
ಹಲ್ಲಿ (Tooth) ನಲ್ಲಿ ಹುಳು ಮಕ್ಕಳಿ (Kids)ಗೆ ಕಾಡುವ ಸಾಮಾನ್ಯ ಸಮಸ್ಯೆಗಳಲ್ಲಿ ಒಂದು. ಮಗುವಿಗೆ ಕ್ಯಾಂಡಿ (Candy) ಮತ್ತು ಸಿಹಿ ಆಹಾರಗಳನ್ನು ಕಡಿಮೆ ನೀಡಿದ್ರೂ ಸಹ ಹಲ್ಲುಗಳಲ್ಲಿ ಹುಳುಗಳು ಕಾಣಿಸಿಕೊಳ್ಳುತ್ತವೆ. ಮಗುವಿನ ಹಲ್ಲು ಮತ್ತು ಬಾಯಿಯ ಶುಚಿತ್ವವನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ ಹಲ್ಲುಗಳಲ್ಲಿ ಆಗುವ ಹುಳುಗಳನ್ನು ತಡೆಯಬಹುದು. 3 ರಿಂದ 5 ವರ್ಷ ವಯಸ್ಸಿನ ಮಕ್ಕಳ ಹಲ್ಲಿನಲ್ಲಿ ಹುಳುವಿನ ಸಮಸ್ಯೆ ಹೆಚ್ಚಿರುತ್ತದೆ. ಐದು ವರ್ಷ ಮೇಲ್ಪಟ್ಟ ಮಕ್ಕಳು ಅಥವಾ ವಯಸ್ಕರಿಗೆ ಹೋಲಿಸಿದರೆ 3 ರಿಂದ 5 ವರ್ಷ ವಯಸ್ಸಿನ ಮಕ್ಕಳಿಗೆ ಹೆಚ್ಚಾಗಿ ಈ ಸಮಸ್ಯೆ ಕಾಡುತ್ತದೆ. ಇದು ಏಕೆ ಎಂಬ ಪ್ರಶ್ನೆ ಸಾಮಾನ್ಯವಾಗಿ ಎಲ್ಲರನ್ನೂ ಕಾಡುತ್ತದೆ. ಹಾಲಿನ ಹಲ್ಲುಗಳ ದಂತಕವಚವು ತೆಳುವಾಗಿರುತ್ತದೆ. ಹಾಗೆಯೇ ಮೃದುವಾಗಿರುತ್ತದೆ. ಅವುಗಳ ಮೇಲೆ ಕುಳಿಗಳನ್ನು ಮಾಡಬಹುದು. ಮಕ್ಕಳ ಹಲ್ಲುಗಳ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಮುಖ್ಯವಾಗಿದೆ. ಇಂದು 3 ರಿಂದ 5 ವರ್ಷದ ಮಕ್ಕಳ ಹಲ್ಲುಗಳಲ್ಲಿ ಹುಳುಗಳು ಬರಲು ಕಾರಣಗಳೇನು ಮತ್ತು ಮಗುವಿನ ಹಲ್ಲುಗಳ ರಕ್ಷಣೆ ಹೇಗಿರಬೇಕು?
