
ಮಾವು (Mango) ಕಂಡ್ರೆ ಎಲ್ಲರ ಬಾಯಲ್ಲಿ ನೀರೂರತ್ತೆ. ಬೇಸಿಗೆ (Summer) ಯಲ್ಲಿ ಎಲ್ಲರೂ ಮಾವು ತಿನ್ನಲು ಇಷ್ಟಪಡ್ತಾರೆ. ಜನರು ಮಾವಿನ ಹಣ್ಣನ್ನು ಜ್ಯೂಸ್ (Juice) , ಮಿಲ್ಕ್ ಶೇಕ್ ಸೇರಿದಂತೆ ವಿವಿಧ ರೀತಿಯಲ್ಲಿ ಸೇವನೆ ಮಾಡ್ತಾರೆ. ಸಾಮಾನ್ಯವಾಗಿ ಮಾರುಕಟ್ಟೆ (Market) ಯಲ್ಲಿ ಸಿಗುವ ಹಣ್ಣ (Fruit) ನ್ನು ತಂದು ಸುಮ್ಮನೆ ತೊಳೆದಂತೆ ಮಾಡಿ ಅದನ್ನು ನಾವು ಸೇವನೆ ಮಾಡ್ತೇವೆ. ಕೆಲವರು ಹಾಗೆ ಕೈನಲ್ಲಿ ಉಜ್ಜಿ, ಮಾವಿನ ಹಣ್ಣನ್ನು ಬಾಯಿಗೆ ಹಾಕ್ತಾರೆ. ಆದ್ರೆ ಇದು ಆರೋಗ್ಯ (Health) ದ ಮೇಲೆ ಪರಿಣಾಮ ಬೀರುತ್ತದೆ ಎಂಬುದು ಅನೇಕರಿಗೆ ತಿಳಿದಿಲ್ಲ. ಮಾವಿನ ಹಣ್ಣು ಮಾತ್ರವಲ್ಲ ಯಾವುದೇ ಹಣ್ಣನ್ನು ಮಾರುಕಟ್ಟೆಯಿಂದ ಬಂದ ತಕ್ಷಣ ತಿನ್ನಬಾರದು. ಅದನ್ನು ಸ್ವಚ್ಛವಾಗಿ ತೊಳೆಯಬೇಕು. ಹಾಗೆ ಮಾವಿನ ಹಣ್ಣನ್ನು ಕೂಡ ತಂದ ತಕ್ಷಣ ಸೇವನೆ ಮಾಡ್ಬಾರದು. ಅದನ್ನು ಸೇವನೆ ಮಾಡುವ ಮೊದಲು ನೀರಿನಲ್ಲಿ ನೆನೆಸಿಡಬೇಕು. ಇದು ಪುರಾತನ ವಿಧಾನ. ಅಜ್ಜಿ ಕಾಲದಿಂದಲೂ ಇದನ್ನು ಅನುಸರಿಸಲಾಗುತ್ತಿದೆ.
ಮಾವಿನ ಹಣ್ಣನ್ನು ತಿನ್ನುವ ಮೊದಲು ನೀರಿನಲ್ಲಿ ನೆನೆಸುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇದರಿಂದ ಒಂದಲ್ಲ,ಅನೇಕ ಆರೋಗ್ಯ ಸಮಸ್ಯೆಗಳಿಂದ ದೇಹವನ್ನು ರಕ್ಷಿಸಿಕೊಳ್ಳಬಹುದು. ಮಾವಿನ ಹಣ್ಣಿಗೆ ಕೊಳಕು ಬಡಿದಿರುತ್ತದೆ ಎನ್ನುವ ಕಾರಣಕ್ಕೆ ಅಥವಾ ರಾಸಾಯನಿಕ ಹಾಕಿರ್ತಾರೆ ಎನ್ನುವ ಕಾರಣಕ್ಕೆ ಅದನ್ನು ನೆನಸಿಡಬೇಕೆಂದು ನಾವಂದುಕೊಳ್ತೇವೆ. ಇದು ನಿಜ. ಆದರೆ ಇದರ ಹೊರತಾಗಿ ಕೆಲವೊಂದು ಅನುಕೂಲವಿದೆ.
ಫೈಟಿಕ್ ಆಮ್ಲ ಕಡಿಮೆ ಮಾಡುತ್ತೆ : ಫೈಟಿಕ್ ಆಮ್ಲವು ಒಂದು ರೀತಿಯ ಪೌಷ್ಟಿಕಾಂಶವಾಗಿದೆ. ಇದು ದೇಹಕ್ಕೆ ಒಳ್ಳೆಯದು ನಿಜ. ಅತಿಯಾದ್ರೆ ಸಮಸ್ಯೆಯಾಗುತ್ತದೆ. ಇದನ್ನು ಉತ್ಕರ್ಷಣ ನಿರೋಧಕ ಎಂದು ಪರಿಗಣಿಸಲಾಗುತ್ತದೆ. ದೇಹವು ಕಬ್ಬಿಣ, ಸತು, ಕ್ಯಾಲ್ಸಿಯಂ ಮತ್ತು ಇತರ ಖನಿಜಗಳನ್ನು ಹೀರಿಕೊಳ್ಳುವುದನ್ನು ಇದು ತಡೆಯುತ್ತದೆ. ಈ ಕಾರಣದಿಂದಾಗಿ ದೇಹದಲ್ಲಿ ಖನಿಜಗಳ ಕೊರತೆ ಎದುರಾಗುತ್ತದೆ. ಮಾವು ಮಾತ್ರವಲ್ಲದೆ ಇತರ ಹಣ್ಣುಗಳು, ತರಕಾರಿಗಳಲ್ಲಿ ಫೈಟಿಕ್ ಆಮ್ಲವಿರುತ್ತದೆ. ಫೈಟಿಕ್ ಆಮ್ಲವು ದೇಹದಲ್ಲಿ ಶಾಖವನ್ನು ಉಂಟುಮಾಡುತ್ತದೆ. ನೀರಿನಲ್ಲಿ ಮಾವಿನ ಹಣ್ಣನ್ನು ಸ್ವಲ್ಪ ಸಮಯ ನೆನೆಸಿಟ್ಟರೆ ಫೈಟಿಕ್ ಆಮ್ಲ ಬಿಡುಗಡೆಯಾಗುತ್ತದೆ.
