Healthy Food : ಜಪಾನೀಯರು 100 ವರ್ಷಕ್ಕೂ ಹೆಚ್ಚು ಕಾಲ ಬದುಕಲು ಇದೇ ಕಾರಣ

By Suvarna News  |  First Published Aug 29, 2023, 4:53 PM IST

ಈಗೀಗ ಸಣ್ಣ ವಯಸ್ಸಿನಲ್ಲೇ ಸಾವನ್ನಪ್ಪುವ ಭಾರತೀಯರ ಸಂಖ್ಯೆ ಹೆಚ್ಚಾಗಿದೆ. ಇರುವ ಮಕ್ಕಳಿಗೂ ಸರಿಯಾದ ಶಕ್ತಿಯ ಕೊರತೆ ಇದೆ. ನಾವೂ ಜಪಾನಿಗಳಂತೆ ಬದುಕಬೇಕೆಂದ್ರೆ ಅವರ ಲೈಫ್ ಸ್ಟೈಲ್ ತಿಳಿದಿರಬೇಕು.  
 


ಹಿಂದಿನ ಕಾಲದ ಜನರು ಹೆಚ್ಚು ಕಾಲ ಬದುಕುತ್ತಿದ್ದರು. ಅದಕ್ಕೆ ಕಾರಣ ಅವರ ಜೀವನ ಶೈಲಿ ಹಾಗೂ ಅವರ ಆಹಾರ ಪದ್ಧತಿಯೇ ಆಗಿತ್ತು. ಆದರೆ ಈಗ ಹಾಗಿಲ್ಲ. ಈಗ ಆಹಾರ ಪದ್ಧತಿ ಹಾಗೂ ಜೀವನಶೈಲಿಗಳೆರಡೂ ಬದಲಾಗಿವೆ. ಇದು ಫಾಸ್ಟ್ ಫುಡ್ ಯುಗ. ಅದರಿಂದಲೇ ಹೆಚ್ಚು ಜನರು ತಮ್ಮ ಅರ್ಧ ಆಯಸ್ಸಿನಲ್ಲೇ ಸಾವನ್ನಪ್ಪುತ್ತಿದ್ದಾರೆ.

ನಮ್ಮ ಆರೋಗ್ಯ (Health )ದ ಗುಟ್ಟು ನಾವು ಸೇವಿಸುವ ಆಹಾರದಲ್ಲಿದೆ. ನಮ್ಮ ಆಹಾರ (Food) ಕ್ರಮ ಸರಿಯಾಗಿದ್ದರೆ ನಾವು ಹೆಚ್ಚು ಕಾಲ ಬದುಕಲು ಸಾಧ್ಯ ಎನ್ನುವುದಕ್ಕೆ ಜಪಾನೀಯರೇ ಸಾಕ್ಷಿ. ಜಪಾನಿನ ಓಕಿನೋವಾ (Okinawa) ಎಂಬಲ್ಲಿಯ ಹೆಚ್ಚು ಜನರು 100 ವರ್ಷಕ್ಕೂ ಹೆಚ್ಚು ಕಾಲ ಬದುಕಿದ್ದಾರೆ ಹಾಗೂ ಯಾವುದೇ ರೋಗವಿಲ್ಲದೇ ಸಂತೋಷವಾಗಿದ್ದಾರೆ. ಇದಕ್ಕೆ ಕಾರಣ ಅವರ ಡಯಟ್ ಆಗಿದೆ.

Latest Videos

undefined

ಸೋರೆಕಾಯಿಯನ್ನು ಹೀಗೆ ತಿಂದ್ರೆ ಹಾಲಾಹಲವಾಗ್ಬಹುದು

ಹೆಚ್ಚು ಕಾಲ ಬದುಕುವ ಇವರ ಗುಟ್ಟೇನು? :ಬರಹಗಾರ ಡ್ಯಾನ್ ಬ್ಯೂಟನರ್ ಎನ್ನುವವರು ಸುಮಾರು 20 ವರ್ಷಗಳ ಕಾಲ ಓಕಿನೋವಾ ಜನರು 100 ವರ್ಷಗಳ ಕಾಲ ಬದುಕಲು ಕಾರಣ ಏನು ಎನ್ನುವುದರ ಬಗ್ಗೆ ಅಧ್ಯಯನ ನಡೆಸಿದರು. ಸತತ ಅಧ್ಯಯನದ ನಂತರ ಅವರಿಗೆ ಓಕಿನೋವಾ ಜನರು ಹೆಚ್ಚು ಕಾಲ ಬದುಕಲು ಅವರು ಸೇವಿಸುವ ಆಹಾರವೇ ಕಾರಣ ಎನ್ನುವುದು ತಿಳಿಯಿತು. ಓಕಿನೋವಾ ಜನರು ಸಸ್ಯ ಆಧಾರಿತ ತರಕಾರಿಗಳನ್ನು ಹೆಚ್ಚು ಬಳಸುತ್ತಾರೆ. ಓಕಿನೋವಾದ ಅಡುಗೆ ಶಿಕ್ಷಕರಾದ ಯುಕೆ ಮಿಯಾಗುನಿ ಅವರು ಓಕಿನೋವಾ ಜನರು ಸದಾ ಫಿಟ್ ಆಗಿಯೇ ಇರುತ್ತಾರೆ. ಅವರು ಯಾವಾಗಲೂ ಮಾತ್ರೆಗಳನ್ನು ತೆಗೆದುಕೊಳ್ಳುವುದೇ ಇಲ್ಲ ಎಂದು ಹೇಳಿದ್ದಾರೆ. ಇಲ್ಲಿನ ಜನರು ಕೆಲವು ಆಹಾರವನ್ನು ತಮ್ಮ ಡಯಟ್ ನಲ್ಲಿ ಅಳವಡಿಸಿಕೊಂಡಿದ್ದಾರೆ ಅದೇ ಅವರ ಅಧಿಕ ಆಯಸ್ಸಿಗೆ ಕಾರಣ ಎಂದಿದ್ದಾರೆ. ಅವರು ಸೇವಿಸುವ ಕೆಲವು ಆಹಾರಗಳನ್ನು ಅವರು ತಿಳಿಸಿದ್ದಾರೆ.

