Health Tips : ಬೇರೆಯವರ ಮಾತು ಕೇಳಿ ಮನಸ್ಸು ನೋಯಿಸ್ಕೊಳ್ಳೋರು ನೀವಾ?

By Suvarna News  |  First Published Jan 17, 2023, 3:30 PM IST

ಸಮಾಜದಲ್ಲಿರುವ ಕಾರಣ ಸಮಾಜಕ್ಕೆ ಆದ್ಯತೆ ನೀಡ್ಬೇಕು ನಿಜ. ಹಾಗಂತ ಪ್ರತಿಯೊಂದು ಕೆಲಸಕ್ಕೂ ಜನ ಏನು ಹೇಳ್ತಾರೆ ಅಂತಾ ಆಲೋಚನೆ ಮಾಡ್ತಿದ್ದರೆ ಯಶಸ್ಸು ಸಿಗೋದಿಲ್ಲ. ಬೇರೆಯವರ ಪ್ರತಿ ಮಾತಿಗೂ ಮನಸ್ಸು ನೋಯಲು ಅನೇಕ ಕಾರಣವಿದೆ. 
 


ಆತ್ಮಗೌರವ ಬಹಳ ಮುಖ್ಯ. ನಾವು ನಮ್ಮನ್ನು ಗೌರವಿಸಿದಾಗ ಮಾತ್ರ ನಮಗೆ ಇತರರಿಂದಲೂ ಗೌರವ ಸಿಗಲು ಸಾಧ್ಯ ಎನ್ನುವ ಸತ್ಯ ನಮಗೆ ಗೊತ್ತಿರಬೇಕು. ಕೆಲವೊಮ್ಮೆ ಎದುರಿಗಿರುವ ವ್ಯಕ್ತಿ ಉದ್ದೇಶಪೂರ್ವಕವಾಗಿ ನಮ್ಮ ಗೌರವಕ್ಕೆ ಧಕ್ಕೆ ತರುತ್ತಿದ್ದಾರೆ ಎಂದು ನಮಗೆ ಅನಿಸುತ್ತದೆ. ಆದ್ರೆ ಎದುರಿರುವ ವ್ಯಕ್ತಿಯ ಉದ್ದೇಶ ಅದಿಲ್ಲದೆ ಇರಬಹುದು. ನಿಮ್ಮ ಅನುಕೂಲಕ್ಕಾಗಿ ಅವರು ನೀಡಿದ ಸಲಹೆಯನ್ನು ಕೂಡ ನೀವು ನಕಾರಾತ್ಮಕವಾಗಿ ತೆಗೆದುಕೊಳ್ಳುತ್ತೀರಿ. ಅನೇಕರು ಇತರರ ಮಾತುಗಳನ್ನು ವೈಯಕ್ತಿಕವಾಗಿ ತೆಗೆದುಕೊಳ್ಳುವ ಅಭ್ಯಾಸ ಬೆಳೆಸಿಕೊಂಡಿರುತ್ತಾರೆ. ಬೇರೆಯವರು ಯಾವುದೇ ಮಾತನಾಡಿದ್ರೂ ಅದನ್ನು ವೈಯಕ್ತಿಕವಾಗಿ ತೆಗೆದುಕೊಂಡು ನೋವು ತಿನ್ನುತ್ತಾರೆ. ಮೊದಲನೇಯದಾಗಿ ನಾವು ಇತರರ ಮಾತಿಗೆ ಹೆಚ್ಚು ತಲೆಕಡಿಸಿಕೊಳ್ಳಬಾರದು. ಅವರ ಮಾತನ್ನು ಹೇಗೆ ನಿರ್ಲಕ್ಷ್ಯ ಮಾಡ್ಬೇಕು ಎಂಬುದನ್ನು ಕಲಿತ್ರೆ ನಾವು ಗೆದ್ದಂತೆ. ನಾವಿಂದು ಬೇರೆಯವರ ಮಾತಿನಲ್ಲಿ ನಕಾರಾತ್ಮಕತೆ ಹುಡುಕೋದನ್ನು ಹೇಗೆ ಬಿಡ್ಬೇಕು ಎಂಬುದನ್ನು ನಿಮಗೆ ಹೇಳ್ತೇವೆ.

