Vitamin B12 Deficiency: ತಲೆ, ಹೊಟ್ಟೆ ಸಮಸ್ಯೆಗೂ ಆಗುತ್ತೆ ಕಾರಣ

Published : Jun 06, 2022, 04:36 PM ISTUpdated : Jun 06, 2022, 04:53 PM IST
Vitamin B12 Deficiency: ತಲೆ, ಹೊಟ್ಟೆ ಸಮಸ್ಯೆಗೂ ಆಗುತ್ತೆ ಕಾರಣ

ಸಾರಾಂಶ

ವಿಟಮಿನ್‌ ಬಿ12 ನಮ್ಮ ದೇಹಕ್ಕೆ ಅತ್ಯಗತ್ಯವಾದ ವಿಟಮಿನ್. ಇದರ ಕೊರತೆಯಿಂದ ದೇಹ ಹಲವಾರು ರೀತಿಯಲ್ಲಿ ನೋವು, ಸಂಕಟವನ್ನು ಎದುರಿಸುತ್ತದೆ. ಇದರ ಕೊರತೆ ಉಂಟಾದರೆ ಕೆಲವು ಲಕ್ಷಣಗಳ ಮೂಲಕ ಪತ್ತೆ ಮಾಡಬಹುದು.  

ವಿಟಮಿನ್‌ ಬಿ (Vitamin B) ನಮ್ಮ ದೇಹಾರೋಗ್ಯದಲ್ಲಿ ಅಮೂಲ್ಯ ಪಾತ್ರ ವಹಿಸುತ್ತದೆ. ಬಿ ವಿಟಮಿನ್‌ 8 ಮಾದರಿಯಲ್ಲೇ ಬಿ1, ಬಿ2, ಬಿ3, ಬಿ5, ಬಿ7, ಬಿ9, ಬಿ12 ವಿಟಮನ್‌ ಗಳು ಇರುತ್ತವೆ. ಇವೆಲ್ಲವನ್ನೂ ಸೇರಿ ಬಿ ಕಾಂಪ್ಲೆಕ್ಸ್‌ ವಿಟಮಿನ್‌ (B Complex) ಎಂದು ಹೇಳಲಾಗುತ್ತದೆ. ಕೊಬ್ಬು (Fat) ಹಾಗೂ ಪ್ರೊಟೀನ್‌ (Protein)ಗಳನ್ನು ದೇಹಕ್ಕೆ ಒದಗಿಸುವಲ್ಲಿ ವಿಟಮಿನ್‌ ಬಿ ಸಹಾಯ ಮಾಡುತ್ತದೆ. ತ್ವಚೆ (Skin), ಕೂದಲು, ಕಣ್ಣುಗಳು (Eyes) ಹಾಗೂ ಲಿವರ್‌ (Liver) ಅಥವಾ ಯಕೃತ್ತಿನ ಆರೋಗ್ಯ ಕಾಪಾಡುವಲ್ಲಿ ಇದರ ಪಾತ್ರವೇ ಅಧಿಕ. ಇವೆಲ್ಲವುಗಳಲ್ಲಿ ವಿಟಮಿನ್‌ ಬಿ12 ಇನ್ನಷ್ಟು ಮಹತ್ವಪೂರ್ಣ ಸ್ಥಾನ ಹೊಂದಿದೆ. 
ನಿಮಗೆ ತಿಳಿದಿರಲಿ. ಈ ಎಲ್ಲ ಬಿ ವಿಟಮಿನ್‌ ಗಳು ನೀರಿನಲ್ಲಿ ಕರಗುತ್ತವೆ. ಅರ್ಥಾತ್‌, ದೇಹ ಇವುಗಳನ್ನು ಸಂಗ್ರಹ ಮಾಡಿಟ್ಟುಕೊಳ್ಳುವುದಿಲ್ಲ. ಇಂದಿನ ದಿನಗಳಲ್ಲಿ ಹಿರಿಯರಲ್ಲದೆ, ಯುವ ಮಂದಿಯಲ್ಲೂ ವಿಟಮಿನ್‌ ಬಿ12 ಕೊರತೆ ಇರುವುದು ಕಂಡುಬರುತ್ತದೆ. ಇದಕ್ಕೆ ಅವರ ಆಹಾರಶೈಲಿ (Food Style) ಕಾರಣವಾಗಿರುತ್ತದೆ. ವಿಟಮಿನ್‌ ಬಿ12 ಕೊರತೆಯಾದಾಗ ದೇಹದಲ್ಲಿ ಹಲವಾರು ಸಮಸ್ಯೆ ಕಂಡುಬರುತ್ತದೆ. ಅವುಗಳ ಕುರಿತು ಎಚ್ಚರಿಕೆ ವಹಿಸಬೇಕು. 

