ಡಾಕ್ಟರ್‌ಗೆ ತೋರ್ಸದೇ ಜ್ವರಕ್ಕೆ ಮಾತ್ರೆ ತಗೊಂಡ ಮಹಿಳೆ ಮುಖವೇ ಆಯ್ತು ವಿಚಿತ್ರ!

By Suvarna NewsFirst Published Apr 17, 2024, 4:27 PM IST
Highlights

ನಮ್ಮಲ್ಲಿ ಹೊಸ ವೈದ್ಯನಿಗಿಂತ ಹಳೆ ರೋಗಿ ವಾಸಿ ಎನ್ನುವಂತೆ ಅನೇಕರಿಗೆ ಯಾವ ಖಾಯಿಲೆ ಬಂದ್ರೆ ಯಾವ ಮಾತ್ರೆ ಎನ್ನುವ ಪರಿಚಯವಿರುತ್ತದೆ. ಹಾಗಾಗಿಯೇ ವೈದ್ಯರನ್ನು ಭೇಟಿಯಾಗ್ದೆ ಔಷಧಿ ಸೇವನೆ ಮಾಡ್ತಾರೆ. ನಂತ್ರ ಸಾವು – ಬದುಕಿನ ಮಧ್ಯೆ ಹೋರಾಟ ನಡೆಸುತ್ತಾರೆ.
 

ತಲೆ ನೋವು, ನೆಗಡಿ, ಜ್ವರ ಇವೆಲ್ಲ ಆರು ತಿಂಗಳಿಗೆ ಒಮ್ಮೆಯಾದ್ರೂ ಕಾಡುತ್ತವೆ. ಕೆಲವರು ಸಣ್ಣ ತಲೆನೋವನ್ನು ಸಹಿಸಿಕೊಳ್ಳೋದಿಲ್ಲ. ಕೆಲಸ ಹೆಚ್ಚಿದೆ ಎನ್ನುವ ಕಾರಣ ಹೇಳಿ ತಲೆನೋವು, ನೆಗಡಿ ಆದ್ರೂ ಮಾತ್ರೆ ಸೇವನೆ ಮಾಡುತ್ತಾರೆ. ಮತ್ತೆ ಕೆಲವರು ತಕ್ಷಣ ಗುಣಮುಖರಾಗುವ ಆಸೆಯಿಂದ ಇಂಜೆಕ್ಷನ್ ಪಡೆಯುತ್ತಾರೆ. ಯಾವುದೇ ಚಿಕಿತ್ಸೆ ಮುಂದೆ ವೈದ್ಯರ ಭೇಟಿ ಯೋಗ್ಯ. ಆದ್ರೆ ಅನೇಕರು ಮಾತ್ರೆ ತೆಗೆದುಕೊಳ್ಳುವ ಮುನ್ನ ಅನೇಕ ಜನರು ವೈದ್ಯರ ಬಳಿ ಹೋಗೋದಿಲ್ಲ. ಹಿಂದೆ ವೈದ್ಯರು ನೀಡಿದ ಚೀಟಿ ತೋರಿಸಿ ಇಲ್ಲವೆ ಬಾಯಿಯಲ್ಲಿ ಮಾತ್ರೆ ಹೆಸರು ಹೇಳಿ ಅಂಗಡಿಯಿಂದ ತರುವ ಜನರು ಅದನ್ನು ನುಂಗ್ತಾರೆ. ಮತ್ತೊಂದಿಷ್ಟು ಮಂದಿ ಅವರಿವರನ್ನು ಕೇಳಿ, ಅವರು ಹೇಳಿದ ಮಾತ್ರೆಯನ್ನು ತಂದು ಸೇವನೆ ಮಾಡುತ್ತಾರೆ. ಒಮ್ಮೆ ಆ ಮಾತ್ರೆ ಸೇವನೆ ಮಾಡಿದಾಗ ನೆಗಡಿ ಕಮ್ಮಿ ಆಗಿದ್ರೆ ಅದು ಪರ್ಸ್ ಸೇರುತ್ತದೆ. ನೆಗಡಿ ಕಾಡುವ ಸೂಚನೆ ಬಂದಾಗ್ಲೇ  ಆ ಮಾತ್ರೆ ಸೇವನೆ ಮಾಡ್ತಾರೆ. ಕೆಲ ಮಾತ್ರೆ ಕೆಲವೇ ಕ್ಷಣದಲ್ಲಿ ನಿಮ್ಮ ತಲೆನೋವು ಕಡಿಮೆ ಮಾಡುತ್ತದೆ. ಆದ್ರೆ ಪದೇ ಪದೇ ವೈದ್ಯರ ಸಲಹೆ ಇಲ್ಲದೆ ಈ ಮಾತ್ರೆ ಸೇವನೆ ಒಳ್ಳೆಯದಲ್ಲ. ಈಗ ಮಹಿಳೆಯೊಬ್ಬಳು ಇದೇ ತಪ್ಪು ಮಾಡಿ ಆಸ್ಪತ್ರೆ ಸೇರಿದ್ದಾಳೆ. ದೇಹದಲ್ಲಿ ನೋವು ಕಾಣಿಸಿಕೊಳ್ತಿದ್ದಂತೆ ಐಬುಪ್ರೊಫೇನ್ ಮಾತ್ರೆ ತೆಗೆದುಕೊಂಡ ಮಹಿಳೆ ಈಗ ಆಸ್ಪತ್ರೆ ಸೇರಿದ್ದಾಳೆ. ಒಂದು ನೋವು ಕಡಿಮೆ ಮಾಡಲು ಹೋಗಿ ಇನ್ನೊಂದು ನೋವು ಬಂತು ಎನ್ನುವ ಸ್ಥಿತಿ ನಿರ್ಮಾಣವಾಗಿದೆ.

