Smoking ಮಾಡೋರ ಹತ್ರ ಹೋದರೂ dangerous, ಹುಷಾರು

Published : Aug 08, 2025, 07:25 PM IST
Is vaping more harmful than smoking

ಸಾರಾಂಶ

ಧೂಮಪಾನದ ಹಾನಿ ನೇರವಾಗಿ ಸೇವಿಸುವವರಿಗೆ ಮಾತ್ರವಲ್ಲ, ಸುತ್ತಮುತ್ತಲಿನವರಿಗೂ ತಟ್ಟುತ್ತದೆ. ಪರೋಕ್ಷ ಧೂಮಪಾನದಿಂದ ಕ್ಯಾನ್ಸರ್ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳ ಅಪಾಯ ಹೆಚ್ಚುತ್ತದೆ. ಇದರಿಂದ ರಕ್ಷಿಸಿಕೊಳ್ಳುವ ಮಾರ್ಗಗಳನ್ನು ತಿಳಿಯಿರಿ.

ಧೂಮಪಾನ ಮಾಡುವುದು ಹಾನಿಕಾರಕ ಎಂದು ಎಷ್ಟೇ ಹೇಳಿದರೂ, ಎಚ್ಚರಿಕೆ ಮೂಡಿಸಿದರೂ ಕೆಲವರಿಗೆ ಅದು ನಾಟುವುದಿಲ್ಲ. ತಮ್ಮ ಅಭ್ಯಾಸವನ್ನ ಮುಂದುವರೆಸುತ್ತಾರೆ. ಆದರೆ ಅವರು ಸಿಗರೇಟ್‌ ಸೇಯುವುದು ಅವರಿಗೆಷ್ಟು ಹಾನಿಕಾರಕವೋ, ಅವರ ಜೊತೆ ಅವರ ಸುತ್ತ ಮುತ್ತ ಇರುವವರಿಗೂ ಸಹ ಹಾನಿಕಾರಕವಾಗಿದೆ.ಧೂಮಪಾನ ಮತ್ತು ತಂಬಾಕು ಸೇವನೆ ಜೀವಕ್ಕೆ ಅಪಾಯಕಾರಿಯೆಂಬುದು ಎಲ್ಲರಿಗೂ ತಿಳಿದ ಸಂಗತಿ. ಆದರೂ ಹಲವರು ಅದನ್ನು ಮುಂದುವರಿಸುತ್ತಾರೆ. ಧೂಮಪಾನದಿಂದ ಕ್ಯಾನ್ಸರ್‌ ಬರುವ ಅಪಾಯ ಇರುವುದನ್ನು ನಾವು ತಿಳಿದಿದ್ದೇವೆ. ಈ ಅಪಾಯ ಪಕ್ಕದಲ್ಲಿರುವವರಿಗೂ ತಗುಲುತ್ತದೆ. ಇದನ್ನು ‘ಪ್ಯಾಸಿವ್ ಸ್ಮೋಕಿಂಗ್’ ಎಂದು ಕರೆಯಲಾಗುತ್ತದೆ. ಇಂತಹ ಪ್ಯಾಸಿವ್ ಸ್ಮೋಕಿಂಗ್‌ನಿಂದ ಯಾವ ಯಾವ ಆರೋಗ್ಯ ಸಮಸ್ಯೆಗಳು ಎದುರಾಗಬಹುದು ಎಂಬುದನ್ನು ತಿಳಿದುಕೊಳ್ಳೋಣ.

