ದಾರಿಯಲ್ಲಿ ನಾಯಿಗೆ ಹೃದಯಾಘಾತ, ಉಸಿರು ನೀಡಿ ಜೀವ ಉಳಿಸಿದ ವ್ಯಕ್ತಿಗೆ ನೆಟ್ಟಿಗರ ಪ್ರಶಂಸೆ!

By Suvarna News  |  First Published Apr 18, 2024, 4:26 PM IST

ನಾಯಿಗಳಿಗೂ ಹೃದಯಾಘಾತವಾಗುತ್ತೆ. ಈ ಸಮಯದಲ್ಲಿ ಅವು ಬದುಕುಳಿಯೋದು ಬಹಳ ಅಪರೂಪ. ದಾರಿ ಮಧ್ಯೆ ಪ್ರಜ್ಷೆ ತಪ್ಪಿ ಬಿದ್ದ ನಾಯಿಗೆ ಈ ವ್ಯಕ್ತಿಯೊಬ್ಬ ಸರಿಯಾದ ಸಮಯದಲ್ಲಿ ಸೂಕ್ತ ಚಿಕಿತ್ಸೆ ನೀಡಿ ದೇವರಾಗಿದ್ದಾನೆ.
 


ಮನೆಯಲ್ಲಿರುವ ಪ್ರತಿಯೊಂದು ವಸ್ತುಗಳ ಜೊತೆ ನಮಗೊಂದು ಅಟ್ಯಾಚ್ಮೆಂಟ್ ಇರುತ್ತೆ. ಜೀವವಿಲ್ಲದ ಇಲೆಕ್ಟ್ರಿಕ್ ವಸ್ತುಗಳನ್ನೇ ನಮ್ಮದು ಎಂದು ಹಚ್ಚಿಕೊಳ್ಳುವ ನಾವು ಇನ್ನು ಜೀವ ಇರುವ ಪ್ರಾಣಿಗಳನ್ನು ಮತ್ತಷ್ಟು ಪ್ರೀತಿಸ್ತೇವೆ. ಕೆಲವರು ಮನುಷ್ಯರಿಗಿಂತ ಮನೆಯಲ್ಲಿರುವ ಸಾಕು ಪ್ರಾಣಿಗಳ ಮೇಲೆ ತಮ್ಮ ಪ್ರಾಣ ಇಟ್ಟುಕೊಂಡಿರುತ್ತಾರೆ. ಸಾಕು ಪ್ರಾಣಿ ಪಟ್ಟಿಯಲ್ಲಿ ನಾಯಿಗೆ ವಿಶೇಷ ಸ್ಥಾನ. ನಾಯಿಯನ್ನು ಭರವಸೆಯ, ನಂಬಬಹುದಾದ ಪ್ರಾಣಿ ಎನ್ನಲಾಗುತ್ತದೆ. ಮಾಲೀಕನಿಗೆ ಜೀವ ನೀಡಲೂ ನಾಯಿಗಳು ಸಿದ್ಧವಿರುತ್ತವೆ. ಬಿಡುವಿನ ಸಮಯವನ್ನು ನಾಯಿ ಜೊತೆ ಕಳೆಯುವ ಜನರು ತಮ್ಮ ನೋವನ್ನು ಮರೆಯುತ್ತಾರೆ. ಮನುಷ್ಯರಂತೆ ನಾಯಿಗಳಿಗೆ ಕೂಡ ಆರೋಗ್ಯದಲ್ಲಿ ಏರುಪೇರಾಗೋದಿದೆ. ಮನುಷ್ಯ ಬಾಯ್ಬಿಟ್ಟು ತನಗಾದ ಸಮಸ್ಯೆ ಹೇಳ್ತಾನೆ. ಆದ್ರೆ ನಾಯಿಯ ಸಮಸ್ಯೆ ಅರಿಯೋದು ಕಷ್ಟ. ಇದ್ದಕ್ಕಿದ್ದಂತೆ ಮನೆಯಲ್ಲಿರುವ ನಾಯಿ ಊಟ ಬಿಟ್ಟಾಗ, ತ್ರಾಣ ಕಳೆದುಕೊಂಡಾಗ ಹೊಟ್ಟೆ ಚುರ್ ಗುಡುತ್ತೆ. ಏನೋ ಟೆನ್ಷನ್ ನಮ್ಮನ್ನು ಕಾಡುತ್ತೆ. ದಾರಿಯಲ್ಲಿ ಹೋಗ್ತಿದ್ದ ನಾಯಿ ಕುಸಿದು ಬಿದ್ರೆ ಮಾಲೀಕರ ಸ್ಥಿತಿ ಏನಾಗಬೇಡ. ಅದಕ್ಕೆ ಹೃದಯಾಘಾತವಾಗಿದೆ ಎಂಬುದು ಗೊತ್ತಾಗೋದಾದ್ರೂ ಹೇಗೆ? ಆದ್ರೆ ಇಲ್ಲೊಬ್ಬ ನಾಯಿಗೆ ಏನಾಗ್ತಿದೆ ಎಂಬುದನ್ನು ಪತ್ತೆ ಮಾಡಿದ್ದಲ್ಲದೆ ಅದಕ್ಕೆ ಸಿಪಿಆರ್ ಮಾಡಿ ಪ್ರಾಣ ಉಳಿಸಿದ್ದಾನೆ.

