ಹೊಸ ತಾಯ್ತನ ಅನುಭವಿಸುವ ತಾಯಂದಿರಿಗೆ ಮಗುವಿನ ಆರೈಕೆಯಲ್ಲಿ ಎಳೆ ಕೂದಲಷ್ಟೂ ಆಚೀಚೆ ಆಗಬಾರದು. ಹೊಸ ಕುಟುಂಬದ ಸದಸ್ಯೆ ನಡುವಿನ ಸಂಬAಧ ಗಟ್ಟಿಗೊಳಿಸುವ ವಿಧಾನ ಎಂದರೆ ಅದು ಕಾಂಗರೂ ವಿಧಾನದ ಆರೈಕೆ.
ನವಜಾತ ಮಗುವನ್ನು ಕಣ್ಣಿನಲ್ಲಿ ಕಣ್ಣಿಟ್ಟು ನೋಡಿಕೊಳ್ಳಬೇಕಾಗುತ್ತದೆ. ಇದು ಹೊಸ ತಾಯ್ತನ ಅನುಭವಿಸುವ ತಾಯಂದಿರಿಗೆ ಸವಾಲಿನ ಸಂಗತಿ. ಅವಧಿ ಮುನ್ನ ಜನಿಸಿದ ಮಗುವನ್ನು ಬಹಳ ಜೋಪಾನದಿಂದ ನೋಡಿಕೊಳ್ಳಬೇಕು. ತಾಯಿಯು ಎದೆಗೆ ಹತ್ತಿರವಾಗಿ ಹಿಡಿದಿಟ್ಟುಕೊಳ್ಳವುದರಿಂದ ಮಗು ಹಾಗೂ ತಾಯಿಯ ನಡುವಿನ ಸಂಬAಧ ಬಲವಾಗುತ್ತದೆ. ಅಲ್ಲದೆ ಮಗುವಿನಲ್ಲಿನ ಎಷ್ಟೋ ಸಮಸ್ಯೆಗಳನ್ನು ದೂರ ಮಾಡುತ್ತದೆ ಎಂದು ಅಧ್ಯಯನದಿಂದ ತಿಳಿದುಬಂದಿದೆ. ತಾಯಿಯು ಮಗುವನ್ನು ಎದೆಯ ಹತ್ತಿರ ಹಿಡಿದಿಟ್ಟುಕೊಳ್ಳುವ ವಿಧಾನವನ್ನು ಕಾಂಗರೂ ಆರೈಕೆ ಎಂದು ಹೇಳುತ್ತಾರೆ. ಚರ್ಮದಿಂದ ಚರ್ಮದ ಸಂಪರ್ಕವನ್ನು(Skin To Skin Connection) ಅನುಮತಿಸುತ್ತದೆ.
ಕಾಂಗರೂ ವಿಧಾನದಲ್ಲಿ ಮಗುವನ್ನು ಎದೆಯ ಮೇಲೆ ಕೆಲವು ಗಂಟೆಗಳವರೆಗೆ ಇರಿಸಿಕೊಳ್ಳಲಾಗುತ್ತದೆ. ಕಂಬಳಿ, ಅಂಗಿ, ನಿಲುವಂಗಿಯನ್ನು ತಾಯಿಯ ಸುತ್ತ ಮತ್ತು ಮಗುವಿನ ಬೆನ್ನಿನ ಮೇಲೆ ಉಷ್ಣತೆಗಾಗಿ ಸುತ್ತಿಕೊಳ್ಳಬಹುದು. ಇಲ್ಲಿ ಮಗುವು ಒಂದು ಡೈಪರ್(Diaper) ಮತ್ತು ಟೋಪಿ ಹೊರತುಪಡಿಸಿ ತಾಯಿಯ ಎದೆಯ ಹತ್ತಿರ ಬೆತ್ತಲಾಗಿ ಹಿಡಿದಿಟ್ಟುಕೊಳ್ಳಬೇಕು. ತಾಯಿಯು ಮಗುವನ್ನು ಎದೆಗೆ ಸುತ್ತಿಕೊಳ್ಳುವ ವಿಧಾನ ಅಂದರೆ ಕಾಂಗರೂ ಪ್ರಾಣಿಯು ತನ್ನ ಮಗುವನ್ನು ತನ್ನ ಚೀಲದಲ್ಲಿ ಹಿಡಿದಿಟ್ಟುಕೊಳ್ಳುವುದು ಹಾಗಾಗಿ ಈ ವಿಧಾನವನ್ನು ಕಾಂಗರೂ ವಿಧಾನ ಎಂದು ಹೇಳುತ್ತಾರೆ.
