Subacute Thyroiditis: ಕೊರೋನಾ ಗೆದ್ದವರಿಗೆ ಹೊಸ ಥೈರಾಯ್ಡ್ ಸಮಸ್ಯೆ

By Suvarna News  |  First Published Dec 17, 2021, 1:23 PM IST

ಕೊರೊನಾದಿಂದ ಚೇತರಿಸಿಕೊಂಡ ರೋಗಿಯಲ್ಲಿ ಹೊಸ ಥೈರಾಯ್ಡ್ ಕಾಯಿಲೆ ಕಂಡು ಬಂದಿದೆ. ಆಕ್ಸ್ ಫರ್ಡ್‌ನ ಜರ್ನಲ್ ಆಫ್ ಕ್ಲಿನಿಕಲ್ ಎಂಡೋಕ್ರೈನಾಲಜಿ ಮತ್ತು ಮೆಟಾಬಾಲಿಸಮ್ ಸಂಶೋಧನಾ ಪ್ರಬಂಧವನ್ನು ಪ್ರಕಟಿಸಿದೆ.ಹೊಸ ಥೈರಾಯ್ಡ್ ಬಗ್ಗೆ ಮಾಹಿತಿ ಇಲ್ಲಿದೆ.


ಕೊರೊನಾ (Corona )ಬೆಂಬಿಡದ ಭೂತದಂತೆ ಕಾಡ್ತಿದೆ. ಕೊರೊನಾ ಈಗಾಗಲೇ ಅನೇಕ ರೂಪಾಂತರಗಳನ್ನು ಪಡೆದಿದೆ. ಕೊರೊನಾ,ಡೆಲ್ಟಾ ನಂತರ ಈಗ ಒಮಿಕ್ರಾನ್(Omicron) ಭೀತಿ ಕಾಡುತ್ತಿದೆ. ಕೊರೊನಾ ಬಂದಾಗ ಒಂದು ಕಷ್ಟವಾದ್ರೆ ಬಂದು ಹೋದ್ಮೇಲೆ ಇನ್ನೊಂದು ಕಷ್ಟ. ಕೊರೊನಾದಿಂದ ಚೇತರಿಸಿಕೊಳ್ಳುವುದು ದೊಡ್ಡ ಸವಾಲಿನ ಕೆಲಸವಾಗಿದೆ. ಅಂತೂ ಕೊರೊನಾ ಗುಣಮುಖವಾಗಿ ಆಸ್ಪತ್ರೆಯಿಂದ ಹೊರ ಬಂದ್ವಿ ಎಂದು ನೆಮ್ಮದಿಪಡುವ ಹಾಗಿಲ್ಲ. ಕೊರೊನಾ ನಂತ್ರ ಆರೋಗ್ಯ(Health)ದಲ್ಲಿ ಸಾಕಷ್ಟು ಏರುಪೇರುಗಳಾಗ್ತಿವೆ. ಕೊರೊನಾ ನಂತ್ರ ಹೊಸ ಹೊಸ ಸಮಸ್ಯೆ ಕಾಡಲು ಶುರುವಾಗ್ತಿದೆ.  ಕೊರೊನಾದಿಂದ ಗುಣಮುಖರಾದ ರೋಗಿಗಳ ಜೀವನವು ಸುಲಭವಲ್ಲ.  ಇತ್ತೀಚೆಗೆ ಇಟಲಿಯಲ್ಲಿ ಮಹಿಳೆಯೊಬ್ಬರಿಗೆ `ಸಬ್ಕ್ಯೂಟ್ ಥೈರಾಯ್ಡಿಟಿಸ್ '(Subacute-Thyroiditis) ಇರುವುದು ಪತ್ತೆಯಾಗಿದೆ. ಇದು ಕೋವಿಡ್-19ಗೆ ಸಂಬಂಧಿಸಿದ ಮೊದಲ ಅಪರೂಪದ ಪ್ರಕರಣ ಎಂದು ಹೇಳಲಾಗುತ್ತಿದೆ.  ಪಿಸಾ (Pisa ) ವಿಶ್ವವಿದ್ಯಾಲಯ ಆಸ್ಪತ್ರೆಯ ಪಿಎಚ್‌ಡಿ ವಿದ್ಯಾರ್ಥಿಗಳು, ಕೊರೊನಾ ರೋಗಿಯಲ್ಲಿ ಕಂಡುಬಂದ ಮೊದಲ ಥೈರಾಯ್ಡ್ ಪ್ರಕರಣವಿದು ಎಂದಿದ್ದಾರೆ. 