ಮಕ್ಕಳಲ್ಲಿ ಹಲ್ಲು ಹುಳುಕ್ಕೆ ಕಾರಣ
ದಿನದಲ್ಲಿ ಎಷ್ಟು ಬಾರಿ ಸೇವಿಸ್ತೀರಿ ಸಿಹಿ ತಿಂಡಿ ? : ಸಿಹಿ ತಿಂಡಿ ಹಲ್ಲುಗಳ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬುದು ಎಲ್ಲರಿಗೂ ತಿಳಿದಿದೆ. ಆದ್ರೆ ಸಿಹಿ ತಿಂಡಿ ಸೇವನೆ ಸಮಯವೂ ಇಲ್ಲಿ ಮಹತ್ವ ಪಡೆಯುತ್ತದೆ. ನೀವು ದಿನದಲ್ಲಿ ಎಷ್ಟು ಬಾರಿ ಸಿಹಿ ತಿಂಡಿ ತಿನ್ನುತ್ತೀರಿ ಎಂಬುದೂ ಮುಖ್ಯವಾಗುತ್ತದೆ. ದಿನವಿಡೀ ಸಿಹಿ ಪದಾರ್ಥಗಳನ್ನು ತಿನ್ನುವುದು ಒಂದೇ ಸಮಯದಲ್ಲಿ ಒಂದೇ ಪ್ರಮಾಣದ ಸಿಹಿತಿಂಡಿಗಳನ್ನು ತಿನ್ನುವುದಕ್ಕಿಂತ ಕೆಟ್ಟದು. ಇದಲ್ಲದೆ ಆಹಾರ ಸೇವನೆ ಮಾಡಿದ ತಕ್ಷಣ ಸಿಹಿ ತಿಂಡಿ ತಿನ್ನುವುದು ಕೂಡ ಹೆಚ್ಚು ಹಾನಿಕಾರಕವಾಗಿದೆ. ಪಿಷ್ಟ ಮತ್ತು ಸಕ್ಕರೆ ಹೊಂದಿರುವ ಆಹಾರಗಳು ಮಗುವಿನ ಬಾಯಿಯಲ್ಲಿ ದೀರ್ಘಕಾಲ ಉಳಿಯುತ್ತವೆ ಮತ್ತು ಕ್ಯಾಂಡಿ ಅಥವಾ ಮಿಠಾಯಿಯಂತಹ ಗಟ್ಟಿಯಾದ ವಸ್ತುಗಳು ಮಗುವಿನ ಹಲ್ಲುಗಳಿಗೆ ಹೆಚ್ಚು ಹಾನಿ ಮಾಡುತ್ತದೆ. ಏಕೆಂದರೆ ಇವು ಹಲ್ಲುಗಳಿಗೆ ಅಂಟಿಕೊಳ್ಳುತ್ತವೆ.
ಸಿಕ್ಕಾಪಟ್ಟೆ ಬಿಸಿಲಪ್ಪಾ, ಚಿಲ್ ಆಗೋಕೆ ಐಸ್ ನೀರು ಕುಡಿಯುವುದು ಸುರಕ್ಷಿತವೇ ?
ಮಕ್ಕಳ ಹಲ್ಲುಗಳ ರಕ್ಷಣೆ : ಮಕ್ಕಳ ಹಲ್ಲುಗಳನ್ನು ಆರಂಭದಿಂದಲೂ ಸ್ವಚ್ಛವಾಗಿಡಬೇಕು. ಉತ್ತಮ ಟೂತ್‌ಪೇಸ್ಟ್ ನೊಂದಿಗೆ ದಿನಕ್ಕೆ ಎರಡು ಬಾರಿ ಮಕ್ಕಳ ಹಲ್ಲುಗಳನ್ನು ಉಜ್ಜಬೇಕು. ಸಣ್ಣ ಮಕ್ಕಳ ಹಲ್ಲುಗಳನ್ನು ಕೈ ಬೆರಳಿನ ಸಹಾಯದಿಂದಲಾದ್ರೂ ಉಜ್ಜಲೇಬೇಕು. ನಿಯಮಿತವಾಗಿ ಫ್ಲೋಸಿಂಗ್ ಮಾಡಬೇಕು. ಪ್ರತಿ ದಿನ ಹಲ್ಲು ಸ್ವಚ್ಛಗೊಳಿಸುವಂತೆ ಮಕ್ಕಳಿಗೆ ಸಲಹೆ ನೀಡುವುದಲ್ಲದೆ ಮಕ್ಕಳು ದೊಡ್ಡವರಾಗ್ತಿದ್ದಂತೆ ಹೇಗೆ ಬ್ರೆಷ್ ಮಾಡಬೇಕು ಎಂಬುದನ್ನು ಅವರಿಗೆ ತಿಳಿಸಬೇಕು.
