ಪ ಇರಲಿ
ತುಪ್ಪದಲ್ಲಿ ಒಳ್ಳೆಯ ಕೊಬ್ಬು, ಫ್ಯಾಟಿ ಆಸಿಡ್‌ (Fatty Acid) ಗಳಿರುತ್ತವೆ. ದೇಹವನ್ನು ನೈಸರ್ಗಿಕವಾಗಿ ಹೀಲ್‌ (Heal) ಮಾಡುವ ಗುಣ ತುಪ್ಪಕ್ಕಿದೆ. ಅಂದರೆ, ದೇಹಕ್ಕೆ ಹಿತ ನೀಡುತ್ತದೆ. ಕೇವಲ ಆಹಾರದಲ್ಲಿ ಮಾತ್ರವಲ್ಲ, ಚಳಿಗಾಲದಲ್ಲಿ ಚರ್ಮದ (Skin) ರಕ್ಷಣೆಗೆ ತುಪ್ಪ ಬಳಕೆ ಮಾಡುವುದೂ ಇದೆ. ಜಿಡ್ಡಿನಂಶ ಕಡಿಮೆ ಇರುವ, ತುಂಡಾಗುವ, ಶುಷ್ಕವಾಗಿರುವ ಕೂದಲ ರಕ್ಷಣೆಗೆ ತುಪ್ಪದ ಮಸಾಜ್‌ ಉತ್ತಮ ಪರಿಹಾರವಾಗಿದೆ. 

ತುಪ್ಪದಲ್ಲಿರುವ ಫ್ಯಾಟಿ ಆಸಿಡ್‌ ಅಂಶ ತಲೆಗೆ ಹಾಗೂ ಕೂದಲಿನ ಬುಡದ ಫಾಲಿಕಲ್‌ ಗಳಿಗೆ ಒಳ್ಳೆಯದು. ತುಪ್ಪ ಕೂದಲನ್ನು ಹೈಡ್ರೇಟ್‌ ಮಾಡುವ ಮೂಲಕ ಕೂದಲ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಕೂದಲಿಗೆ ಹೊಳಪು ನೀಡುತ್ತದೆ. ಕೂದಲನ್ನು ಮೃದುವಾಗಿಸುತ್ತದೆ. ಕೂದಲಿಗೆ ರಾತ್ರಿಯಿಡೀ ತುಪ್ಪ ಸವರಿ ಇಡುವುದರಿಂದ ಡೀಪ್‌ ಕಂಡಿಷನರ್‌ ರೀತಿ ರಕ್ಷಣೆ ದೊರೆಯುತ್ತದೆ. 

ಇದನ್ನೂ ಓದಿ: ಚಾಕೋಲೇಟ್‌ನಿಂದ ಬೆಳ್ಳುಳ್ಳಿವರೆಗೆ.. ಆಹಾರದ ಮೂಲಕ Anxiety ನಿವಾರಿಸಿಕೊಳ್ಳಿ

ತುಪ್ಪವನ್ನು ಸ್ವಲ್ಪ ಬಿಸಿ ಮಾಡಿಕೊಂಡು ಮಸಾಜ್‌ ಮಾಡುವುದರಿಂದ ತಲೆಯ ರಕ್ತಸಂಚಾರ ಚುರುಕಾಗುತ್ತದೆ. ಕೂದಲು ದಟ್ಟವಾಗಿ, ಉದ್ದವಾಗಿ ಬೆಳೆಯಲು ಅನುಕೂಲವಾಗುತ್ತದೆ. ರಾತ್ರಿ ಚೆನ್ನಾಗಿ ನಿದ್ರೆ ಬರುವುದರಿಂದ ಆರೋಗ್ಯಕ್ಕೂ ಪೂರಕವಾಗುತ್ತದೆ. ಒತ್ತಡ ನಿವಾರಣೆಗೂ ಇದು ಬಹಳ ಸಹಕಾರಿಯಾಗಿದೆ.
ತುಪ್ಪದಲ್ಲಿ ವಿಟಮಿನ್‌ ಎ (Vitamin A) ಮತ್ತು ವಿಟಮಿನ್‌ ಡಿ ಧಾರಾಳವಾಗಿರುವುದರಿಂದ ಕೂದಲ ಒರಟನ್ನು ನಿವಾರಿಸುತ್ತದೆ. ಅಲ್ಲದೆ, ತುಪ್ಪದಲ್ಲಿರುವ ವಿಟಮಿನ್‌ ಕೆ2, ವಿಟಮಿನ್‌ ಇ, ಆಂಟಿಆಕ್ಸಿಡಂಟ್‌ ಗಳು ಇರುತ್ತವೆ. ಕೂದಲ ತುದಿ ಒಡೆಯುವ ಸಮಸ್ಯೆಗೆ ತುಪ್ಪದಿಂದ ಪರಿಹಾರ ಸಿಗುತ್ತದೆ.

click me!