ಧೂಮಪಾನ ಮತ್ತು ತಂಬಾಕು ಸೇವನೆ ಮಾಡುವವರಲ್ಲಿ ಶ್ವಾಸಕೋಶ ಕ್ಯಾನ್ಸರ್, ಹೃದಯ ಸಂಬಂಧಿ ಸಮಸ್ಯೆಗಳು ಸೇರಿದಂತೆ ಅನೇಕ ಗಂಭೀರ ಆರೋಗ್ಯ ತೊಂದರೆಗಳು ಸಾಮಾನ್ಯವಾಗಿವೆ. ಇದೇ ರೀತಿಯಾಗಿ, ಪ್ಯಾಸಿವ್ ಸ್ಮೋಕಿಂಗ್ (Passive Smoking) — ಅಂದರೆ ಧೂಮಪಾನ ಮಾಡುವವರ ಹತ್ತಿರ ಇರುವವರಿಗೂ — ಶ್ವಾಸಕೋಶ ಕ್ಯಾನ್ಸರ್ ಅಪಾಯ ಹೆಚ್ಚಿರುತ್ತದೆ. ಧೂಮಪಾನಿಗಳ ಸುತ್ತಲಿನ ವಾತಾವರಣದಲ್ಲಿರುವವರಿಗೂ ಆರೋಗ್ಯ ಸಮಸ್ಯೆಗಳ ಸಂಭವ ಹೆಚ್ಚು. ಇದು ವಯಸ್ಕರಲ್ಲಿ, ನೇರವಾಗಿ ಧೂಮಪಾನ ಅಥವಾ ತಂಬಾಕು ಸೇವಿಸದಿದ್ದರೂ, ಕೇವಲ ಧೂಮಪಾನಿಗಳ ಹತ್ತಿರ ಇದ್ದು ಆ ಹೊಗೆಯನ್ನು ಉಸಿರಾಡುವುದರಿಂದ ಶ್ವಾಸಕೋಶ ಕ್ಯಾನ್ಸರ್‌ ತಗುಲುವ ಸಾಧ್ಯತೆ 20-30% ಹೆಚ್ಚಾಗುತ್ತದೆ. ಆದ್ದರಿಂದ, ಧೂಮಪಾನಿಗಳ ಹತ್ತಿರ ನಿಲ್ಲುವುದೇ ಆರೋಗ್ಯಕ್ಕೆ ಹಾನಿಕಾರಕ. ನೇರವಾಗಿ ಸಿಗರೇಟ್ ಅಥವಾ ತಂಬಾಕು ಸೇವಿಸುವವರಲ್ಲಿ ಹೃದಯರೋಗ, ಶ್ವಾಸಕೋಶ ತೊಂದರೆ, ಮಧುಮೇಹ (ಡಯಾಬಿಟಿಸ್) ಮುಂತಾದ ಸಮಸ್ಯೆಗಳ ಅಪಾಯ ಎಷ್ಟಿದೆಯೋ, ಪರೋಕ್ಷವಾಗಿ ಹೊಗೆಯನ್ನು ಉಸಿರಾಡುವವರಲ್ಲಿಯೂ ಆಷ್ಟೇ ಪ್ರಮಾಣದಲ್ಲಿ ಈ ಸಮಸ್ಯೆಗಳ ಅಪಾಯ ಇರುತ್ತದೆ ಎಂದು ವರದಿಗಳು ಹೇಳುತ್ತವೆ.

ಧೂಮಪಾನ ಮಾಡದವರಲ್ಲೂ ಆರೋಗ್ಯ ಸಮಸ್ಯೆ ಸೆಕೆಂಡ್ ಹ್ಯಾಂಡ್ ಸ್ಮೋಕ್ ಅಥವಾ ಪ್ಯಾಸಿವ್ ಸ್ಮೋಕ್ ಎಂಬುದು ಮನೆಗಳಲ್ಲೂ ಹಾಗೂ ಅನೇಕ ಸಾರ್ವಜನಿಕ ಸ್ಥಳಗಳಲ್ಲೂ ಸಾಮಾನ್ಯವಾಗಿ ಕಂಡುಬರುವ ಗಂಭೀರ ಸಮಸ್ಯೆ. ಮತ್ತೊಬ್ಬರು ಧೂಮಪಾನ ಮಾಡಿ ಹೊರಬಿಡುವ ಹೊಗೆಯನ್ನು ಸುತ್ತಲಿರುವವರು ಉಸಿರಾಡಿದರೂ ಆರೋಗ್ಯ ಸಮಸ್ಯೆಗೆ ಗುರಿಯಾಗುವ ಅಪಾಯ ಇದೆ. ಬಸ್ ಸ್ಟ್ಯಾಂಡ್, ರೈಲ್ವೇ ಸ್ಟೇಷನ್, ರೆಸ್ಟೋರೆಂಟ್‌ಗಳಲ್ಲಿ ಧೂಮಪಾನ ಮಾಡುವವರೂ, ಮಾಡದವರೂ ಇದ್ದರೂ, ಒಬ್ಬ ವ್ಯಕ್ತಿ ಧೂಮಪಾನ ಮಾಡಿದರೆ ಆ ಹೊಗೆಯನ್ನು ಅನೇಕರು ಪರೋಕ್ಷವಾಗಿ ಉಸಿರಾಡುವ ಸಾಧ್ಯತೆ ಹೆಚ್ಚು. ಕೆಲವರು ಸ್ಮೋಕ್ ತಂಬಾಕುಗಳನ್ನ ಸೇವಿಸುತ್ತಿರುವುದಿಲ್ಲ ಆರೊಗ್ಯಕ ಜೀವನ ಪದ್ದತಿಯನ್ನ ಅಳವಡಿಸಿಕೊಂಡಿರುತ್ತಾರೆ. ಆದರೂ ಕೂಡ ಅವರು ಕ್ಯಾನ್ಸ್‌ರ್‌ , ಅಥವಾ ಹೃದಯ ಸಂಬಂಧಿ ಕಾಯಿಲೆಗಳಿಗೆ ತುತ್ತಾಗುತ್ತಾರೆ ಕಾರಣ ಪ್ಯಾಸಿವ್ ಸ್ಮೋಕ್ ಗಳಿಂದ.