ಹಲ್ಲಿನ ಹುಳುಗಳ ಚಿಹ್ನೆಗಳು : ಹಲ್ಲಿನಲ್ಲಿ ಹುಳುವಾದಾಗ ಹಲ್ಲು ನೋವಾಗಬೇಕೆಂಬ ನಿಯಮವಿಲ್ಲ. ಮಗುವಿನ ಹಲ್ಲುಗಳ ಮೇಲೆ ಕಪ್ಪು ಅಥವಾ ಬಿಳಿ ಚುಕ್ಕೆಗಳು, ಸದಾ ಕಿರಿಕಿರಿ, ಅಳು, ಬಾಯಿಯ ದುರ್ವಾಸನೆ ಮತ್ತು ಸುಸ್ತು ಈವೆಲ್ಲವೂ ಮಕ್ಕಳ ಹಲ್ಲಿನಲ್ಲಿ ಹುಳುವಾಗಿದೆ ಎಂಬ ಸಂಕೇತ ನೀಡುತ್ತದೆ. ಮಕ್ಕಳಲ್ಲಿ ಈ ಲಕ್ಷಣ ಕಾಣಿಸಿಕೊಂಡರೆ ವೈದ್ಯರನ್ನು ಭೇಟಿಯಾಗುವುದು ಒಳ್ಳೆಯದು.
International Day Of Happiness: ನೀವು ಸಂತೋಷವಾಗಿದ್ದೀರಾ ? ಇಲ್ಲಾಂದ್ರೆ ಈ ಯೋಗ ಟಿಪ್ಸ್ ಫಾಲೋ ಮಾಡಿ
ಮಕ್ಕಳಿಗೆ ಯಾವ ಆಹಾರ ನೀಡಬೇಕು ? : ಮಕ್ಕಳ ಹಲ್ಲುಗಳನ್ನು ರಕ್ಷಿಸಬೇಕೆಂದ್ರೆ ಅವರಿಗೆ ಸಿಹಿ ತಿಂಡಿಗಳು,ಜ್ಯೂಸ್ ಇತ್ಯಾದಿಗಳನ್ನು ಕಡಿಮೆ ನೀಡಬೇಕು. ಸಿಹಿ ತಿಂಡಿಗಳನ್ನು ನೀಡದೆ ಹೋದ್ರೆ ಮತ್ತೂ ಒಳ್ಳೆಯದು. ಒಂದು ವೇಳೆ ಮಗು ಚಾಕೋಲೇಟ್ ಸೇರಿದಂತೆ ಸಿಹಿ ತಿಂಡಿಗಳನ್ನು ತಿನ್ನುತ್ತಿದ್ದರೆ, ತಿಂದಾದ ಮೇಲೆ ಬಾಯಿ ಮುಕ್ಕಳಿಸಿ. ಸಾಧ್ಯವಾದ್ರೆ ಸಿಹಿ ಆಹಾರ ಸೇವನೆ ನಂತ್ರ ಹಲ್ಲುಜ್ಜಿ.
ಅತ್ಯಗತ್ಯ ನೀರು : ವಯಸ್ಕರು ಮಾತ್ರವಲ್ಲ ಮಕ್ಕಳಿಗೂ ಪ್ರತಿದಿನ ಸಾಕಷ್ಟು ನೀರಿನ ಅವಶ್ಯಕತೆಯಿದೆ. ಮಗುವಿನ ಹಲ್ಲುಗಳನ್ನು ಕುಳಿಗಳಿಂದ ರಕ್ಷಿಸಲು ಇದು ಸುಲಭವಾದ ಮಾರ್ಗವಾಗಿದೆ. ನೀರು ಹಾನಿಕಾರಕ ಬ್ಯಾಕ್ಟೀರಿಯಾವನ್ನು ಹೊರಹಾಕುತ್ತದೆ ಮತ್ತು ಹಲ್ಲುಗಳ ಮೇಲೆ ಆಮ್ಲ ರಚನೆಯನ್ನು ತಡೆಯುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.