Summer Tips : ರೋಗದಿಂದ ದೂರವಿರ್ಬೇಕೆಂದ್ರೆ ಪ್ರತಿ ದಿನ ಮಾವು ತಿನ್ನಿ
ಎಲ್ಲಾ ರಾಸಾಯನಿಕಗಳು ಹೊರಬರುತ್ತವೆ : ಮಾವಿನ ಕಾಯಿ ಬೇಗ ಹಣ್ಣಾಗಲಿ ಎನ್ನುವ ಕಾರಣಕ್ಕೆ ಹಾಗೂ ಕೀಟಗಳ ನಾಶ ತಪ್ಪಿಸಲು ಹಾನಿಕಾರಕ ಕೀಟನಾಶಕಗಳನ್ನು ಬಳಸುತ್ತೇವೆ. ಇದು ದೇಹ ಸೇರಿದಾಗ ವಿಷವಾಗುತ್ತದೆ. ಅಲರ್ಜಿ, ಚರ್ಮದ ಕಿರಿಕಿರಿ ಅಥವಾ ಇತರ ಗಂಭೀರ ಸಮಸ್ಯೆ ಉಂಟಾಗುತ್ತದೆ. ಹಲವು ಬಾರಿ ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಸಿ ತಿನ್ನದೆ ಹೋದ್ರೆ ತಲೆನೋವು, ವಾಕರಿಕೆಯಂತ ಸಮಸ್ಯೆ ಕಾಡುತ್ತದೆ. ಆದ್ದರಿಂದ ಇದನ್ನು ನೀರಿನಲ್ಲಿ ಅದ್ದಿ ಸ್ವಲ್ಪ ಸಮಯ ಬಿಟ್ಟು ನಂತರ ತಿನ್ನುವುದು ಒಳ್ಳೆಯದು.
ಚರ್ಮದ ಸಮಸ್ಯೆ ದೂರವಾಗುತ್ತದೆ : ಮಾವಿನ ಹಣ್ಣು ಸೇವನೆ ಮಾಡಿದ್ರೆ ಮೊಡವೆಯಾಗುತ್ತೆ, ಚರ್ಮದ ಸಮಸ್ಯೆಯಾಗುತ್ತೆ ಎನ್ನವು ಕಾರಣಕ್ಕೆ ಅನೇಕರು ಮಾವಿನ ಹಣ್ಣನ್ನು ತಿನ್ನುವುದಿಲ್ಲ. ಮಲಬದ್ಧತೆ, ಹೊಟ್ಟೆಗೆ ಸಂಬಂಧಿಸಿದ ಇತರ ದೈಹಿಕ ಸಮಸ್ಯೆ ಕೂಡ ಕೆಲವರಿಗೆ ಕಾಡುತ್ತದೆ. ಈ ಎಲ್ಲ ಸಮಸ್ಯೆಗೆ ಮುಕ್ತಿ ಸಿಗಬೇಕೆಂದ್ರೆ ಮಾವಿನ ಹಣ್ಣನ್ನು ತಿನ್ನುವ ಮೊದಲು ಕನಿಷ್ಠ 30 ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿಡಬೇಕು.
Health Tips : ರುಚಿಯಾಗಿರುತ್ತೆ ಅಂತಾ ಅಪ್ಪಿತಪ್ಪಿಯೂ ಇವರು ಜೇನುತುಪ್ಪ ಸೇವಿಸ್ಬಾರದು
ಬೇಸಿಗೆಯಲ್ಲಿ ದೇಹದ ಉಷ್ಣತೆ ಹೆಚ್ಚಾಗುವುದಿಲ್ಲ : ಮಾವಿನಹಣ್ಣನ್ನು ತಿನ್ನುವುದರಿಂದ ದೇಹದ ಉಷ್ಣತೆ ಹೆಚ್ಚಾಗುತ್ತದೆ. ಇದೇ ಕಾರಣಕ್ಕೆ ಇಷ್ಟವಿದ್ದರೂ ಕೆಲವರು ಮಾವಿನ ಹಣ್ಣು ತಿನ್ನುವುದಿಲ್ಲ. ಆದ್ರೆ ಇಷ್ಟವಾದಷ್ಟು ಮಾವಿನ ಹಣ್ಣು ತಿನ್ನಬೇಕೆಂದ್ರೆ ಮಾವಿನ ಹಣ್ಣನ್ನು ಸ್ವಲ್ಪ ಸಮಯದವರೆಗೆ ನೀರಿನಲ್ಲಿ ನೆನೆಸಿಡಬೇಕು. ಇದು ಮಾವಿನ ಉಷ್ಣತೆಯನ್ನು ಕಡಿಮೆ ಮಾಡುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.