ಫ್ರೇಶ್ ಕಬ್ಬಿನ ಹಾಲು ಓಕೆ, ಸ್ವಲ್ಪ ಹೊತ್ತಿನ ನಂತರ ಸೇವಿಸಿದ್ರೆ ಕೆಡುತ್ತೆ ಆರೋಗ್ಯ!

By Suvarna News  |  First Published Jun 6, 2022, 1:34 PM IST

ಅನಾರೋಗ್ಯವುಂಟಾದಾಗ ವೈದ್ಯರು ಮಾತ್ರೆ ನೀಡ್ತಾರೆ. ಆದ್ರೆ ಒಂದೇ ಬಾರಿ ಎಲ್ಲ ಮಾತ್ರೆ ಸೇವನೆ ಮಾಡದಂತೆ ಸೂಚನೆ ನೀಡ್ತಾರೆ. ಅದೇ ರೀತಿ, ಆರೋಗ್ಯಕ್ಕೆ ಒಳ್ಳೆಯದು ಎನ್ನುವ ಕಾರಣಕ್ಕೆ ಕಬ್ಬಿನ ಹಾಲನ್ನು ಯರ್ರಾಬಿರ್ರಿ ಸೇವನೆ ಮಾಡೋದು ಒಳ್ಳೆಯದಲ್ಲ.
 


ಬೇಸಿಗೆ (Summer) ಯಲ್ಲಿ ಪ್ರತಿಯೊಬ್ಬರಿಗೂ ಕಬ್ಬಿನ ಹಾಲು (Sugarcane Milk) ಇಷ್ಟವಾಗುತ್ತದೆ. ಕಬ್ಬಿನ ಹಾಲು ಎಲ್ಲ ಸಮಯದಲ್ಲೂ ಈಗ ಸಿಗುತ್ತದೆ. ಅನೇಕರು ರುಚಿ (Taste) ಹಾಗೂ ಆರೋಗ್ಯ (Health) ಕ್ಕೆ ಒಳ್ಳೆಯದು ಎನ್ನುವ ಕಾರಣಕ್ಕೆ ಅದನ್ನು ಸೇವನೆ ಮಾಡ್ತಾರೆ. ಕಬ್ಬಿನ ಹಾಲನ್ನು ಮೂರ್ನಾಲ್ಕು ಲೋಟ ಸೇವನೆ ಮಾಡುವವರಿದ್ದಾರೆ. ಮತ್ತೆ ಕೆಲವರು ಪ್ರತಿ ದಿನ ಕಬ್ಬಿನ ಹಾಲನ್ನು ಕುಡಿಯತ್ತಾರೆ. ಕಬ್ಬಿನ ಹಾಲಿನಲ್ಲಿ ಕೊಬ್ಬು (Fat), ಕೊಲೆಸ್ಟ್ರಾಲ್ (Cholesterol),  ಫೈಬರ್ ಮತ್ತು ಪ್ರೋಟೀನ್ (Protein) ಇರೋದಿಲ್ಲ. ಆದರೆ ಸೋಡಿಯಂ, ಪೊಟ್ಯಾಸಿಯಮ್, ಕ್ಯಾಲ್ಸಿಯಂ (Calcium), ಮೆಗ್ನೀಸಿಯಮ್, ಕಬ್ಬಿಣ ಮತ್ತು ಕ್ಯಾಲೋರಿಗಳು ಇದರಲ್ಲಿ ಹೇರಳವಾಗಿ ಇರುತ್ತವೆ. ಬೇಸಿಗೆ ಕಾಲದಲ್ಲಿ ದೇಹ (Body) ವನ್ನು ನಿರ್ಜಲೀಕರಣಗೊಳಿಸಲು ಕಬ್ಬಿನ ರಸವು ತುಂಬಾ ಪರಿಣಾಮಕಾರಿಯಾಗಿದೆ. ಅಷ್ಟೇ ಅಲ್ಲ ಕಬ್ಬಿನ ಹಾಲು, ದೇಹದಲ್ಲಿ ಶಕ್ತಿಯ (Energy) ಮಟ್ಟವನ್ನು ಹೆಚ್ಚಿಸುವುದರ ಜೊತೆಗೆ ಮೂತ್ರಪಿಂಡ (kidney) ದ ಆರೋಗ್ಯ (Health) ವನ್ನು ಸುಧಾರಿಸುತ್ತದೆ. ಜೀರ್ಣಕ್ರಿಯೆ (Digestion), ಮೊಡವೆಗಳಿಗೂ ಇದು ಪ್ರಯೋಜನಕಾರಿಯಾಗಿದೆ. ಕಬ್ಬಿನ ಹಾಲು ಆರೋಗ್ಯಕ್ಕೆ ಒಳ್ಳೆಯದು ನಿಜ. ಆದ್ರೆ ಅದ್ರಲ್ಲಿ ಕೆಲವು ಅನಾನುಕೂಲವಿದೆ. ಇದು ಅನೇಕ ಜನರಿಗೆ ತಿಳಿದಿಲ್ಲ. ನೀವು ಒಂದೇ ಸಮಯದಲ್ಲಿ ಎರಡು ಲೋಟಕ್ಕಿಂತ ಹೆಚ್ಚು ಕಬ್ಬಿನ ರಸವನ್ನು ಕುಡಿದರೆ ಅದು ನಿಮ್ಮ ಆರೋಗ್ಯವನ್ನು ಹಾಳುಮಾಡುತ್ತದೆ. ಕಬ್ಬಿನ ರಸವನ್ನು ಅಧಿಕವಾಗಿ ಸೇವಿಸುವುದರಿಂದ ಮಧುಮೇಹದ ಜೊತೆಗೆ  ಅತಿಸಾರ, ಮಲಬದ್ಧತೆ ಉಂಟಾಗಬಹುದು.

