Health Tips: ಈ ಲಕ್ಷಣ ಕಡೆಗಣಿಸಿದ್ರೆ ಕಿಡ್ನಿ ಕ್ಯಾನ್ಸರ್ ಅಪಾಯ ಹೆಚ್ಚು

Published : Jun 17, 2023, 03:26 PM IST
Health Tips: ಈ ಲಕ್ಷಣ ಕಡೆಗಣಿಸಿದ್ರೆ ಕಿಡ್ನಿ ಕ್ಯಾನ್ಸರ್ ಅಪಾಯ ಹೆಚ್ಚು

ಸಾರಾಂಶ

ಕಿಡ್ನಿ ಕೆಲಸದಲ್ಲಿ ವ್ಯತ್ಯಯವಾದ್ರೆ ಅಪಾಯ ಹೆಚ್ಚು. ಕಿಡ್ನಿ ನಮ್ಮ ದೇಹದ ಪ್ರಮುಖ ಭಾಗಗಳಲ್ಲಿ ಒಂದು. ಕಿಡ್ನಿಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಬಂದ್ರೆ ಅದನ್ನು ನಿರ್ಲಕ್ಷ್ಯ ಮಾಡ್ಬಾರದು. ಅದು ಕ್ಯಾನ್ಸರ್ ಗೆ ತಿರುಗಿದ್ರೆ ಜೀವ ಉಳಿಸಲು ಒದ್ದಾಡಬೇಕು.

ಎಲ್ಲ ವಯೋಮಾನದ ಜನರನ್ನು ಸಾವಿನ ದವಡೆಗೆ ತಳ್ಳುವ ಖಾಯಿಲೆಗಳ ಪೈಕಿ ಕ್ಯಾನ್ಸರ್ ಕೂಡ ಒಂದು. ಪ್ರತಿವರ್ಷವೂ ಲಕ್ಷಗಟ್ಟಲೆ ಜನರು ಕ್ಯಾನ್ಸರ್ ಗೆ ತುತ್ತಾಗಿ ಅಸುನೀಗುತ್ತಿದ್ದಾರೆ. ಪ್ರಾರಂಭಿಕ ಹಂತದಲ್ಲಿ ಇದರ ಲಕ್ಷಣಗಳು ಯಾರಿಗೂ ತಿಳಿಯುವುದಿಲ್ಲ, ಕೆಲವರು ಅಂತಹ ಲಕ್ಷಣಗಳು ಕಂಡುಬಂದಾಗಲೂ ಅದನ್ನು ನಿರ್ಲಕ್ಷಮಾಡುತ್ತಾರೆ. ಅನೇಕ ಕಾರಣದಳಿಂದ ಕ್ಯಾನ್ಸರ್ (Cancer) ಹೆಚ್ಚು ಮಾರಕ ಮತ್ತು ಪ್ರಾಣಹಾನಿ ಮಾಡುವ ಖಾಯಿಲೆಯಾಗಿ ಪರಿಣಮಿಸಿದೆ. ಭಾರತದಲ್ಲಿ ಹೆಚ್ಚಿನ ಪ್ರಕರಣಗಳಲ್ಲಿ ಕ್ಯಾನ್ಸರ್ ಮೂರನೇ ಹಂತಕ್ಕೆ ತಲುಪಿದಾಗಲೇ ಅದನ್ನು ಗುರುತಿಸಲಾಗುತ್ತಿದೆ. ಆ ಹಂತದಲ್ಲಿ ಕ್ಯಾನ್ಸರ್ ಹರಡುವುದನ್ನು ನಿಲ್ಲಿಸುವುದು ಮತ್ತು ರೋಗಿ (Patient) ಯ ಜೀವ ಉಳಿಸುವುದು ಬಹಳ ಕಠಿಣವಾಗಿದೆ ಎಂದು ವೈದ್ಯರು ಹೇಳುತ್ತಾರೆ. ಸ್ತನ, ಕರುಳು, ಅನ್ನನಾಳ, ಶ್ವಾಸಕೋಶ ಮುಂತಾದ ದೇಹದ ಭಾಗಗಳಲ್ಲಿ ಕ್ಯಾನ್ಸರ್ ಉಂಟಾಗುತ್ತದೆ. ಹೀಗೆ ಕ್ಯಾನ್ಸರ್ ಆವರಿಸುವ ಭಾಗಗಳಲ್ಲಿ ಕಿಡ್ನಿ (Kidney) ಕೂಡ ಒಂದು.