ಇನ್ಸ್ಟಾಗ್ರಾಮ್ (Instagram) ನ rundawggym ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ನಾಯಿ (Dog) ಯೊಂದಕ್ಕೆ ಸಿಪಿಆರ್ ಮಾಡಿ ನಾಯಿಯ ಪ್ರಾಣ ಉಳಿಸಲಾಗಿದೆ ಎಂದು ಶೀರ್ಷಿಕೆ ಹಾಕಲಾಗಿದೆ.

 
 
 
 
 
 
 
 
 
 
 
 
 
 
 

Tap to resize

Latest Videos

A post shared by RUN DAWG Mobile Dog Gym (@rundawggym)

ಗಂಡಸರಿಗೆ ಹೆಂಗಸರಿಗಿಂತ ಬೇಗ ವಯಸ್ಸಾಗತ್ತಂತೆ ಯಾಕೆ ?

ಅನಾರೋಗ್ಯ (Sick) ಕ್ಕೆ ಒಳಗಾಗಿದ್ದ ನಾಯಿ, ರಸ್ತೆ ಮಧ್ಯೆ ಹೊರಳಾಡ್ತಿತ್ತು. ಇನ್ಸ್ಟಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ನೀವು ಸ್ಪಷ್ಟವಾಗಿ ನೋಡ್ಬಹುದು, ವ್ಯಕ್ತಿಯೊಬ್ಬ ನಾಯಿಗೆ ಸಿಪಿಆರ್ ಮಾಡ್ತಿದ್ದಾನೆ. ನಾಯಿಗೆ ಹೃದಯಾಘಾತವಾಗಿದೆ ಎಂಬುದನ್ನು ಪತ್ತೆ ಮಾಡಿದ ವ್ಯಕ್ತಿ ಸಿಪಿಆರ್ ಮಾಡಿದ್ದಾನೆ. ತನ್ನ ಬಾಯಿಂದ ಉಸಿರನ್ನು ನಾಯಿ ಬಾಯಿಗೆ ನೀಡಿದ್ದಾನೆ. ಕೆಲ ಸಮಯ ಸಿಆರ್ ಪಿ ರಿಪಿಟ್ ಮಾಡಿದ ವ್ಯಕ್ತಿ ಕೊನೆಗೂ ಸಫಲನಾಗಿದ್ದಾನೆ. ಕೆಲವು ಸಮಯದ ನಂತ್ರ ನಾಯಿ ಹೊರಳಾಡಿದೆ. ನಂತ್ರ ಎದ್ದು ನಿಂತಿದೆ. ಇದನ್ನು ನೋಡಿದ ನಾಯಿ ಮಾಲೀಕೆ ಖುಷಿಯಾಗಿದ್ದಾಳೆ.

ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದೆ. ಇಲ್ಲಿವರೆಗೆ 2.3 ಮಿಲಿಯನ್ ಅಂದರೆ 23 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. 13 ಸಾವಿರಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. ಬಳಕೆದಾರರು ಸಿಪಿಆರ್ ಮಾಡಿದ ವ್ಯಕ್ತಿಯನ್ನು ಹೊಗಳಿದ್ದಾರೆ.  ಇದೇ ವೇಳೆ ನಾಯಿ ಮಾಲೀಕರ ಕ್ರಮವನ್ನು ಖಂಡಿಸಿದ್ದಾರೆ. ಸೈಕಲ್ ಗೆ ದಾರ ಕಟ್ಟಿ ಸೈಕಲ್ ಜೊತೆ ನಾಯಿಯನ್ನು ಓಡಿಸ್ತಿದ್ದರು. ಇದು ತಪ್ಪು. ಅವರು ನಾಯಿಯನ್ನು ಸಾಯಿಸ್ತಿದ್ದರು ಎಂದು ಕೋಪ ವ್ಯಕ್ತಪಡಿಸಿದ್ದಾರೆ. 

ಡಾಕ್ಟರ್‌ಗೆ ತೋರ್ಸದೇ ಜ್ವರಕ್ಕೆ ಮಾತ್ರೆ ತಗೊಂಡ ಮಹಿಳೆ ಮುಖವೇ ಆಯ್ತು ವಿಚಿತ್ರ!

ನಾಯಿಗೆ ಹೃದಯಾಘಾತ : ಬರೀ ಮನುಷ್ಯರಿಗೆ ಮಾತ್ರವಲ್ಲ ಪ್ರಾಣಿಗಳಿಗೂ ಹೃದಯಾಘಾತವಾಗುತ್ತದೆ. ನಾಯಿಗಳಿಗೂ ಹೃದಯಾಘಾತವಾಗುತ್ತದೆ ಆದ್ರೆ ಬಹಳ ಅಪರೂಪ. ಒಂದ್ವೇಳೆ  ಪಿಇಟಿ ನೋವು, ದೌರ್ಬಲ್ಯ ಅಥವಾ ಉಸಿರಾಟದ ತೊಂದರೆ ಲಕ್ಷಣ ಗೊತ್ತಾದ್ರೆ ತಕ್ಷಣ ಪಶು ವೈದ್ಯರನು ಭೇಟಿಯಾಗ್ಬೇಕು.  ನಿಮ್ಮ ಮನೆ ನಾಯಿ ಪ್ರಜ್ಞೆ ಕಳೆದುಕೊಂಡ್ರೆ. ಕಾಲುಗಳನ್ನು ಅಲ್ಲಾಡಿಸಲು ಸಾಧ್ಯವಿಲ್ಲದೆ ಹೋದ್ರೆ, ವೇಗವಾಗಿ ಅಥವಾ ಕಷ್ಟಕರವಾಗಿ ಉಸಿರಾಟ ನಡೆಸುತ್ತಿದ್ದರೆ, ತೀವ್ರ ದೌರ್ಬಲ್ಯ ಅಥವಾ ಆಯಾಸ ಎದುರಿಸಿದ್ರೆ ನಾಯಿಗೆ ಹೃದಯಾಘಾತವಾಗಿದೆ ಎಂದರ್ಥ. ಹೃದಯಾಘಾತದಿಂದ ನಾಯಿ ಚೇತರಿಸಿಕೊಳ್ಳುವ ಸಾಧ್ಯತೆಗಳು ಕಡಿಮೆ. ಅದು ತೀವ್ರತೆಯನ್ನು ಅವಲಂಬಿಸಿರುತ್ತದೆ. ಹೃದಯಾಘಾತದ ನಂತ್ರ ನಾಯಿ ಬದುಕುಳಿಯುವ ಸಮಯ ಸಾಕಷ್ಟು ಸೀಮಿತವಾಗಿರುತ್ತದೆ. ಅನುಮಾನವಿದ್ದಲ್ಲಿ ತಕ್ಷಣ ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ನೀಡಬೇಕಾಗುತ್ತದೆ. ಮಧುಮೇಹ, ಕ್ಯಾನ್ಸರ್, ಸೆಪ್ಸಿಸ್, ಪಾರ್ವೊವೈರಸ್ ಸೇರಿದಂತೆ ಅನೇಕ ಸಮಸ್ಯೆಗಳು ನಾಯಿಗೆ ಹೃದಯಾಘಾತವಾಗಲು ಕಾರಣವಾಗುತ್ತದೆ. 
 

click me!