ತೂಕ ಇಳಿಸುವ ಕನಸು ಅನೇಕರಿಗೆ ನನಸಾಗೋದೇ ಇಲ್ಲ. ಏನೆಲ್ಲ ಮಾಡಿದ್ರೂ ಬೊಜ್ಜು ಕರಗೋದಿಲ್ಲ. ಇದಕ್ಕೆ ಹೌದು ಎನ್ನುವ ಜನರು ಬ್ಲಾಕ್ ಕಾಫಿ ಟ್ರೈ ಮಾಡ್ಬಹುದು. ವ್ಯಾಯಾಮದ ಜೊತೆ ನಿಯಮಿತವಾಗಿ ಬ್ಲಾಕ್ ಕಾಫಿ ಸೇವನೆ ಮಾಡಿದ್ರೆ ನಿಮ್ಮ ಗುರಿ ಸಾಧಿಸಬಹುದು.
ತೂಕ ಇಳಿಸಿಕೊಳ್ಳಲು ನಾನಾ ಸಾಹಸವನ್ನು ಮಾಡ್ಬೇಕಾಗುತ್ತದೆ. ಜನರು ನಾನಾ ವಿಧಾನಗಳನ್ನು ಅಳವಡಿಸಿಕೊಂಡರೂ ಅನೇಕ ಬಾರಿ ತೂಕ ಇಳಿಯೋದಿಲ್ಲ. ವ್ಯಾಯಾಮ, ಯೋಗ, ರನ್ನಿಂಗ್, ಜಾಗಿಂಗ್, ಜಿಮ್ ಅಂತಾ ಏನೇ ಬೆವರಿಳಿಸಿದ್ರೂ ನಾವು ಸೇವನೆ ಮಾಡುವ ಆಹಾರ ತಪ್ಪಾಗಿದ್ದರೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ತೂಕ ಇಳಿಯಬೇಕೆಂದ್ರೆ ಯಾವೆಲ್ಲ ಆಹಾರವನ್ನು, ಹೇಗೆ ಸೇವನೆ ಮಾಡ್ಬೇಕು ಎಂಬುದು ಜನರಿಗೆ ತಿಳಿದಿರಬೇಕು. ಆಹಾರ ಸೇವನೆ ಮಾಡಲು ಹಾಗೂ ಪಾನೀಯಗಳ ಸೇವನೆಗೆ ಯಾವುದು ಸರಿಯಾದ ಸಮಯ ಎಂಬುದು ಕೂಡ ನಮಗೆ ತಿಳಿದಿರಬೇಕು.
ಬ್ಲಾಕ್ ಕಾಫಿ (Black Coffee) ಕೊಬ್ಬನ್ನು ಸುಡುತ್ತದೆ ಎಂದು ಬಹುತೇಕ ಎಲ್ಲರಿಗೂ ತಿಳಿದಿದೆ. ಬ್ಲಾಕ್ ಕಾಫಿ, ಚಯಾಪಚ ಕ್ರಿಯೆಯನ್ನು ಸುಧಾರಿಸುತ್ತದೆ. ಜೀರ್ಣಕ್ರಿಯೆ (digestion) ಗೂ ಬ್ಲಾಕ್ ಕಾಫಿ ಉತ್ತಮ. ತೂಕ ಇಳಿಸಿಕೊಳ್ಳಲು ಬಯಸುವ ಜನರು ಬ್ಲಾಕ್ ಕಾಫಿಯನ್ನು ಡಯಟ್ ನಲ್ಲಿ ಸೇರಿಸಿಕೊಳ್ಳೋದು ಒಳ್ಳೆಯದು. ಬ್ಲಾಕ್ ಕಾಫಿ ತೂಕ ಕಡಿಮೆ ಮಾಡುತ್ತೆ ಎನ್ನುವ ಕಾರಣಕ್ಕೆ ಪದೇ ಪದೇ ಅದ್ರ ಸೇವನೆ ಒಳ್ಳೆಯದಲ್ಲ. ಸಮಯವಲ್ಲದ ಸಮಯದಲ್ಲಿ ಅದನ್ನು ಕುಡಿದ್ರೂ ಸಮಸ್ಯೆ ಎದುರಾಗುತ್ತದೆ. ತೂಕ ಇಳಿಸಿಕೊಳ್ಳಲು ಬಯಸುವ ಜನರು ಯಾವ ಸಮಯದಲ್ಲಿ ಬ್ಲಾಕ್ ಕಾಫಿ ಕುಡಿಯಬೇಕು ಎಂಬುದನ್ನು ತಿಳಿದಿರಬೇಕು.
undefined
ಡಿಟಾಕ್ಸ್ ಪೇಯ: ಜೇನುತುಪ್ಪ, ನಿಂಬೆ ರಸ, ಬಿಸಿನೀರಿನಿಂದೇನು ಪ್ರಯೋಜನ?
ಕೊಬ್ಬು (Fat) ಕರಗಿಸಿಕೊಳ್ಳಲು ಬ್ಲಾಕ್ ಕಾಫಿಯನ್ನು ಯಾವಾಗ ಸೇವನೆ ಮಾಡ್ಬೇಕು? :
• ಕಾಫಿ ಎಂದಾಕ್ಷಣ ನಾವು ಅದಕ್ಕೆ ಹಾಲು, ಸಕ್ಕರೆ ಬೆರೆಸಿ ಸೇವನೆ ಮಾಡ್ತೇವೆ. ಆದ್ರೆ ತೂಕ ಇಳಿಕೆ ಮಾಡುವವರು ಯಾವುದೇ ಕಾರಣಕ್ಕೂ ಕಾಫಿಗೆ ಹಾಲು ಹಾಗೂ ಸಕ್ಕರೆ ಹಾಕಬಾರದು. ಬರೀ ಕಾಫಿ ಪುಡಿಯನ್ನು ನೀರಿಗೆ ಹಾಕಿ ಕುದಿಸಿ ಕುಡಿಯಬೇಕು.