ಹೊಸ ತಾಯಂದಿರ Back Pain ಸಮಸ್ಯೆಗೆ ಇಲ್ಲಿದೆ ಪರಿಹಾರ
ಕಾಂಗರೂ ಆರೈಕೆ ಮೂಡಿದ್ದು ಹೀಗೆ:
ಕಾಂಗರೂ ಆರೈಕೆಯನ್ನು 1970ರ ದಶಕದ ಅಂತ್ಯದಲ್ಲಿ ಕೊಲಂಬಿಯಾದ(Colombia) ಬೊಗೋಟಾದಲ್ಲಿ(Bogota) ಅಭಿವೃದ್ಧಿಪಡಿಸಲಾಯಿತು. ಈ ರೀತಿಯ ಆರೈಕೆಯು ಪ್ರಸವಪೂರ್ವ ಶಿಶುಗಳಲ್ಲಿ ಮರಣ ಪ್ರಮಾಣ ಪ್ರತಿಕ್ರಿಯೆಯಾಗಿತ್ತು. ಆ ಸಮಯದಲ್ಲಿ ಅಕಾಲಿಕ ಶಿಶುಗಳ ಸಾವಿನ ಪ್ರಮಾಣವು ಸರಿಸುಮಾರು ಶೇ.70ರಷ್ಟಿತ್ತು. ಸೋಂಕುಗಳು(Disease), ಉಸಿರಾಟದ ತೊಂದರೆಗಳು(Respiration Problem) ಮತ್ತು ಗಮನದ ಕೊರತೆಯಿಂದಾಗಿ ಶಿಶುಗಳು ಸಾಯುತ್ತಿದ್ದವು. ದಿನದ ಹೆಚ್ಚಿನ ಸಮಯಗಳಲ್ಲಿ ತಾಯಿಯ ದೇಹಕ್ಕೆ ಹತ್ತಿರ ಇರುವ ಶಿಶುಗಳು ಬದುಕುಳಿದವು. ಅಷ್ಟೇ ಅಲ್ಲದೆ ಅವಧಿಗೂ ಮೊದಲೇ ಹುಟ್ಟಿದ ಶಿಶುಗಳ(Pre meture Babies) ಬೆಳವಣಿಗೆಯೂ ಹೊಂದುತ್ತವೆ ಎಂದು ಸಂಶೋಧನೆಯಿAದ ಕಂಡುಬAದಿತು.
ಇಂದು ಬಹುತೇಕ ರಾಷ್ಟ್ರಗಳಲ್ಲಿ ಈ ಕಾಂಗರೂ ಆರೈಕೆಯ ವಿಧಾನ ಪ್ರಸಿದ್ಧಿ ಪಡೆದಿದೆ. ಇಂದು ಸಾಮಾನ್ಯವಾಗಿ ಪ್ರತಿ ದಿನ ಹಲವು ಗಂಟೆಗಳ ಕಾಲ ಪ್ರಸವ ಪೂರ್ವ ಶಿಶುಗಳೊಂದಿಗೆ ತಾಯಿ ಅಥವಾ ತಂದೆಯು ಎದೆಯ ಹತ್ತಿರ ಚರ್ಮವು ತಾಕುವಂತೆ ಹಿಡಿದಿಟ್ಟುಕೊಳ್ಳುವ ಸಂಪರ್ಕವನ್ನು ಒದಗಿಸುತ್ತದೆ. ಈ ವಿಧಾನ ಅಕಾಲಿಕ ಶಿಶುಗಳಿಗೆ ಮಾತ್ರವಲ್ಲದೆ ಪೂರ್ಣಾವಧಿಯ ಶಿಶುಗಳು ಮತ್ತು ಅವರ ಪೋಷಕರಿಗೂ ತುಂಬಾ ಒಳ್ಳೆಯದು.