ಕೊರೊನಾ ರೋಗಿಗೆ ಸಬ್ಕ್ಯೂಟ್ ಥೈರಾಯ್ಡಿಟಿಸ್ : ಕೊರೊನಾ ವೈರಸ್ ನಿಂದ ಚೇತರಿಸಿಕೊಂಡ ನಂತರವೂ, ಜನರು ವಿವಿಧ ದೈಹಿಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಹೃದಯ (Heart) ಸಂಬಂಧಿ ಸಮಸ್ಯೆಗಳು, ಸ್ನಾಯು (Muscle )ಸಮಸ್ಯೆಗಳು, ಶ್ವಾಸಕೋಶ(lungs)ದ ಸಮಸ್ಯೆಗಳು ಮತ್ತು ಮಾನಸಿಕ ಅಸ್ವಸ್ಥತೆ (Mental illness)ಗಳು, ನಿದ್ರಾಹೀನತೆ, ಖಿನ್ನತೆ, ಆಹಾರದ ಅಸ್ವಸ್ಥತೆಗಳಂತಹ ಸಮಸ್ಯೆ ಕಾಡ್ತಿದೆ ಎಂದು ಅಧ್ಯಯನ(Study)ದಲ್ಲಿ ಹೇಳಲಾಗಿದೆ. ವಾಸ್ತವವಾಗಿ, ಚೀನಾದಲ್ಲಿ ಕೆಲವು ರೋಗಿಗಳು ಚೇತರಿಸಿಕೊಂಡ ನಂತರ ಇಂತಹ ಸಮಸ್ಯೆಗಳನ್ನು ಅನುಭವಿಸಿದ್ದಾರೆ. ಅಪರೂಪದ ಖಾಯಿಲೆ ಸಬ್ಕ್ಯೂಟ್ ಥೈರಾಯ್ಡಿಟಿಸ್ ಸಹ ಕಂಡು ಬಂದಿದೆ. ಇಟಲಿಯಲ್ಲಿ ಮಹಿಳೆಯೊಬ್ಬರಿಗೆ ಸಬ್ಕ್ಯೂಟ್ ಥೈರಾಯ್ಡಿಟಿಸ್ ಇರುವುದು ಪತ್ತೆಯಾಗಿದ್ದು, ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಸಬ್ಕ್ಯೂಟ್ ಥೈರಾಯ್ಡಿಟಿಸ್ ನ ಆರಂಭಿಕ ಕಾರಣವೆಂದರೆ ಕೊರೊನಾ ವೈರಸ್ ಸೋಂಕು ಎಂಬುದು ಬಹಿರಂಗವಾಗಿದೆ. 