ಇದೇ ರೀತಿಯಲ್ಲಿ ಮನೆಯಲ್ಲಿ ಧೂಮಪಾನ ಅಥವಾ ತಂಬಾಕು ಸೇವನೆ ಮಾಡುವವರಿದ್ದರೆ, ಮಕ್ಕಳು, ವೃದ್ಧರ ಜೊತೆಗೆ ಸಾಕುಪ್ರಾಣಿಗಳೂ ಸಹ ಪ್ಯಾಸಿವ್ ಸ್ಮೋಕಿಂಗ್‌ನ ಬಲಿಯಾಗುವಂತಹ ಸಾಧ್ಯತೆಗಳು ಇರುತ್ತದೆ. ಹೀಗಾಗಿ, ಪ್ಯಾಸಿವ್ ಸ್ಮೋಕಿಂಗ್ ಆರೋಗ್ಯಕ್ಕೆ ತೀವ್ರ ಹಾನಿಕಾರಕ.ಸಿಗರೇಟ್‌ನಲ್ಲಿ ಸುಮಾರು 7,000 ರಾಸಾಯನಿಕ ಪದಾರ್ಥಗಳು ಇರುತ್ತವೆ, ಅದರಲ್ಲಿ 70 ಕ್ಕೂ ಹೆಚ್ಚು ಕ್ಯಾನ್ಸರ್‌ಕಾರಕ ಅಂಶಗಳು ಸೇರಿವೆ. ಇದರಿಂದ ವಯಸ್ಕರು ಮತ್ತು ಮಕ್ಕಳಲ್ಲಿ ಶ್ವಾಸಕೋಶದ ಸೋಂಕು, ಅಸ್ತಮಾ, ಕಿವಿ ಸಂಬಂಧಿ ತೊಂದರೆಗಳಂತಹ ಅನೇಕ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಪ್ಯಾಸಿವ್‌ ಸ್ಮೋಕಿಂಗ್‌ಗೆ ಗುರಿಯಾದಷ್ಟು ಕ್ಯಾನ್ಸರ್ ಅಪಾಯ ಹೆಚ್ಚು. ಹಾಗೇ ಬೇರೆ ಬೇರೆ ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆ ಇರುತ್ತದೆ.

ಎಷ್ಟು ಪ್ರಮಾಣದ ಪ್ಯಾಸಿವ್ ಸ್ಮೋಕಿಂಗ್ ಕ್ಯಾನ್ಸರ್ ಬರುತ್ತದೆ? ಎಂಬ ಪ್ರಶ್ನೆಗೆ ನಿಖರ ಉತ್ತರ ನೀಡಲು ಸಾಧ್ಯವಿಲ್ಲ. ಆದರೆ, ಪ್ಯಾಸಿವ್ ಸ್ಮೋಕಿಂಗ್‌ಗೆ ಎಷ್ಟು ಹೆಚ್ಚು ಗುರಿಯಾಗುತ್ತೇವೋ, ಅಷ್ಟು ಆರೋಗ್ಯ ಸಮಸ್ಯೆಗಳ ಅಪಾಯವೂ ಹೆಚ್ಚುತ್ತದೆ. ಇದರಿಂದ ಡಯಾಬಿಟಿಸ್, ಶ್ವಾಸಕೋಶ ಸಂಬಂಧಿ ತೊಂದರೆಗಳು, ಪಾರ್ಶ್ವವಾಯು ಮುಂತಾದ ಸಮಸ್ಯೆಗಳ ಸಂಭವವು ಶೇಕಡಾ 30 ರಷ್ಟು ಹೆಚ್ಚಾಗಿರುತ್ತದೆ. ಇದಲ್ಲದೆ ಗಂಟಲು ಕ್ಯಾನ್ಸರ್, ಸ್ತನ ಕ್ಯಾನ್ಸರ್ ಅಪಾಯವೂ ಏರಿಕೆಯಾಗುತ್ತದೆ. ಗರ್ಭಿಣಿಯರು, ಮಕ್ಕಳು, ವೃದ್ಧರಿಗೆ ಇದು ಪರಿಣಾಮ ಬೀರುತ್ತದೆ. ಅವರಲ್ಲಿ ಆರೋಗ್ಯ ಸಮಸ್ಯೆಗಳು ಸುಲಭವಾಗಿ ಕಾಣಿಸಿಕೊಳ್ಳಬಹುದು. ವಿಶೇಷವಾಗಿ ಗರ್ಭಿಣಿಯರು ಈ ಹೊಗೆಯನ್ನು ಉಸಿರಾಡಿದರೆ, ಗರ್ಭದಲ್ಲಿರುವ ಶಿಶುವಿಗೆ ತೊಂದರೆ ಆಗಿ ಕಡಿಮೆ ತೂಕ, ಶ್ವಾಸಕೋಶದ ಸೋಂಕು ಮೊದಲಾದ ಸಮಸ್ಯೆಗಳ ಅಪಾಯ ಹೆಚ್ಚುತ್ತದೆ.

