Home Remedies: ಕೋಲ್ಡ್ ಡ್ರಿಂಕ್ಸ್ ಕುಡಿದ್ರೆ ಕಾಡುವ ಗಂಟಲು ನೋವಿಗೆ ಹೇಳಿ ಬೈ ಬೈ

Suvarna News   | Asianet News
Published : Mar 23, 2022, 06:53 PM IST
Home Remedies: ಕೋಲ್ಡ್ ಡ್ರಿಂಕ್ಸ್ ಕುಡಿದ್ರೆ ಕಾಡುವ ಗಂಟಲು ನೋವಿಗೆ ಹೇಳಿ ಬೈ ಬೈ

ಸಾರಾಂಶ

ಕಣ್ಣಿಗೆ ಕಾಣದ, ಅನುಭವಿಸಲಾಗದ ನೋವುಗಳಲ್ಲಿ ಗಂಟಲು ನೋವು (Itchy Throat) ಕೂಡ ಒಂದು. ಗಂಟಲಿನ ವಿಪರೀತ ಉರಿಗೆ ಕೆಲವೊಮ್ಮೆ ಜ್ವರ (Fever) ಬರುತ್ತದೆ. ನಿಮಗೂ ಗಂಟಲಿನಲ್ಲಿ ಉರಿ,ತುರಿಕೆ ಕಾಣಿಸಿಕೊಂಡರೆ ಅಡುಗೆ ಮನೆ (Kitchen)ಯಲ್ಲಿರುವ ಪದಾರ್ಥಗಳ ನೆರವು ಪಡೆಯಿರಿ. 

ಋತು (Season) ಬದಲಾದಂತೆ ಆಸ್ಪತ್ರೆ (Hospital) ಗಳಲ್ಲಿ ರೋಗಿ (Patient) ಗಳ ಸಂಖ್ಯೆ ಹೆಚ್ಚಾಗುತ್ತದೆ. ಕೆಲವು ಜನರಿಗೆ ಗಂಟಲಿ (Throat) ನಲ್ಲಿ ಉರಿ, ನೋವು, ತುರಿಕೆ ಶುರುವಾಗುತ್ತದೆ. ಗಂಟಲಿನಿಂದ ಎಂಜಲು ನುಂಗುವುದೂ ಕಷ್ಟವಾಗುತ್ತದೆ. ಗಂಟಲಿನಲ್ಲಿ ಚುಚ್ಚಿದ ಅನುಭವವಾಗುತ್ತದೆ. ಅನೇಕರು ವಾತವಾರಣ ಬದಲಾದಂತೆ ಗಂಟಲಿನ ಸಮಸ್ಯೆ ಎದುರಿಸುತ್ತಾರೆ. ಗಂಟಲಿನ ನೋವು ಜ್ವರ, ಅಲರ್ಜಿ, ವೈರಲ್ ಅಥವಾ ಬ್ಯಾಕ್ಟೀರಿಯಾದ ಸೋಂಕಿನ ಆರಂಭಿಕ ಚಿಹ್ನೆಗಳಾಗಿರಬಹುದು.

ಬೇಸಿಗೆಯಲ್ಲಿ ತಣ್ಣನೆಯ ಆಹಾರ, ಕೋಲ್ಡ್ ಡ್ರಿಂಕ್ಸ್,ಉಪ್ಪಿನಕಾಯಿ ಸೇರಿದಂತೆ ಕೆಲ ಆಹಾರ ಸೇವನೆ ಮಾಡುವುದ್ರಿಂದಲೂ ಗಂಟಲಿನಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಬಹುತೇಕ ಗಂಟಲು ನೋವಿಗೆ ಮನೆಯಲ್ಲಿಯೇ ಮದ್ದಿದೆ. ವೈದ್ಯರ ಬಳಿ ಹೋಗದೆ ಮನೆ ಮದ್ದಿನಲ್ಲಿಯೇ ಈ ಸಮಸ್ಯೆಯನ್ನು ಕಡಿಮೆ ಮಾಡಿಕೊಳ್ಳಬಹುದು. ನೀವೂ ಗಂಟಲು ನೋವು, ಉರಿಯಿಂದ ಬಳಲುತ್ತಿದ್ದರೆ ಕೆಲ ಮನೆ ಮದ್ದಿ (Home Remedies)ನ ಮೂಲಕ ಪರಿಹಾರ ಕಂಡುಕೊಳ್ಳಿ. 