Tap to resize

Latest Videos

undefined

ಸಬ್ಕ್ಯೂಟ್ ಥೈರಾಯ್ಡಿಟಿಸ್ ಎಂದರೇನು ? :
ಸಬ್ಕ್ಯೂಟ್ ಥೈರಾಯ್ಡಿಟಿಸ್ ಎಂಬುದು ಥೈರಾಯ್ಡ್ ಗ್ರಂಥಿಯ ನೋವಿ(Pain)ನ ಊತ(Swelling)ವಾಗಿದೆ. ವೈರಲ್ ಸೋಂಕಿನಿಂದ ಉಂಟಾಗುತ್ತದೆ. ವೈದ್ಯ(Doctor)ರ ಪ್ರಕಾರ, ಈ ಸಮಸ್ಯೆ ಕಂಡುಬಂದ ಮಹಿಳೆಗೆ 18 ವರ್ಷ. ಆಕೆಗೆ ಕೊರೊನಾ ಸೋಂಕು ತಗುಲಿರುವುದು ಪತ್ತೆಯಾಗಿದ್ದು, ಚಿಕಿತ್ಸೆ ಬಳಿಕ ಸಂಪೂರ್ಣ ಗುಣಮುಖಳಾಗಿದ್ದಳು. ನಂತರ ಮಹಿಳೆಗೆ ಸಬ್ಕ್ಯೂಟ್ ಥೈರಾಯ್ಡಿಟಿಸ್ ಇರುವುದು ಪತ್ತೆಯಾಯಿತು. ಕೊರೊನಾದಿಂದ ಮಹಿಳೆ ಚೇತರಿಸಿಕೊಂಡ ನಂತರ, ಆಕೆಯ ಕುತ್ತಿಗೆ ಮತ್ತು ಥೈರಾಯ್ಡ್ ನಲ್ಲಿ ನೋವು ಕಾಣಿಸಿಕೊಂಡಿತ್ತು. ಜ್ವರ (Fever )ಬಂದಿತ್ತು. ಮಹಿಳೆ ಕುತ್ತಿಗೆಯನ್ನು ಅಲ್ಟ್ರಾಸೌಂಡ್ (Ultrasound) ಗೆ ಒಳಪಡಿಸಲಾಗಿತ್ತು. ಆಗ ಮಹಿಳೆಗೆ ಸಬ್ಕ್ಯೂಟ್ ಥೈರಾಯ್ಡಿಟಿಸ್ ಇರುವುದು ಕಂಡುಬಂದಿದೆ. ಗಂಟಲಿನಲ್ಲಿ ಊರಿಯೂತವಿತ್ತಂತೆ. ಜೊತೆಗೆ ಬಿಳಿ ರಕ್ತಗಣ (White bloodline)ಗಳ ಮಟ್ಟ ಹೆಚ್ಚಾಗಿತ್ತಂತೆ. ಸಬ್ಕ್ಯೂಟ್ ಥೈರಾಯ್ಡಿಟಿಸ್ ಪತ್ತೆಯಾದ ತಕ್ಷಣ ವೈದ್ಯರು ಚಿಕಿತ್ಸೆ ಶುರು ಮಾಡಿದ್ದಾರೆ. ಒಂದು ವಾರದಲ್ಲಿ ಮಹಿಳೆ ಸಂಪೂರ್ಣ ಗುಣಮುಖಳಾಗಿದ್ದಾಳೆ ಎಂದು ವೈದ್ಯರು ಹೇಳಿದ್ದಾರೆ.

ಯಾರನ್ನು ಹೆಚ್ಚು ಕಾಡುತ್ತೆ ಸಬ್ಕ್ಯೂಟ್ ಥೈರಾಯ್ಡಿಟಿಸ್? : 
ಸಬ್ಕ್ಯೂಟ್ ಥೈರಾಯ್ಡಿಟಿಸ್ ಸಾಮಾನ್ಯವಾಗಿ 20 ರಿಂದ 50 ವರ್ಷ ವಯಸ್ಸಿನ ಮಹಿಳೆಯರಲ್ಲಿ ಕಂಡುಬರುತ್ತದೆ. ಇದು ಸಾಮಾನ್ಯವಾಗಿ ಜ್ವರ, ಕುತ್ತಿಗೆ, ದವಡೆ ಅಥವಾ ಕಿವಿ(Ears)ಯಲ್ಲಿ ನೋವು ಉಂಟುಮಾಡುತ್ತದೆ .  ಆಗಾಗ ಈ ನೋವು 
ಕಾಣಿಸಿಕೊಳ್ಳುತ್ತಿರುತ್ತದೆ. 

ಸಬ್ಕ್ಯೂಟ್ ಥೈರಾಯ್ಡಿಟಿಸ್ ಗೆ ಔಷಧಿ :
ಇದನ್ನು ಗುಣಪಡಿಸಬಹುದು. ಬೀಟಾ-ಬ್ಲಾಕರ್ಸ್(Beta-Blockers), ನೋವು ನಿವಾರಕಗಳಾದ ಐಬುಪ್ರೊಫೇನ್‌(Ibuprofen)ನಂತಹ ಔಷಧಿ ನೀಡಿ ಗುಣಪಡಿಸಬಹುದು. ಕೆಲವರಿಗೆ ಇದು ಮತ್ತೆ ಮತ್ತೆ ಕಾಡುವ ಸಾಧ್ಯತೆಯಿದೆ. ಆಗ ಜೀವನ ಪರ್ಯಂತ ಔಷಧಿ ತೆಗೆದುಕೊಳ್ಳಬೇಕಾಗುತ್ತದೆ. ದೀರ್ಘಾವಧಿಯ ಥೈರಾಯ್ಡ್ ಹಾರ್ಮೋನ್ (Hormone )ಬದಲಿ ಔಷಧಿಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಮೂರು ತಿಂಗಳಿಗೊಮ್ಮೆ ಥೈರಾಯ್ಡ್ ಮಟ್ಟವನ್ನು ಪರೀಕ್ಷಿ(Test)ಸುವ ಅಗತ್ಯವಿರುತ್ತದೆ. 

click me!