ಸಿಹಿ ಗೆಣಸನ್ನು ಹೆಚ್ಚು ಸೇವಿಸ್ತಾರೆ: ಓಕಿನೋವಾದಲ್ಲಿ ಆಹಾರದ ಕೊರತೆಯಿರುವ ಕಾರಣ ಅಲ್ಲಿನ ಜನರು 1950 ರಿಂದಲೂ ಸಿಹಿ ಗೆಣಸನ್ನು ಹೆಚ್ಚು ಸೇವಿಸುತ್ತಾರೆ. ಸಿಹಿ ಗೆಣಸು ಹೆಚ್ಚಿನ ಫೈಬರ್ ಮತ್ತು ಎಂಟಿ ಆಕ್ಸಿಡೆಂಟ್ ಗಳನ್ನು ಹೊಂದಿರುವುದರಿಂದ ದಿನದ ಸುಮಾರು 67 ಕ್ಯಾಲೊರಿಗಳು ಅವರಿಗೆ ಗೆಣಸಿನಿಂದ ಸಿಗುತ್ತದೆ. ಗೆಣಸನ್ನು ಅವರು ಬೆನಿ ಇಮೋ ಎನ್ನುತ್ತಾರೆ. ಇದರಿಂದಲೇ ಅವರು 100 ವರ್ಷಕ್ಕೂ ಹೆಚ್ಚು ಕಾಲ ಆರೋಗ್ಯವಾಗಿ ಬದುಕುತ್ತಾರೆ.

ಬೇಕಾ ಬಿಟ್ಟಿ ತಿನ್ನೋ ಅಭ್ಯಾಸ ನಿಮಗಿದ್ದರೆ ಕೋಮಾಗೂ ಹೋಗೋ ಚಾನ್ಸ್ ಇರುತ್ತೆ. ಹುಷಾರು!

ಗ್ರೀನ್ ಮಲ್ಬೆರಿ ಎಲೆಗಳು : ಮಲ್ಬೆರಿ ಎಲೆಗಳು ಅನೇಕ ಪೋಷಕಾಂಶಗಳನ್ನು ಹೊಂದಿದೆ. ಇವು ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು ಕಡಿಮೆಮಾಡುತ್ತದೆ ಮತ್ತು ಕೊಲೆಸ್ಟ್ರಾಲ್ ಅನ್ನು ಕೂಡ ನಿಯಂತ್ರಣದಲ್ಲಿಡುತ್ತದೆ. ಗ್ರೀನ್ ಮಲ್ಬೆರಿ ಎಲೆಗಳಿಂದ ಗಂಟಲು ಕೆರೆತ ಕೂಡ ಗುಣಮುಖವಾಗುತ್ತದೆ. ಇದು ಕೂಡ ಓಕಿನೋವಾ ಜನರ ಉತ್ತಮ ಆರೋಗ್ಯದ ಮೂಲವಾಗಿದೆ.

ಸ್ಕ್ವಿಡ್ ಇಂಕ್ ಸೂಪ್ : ಈ ಸೂಪ್ ನಲ್ಲಿ ಎಂಜಾಯ್ಮ್, ಅಮಿನೋ ಎಸಿಡ್ ಮತ್ತು ಆರೋಗ್ಯಕರ ಹಾರ್ಮೋನ್ ಇದೆ. ಇದು ಇಮ್ಯುನಿಟಿಯನ್ನು ಹೆಚ್ಚಿಸಿ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ.

ಆಸಾ ಕಡಲ ಸಸ್ಯ (ಕಳೆ) : ಈ ಸಣ್ಣ ಸಸ್ಯ ಅಥವಾ ಕಳೆ ಅಯೋಡಿನ್ ಮತ್ತು ಎಂಟಿ ಆಕ್ಸಿಡೆಂಟ್ ನಿಂದ ಕೂಡಿದೆ. ಇದು ಓಕಿನೋವಾ ಜನರ ಮೂಳೆಗಳನ್ನು ಸದೃಢವಾಗಿರಿಸುತ್ತದೆ.

ಮಗ್ವರ್ಟ್ : ಈ ಸಸ್ಯದ ಎಲೆ ಕಹಿಯಾಗಿರುತ್ತದೆ ಮತ್ತು ಇದರ ರುಚಿ ಹಂದಿಯ ಮಾಂಸವನ್ನು ಹೋಲುತ್ತದೆ. ಇದನ್ನು ಓಕಿನೋವಾ ಜನರು ಹೆಚ್ಚು ಸೇವಿಸುತ್ತಾರೆ. ಇದರಿಂದ ಜೀರ್ಣಕ್ರಿಯೆ ಸರಾಗವಾಗುತ್ತದೆ.

ಓಕಿನಾವನ್ ತೊಫು : ಓಕಿನಾವನ್ ತೊಫುದಲ್ಲಿ ಹೆಚ್ಚಿನ ಪ್ರೋಟೀನ್ ಇರುತ್ತದೆ. ಇದು ದೇಹದಲ್ಲಿನ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಿ ತೂಕವನ್ನು ಇಳಿಸಲು ಸಹಾಯ ಮಾಡುತ್ತದೆ.
 

click me!