ಕಬ್ಬಿನ ಹಾಲನ್ನು ಅತಿಯಾಗಿ ಸೇವಿಸಿದ್ರೆ ಕಾಡುತ್ತೆ ಈ ಸಮಸ್ಯೆ : 
ಹೊಟ್ಟೆ (Stomach) ಸಮಸ್ಯೆ :
ಕಬ್ಬಿನ ರಸ ತೆಗೆದು ಸಂಗ್ರಹಿಸಿಡಲಾಗುತ್ತದೆ. 20 ನಿಮಿಷಗಳಿಗಿಂತ ಹೆಚ್ಚು ಕಾಲ ಸಂಗ್ರಹಿಸಿಟ್ಟ ಕಬ್ಬಿನ ಹಾಲು ಆಕ್ಸಿಡೀಕರಣಗೊಳ್ಳುತ್ತದೆ. ಇದು ದೇಹಕ್ಕೆ ಅತ್ಯಂತ ಹಾನಿಕಾರಕವಾಗಿದೆ. ಇದನ್ನು ಸೇವನೆ ಮಾಡುವುದ್ರಿಂದ ಹೊಟ್ಟೆಯಲ್ಲಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ವಾಂತಿ ಮತ್ತು ತಲೆತಿರುಗುವಿಕೆ ಪ್ರಾರಂಭವಾಗುತ್ತದೆ. ಯಾವಾಗ್ಲೂ ಕಬ್ಬಿನ ಹಾಲನ್ನು ತಾಜಾ ಕುಡಿಯಬೇಕು. ಸಂಗ್ರಹಿಸಿಟ್ಟ ಹಾಲನ್ನು ಕುಡಿಯಬಾರದು. 

Tap to resize

Latest Videos

CHILDHOOD OBESITY: ಮಕ್ಕಳ ಬೊಜ್ಜಿಗೆ ಪೋಷಕರು ಕಾರಣವೇ? ಹೇಗೆ?

ನಿದ್ರಾಹೀನತೆ (Insomnia ) ಸಮಸ್ಯೆ : ಕಬ್ಬಿನಲ್ಲಿ ಪೋಲಿಕೋಸನಾಲ್ ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ನಿದ್ರಾಹೀನತೆ ಸಮಸ್ಯೆ ಪ್ರಾರಂಭವಾಗುತ್ತದೆ. ಕಬ್ಬಿನ ಹಾಲನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವನೆ ಮಾಡಿದ್ರೆ ಸಮಸ್ಯೆ ಹೆಚ್ಚಾಗುತ್ತದೆ. ನಿದ್ರೆ ಕಡಿಮೆಯಾದ್ರೆ ಇದು ಅನೇಕ ಮಾನಸಿಕ ಕಾಯಿಲೆಗಳಿಗೆ ಕಾರಣವಾಗಬಹುದು.