ಪ್ಯಾಸಿವ್ ಸ್ಮೋಕಿಂಗ್ ತಡೆಗಟ್ಟುವ ಮಾರ್ಗಗಳು

ಪ್ಯಾಸಿವ್ ಸ್ಮೋಕಿಂಗ್‌ನಿಂದ ದೂರ ಇರಲು ಮತ್ತು ಅದರ ಹಾನಿಯನ್ನು ತಪ್ಪಿಸಲು ಕೆಲವು ಕ್ರಮಗಳನ್ನು ಅನುಸರಿಸುವುದು ಅಗತ್ಯ:

ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧ: ಬಸ್ ಸ್ಟ್ಯಾಂಡ್, ರೈಲ್ವೇ ಸ್ಟೇಷನ್, ರೆಸ್ಟೋರೆಂಟ್, ಪಾರ್ಕ್ ಮುಂತಾದ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಅಥವಾ ತಂಬಾಕು ಸೇವನೆ ಮಾಡಬಾರದು ಎಂಬ ಅರಿವು ಮೂಡಿಸಬೇಕು.

ಪ್ಯಾಸಿವ್ ಸ್ಮೋಕಿಂಗ್ ಬಗ್ಗೆ ಜಾಗೃತೆ ಮೂಡಿಸುವುದು: ಮಕ್ಕಳು, ಗರ್ಭಿಣಿಯರು, ವೃದ್ಧರು ಮತ್ತು ಈಗಾಗಲೇ ಆರೋಗ್ಯ ಸಮಸ್ಯೆ ಹೊಂದಿರುವವರ ಸುತ್ತಮುತ್ತ ಧೂಮಪಾನ ಮಾಡುವುದು ಸಂಪೂರ್ಣ ತಪ್ಪಿಸಬೇಕು. ಮತ್ತು ಅವರಲ್ಲಿ ಎಚ್ಚರಿಕೆಯನ್ನ ಮೂಡಿಸಬೇಕು.

ಕೆಲಸದ ಸ್ಥಳದಲ್ಲಿ ಕಠಿಣ ನಿಯಮಗಳ ಜಾರಿ : ಕಚೇರಿ, ಕಾರ್ಖಾನೆ ಸೇರಿದಂತೆ ಎಲ್ಲಾ ಕೆಲಸದ ಸ್ಥಳಗಳಲ್ಲಿ ಧೂಮಪಾನವನ್ನು ಸಂಪೂರ್ಣ ನಿಷೇಧಿಸಬೇಕು.

ಕಾನೂನು ಜಾರಿ — ಧೂಮಪಾನ ನಿಷೇಧ ಕುರಿತ ಕಾನೂನುಗಳನ್ನು ಕಡ್ಡಾಯವಾಗಿ ಜಾರಿಗೊಳಿಸಿ, ಉಲ್ಲಂಘಿಸಿದವರಿಗೆ ದಂಡ ವಿಧಿಸಬೇಕು.

ಈ ರೀತಿಯ ಕೆಲವು ನಿಯಮಗಳನ್ನ ಅಳವಡಿಸಿಕೊಳ್ಳುವುದರಿಂದ ಪ್ಯಾಸಿವ್ ಸ್ಮೋಕಿಂಗ್ ತಡೆಗಟ್ಟಬಹುದು.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಚಳಿಗಾಲದಲ್ಲಿ ಡಯಾಬಿಟಿಸ್ ರೋಗಿಗಳು ಈ ಸಣ್ಣ ಬಿರುಕನ್ನ ನಿರ್ಲಕ್ಷಿಸಿದರೂ ಕಾಲನ್ನೇ ಕತ್ತರಿಸಬೇಕಾಗಬಹುದು!
ಆರೋಗ್ಯಕರ ತುಳಸಿ ಅಗೆದು ತಿಂದ್ರೆ ಅಪಾಯ, ಧರ್ಮ- ಆಯುರ್ವೇದ ಹೇಳೋದೇನು?