ಆಕೆ ಇರಾನ್ (Iran) ಮೂಲದ ಮಹಿಳೆ. ಆಕೆಗೆ ಮೈಕೈ ನೋವು (Pain) ಕಾಣಿಸಿಕೊಂಡಿದೆ. ತಕ್ಷಣ ಐಬುಪ್ರೊಫೇನ್ (Ibuprofen) ಮಾತ್ರೆ ಸೇವನೆ ಮಾಡಿದ್ದಾಳೆ. ವೈದ್ಯರ ಸಲಹೆ ಇಲ್ಲದೆ, ಅವರನ್ನು ಭೇಟಿಯಾಗದೆ ತನ್ನದೇ ನಿರ್ಧಾರ ತೆಗೆದುಕೊಂಡ ಮಹಿಳೆ 400 ಮಿಗ್ರಾಂ ಐಬುಪ್ರೊಫೇನ್ ಎರಡು ಮಾತ್ರೆ (Pill) ಗಳನ್ನು ತೆಗೆದುಕೊಂಡಿದ್ದಾಳೆ. ಇದು ಅತ್ಯಂತ ಅಪಾಯಕಾರಿ ನಿರ್ಧಾರವಾಗಿದೆ. 

ಕುಟುಂಬದ ಆರೋಗ್ಯ ಚೆನ್ನಾಗಿರ್ಬೇಕಂದ್ರೆ ಮ್ಯಾಗಿ ಸೇರಿ ಈ 9 ಪದಾರ್ಥಗಳನ್ನು ಬೆಳಗಿನ ತಿಂಡಿಗೆ ಮಾಡ್ಲೇಬೇಡಿ!

ಈ ಮಾತ್ರೆ ಸೇವನೆ ಮಾಡಿದ ಕೆಲ ಗಂಟೆಯಲ್ಲೇ ಮಹಿಳೆಯಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಆಕೆಯ ಕಣ್ಣು (Eye) ಆರಂಭದಲ್ಲಿ ಕೆಂಪಾಯ್ತು. ನಂತ್ರ ರಕ್ತ ಬರಲು ಶುರುವಾಯ್ತು. ಮುಖ ಊದಿಕೊಂಡಿಯತು. ತುಟಿಗಳಲ್ಲಿ ಹಳದಿ ಬಣ್ಣದ ಪ್ಯಾಚ್ ಕಾಣಿಸಿಕೊಂಡಿತು. ಅಲ್ಲದೆ ಚರ್ಮ ಹಾವಿನಂತಾಯ್ತು. ಕೊನೆಗೆ ಮಹಿಳೆಯನ್ನು ಐಸಿಯುವಿಗೆ ಸೇರಿಸುವ ಸ್ಥಿತಿ ನಿರ್ಮಾಣವಾಯ್ತು. ಮಹಿಳೆ ಆತಂರಿಕ ಅಂಗಕ್ಕೆ ಮಾತ್ರೆ ಯಾವುದೇ ಪರಿಣಾಮ ಬೀರಿಲ್ಲ. ಹೃದಯ ಹಾಗೂ ಶ್ವಾಸಕೋಶ ಆರೋಗ್ಯವಾಗಿದೆ ಎಂದು ವೈದ್ಯರು ಹೇಳಿದ್ದಾರೆ. 

