ರಕ್ತನಾಳಗಳು ಹೃದಯಕ್ಕೆ ಸರಿಯಾಗಿ ರಕ್ತ ಪೂರೈಸದೆ ಹೋದ್ರೆ ಹೃದಯಾಘಾತವಾಗುವ ಸಾಧ್ಯತೆ ಹೆಚ್ಚಿರುತ್ತದೆ. ಇದು ಅತ್ಯಂತ ಅಪಾಯಕಾರಿ. ರಕ್ತನಾಳದಲ್ಲಿರುವ ತಡೆಯನ್ನು ತೆಗೆದುಹಾಕಿದ್ರೆ ರೋಗಿ ಚೇತರಿಸಿಕೊಳ್ಳಬಲ್ಲ. ನಾಗ್ಪುರ ವೈದ್ಯರು ಈ ಖಾಯಿಲೆಗೆ ಈಗ ಲೇಸರ್ ಚಿಕಿತ್ಸೆ ಶುರು ಮಾಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಹೃದಯ ಸಂಬಂಧಿ ಖಾಯಿಲೆ ಹೆಚ್ಚಾಗ್ತಿದೆ. ಈಗಷ್ಟೇ ಆರೋಗ್ಯವಾಗಿದ್ದ ವ್ಯಕ್ತಿ ಇನ್ನೊಂದು ಕ್ಷಣದಲ್ಲಿ ಕುಸಿದು ಬೀಳುವ ಘಟನೆ ಸಾಕಷ್ಟು ವರದಿಯಾಗ್ತಿದೆ. ಹೃದಯದ ಬ್ಲಾಕೇಜ್ ಕೂಡ ಈಗಿನ ದಿನಗಳಲ್ಲಿ ಹೆಚ್ಚಾಗ್ತಿದೆ. ಹೃದಯಕ್ಕೆ ರಕ್ತ ಪೂರೈಸುವ ನಾಳಗಳಲ್ಲಿ ತಡೆಯಾದಾಗ ರಕ್ತ ಪರಿಚಲನೆ ಕಡಿಮೆಯಾಗುತ್ತದೆ. ಇದನ್ನು ಅಪಧಮನಿ ಖಾಯಿಲೆ ಎಂದು ಕರೆಯಲಾಗುತ್ತದೆ. ಅದನ್ನು ತಡೆಯಲು ಸಾಮಾನ್ಯವಾಗಿ ವೈದ್ಯರು ಎರಡು ರೀತಿಯ ವಿಧಾನವನ್ನು ಅನುಸರಿಸ್ತಾ ಇದ್ರು.
ಒಂದು ಬಲೂನ್ (Balloon) ಆಂಜಿಯೋಪ್ಲಾಸ್ಟಿ. ಅಂದ್ರೆ ರಕ್ತ (Blood ) ಪರಿಚಲನೆಗೆ ತೊಂದರೆಯಾಗಿರುವ ರಕ್ತನಾಳಕ್ಕೆ ಬಲೂನ್ ತೂರಿಸಿ ಕೊಬ್ಬ (fat) ನ್ನು ಕರಗಿಸಲಾಗುತ್ತದೆ. ಇದು ತಾತ್ಕಾಲಿಕ ಪರಿಹಾರವಾಗಿದ್ದು ಶಾಶ್ವತ ಪರಿಹಾರಕ್ಕೆ ಆಂಜಿಯೋಪ್ಲಾಸ್ಟಿ (Angioplasty) ಶಸ್ತ್ರಚಿಕಿತ್ಸೆ ನಡೆಸಿ ಸ್ಟಂಟ್ ಅಳವಡಿಸಲಾಗುತ್ತದೆ. ಆದ್ರೆ ಈಗ ನಾಗ್ಪುರ ವೈದ್ಯರು ಲೇಸರ್ ಚಿಕಿತ್ಸೆ ಮೂಲಕ ಅಪಧಮನಿ ಖಾಯಿಲೆಯಿಂದ ಬಳಲುತ್ತಿರುವ ಜನರಿಗೆ ನೆಮ್ಮದಿ ಸುದ್ದಿ ನೀಡಿದ್ದಾರೆ.