ಗಂಟಲು ನೋವಿಗೆ ಸಾಮಾನ್ಯ ಕಾರಣಗಳು
ಆಹಾರ ಅಲರ್ಜಿಯಿಂದಾಗಿ ಕೆಲ ಬಾರಿ ಗಂಟಲಿನಲ್ಲಿ ಉರಿ ಕಾಣಿಸಿಕೊಳ್ಳುತ್ತದೆ. ಔಷಧಿ ಅಲರ್ಜಿ ಹಾಗೂ ಔಷಧಿಗಳ ಅಡ್ಡ ಪರಿಣಾಮಗಳಿಂದಾಗಿ ಅನೇಕ ಬಾರಿ ಗಂಟಲು ನೋವಿಗೆ ಕಾರಣವಾಗುತ್ತದೆ. ಬ್ಯಾಕ್ಟೀರಿಯಾ ಅಥವಾ ವೈರಲ್ ಸೋಂಕಿನಿಂದ ಗಂಟಲು ಉರಿ ಕಾಣಿಸಿಕೊಳ್ಳುತ್ತದೆ. ನಿರ್ಜಲೀಕರಣ ಮತ್ತು ಆಮ್ಲೀಯ ಆಹಾರಗಳು ನಿಮ್ಮ ಗಂಟಲನ್ನು ಹಾಳು ಮಾಡ್ಬಹುದು. ಬದಲಾದ ಋತುವಿನಲ್ಲಿ ತಪ್ಪಾದ ಆಹಾರ ಸೇವನೆ ಹಾಗೂ ತಂಪು ಪಾನೀಯಗಳ ಅತಿಯಾದ ಸೇವನೆ ಕೂಡ ಗಂಟಲು ನೋವು,ಉರಿ,ಕಿರಿಕಿರಿಗೆ ಕಾರಣವಾಗಿರುತ್ತದೆ. 

ಬರೀ ಗಂಟಲು ನೋವು ಮಾತ್ರ ಕಾಣಿಸಿಕೊಳ್ಳುವುದಿಲ್ಲ. ಅದ್ರ ಜೊತೆಯಲ್ಲಿ ನೆಗಡಿ, ಕಟ್ಟಿದ ಮೂಗು,ಸೈನಸ್,ಕಣ್ಣುಗಳು ಮತ್ತು ಚರ್ಮದಲ್ಲಿ ತುರಿಕೆ, ಆಯಾಸ, ಕಣ್ಣುಗಳು ಊದಿಕೊಳ್ಳುವುದು, ಕಣ್ಣು ಕೆಂಪಾಗುವುದು, ಕಣ್ಣಿನಲ್ಲಿ ನೀರು ಬರುವುದು ಸೇರಿದಂತೆ ಕೆಲ ಸಮಸ್ಯೆ ಕೂಡ ಕಾಡುತ್ತದೆ. 

ಗಂಟಲು ನೋವಿಗೆ ಮನೆ ಮದ್ದು  

ಉಪ್ಪು: ಗಂಟಲು ನೋವಿರುವವರಿಗೆ ಉಪ್ಪು (Salt) ಒಳ್ಳೆಯ ಮದ್ದು. ಒಂದು ಲೋಟ ಬೆಚ್ಚಗಿನ ನೀರನ್ನು ತೆಗೆದುಕೊಳ್ಳಿ. ಅದಕ್ಕೆ ಒಂದು ಅರ್ಧ ಚಮಚ ಉಪ್ಪನ್ನು ಹಾಕಿ. ಒಂದು ಸಿಪ್ ನೀರನ್ನು ಬಾಯಿಗೆ ಹಾಕಿ ಗಾರ್ಗಲ್ ಮಾಡಿ. ನಂತ್ರ ಆ ನೀರನ್ನು ಹೊರಗೆ ಹಾಕಿ. ಹೀಗೆ ಮೂರ್ನಾಲ್ಕು ಬಾರಿ ಮಾಡಿ. ದಿನಕ್ಕೆ ಮೂರ್ನಾಲ್ಕು ಬಾರಿ ಹೀಗೆ ಮಾಡಿದ್ರೆ ಒಂದೆರಡು ದಿನಗಳಲ್ಲಿ ನಿಮ್ಮ ಗಂಟಲಿನ ಸಮಸ್ಯೆ ಕಡಿಮೆಯಾಗುತ್ತದೆ.