ವಿಟಮಿನ್‌ ಬಿ12
ಇದನ್ನು ಕೊಬಾಲಮಿನ್‌ ಎಂದೂ ಕರೆಯಲಾಗುತ್ತದೆ. ಇದು ನಾವು ಸೇವನೆ ಮಾಡಿದ ಆಹಾರದ ಕಾರ್ಬೋಹೈಡ್ರೇಟ್‌ (Corbohydrates) ಅನ್ನು ಗ್ಲುಕೋಸನ್ನಾಗಿ ಪರಿವರ್ತಿಸುತ್ತದೆ. ಇದರಿಂದ ದೇಹಕ್ಕೆ ಶಕ್ತಿ (Energy) ದೊರೆಯುತ್ತದೆ. ನರಗಳ ಕೋಶಗಳ ಆರೋಗ್ಯವನ್ನು ಸುಸ್ಥಿತಿಯಲ್ಲಿಡಲು, ಡಿಎನ್‌ ಎ-ಆರ್‌ ಎನ್‌ ಎಗಳ ಉತ್ಪಾದನೆಯನ್ನು ಹೆಚ್ಚಿಸಲು ಇದು ಸಹಾಯ ಮಾಡುತ್ತದೆ. ವಿಟಮಿನ್‌ ಬಿ12 ಅಂಶವು ವಿಟಮಿನ್‌ ಬಿ9 ಜತೆಗೆ ಸೇರಿ ಕೆಲಸ ಮಾಡುತ್ತದೆ, ಬಿ9 ಅಂಶವೇ ಫಾಲಿಕ್‌ ಆಸಿಡ್ (Folic Acid). ಕೆಂಪು ರಕ್ತಕಣಗಳ (Red Blood Cell) ಉತ್ಪಾದನೆಯಲ್ಲೂ ಇವುಗಳ ಪಾತ್ರ ಪ್ರಮುಖ. ವಿಟಮಿನ್‌ ಬಿ12 ಅಂಶವು ಇನ್ನಿತರ ವಿಟಮಿನ್‌ ಬಿ ಅಂಶಗಳೊಂದಿಗೆ ಸೇರಿ ವಿವಿಧ ರೀತಿಯಲ್ಲಿ ದೇಹಕ್ಕೆ ಪೂರಕವಾಗಿ ವರ್ತಿಸುತ್ತದೆ. ಹೃದಯದ ಆರೋಗ್ಯಕ್ಕೂ ನೆರವಾಗುತ್ತದೆ. ಹೀಗಾಗಿ, ಇದರ ಕೊರತೆ ಬಗ್ಗೆ ಎಚ್ಚರಿಕೆ ವಹಿಸಬೇಕು. ಇದರ ಕೊರತೆಯಾದಾಗ ಏನಾಗುತ್ತದೆ ಎನ್ನುವ ಬಗ್ಗೆ ಗಮನ ನೀಡಿದರೆ ಸಾಕು. 

•    ಅತೀವ ಸುಸ್ತು (Fatigue)
ವಿಟಮಿನ್‌ ಬಿ12 ಕೊರತೆಯಾದರೆ ತೀವ್ರವಾಗಿ ಸುಸ್ತಾಗುತ್ತದೆ. ಕೆಂಪು ರಕ್ತಕಣಗಳ ಉತ್ಪಾದನೆ ಕುಂಠಿತವಾಗುತ್ತದೆ. ಆಗ ದೇಹದ ಅಂಗಗಳಿಗೆ ಕಡಿಮೆ ಆಮ್ಲಜನಕ ಪೂರೈಕೆಯಾಗಿ ಸುಸ್ತಾಗುತ್ತದೆ. ಬಿ12 ಹಾಗೂ ಬಿ9 ಕೊರತೆಯನ್ನು ಮೆಗಾಲೊಬ್ಲಾಸ್ಟಿಕ್‌ ಅನೀಮಿಯಾ ಎಂದೂ ಕರೆಯಲಾಗುತ್ತದೆ. 