ಅಪಧಮನಿ ಖಾಯಿಲೆಗೆ ಲೇಸರ್ ಚಿಕಿತ್ಸೆ : ವೈದ್ಯಕೀಯ ವಿಜ್ಞಾನ (Science) ಇದಕ್ಕೆ ಸಂಬಂಧಿಸಿದಂತೆ ಅನೇಕ ಚಿಕಿತ್ಸೆಗಳನ್ನು ಪ್ರಯೋಗಿಸ್ತಿದೆ. ಹೃದಯಾಘಾತ (Heartattack), ಹೃದಯ ಸಂಬಂಧಿ ಸಮಸ್ಯೆ ಹೆಚ್ಚಾಗ್ತಿರುವ ಮಧ್ಯೆಯೇ ಹೃದ್ರೋಗಶಾಸ್ತ್ರವು ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ಈಗ ನಾಗ್ಪುರ (Nagpur) ದಲ್ಲಿ ಹೃದಯ ನಾಳಗಳಲ್ಲಿ ಅಡತಡೆಯನ್ನುಂಟು ಮಾಡುವ ಕೊಬ್ಬನ್ನು ಕರಗಿಸಲು ಲೇಸರ್ ತಂತ್ರಜ್ಞಾನವನ್ನು ಪರಿಚಯಿಸಿದೆ. ಮೇದಾಂತ ಆಸ್ಪತ್ರೆಯ ಡಾ.ಪ್ರವೀಣ್ ಚಂದ್ರ ಲೇಸರ್ ಚಿಕಿತ್ಸೆ ಕುರಿತು ಮಾಹಿತಿ ನೀಡಿದ್ದಾರೆ. ಅಪಧಮನಿ ಖಾಯಿಲೆಗೆ ಕಾರಣವಾಗಿರುವ ತಡೆಯನ್ನು ತೆಗೆಯಲು ಹೆಚ್ಚಿನ ಶಕ್ತಿಯ ಬೆಳಕನ್ನು ಹೊರಸೂಸುವ ಕ್ಯಾತಿಟರ್ ಅನ್ನು ಬಳಸಲಾಗುತ್ತದೆ. ಇದು ನಾಳದಲ್ಲಿ ರಕ್ತ ಸಂಚಾರಕ್ಕೆ ಅಡ್ಡಿ ಮಾಡುವ ಕೊಬ್ಬನ್ನು ಆವಿಯಾಗಿಸುತ್ತದೆ. ನಾಳಕ್ಕೆ ಹಾನಿಯಾಗದಂತೆ ತಡೆಯನ್ನು ತೆರವುಗೊಳಿಸುತ್ತದೆ.
ಅತ್ತರೂ ಇದೆ ಆರೋಗ್ಯಕ್ಕೆ ಲಾಭ, ನಿಮಗೆ ಗೊತ್ತಿಲ್ಲದ ಅಳುವಿನ ಇಂಟರೆಸ್ಟಿಂಗ್ ಫ್ಯಾಕ್ಟ್ಸ್
ಲೇಸರ್ ಚಿಕಿತ್ಸೆ ಎಷ್ಟು ಪರಿಣಾಮಕಾರಿ ? : ಅನೇಕ ಸಂದರ್ಭಗಳಲ್ಲಿ ಲೇಸರ್ ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಅದು ರಕ್ತದ ಮಾರ್ಗವನ್ನು ಸ್ವಚ್ಛವಾಗಿ ತೆರವುಗೊಳಿಸುತ್ತದೆ. ಈ ಚಿಕಿತ್ಸೆ ನಂತ್ರ ಬಹುತೇಕ ರೋಗಿಗಳಿಗೆ ಸ್ಟೆಂಟ್ ಕೂಡ ಅಗತ್ಯವಿರೋದಿಲ್ಲ ಎಂದು ಡಾ ಚಂದ್ರ ಹೇಳಿದ್ದಾರೆ. ಲೇಸರ್ ಚಿಕಿತ್ಸೆಯು, ಆಕ್ರಮಣಕಾರಿ ಶಸ್ತ್ರಚಿಕಿತ್ಸಾ ವಿಧಾನವಾಗಿದೆ. ನಾಳದಲ್ಲಿ ರಕ್ತ ಸಂಚಾರವನ್ನು ತಡೆಯುತ್ತಿರುವ ಕೊಬ್ಬನ್ನು ಆವಿಯಾಗಿಸಲು ಲೇಸರ್ ಶಕ್ತಿಯನ್ನು ಬಳಸಲಾಗುತ್ತದೆ. ಲೇಸರ್ ತಂತ್ರಜ್ಞಾನವನ್ನು ಈಗಾಗಲೇ ಅನೇಕರಿಗೆ ಪ್ರಯೋಗಿಸಲಾಗಿದೆ. ನಾಗ್ಪುರ ಆಸ್ಪತ್ರೆಯಲ್ಲಿ ಈಗಾಗಲೇ 55 ರೋಗಿಗಳಿಗೆ ಈ ಚಿಕಿತ್ಸೆ ಯಶಸ್ವಿಯಾಗಿದೆ ಎನ್ನುತ್ತಾರೆ ವೈದ್ಯರು.