ನಾವ್ಯಾಕೆ ಬೇರೆಯವರ ಮಾತ (Speech) ನ್ನು ಗಂಭೀರವಾಗಿ ಪರಿಗಣಿಸ್ತೇವೆ? : 

Tap to resize

Latest Videos

ಸ್ವಾಭಿಮಾನ (Self Esteem) ದ ಬಗ್ಗೆ ಆಲೋಚನೆ  : ಬೇರೆಯವರು ನನ್ನ ಬಗ್ಗೆ ಏನು ಅಂದುಕೊಳ್ತಾರೆ, ನನ್ನ ಬಗ್ಗೆ ಅವರು ಏನು ಹೇಳ್ತಾರೆ ಎನ್ನುವ ಬಗ್ಗೆಯೇ ಸದಾ ಆಲೋಚನೆ ಮಾಡುವವರಿದ್ದಾರೆ. ಇದು ಅವರ ಸಮಯ ಹಾಳು ಮಾಡುತ್ತದೆ. ಈ ವೇಳೆ ಯಾರಾದ್ರೂ ತಮಾಷೆ ಮಾಡಿದ್ರೆ ಅದನ್ನು ಸ್ವಾಭಿಮಾನಕ್ಕೆ ಅಡ್ಡಿ ಎನ್ನುವಂತೆ ಇವರು ಭಾವಿಸ್ತಾರೆ.

ಗರ್ಭಾವಸ್ಥೆಯಲ್ಲಿ ಅತಿಯಾಗಿ ವಾಂತಿಯಾಗುವುದು ಸಾಮಾನ್ಯವೇ, ತಜ್ಞರು ಏನಂತಾರೆ ?

ಬಾಲ್ಯದ ಸಮಸ್ಯೆ : ಬಾಲ್ಯದಲ್ಲಿ ಪಾಲಕರು ಬೇರೆಯವರ ಜೊತೆ ನಿಮ್ಮನ್ನು ಹೋಲಿಕೆ ಮಾಡ್ತಿದ್ದರೆ ಅದು ದೊಡ್ಡವರಾದ್ಮೇಲೆ ದೊಡ್ಡ ಮಟ್ಟದಲ್ಲಿ ಪರಿಣಾಮ ಬೀರುತ್ತದೆ. ಇಂಥ ಮಕ್ಕಳು ಪ್ರತಿ ವಿಷ್ಯವನ್ನೂ ಮನಸ್ಸಿಗೆ ತೆಗೆದುಕೊಳ್ತಾರೆ. 

ಸಾಮಾಜಿಕ ಸ್ಥಾನಮಾನ : ಕೆಲವರು ಸಮಾಜದಲ್ಲಿ ತಮಗೆ ಸಿಗುವ ಸ್ಥಾನ ಮಾನದ ಬಗ್ಗೆ ಹೆಚ್ಚು ಚಿಂತಿಸುತ್ತಾರೆ. ಸಣ್ಣ ವಿಚಾರದಲ್ಲೂ ಸಮಾಜದಲ್ಲಿ ತಮ್ಮ ಖ್ಯಾತಿ ಕಡಿಮೆಯಾಗಲಿದೆ ಎಂದು ಭಾವಿಸುತ್ತಾರೆ. ಬೇರೆಯವರು ತಮ್ಮ ಬಗ್ಗೆ ಏನು ಹೇಳ್ತಾರೆ ಎನ್ನುವುದನ್ನು ಗಂಭೀರವಾಗಿ ತೆಗೆದುಕೊಳ್ತಾರೆ.