• ಪ್ರತಿ ದಿನ ನೀವು ಮಿತಿ ಮೀರಿ ಬ್ಲಾಕ್ ಕಾಫಿ ಸೇವನೆ ಮಾಡಬಾರದು. ದಿನಕ್ಕೆ ಹೆಚ್ಚೆಂದ್ರೆ ನಾಲ್ಕು ಕಪ್ ಕಾಫಿಯನ್ನು ಮಾತ್ರ ಕುಡಿಯಬೇಕು.
• ನೀವು ಒಂದು ಕಪ್ ಬ್ಲಾಕ್ ಕಾಫಿ ಸೇವನೆ ಮಾಡ್ತೀರಿ ಎಂದಾದ್ರೆ ಇದನ್ನು ಕುಡಿದ ನಂತ್ರ ಎರಡು ಕಪ್ ನೀರನ್ನು ಸೇವನೆ ಮಾಡ್ಬೇಕು. ಬ್ಲಾಕ್ ಕಾಫಿ ನಿರ್ಜಲೀಕರಣ ಸಮಸ್ಯೆಯುಂಟು ಮಾಡುವ ಕಾರಣ ನೀವು ನೀರು ಸೇವನೆ ಮಾಡೋದು ಮುಖ್ಯವಾಗುತ್ತದೆ.
• ಒಂದು ಕಪ್ ಬ್ಲಾಕ್ ಕಾಫಿ ಸುಮಾರು 17 ರಷ್ಟು ಕ್ಯಾಲೋರಿಯನ್ನು ಬರ್ನ್ ಮಾಡುತ್ತದೆ. ದಿನಕ್ಕೆ ನೀವು ಎರಡು ಕಪ್ ಕಾಫಿ ಸೇವನೆ ಮಾಡಿದ್ರೆ ನಿಮ್ಮ ಚಯಾಪಚಯ ಕ್ರಿಯೆ ಸುಧಾರಿಸುತ್ತದೆ.
Health Tips : ಸದ್ಯ ಈ ಆಹಾರದಿಂದ ದೂರವಿರಿ ಎಂದ ಆರೋಗ್ಯ ಸಚಿವಾಲಯ
• ವ್ಯಾಯಾಮಕ್ಕಿಂತ ಮೊದಲು ನೀವು 300 ಮಿಲಿಗ್ರಾಂ ಕೆಫೀನ್ ಸೇವನೆ ಮಾಡಿದ್ರೆ ವ್ಯಾಯಾಮದ ತೀವ್ರತೆ ಹೆಚ್ಚಾಗುತ್ತದೆ ಎನ್ನುತ್ತಾರೆ ತಜ್ಞರು.
• ನೀವು ಬ್ಲಾಕ್ ಕಾಫಿ ಸೇವನೆ ಮಾಡಿದ ಆರರಿಂದ 7 ಗಂಟೆಗಳ ಕಾಲ ನಿಮ್ಮ ಕೊಬ್ಬು ಕರಗಲು ಸಹಾಯವಾಗುತ್ತದೆ.
• ಬ್ಲಾಕ್ ಕಾಫಿ ಒಳ್ಳೆಯದು ನಿಜ. ಆದ್ರೆ ಎಲ್ಲರಿಗೂ ಆಗಿ ಬರೋದಿಲ್ಲ. ಗ್ಲುಕೋಮಾ, ನಿದ್ರಾಹೀನತೆ, ಮೂಳೆ ಸಮಸ್ಯೆ, ಮೂತ್ರ ಸಮಸ್ಯೆ ಮತ್ತು ಆತಂಕ ಇರುವವರು ಕಾಫಿ ಸೇವನೆ ಮಾಡಬಾರದು.
• ಖಿನ್ನತೆ ಸಮಸ್ಯೆ ಇರುವವರು ಕಾಫಿ ಸೇವನೆ ಮಾಡಬಹುದು.
• ಪಿತ್ತ ಜನಕಾಂಗದಲ್ಲಿ ಸಮಸ್ಯೆಯಿದ್ರೆ ನೀವು ಬ್ಲಾಕ್ ಕಾಫಿ ಸೇವನೆ ಮಾಡಬಹುದು.
• ಬ್ಲಾಕ್ ಕಾಫಿಯನ್ನು ನೀವು ಮಲಗುವ 6 ಗಂಟೆ ಮೊದಲು ಸೇವನೆ ಮಾಡಬೇಕು. ಇದ್ರ ನಂತ್ರ ನೀವು ಸೇವನೆ ಮಾಡಿದ್ರೆ ನಿದ್ರೆ ಸಮಸ್ಯೆ ನಿಮ್ಮನ್ನು ಕಾಡುತ್ತದೆ.
• ಪ್ರತಿ ದಿನ ಕಾಫಿಯನ್ನು ನೀವು ಸೇವನೆ ಮಾಡ್ತಾ ಬಂದ್ರೆ ನಿಮ್ಮ ತೂಕದಲ್ಲಿ ಇಳಿಕೆ ಕಾಣಬಹುದು.