ಕಾಂಗರೂ ಆರೈಕೆಯ ಪ್ರಯೋಜನಗಳು
1. ಮಗುವಿನ ಹೃದಯ ಬಡಿತವನ್ನು(Heart Beat) ಸ್ಥಿರಗೊಳಿಸುತ್ತದೆ.
2. ಮಗುವಿನ ಉಸಿರಾಟ ಮತ್ತು ದೇಹದ ಉಷ್ಣತೆಯನ್ನು(Body Temperature) ನಿಯಂತ್ರಿಸುತ್ತದೆ. ತಾಯಿಯ ಎದೆಯ ಉಷ್ಣತೆಯು ಮಗುವಿನ ಅಗತ್ಯಗಳಿಗೆ ಹೊಂದಿಕೊಳ್ಳುತ್ತದೆ,
3. ಮಗು ಸರಿಯಾಗಿ ಉಸಿರಾಡುವುದನ್ನು(Respiration) ಮುಂದುವರೆಸಿದರೆ, ದೇಹದ ಅಂಗಾAಶಗಳು(Body Parts) ಮತ್ತು ಅಂಗಗಳಿಗೆ ಆಮ್ಲಜನಕವನ್ನು(Oxygen) ತಲುಪುತ್ತದೆ. ಇದು ಮಗುವಿನ ಅಂಗಗಳ ಬೆಳವಣಿಗೆ ಮತ್ತು ಬೆಳವಣಿಗೆಗೆ ಸಹಾಯ ಮಾಡುತ್ತದೆ. ಜೊತೆಗೆ ಮಗುವಿನ ತೂಕವೂ ಹೆಚ್ಚಾಗುವುದು(Weight Gain).
4. ಹೆಚ್ಚಿನ ಪ್ರಮಾಣದಲ್ಲಿ ಹಾಲುಣಿಸುವುದು.
ಅಪ್ಪಂದಿರಿಗೆ ಕಾಂಗರೂ ಆರೈಕೆ ಟಿಪ್ಸ್: ಮಗುವನ್ನು ಹೀಗ್ ಹಿಡಿಯಿರಿ!
ಕಾಂಗರೂ ಆರೈಕೆಯ ಇತರೆ ಪ್ರಯೋಜನಗಳು
1. ಗರ್ಭದಿಂದಲೇ(Pregnancy) ಮಗು ತನ್ನ ತಾಯಿಯ ಧ್ವನಿ(Voice) ಮತ್ತು ಹೃದಯ ಬಡಿತವನ್ನು(Heart Beat) ಗುರುತಿಸಲು ಪ್ರಾರಂಭಿಸುತ್ತದೆ.
2.ಕಾಂಗರೂ ಆರೈಕೆಯಲ್ಲಿನ ಶಿಶುವು ಕಡಿಮೆ ಅಳುತ್ತವೆ ಮತ್ತು ಆಸ್ಪತ್ರೆಯಿಂದ ಬೇಗ ಬಿಡುಗಡೆಯಾಗುತ್ತದೆ. ಮಗುವನ್ನು ನೋಡಿಕೊಳ್ಳುವ ಸಾಮರ್ಥ್ಯ ಮತ್ತು ಆತ್ಮವಿಶ್ವಾಸ(Self Confidence) ಹೆಚ್ಚುತ್ತದೆ.