ಅತ್ಯುತ್ತಮತೆಯ ಹುಚ್ಚು : ಎಲ್ಲದರಲ್ಲೂ ಅತ್ಯುತ್ತಮವಾಗಿರಬೇಕೆಂಬ ಬಯಕೆ ಅನೇಕರಿಗಿರುತ್ತದೆ. ತನ್ನನ್ನು ಎಲ್ಲರೂ ಹೊಗಳಬೇಕೆಂದು ಬಯಸುತ್ತಾನೆ. ಯಾರಾದ್ರೂ ಅವರನ್ನು ಟೀಕಿಸಿದ್ರೆ ಅಥವಾ ಅವರ ಬಗ್ಗೆ ಸ್ವಲ್ಪ ಭಿನ್ನವಾಗಿ ಮಾತನಾಡಿದ್ರೂ ಅದನ್ನು ಮನಸ್ಸಿಗೆ ಹಚ್ಚಿಕೊಳ್ತಾರೆ.

ಇದ್ರಿಂದ ಹೊರ ಬರಲು ಏನು ಮಾಡ್ಬೇಕು ಗೊತ್ತಾ? :
ಸ್ಪಷ್ಟ ಮಾತುಕತೆ :
ಅನೇಕ ಬಾರಿ ಮಾತುಗಳನ್ನು ತಪ್ಪಾಗಿ ತಿಳಿದು ನೋವು ತಿನ್ನುತ್ತೇವೆ. ಹಾಗಾಗಿ ನಿಮ್ಮಲ್ಲಿ ಏನು ಗೊಂದಲವಿದೆ ಎಂಬುದನ್ನು ಆ ಕ್ಷಣಕ್ಕೆ ಬಗೆಹರಿಸಿಕೊಳ್ಳಿ. ಅವರ ಜೊತೆ ಸ್ಪಷ್ಟವಾಗಿ ಮಾತನಾಡಿ. ಅವರು ನಿಮ್ಮ ಬಗ್ಗೆ ಏನಾದ್ರೂ ಹೇಳಿದ್ರೆ ಯಾಕೆ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂಬುದನ್ನು ಕೇಳಿ ತಿಳಿಯಿರಿ. ಆಗ ನಿಮಗೊಂದು ಕ್ಲಾರಿಟಿ ಸಿಗುತ್ತದೆ.

ಇತರರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ : ನಾವು ನಮಗಾಗಿ ಬದುಕುತ್ತಿದ್ದೇವೆ. ಇತರರಿಗಲ್ಲ ಎಂಬುದು ನೆನಪಿರಲಿ. ಹಾಗಾಗಿ ಅವರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೆ ನಿಮ್ಮ ಕೆಲಸವನ್ನು ನೀವು ಮಾಡಿ.

ಮಾಲ್​ಗಳಲ್ಲಿ ಟಾಯ್ಲೆಟ್ ಡೋರ್ ಮೇಲೆ-ಕೆಳಗೆ ಓಪನ್ ಇರೋದ್ಯಾಕೆ?

ನಿಮ್ಮನ್ನು ನೀವು ಗೌರವಿಸಿ : ನೀವು ಮಾಡುವ ಸಣ್ಣ ಕೆಲಸಕ್ಕೂ ನೀವು ಖುಷಿ ಪಡುವುದನ್ನು ಕಲಿಯಬೇಕು. ಸದಾ ನಿಮ್ಮ ಬೆನ್ನನ್ನು ನೀವು ತಟ್ಟಿಕೊಂಡು ಮುಂದೆ ಹೆಜ್ಜೆಯಿಡಿ. ಹಾಗೆಯೇ ಮನಸ್ಸನ್ನು ಶಾಂತವಾಗಿಟ್ಟುಕೊಳ್ಳಲು ಪ್ರಯತ್ನಿಸಿ. ಒತ್ತಡದಿಂದ ಹೊರಬಂದರೆ, ಭಾವನೆ ನಿಯಂತ್ರಣ ಕಲಿತ್ರೆ ಬೇರೆಯವರ ಮಾತು ನಿಮಗೆ ವಿಶೇಷ ಎನ್ನಿಸುವುದಿಲ್ಲ. 
 

click me!