ಬಿ12 ಕೊರತೆಯಿಂದ ಮಾಡಬಹುದು ಬುದ್ಧಮಾಂದ್ಯತೆ

•    ಮಾಂಸಖಂಡಗಳ ಸೆಳೆತ (Muscle Cramps) ಹಾಗೂ ದೌರ್ಬಲ್ಯ
ಸಂವೇದಿ ನರಗಳ ಕಾರ್ಯಶೈಲಿ ಮೇಲೆ ಋಣಾತ್ಮಕವಾಗಿ ಪ್ರಭಾವ ಉಂಟಾಗಿ ಮಾಂಸಖಂಡಗಳಲ್ಲಿ ಸೆಳೆತ ಉಂಟಾಗುತ್ತದೆ ಹಾಗೂ ದೌರ್ಬಲ್ಯವೂ ಕಂಡುಬರುತ್ತದೆ.
•    ಚರ್ಮ ಹಳದಿಯಾಗುವುದು (Yellow Skin)
ಕೆಂಪು ರಕ್ತಕಣಗಳ ಕೊರತೆ ಉಂಟಾಗುವುದರಿಂದ ಕಬ್ಬಿಣಾಂಶದ ಕೊರತೆಯೂ ಉಂಟಾಗುತ್ತದೆ. ಹೀಗಾಗಿ, ಬಿಲಿರೂಬಿನ್‌ ಎನ್ನುವ ಅಂಶದಿಂದ ತ್ವಚೆಯ ಬಣ್ಣ ಹಳದಿಯಾಗುತ್ತದೆ. ಕಣ್ಣುಗಳ ಬಣ್ಣವೂ ಹಳದಿಗೆ ತಿರುಗುತ್ತದೆ. ಇದು ಕೆಂಪುರಕ್ತಕಣಗಳ ಕೊರತೆಯಾದಾಗ ಉತ್ಪಾದನೆಯಾಗುತ್ತದೆ.
•    ತಲೆನೋವು, ಹೊಟ್ಟೆ ಸಮಸ್ಯೆ (Headache and Stomach Problem)
ವಿಟಮಿನ್‌ ಬಿ12 ಕೊರತೆಯಾದಾಗ ತಲೆನೋವು ಬರುವುದು ಅತಿ ಸಾಮಾನ್ಯ. ಇದರೊಂದಿಗೆ, ನ್ಯೂರೋಲಾಜಿಕಲ್‌ ಸೈಡ್‌ ಇಫೆಕ್ಟ್‌ ಕೂಡ ಆಗುತ್ತದೆ. ಅಧ್ಯಯನಗಳ ಪ್ರಕಾರ, ಯಾರಿಗೆ ತಲೆನೋವು, ಮೈಗ್ರೇನ್‌ ಸಮಸ್ಯೆ ಇರುತ್ತದೆಯೋ ಅವರಲ್ಲಿ ವಿಟಮಿನ್‌ ಬಿ12 ಕೊರತೆ ಇದ್ದೇ ಇರುತ್ತದೆ. ಜತೆಗೆ, ಗ್ಯಾಸ್ಟ್ರೊಇಂಟೆಸ್ಟೈನಲ್‌ ಸಮಸ್ಯೆಗಳು ಉಂಟಾಗುತ್ತವೆ. 
•    ಬಾಯಿ-ನಾಲಿಗೆಯಲ್ಲಿ ನೋವು (Pain in Mouth and Tongue)
ಬಾಯಿ ಹಾಗೂ ನಾಲಿಗೆಯಲ್ಲಿ ಕಡಿತ, ನೋವು, ಕೆಂಪಗಾಗುವ ಸಮಸ್ಯೆ ಕಂಡುಬರುತ್ತದೆ. ಇದನ್ನು ಗ್ಲೊಸಿಟಿಸ್ ಎನ್ನಲಾಗುತ್ತದೆ.
•    ಕೈಕಾಲುಗಳ ಸೆಳೆತ
ವಿಟಮಿನ್‌ ಬಿ12 ಕೊರತೆಯಿಂದ ಕೈಕಾಲುಗಳ ಸೆಳೆತ ಸಾಮಾನ್ಯ. ಇದನ್ನು ಪೆರೆಸ್ಟೋಸಿಯಾ (Paresthesia) ಎನ್ನಲಾಗುತ್ತದೆ. ಜತೆಗೆ, ಕೈಕಾಲುಗಳಲ್ಲಿ ಉರಿಯುವಿಕೆ ಕಂಡುಬರುತ್ತದೆ. ಈ ವಿಟಮಿನ್‌ ಕೊರತೆಯಾದಾಗ ಮಕ್ಕಳು ಮತ್ತು ವಯಸ್ಕರಲ್ಲೂ ಈ ಸಮಸ್ಯೆ ಉಂಟಾಗುತ್ತದೆ.

ಮೆದುಳು, ಹೃದಯಕ್ಕೂ ಬೇಕು ಬಿ12

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರಾತ್ರಿ ವೇಳೆ ಅಪ್ಪಿತಪ್ಪಿಯೂ ತಿನ್ನಬಾರದ ಹಣ್ಣುಗಳು ಇವು: ತಜ್ಞರು ಹೇಳೋದೇನು?
ಸೀನು ಯಾಕೆ ಬರುತ್ತೆ ಗೊತ್ತಾ? ಇಲ್ಲಿದೆ ಅದರ ಹಿಂದಿರುವ ಕುರಿತ ಅಚ್ಚರಿಯ ಸಂಗತಿಗಳು!