ಇಷ್ಟರ ಮಧ್ಯೆಯೂ ಆಕೆ ಪರಿಸ್ಥಿತಿ ಎಷ್ಟು ಹದಗೆಟ್ಟಿತ್ತೆಂದ್ರೆ ಆಕೆ ಯಾವುದೇ ಆಹಾರವನ್ನು ಕುಡಿಯಲು, ತಿನ್ನಲು ಸಾಧ್ಯವಾಗ್ತಿರಲಿಲ್ಲ. ಮಹಿಳೆಯನ್ನು ಇನ್ನೂ ಏಳು ದಿನ ಆಸ್ಪತ್ರೆಯಲ್ಲಿಟ್ಟು ಪರಿಶೀಲನೆ ನಡೆಸುವುದಾಗಿ ವೈದ್ಯರು ಹೇಳಿದ್ದಾರೆ. ಹೊಸ ಗುಳ್ಳೆ, ಊತ ಕಾಣಿಸದೆ ಇದ್ದಲ್ಲಿ ಆಕೆಯನ್ನು ಮನೆಗೆ ಕಳುಹಿಸುವುದಾಗಿ ತಿಳಿಸಿದ್ದಾರೆ.. ಟ್ಯೂಬ್ ಮೂಲಕ ಆಕೆಗೆ ಆಹಾರ ನೀಡಲಾಗ್ತಿದೆ. ಡ್ರಿಪ್ ಏರಿಸಲಾಗಿದ್ದು, ವಿವಿಧ ಪ್ರತಿ ಜೀವಕಗಳನ್ನು ಇಂಜೆಕ್ಟ್ ಮಾಡಲಾಗಿದೆ. 

ನೀವು ಪ್ರತಿದಿನ ಬಾಳೆಹಣ್ಣು ತಿನ್ನಲೇಬೇಕೆಂಬುದಕ್ಕೆ 10 ಕಾರಣಗಳು..

ಐಬುಪ್ರೊಫೇನ್ ಮಾತ್ರೆ ಪರಿಣಾಮ ಏನು? : ವೈದ್ಯರ ಪ್ರಕಾರ, ಐಬುಪ್ರೊಫೇನ್ ಮಾತ್ರೆ ಹಾನಿಕಾರಕವಲ್ಲ. ಆದ್ರೆ ವೈದ್ಯರ ಸಲಹೆ ಇಲ್ಲದೆ ಅದನ್ನು ತೆಗೆದುಕೊಂಡಲ್ಲಿ ಅದು ಸಾವಿಗೆ ಕಾರಣವಾಗಬಹುದು. ಗಂಭೀರ ಚರ್ಮದ ಸೋಂಕು ಕೂಡ ಕಾಣಿಸಿಕೊಳ್ಳಬಹುದು. ಆರೋಗ್ಯಕರ ರಕ್ತನಾಳ ಹಾಗೂ ಜೀವಕೋಶದ ಮೇಲೆ ಇದು ಪರಿಣಾಮ ಬೀರುತ್ತದೆ. ವೈದ್ಯಕೀಯ ಭಾಷೆಯಲ್ಲಿ ಇದನ್ನು ಸ್ಟೀವನ್ಸ್-ಜಾನ್ಸನ್ ಸಿಂಡ್ರೋಮ್ ಎಂದು ಕರೆಯುತ್ತಾರೆ. ಇದು ಅಪರೂಪದ ಸೋಂಕು ಎನ್ನುತ್ತಾರೆ ವೈದ್ಯರು. 

click me!