Health Tips : ಸದ್ಯ ಈ ಆಹಾರದಿಂದ ದೂರವಿರಿ ಎಂದ ಆರೋಗ್ಯ ಸಚಿವಾಲಯ

ಮೂತ್ರಪಿಂಡದ ಕ್ಯಾನ್ಸರ್ ಹೇಗಾಗುತ್ತೆ? : ಉಳಿದ ಭಾಗದ ಕ್ಯಾನ್ಸರ್ ಗೆ ಹೋಲಿಸಿದರೆ ಕಿಡ್ನಿಯ ಕ್ಯಾನ್ಸರ್ ಅನ್ನು ಬಹಳ ಬೇಗ ಗುರುತಿಸಬಹುದು. ಸಮಯಕ್ಕೆ ಸರಿಯಾಗಿ ಇದರ ಲಕ್ಷಣಗಳನ್ನು ಗುರುತಿಸಿದರೆ ರೋಗದ ಗಂಭೀರತೆಯನ್ನು ತಡೆಗಟ್ಟಬಹುದಾಗಿದೆ. ಮೂತ್ರಪಿಂಡದ ಕ್ಯಾನ್ಸರ್ ಅನ್ನು ಮೂತ್ರಪಿಂಡದ ಕಾರ್ಸಿನೋಮ (ಆರ್ ಸಿ ಸಿ) ಎಂದು ಕೂಡ ಕರೆಯಲಾಗುತ್ತೆ. ಮೂತ್ರಪಿಂಡದಲ್ಲಿ ಅಸಹಜ ಕೋಶಗಳು ಅನಿಯಂತ್ರಿತವಾಗಿ ಬೆಳೆದಾಗ ಅದು ಮೂತ್ರಪಿಂಡದ ಕ್ಯಾನ್ಸರ್ ಗೆ ಕಾರಣವಾಗುತ್ತದೆ. ಚಿಕ್ಕ ಮಕ್ಕಳಲ್ಲಿ ವಿಲ್ಮ್ಸ್ ಟ್ಯೂಮರ್ ಮೂತ್ರಪಿಂಡದ ಕ್ಯಾನ್ಸರ್ ಖಾಯಿಲೆ ಹೆಚ್ಚು ಕಾಣಿಸಿಕೊಳ್ಳುತ್ತದೆ. ಸಾಮಾನ್ಯ ಜನರೂ ಕೂಡ ಅವರಲ್ಲಿ ಉಂಟಾಗುವ ಕೆಲವು ಸಮಸ್ಯೆಗಳ ಆಧಾರದ ಮೇಲೆ ಕಿಡ್ನಿ ಕ್ಯಾನ್ಸರ್ ಅನ್ನು ಸುಲಭವಾಗಿ ಗುರುತಿಸಬಹುದು.

ಮೂತ್ರಪಿಂಡದ ಕ್ಯಾನ್ಸರ್ ನ ಲಕ್ಷಣಗಳು : ಮೂತ್ರಪಿಂಡದ ಕ್ಯಾನ್ಸರ್ ಪ್ರಾರಂಭದ ಹಂತದಲ್ಲಿ ಯಾವ ಲಕ್ಷಣಗಳನ್ನೂ ತೋರಿಸುವುದಿಲ್ಲ. ಕೆಲ ಸಮಯ ಕಳೆದ ನಂತರ ಶರೀರದಲ್ಲಿ ಕೆಲವೊಂದು ತೊಂದರೆಗಳು ಕಾಣಿಸಿಕೊಳ್ಳಲು ಆರಂಭವಾಗುತ್ತೆ. ಅಂತಹ ತೊಂದರೆಗಳನ್ನು ನಿರ್ಲಕ್ಷ ಮಾಡದೇ ಆಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು. ಮೂತ್ರಪಿಂಡದ ಕ್ಯಾನ್ಸರ್ ತೋರಿಸುವ ಕೆಲವು ಲಕ್ಷಣಗಳು ಹೀಗಿವೆ.

Health Tips: ಖಾಲಿ ಹೊಟ್ಟೇಲಿ ಹಸಿ ಮೊಳಕೆ ಕಾಳು ತಿನ್ನುತ್ತಿದ್ರೆ ಇವತ್ತೇ ನಿಲ್ಸಿ!

• ಮೂತ್ರದ ಬಣ್ಣ ಗುಲಾಬಿ ಅಥವಾ ಕೆಂಪು ಬಣ್ಣಕ್ಕೆ ತಿರುಗುವುದು
• ಹಸಿವಿನ ಕೊರತೆ
• ಹಠಾತ್ತನೆ ತೂಕ ಇಳಿಯುವುದು, ಸುಸ್ತು ಮತ್ತು ಜ್ವರ
• ಕಾಲು, ಪಾದಗಳು ಊದಿಕೊಳ್ಳುವುದು
• ಆಗಾಗ ಜ್ವರ ಕಾಣಿಸುವುದು
• ಹೊಟ್ಟೆ ಸುತ್ತ ಅಥವಾ ಕಿಡ್ನಿಯ ಜಾಗದಲ್ಲಿ ಬೊಕ್ಕೆ ಕಾಣಿಸುವುದು