ಹೆಚ್ಚಿನ ಕ್ಯಾಲೋರಿ ಬೊಜ್ಜಿಗೆ ಕಾರಣ : ಕಬ್ಬಿನಲ್ಲಿ ಕ್ಯಾಲೋರಿ ಮತ್ತು ಸಕ್ಕರೆ ಸಮೃದ್ಧವಾಗಿದೆ. ಇದು ಸುಲಭವಾಗಿ ತೂಕ ಹೆಚ್ಚಾಗಲು ಕಾರಣವಾಗಬಹುದು. ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಪ್ರಯತ್ನಿಸುತ್ತಿದ್ದರೆ  ಕಬ್ಬಿನ ರಸವನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವನೆ ಮಾಡಲು ಹೋಗ್ಬೇಡಿ.  ಕಬ್ಬಿನ ಹಾಲನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವನೆ ಮಾಡ್ತಾ ಹೋದ್ರೆ ದೇಹದಲ್ಲಿನ ಕ್ಯಾಲೊರಿಗಳ ಪ್ರಮಾಣವು ಅನಗತ್ಯವಾಗಿ ಹೆಚ್ಚಾಗುತ್ತದೆ.  ದಿನಕ್ಕೆ ಒಂದು ಲೋಟ ಕಬ್ಬಿನ ರಸವನ್ನು ಮಾತ್ರ ಸೇವಿಸುವಂತೆ ವೈದ್ಯರು ಶಿಫಾರಸು ಮಾಡುತ್ತಾರೆ. 

ರಕ್ತ ತೆಳುವಾಗುವ ಸಮಸ್ಯೆ :  ಕಬ್ಬಿನ ಹಾಲಿನಲ್ಲಿ ಕಂಡುಬರುವ ಪೋಲಿಕೋಸನಾಲ್ ರಕ್ತವನ್ನು ತೆಳುವಾಗಿಸುತ್ತದೆ. ಇದರಿಂದಾಗಿ ರಕ್ತ ಹೆಪ್ಪುಗಟ್ಟುವುದಿಲ್ಲ. ಗಾಯದಿಂದಾಗಿ ಅತಿಯಾದ ರಕ್ತಸ್ರಾವದ ಅಪಾಯವಿದೆ. 

ಮಕ್ಕಳು ಮಣ್ಣು ತಿಂದ್ರೆ ತಪ್ಪಲ್ಲ, ಹಾಗಂಥ ಪದೆ ಪದೇ ತಿಂದ್ರೆ ಡೇಂಜರಸ್!

ಸೋಂಕಿನ ಅಪಾಯ  ಹೆಚ್ಚಾಗುತ್ತದೆ : ಬೇಸಿಗೆಯಲ್ಲಿ ರಸ್ತೆ ಬದಿಯ ಕಬ್ಬಿನ ಜ್ಯೂಸ್‌ ಸಾಕಷ್ಟು ಪ್ರಮಾಣದಲ್ಲಿ ಸಿಗುತ್ತದೆ. ಕಬ್ಬಿನ ಜ್ಯೂಸ್ ಕುಡಿಯುವುದರಿಂದ ಸೋಂಕಿನ ಅಪಾಯ ಹೆಚ್ಚಾಗುತ್ತದೆ. ಅಲ್ಲಿ ಕಬ್ಬನ್ನು ಸರಿಯಾಗಿ ಸ್ವಚ್ಛಗೊಳಿಸಿರುವುದಿಲ್ಲ. ಹಾಗೆಯೇ ಲೋಟವನ್ನು ಸರಿಯಾಗಿ ಕ್ಲೀನ್ ಮಾಡಿರುವುದಿಲ್ಲ. ಯಂತ್ರವನ್ನು ಆಗಾಗ ಸ್ವಚ್ಛಗೊಳಿಸದೆ ಇರುವುದ್ರಿಂದಲೂ  ಅನೇಕ ಬ್ಯಾಕ್ಟೀರಿಯಾಗಳು ಹುಟ್ಟಿಕೊಳ್ಳುತ್ತವೆ. ಇದು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇದು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಯನ್ನುಂಟು ಮಾಡುತ್ತದೆ. 

 

click me!