ಸ್ಟಂಟ್ ಗಿಂತ ಲೇಸರ್ ಬೆಸ್ಟ್ : ವೈದ್ಯರ ಪ್ರಕಾರ ಸ್ಟಂಟ್ ಗಿಂತ ಲೇಸರ್ ಚಿಕಿತ್ಸೆ ಅತ್ಯುತ್ತಮವಂತೆ. ರಕ್ತ ಸಂಚಾರದ ನಾಳ ಬ್ಲಾಕ್ ಆಗಿದ್ದಾಗ ಲೇಸರ್ ಅನ್ನು ಬಳಸಿದರೆ ಬಲೂನ್ ಮತ್ತು ಸ್ಟೆಂಟ್ ಹಾಕುವ ಅಗತ್ಯವಿರೋದಿಲ್ಲ. ಇದು ವೈದ್ಯರ ಕೆಲಸವನ್ನು ಸುಲಭಗೊಳಿಸುತ್ತದೆ. ಕೆಲವೊಮ್ಮೆ, ಆಂಜಿಯೋಪ್ಲಾಸ್ಟಿ ನಂತರ ನಾಳದ ವ್ಯಾಸವು ಕಡಿಮೆಯಾಗುತ್ತದೆ. ಕೆಲವೊಮ್ಮೆ ಸ್ಟೆಂಟ್ ಥ್ರಂಬೋಸಿಸ್ ಸಂಭವಿಸುತ್ತದೆ. ಇದು ಮಾರಣಾಂತಿಕವಾಗಬಹುದು ಎನ್ನುತ್ತಾರೆ ವೈದ್ಯರು. ಆದ್ರೆ ಲೇಸರ್ ನಲ್ಲಿ ಇದ್ಯಾವುದೇ ಭಯವಿಲ್ಲ.
ಕೆಲವು ಕಾಸ್ಮೆಟಿಕ್ಸ್ ಬಳಸಿದರೆ ಕ್ಯಾನಸರ್ ಸಾಧ್ಯತೆ ಇರೋದು ಹೌದಾ?
ಇದು ರೋಗಿಗಳಿಗೆ ಕೂಡ ಅನುಕೂಲಕರವಾಗಿದೆ. ಲೇಸರ್ ಚಿಕಿತ್ಸೆ ರೋಗಿಗಳಿಗೆ ಅಸ್ವಸ್ಥತೆಯನ್ನು ಕಡಿಮೆ ಮಾಡುತ್ತದೆ. ಆಸ್ಪತ್ರೆಯಲ್ಲಿ ತುಂಬಾ ದಿನ ಇರಬೇಕಾಗಿಲ್ಲ. ಲೇಸರ್ ಚಿಕಿತ್ಸೆಯಲ್ಲಿ ರೋಗಿ ಬೇಗ ಚೇತರಿಸಿಕೊಳ್ತಾನೆ. ಹೆಚ್ಚಿನ ರೋಗಿಗಳು ಕಡಿಮೆ ಅವಧಿಯಲ್ಲಿ ಸಕ್ರಿಯ ಜೀವನಕ್ಕೆ ಮರಳುತ್ತಾರೆ ಎನ್ನತ್ತಾರೆ ವೈದ್ಯರು. ವಿಶ್ವದಾದ್ಯಂತ 200 ಕ್ಕೂ ಹೆಚ್ಚು ವೈದ್ಯರು ಲೇಸರ್ ತಂತ್ರಜ್ಞಾನದ ಬಗ್ಗೆ ಮಾಹಿತಿ ಪಡೆದಿದ್ದಾರೆ. ಲೇಸರ್ ಚಿಕಿತ್ಸೆಯು ಸುಲಭ, ಪರಿಣಾಮಕಾರಿ ಎಂದು ಮೆದುಳಿನ ಡಾ.ಜಸ್ಪಾಲ್ ಅರ್ನೇಜಾ ಹೇಳಿದ್ದಾರೆ.