ಗಂಡಸರಿಗೆ ಗರುಡಾಸನದ ಲಾಭ ಹೆಚ್ಚು

ಜೇನು ತುಪ್ಪ: ಜೇನುತುಪ್ಪ (Honey) ಕೂಡ ಗಂಟಲು ನೋವಿಗೆ ಒಳ್ಳೆಯ ಪರಿಹಾರ ನೀಡುತ್ತದೆ. ಗಂಟಲು ನೋವಿರುವವರು ವಿಶೇಷವಾಗಿ ಏನೂ ಮಾಡ್ಬೇಕಾಗಿಲ್ಲ. ಬೆಳಿಗ್ಗೆ ಎದ್ದ ತಕ್ಷಣ ಒಂದು ಚಮಚ ಜೇನು ತುಪ್ಪವನ್ನು ಸೇವನೆ ಮಾಡ್ಬೇಕು. ಕೆಲವರಿಗೆ ಜೇನು ತುಪ್ಪವನ್ನು ಹಾಗೆ ಸೇವನೆ ಮಾಡುವುದು ಇಷ್ಟವಾಗುವುದಿಲ್ಲ. ಅಂಥವರು ಬೆಚ್ಚಗಿನ ನೀರಿಗೆ ಒಂದು ಚಮಚ ಜೇನು ತುಪ್ಪ ಬೆರೆಸಿ ಸೇವನೆ ಮಾಡ್ಬೇಕು. ಜೇನು ತುಪ್ಪದ ಶುದ್ಧತೆ ಬಗ್ಗೆ ಪರೀಕ್ಷಿಸಿಕೊಳ್ಳಿ. ಮಾರುಕಟ್ಟೆಯಲ್ಲಿ ಸಿಗುವ ಎಲ್ಲ ಜೇನು ತುಪ್ಪಗಳು ನೈಸರ್ಗಿಕವಾಗಿರುವುದಿಲ್ಲ. ಅದಕ್ಕೆ ಕೆಲ ರಾಸಾಯನಿಕಗಳನ್ನು ಬೆರೆಸಲಾಗುತ್ತದೆ. ಅದು ಆರೋಗ್ಯವನ್ನು ಹಾಳು ಮಾಡುತ್ತದೆ.

ಶುಂಠಿ: ಶುಂಠಿ (Ginger) ಉಷ್ಣತೆ ಗುಣವನ್ನು ಹೊಂದಿದೆ. ಹಾಗಾಗಿ ಹೆಚ್ಚು ಉಷ್ಣತೆಯಿರುವವರು ಇದನ್ನು ಕಡಿಮೆ ಪ್ರಮಾಣದಲ್ಲಿ ಸೇವನೆ ಮಾಡ್ಬೇಕು. ಒಂದು ಶುಂಠಿ ಫೀಸ್ ತೆಗೆದುಕೊಂಡು ಅದನ್ನು ಜಜ್ಜಿ ಒಂದು ಗ್ಲಾಸ್ ನೀರಿಗೆ ಹಾಕಿ ಅದನ್ನು ಚೆನ್ನಾಗಿ ಕುದಿಸಿ. ಆ ನೀರನ್ನು ಕುಡಿಯುವುದ್ರಿಂದ ಗಂಟಲು ನೋವು ಗುಣವಾಗುತ್ತದೆ. 

ನೀರಿನಲ್ಲಿದ್ದರೆ bleeding ನಿಲ್ಲುವುದೇ?

ಅರಿಶಿನ: ಅರಿಶಿನ (Turmeric) ಉರಿಯೂತ, ಮತ್ತು ಉತ್ಕರ್ಷಣ ನಿರೋಧಕ ಗುಣಲಕ್ಷಣಗಳನ್ನು ಹೊಂದಿದೆ. ಒಂದು ಗ್ಲಾಸ್ ಬಿಸಿ ಹಾಲಿಗೆ ಒಂದು ಚಿಟಕಿ ಅರಿಶಿನ ಬೆರೆಸಿ ಕುಡಿಯುವುದ್ರಿಂದ ಗಂಟಲು ಉರಿ ಸಮಸ್ಯೆಯಿಂದ ನೆಮ್ಮದಿ ಪಡೆಯಬಹುದು. 

ಲವಂಗ: ಲವಂಗ ಕೂಡ ಒಳ್ಳೆಯದು. ಲವಂಗವನ್ನು ಹಾಗೆ ಜಗಿದು ತಿನ್ನಬಹುದು. ಇಲ್ಲವಾದ್ರೆ ಒಂದು ಗ್ಲಾಸ್ ನೀರಿಗೆ ಮೂರ್ನಾಲ್ಕು ಲವಂಗ ಹಾಕಿ ಕುದಿಸಿ ನೀರು ಆರಿದ ಮೇಲೆ ಕುಡಿಯಿರಿ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಆಲೂಗಡ್ಡೆಗೆ ಮೊಳಕೆ ಬಂದರೆ ತಿನ್ನಬಹುದಾ? ತಜ್ಞರ ಎಚ್ಚರಿಕೆ ಏನು, ಯಾವುದು- ಯಾರಿಗೆ ಅಪಾಯ?
ರಾತ್ರಿ ವೇಳೆ ಅಪ್ಪಿತಪ್ಪಿಯೂ ತಿನ್ನಬಾರದ ಹಣ್ಣುಗಳು ಇವು: ತಜ್ಞರು ಹೇಳೋದೇನು?