ಮೂತ್ರದ ಬಣ್ಣ ಬದಲಾಗುವುದನ್ನು ಗಮನಿಸಿ :  ದೇಹದಲ್ಲಿ ಕೊಂಚ ಏರುಪೇರಾದರೂ ಮೂತ್ರದ ಬಣ್ಣ ಬದಲಾಗುತ್ತದೆ. ಮೂತ್ರಪಿಂಡದ ಕ್ಯಾನ್ಸರ್ ನಲ್ಲಿಯೂ ಮೂತ್ರದಲ್ಲಿ ಬದಲಾವಣೆಯಾಗುತ್ತದೆ. ಹಾಗೆ ಮೂತ್ರದ ಮೂತ್ರದ ಬಣ್ಣ ಬದಲಾದಾಗ ಅದರ ಕಡೆಗೆ ವಿಶೇಷ ಗಮನವನ್ನು ಕೊಡಬೇಕು. ನಿಮ್ಮ ಮೂತ್ರದಲ್ಲಿ ರಕ್ತ ಹೋಗುತ್ತಿರುವುದು ಕಿಡ್ನಿ ಕ್ಯಾನ್ಸರ್ ನ ಸಂಕೇತವಾಗಿದೆ. ಕೆಲವರಲ್ಲಿ ಮೂತ್ರದ ಬಣ್ಣವು ಕಂದು ಬಣ್ಣದಲ್ಲಿ ಕೂಡ ಬದಲಾಗುತ್ತದೆ.

ಬೆನ್ನು ನೋವು : ಒಂದು ಅಥವಾ ಎರಡು ಕಿಡ್ನಿಯಲ್ಲೂ ಗಡ್ಡೆಯಾಗಿ ಅದು ಬೆಳೆದಾಗ ಬೆನ್ನಿನ ಕೆಳಭಾಗದಲ್ಲಿ ಮತ್ತು ಪಕ್ಕೆಲುಬಿನಲ್ಲಿ ನೋವು ಕಾಣಿಸಿಕೊಂಡರೆ ಅದನ್ನು ಮೂತ್ರಪಿಂಡದ ಕ್ಯಾನ್ಸರ್ ಎಂದು ತಿಳಿಯಬಹುದು. ಇದು ಕೂಡ ಕ್ಯಾನ್ಸರ್ ನ ಒಂದು ಸೂಚನೆಯಾಗಿದೆ. ಆದರೆ ಯಾವಾಗಲೂ ಈ ರೀತಿಯ ನೋವು ಕ್ಯಾನ್ಸರ್ ಆಗಿರುತ್ತದೆ ಎಂದೇನಿಲ್ಲ. ಅಂತಹ ನೋವು ಕಾಣಿಸಿಕೊಂಡಲ್ಲಿ ಒಮ್ಮೆ ವೈದ್ಯರನ್ನು ಭೇಟಿಮಾಡಿ ಸಲಹೆ ಪಡೆಯುವುದು ಒಳ್ಳೆಯದು.

ಮೂತ್ರಪಿಂಡದ ಕ್ಯಾನ್ಸರ್ ಅನ್ನು ಧೂಮಪಾನ ನಿಷೇಧ ಮಾಡುವುದರಿಂದ, ಆರೋಗ್ಯಕರ ಆಹಾರವನ್ನು ಸೇವಿಸುವುದರಿಂದ ಮತ್ತು ತೂಕದ ನಿಯಂತ್ರಣ ಮಾಡುವುದರಿಂದ ತಡೆಗಟ್ಬಹುದು. ಮಧುಮೇಹಿಗಳು ದೇಹದಲ್ಲಿ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುವುದು ಹಾಗೂ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಟ್ಟರೆ ಕಿಡ್ನಿಯ ಕ್ಯಾನ್ಸರ್ ಅನ್ನು ನಿಯಂತ್ರಿಸಬಹುದು.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೆಲ್ಸ ಮಾಡೋವಾಗ ಮಾತ್ರವಲ್ಲ ರಜೆಯಲ್ಲೂ ಕಾಡುತ್ತೆ ಖಿನ್ನತೆ, ಹಾಲಿಡೇ ಡಿಪ್ರೆಷನ್ ಅಂದ್ರೇನು?
Heart Problemಗೆ ಎಲ್ಲರೂ ಹೇಳೋ ಕಾರಣವಲ್ಲವೇ ಅಲ್ಲ, ಪೌಷ್ಟಿಕ ತಜ್ಞರ ಮಹಾವಂಚನೆ ಬಯಲಿಗೆ