3. ತಾಯಿ ಮತ್ತು ಮಗುವಿನ ನಡುವೆ ವಾತ್ಸಲ್ಯ ಮತ್ತು ಸಂಬಂಧ ಹೆಚ್ಚುತ್ತದೆ ಹಾಗೂ ಇಬ್ಬರನ್ನೂ ಇನ್ನಷ್ಟು ಹತ್ತಿರ ಮಾಡುತ್ತದೆ. ಹಾಗೂ ಎದೆಹಾಲು ಪೂರೈಕೆಯೂ(Breast feeding) ಹೆಚ್ಚುತ್ತದೆ.
ಕಾಂಗರೂ ಆರೈಕೆ ಸಂದರ್ಭದಲ್ಲಿ ಈ ತಪ್ಪು ಮಾಡಬೇಡಿ
ಕಾಂಗರೂ ಆರೈಕೆಯಲ್ಲಿ ಮಗುವನ್ನು ಸೂಕ್ಷ್ಮವಾಗಿ ನೋಡಿಕೊಳ್ಳುವ ಸಂದರ್ಭ ಇದಾಗಿದೆ. ಈ ಸಂದರ್ಭದಲ್ಲಿ ತಾಯಿಯು ಹಲವು ಅಂಶಗಳಿಂದ ದೂರವಿರಬೇಕಾಗುತ್ತದೆ. ಮಗುವಿನ ಜೊತೆ ಕಳೆಯುವ ಪ್ರತೀ ನಿಮಿಷವೂ ಇಲ್ಲಿ ಬಹಳ ಮುಖ್ಯವಾಗಿರುತ್ತದೆ. ಮಗುವನ್ನು ಎಷ್ಟು ಕಾಳಜಿಯಿಂದ ನೋಡಿಕೊಳ್ಳುತ್ತೀರೋ ಅಷ್ಟು ಬೇಗ ಮಗುವು ಸಮಸ್ಯೆಯಿಂದ ಹೊರಬರುತ್ತದೆ ಹಾಗಾಗಿ ಕಾಂಗರೂ ಆರೈಕೆಯ ಸಂದರ್ಭದಲ್ಲಿ ಈ ತಪ್ಪು ಮಾಡಬೇಡಿ.
1. ಸೆಲ್ಫೋನ್‌ನಿಂದ(Cellphone) ದೂರವಿರಿ. ಕಾಂಗರೂ ಆರೈಕೆಯ ಸಂದರ್ಭದಲ್ಲಿ ಫೋನ್ ಹತ್ತಿರ ಇರುವುದು ತಾಯಿಯನ್ನು ವಿಚಲಿತಗೊಳಿಸುವುದಲ್ಲದೆ ಮಗುವಿಗೂ ಒಳ್ಳೆಯದಲ್ಲ.
2. ತಾಯಿಯ ಆರೋಗ್ಯ ಸರಿ ಇಲ್ಲಿದಿದ್ದರೆ ಕಾಂಗರೂ ಆರೈಕೆಯಿಂದ ದೂರವಿರುವುದು ಒಳ್ಳೆಯದು. ಏಕೆಂದರೆ ಮಗುವು ಸೂಕ್ಷ್ಮವಾಗಿರುವುದರಿಂದ ಬಹು ಬೇಗ ಶೀತದಂತಹ ರೋಗಗಳು ಹರಡಬಹುದು.
3. ಮಗುವಿನ ಬಳಿ ಕನಿಷ್ಠ 60 ನಿಮಿಷವಾದರೂ ಸಮಯ ಕಳೆಯಿರಿ.
4. ತಾಯಿಯು ಪ್ರತೀ ಕಾಂಗರೂ ಆರೈಕೆಯ ಸಂದರ್ಭದಲ್ಲಿ ಶುದ್ಧ ಹಾಗೂ ಸ್ವಚ್ಛತೆಯನ್ನು(Cleanliness) ಕಾಪಾಡಿಕೊಳ್ಳಿ. ಸುಗಂಧ ದ್ರವ್ಯ, ಅಲರ್ಜಿ, ಶೀತದಿಂದ ದೂರವಿರುವುದನ್ನು ಖಚಿತಪಡಿಸಿಕೊಳ್ಳಿ.