ಜೆಎನ್‌.1 ವೈರಸ್ ಹಾವಳಿ ಹೆಚ್ಚಳ, 1000 ಗಡಿ ದಾಟಿದ ಸೋಂಕಿತರ ಸಂಖ್ಯೆ; ದೇಶದಲ್ಲೇ ಕರ್ನಾಟಕ ನಂ.1

By Kannadaprabha News  |  First Published Jan 13, 2024, 9:20 AM IST

ದೇಶದಲ್ಲಿ ಕೋವಿಡ್‌ ರೂಪಾಂತರಿ ತಳಿಯ ಜೆಎನ್‌.1 ಸೋಂಕಿನ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿದೆ. ಇದೀಗ ಸೋಂಕಿನ ಸಂಖ್ಯೆ 1,000ದ ಗಡಿ ದಾಟಿ ಒಟ್ಟು 1013 ಜೆಎನ್‌.1 ಪ್ರಕರಣಗಳು ದಾಖಲಾಗಿವೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.


ನವದೆಹಲಿ: ದೇಶದಲ್ಲಿ ಕೋವಿಡ್‌ ರೂಪಾಂತರಿ ತಳಿಯ ಜೆಎನ್‌.1 ಸೋಂಕಿನ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿದ್ದು, ಇದೀಗ ಸೋಂಕಿನ ಸಂಖ್ಯೆ 1,000ದ ಗಡಿ ದಾಟಿ ಒಟ್ಟು 1013 ಜೆಎನ್‌.1 ಪ್ರಕರಣಗಳು ದಾಖಲಾಗಿವೆ. ಒಟ್ಟು 16 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಜೆಎನ್‌.1 ಸೋಂಕು ಕಾಣಿಸಿಕೊಂಡಿದ್ದು, ಈ ಪೈಕಿ ದೇಶದಲ್ಲೇ ಕರ್ನಾಟಕದಲ್ಲಿ ಅತಿ ಹೆಚ್ಚು, 214 ಪ್ರಕರಣಗಳು ವರದಿಯಾಗಿವೆ. ಉಳಿದಂತೆ 170 ಪ್ರಕರಣಗಳ ಮೂಲಕ ಮಹಾರಾಷ್ಟ್ರ 2ನೇ ಸ್ಥಾನದಲ್ಲಿದೆ.

ಬಳಿಕ ಆಂಧ್ರ ಪ್ರದೇಶದಲ್ಲಿ 189, ಕೇರಳದಲ್ಲಿ 154, ಗುಜರಾತ್‌ನಲ್ಲಿ 76, ಗೋವಾದಲ್ಲಿ 66, ತೆಲಂಗಾಣ ಮತ್ತು ರಾಜಸ್ಥಾನಗಳಲ್ಲಿ ತಲಾ 32, ಛತ್ತೀಸ್‌ಗಢದಲ್ಲಿ 25, ತಮಿಳು ನಾಡಿನಲ್ಲಿ 22, ದೆಹಲಿಯಲ್ಲಿ 16 ಉತ್ತರ ಪ್ರದೇಶದಲ್ಲಿ 6, ಹರ್‍ಯಾಣದಲ್ಲಿ 5, ಒಡಿಶಾದಲ್ಲಿ 3, ಪಶ್ಚಿಮ ಬಂಗಾಳದಲ್ಲಿ 2 ಮತ್ತು ಉತ್ತರಾಖಂಡ್‌ನಲ್ಲಿ 1 ಪ್ರಕರಣ ಪತ್ತೆಯಾಗಿವೆ. ಈ ನಡುವೆ ಕೋವಿಡ್ ಮತ್ತು ಜೆಎನ್‌.1 ರೂಪಾಂತರಿ ಕುರಿತು ಜಾಗರೂಕರಾಗಿರುವಂತೆ ಕೇಂದ್ರ ಸರ್ಕಾರ ಸೂಚಿಸಿದೆ.

Latest Videos

undefined

ಕರ್ನಾಟಕದಲ್ಲಿ ಮತ್ತೆ 175 ಮಂದಿಗೆ ಜೆಎನ್‌.1 ಕೋವಿಡ್‌ ಸೋಂಕು..!

609 ಕೋವಿಡ್‌ ಕೇಸು, 3 ಸಾವು:
ಇನ್ನು ದೇಶದಲ್ಲಿ ಶುಕ್ರವಾರ ಮುಂಜಾನೆ 8 ಗಂಟೆಗೆ ಮುಕ್ತಾಯವಾದ 24 ಗಂಟೆಗಳ ಅವಧಿಯಲ್ಲಿ ಒಟ್ಟು 609 ಪ್ರಕರಣಗಳು ದಾಖಲಾಗಿವೆ. ಇದೇ ವೇಳೆ ಕೇರಳದಲ್ಲಿ 2 ಮತ್ತು ಕರ್ನಾಟಕದಲ್ಲಿ 1 ಸೇರಿ ಒಟ್ಟು 3 ಸೋಂಕಿತರು ಸಾವನ್ನಪ್ಪಿದ್ದಾರೆ. ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 3,368ಕ್ಕೆ ಇಳಿಕೆಯಾಗಿದೆ. ಚೇತರಿಕೆಯ ಪ್ರಮಾಣವು 98.81ರಷ್ಟು ದಾಖಲಾಗಿದೆ. ಈವರೆಗೆ ಒಟ್ಟು 220.67 ಕೋಟಿ ಡೋಸ್‌ ಕೋವಿಡ್‌ ಲಸಿಕೆಗಳ ವಿತರಣೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

click me!