
ಇಂದು ಎಲ್ಲಕ್ಕಿಂತ ಹೆಲ್ತ್ ತುಂಬಾ ಮುಖ್ಯ. ಅದಕ್ಕಾಗಿಯೇ ಪ್ರತಿಯೊಬ್ಬರು ಬೆಳಗ್ಗೆ ವರ್ಕೌಟ್ ಮಾಡಿದ ಬಳಿಕ ಆ ದಿನದ ಕೆಲಸಗಳು ಶುರು ಮಾಡ್ತಾರೆ. ಹೆಚ್ಚಾಗಿ ಇಂದಿನ ಯುವಕರು ಬೆಳಗ್ಗೆ ಎದ್ದ ತಕ್ಷಣವೇ ಖಾಲಿ ಹೊಟ್ಟೆಯಲ್ಲಿ ವರ್ಕ್ಔಟ್ ಮಾಡ್ತಾರೆ. ಹಾಗೇ ಮಾಡುವುದೇ ಸರಿಯಾದ ವಿಧಾನ ಎಂದೂ ನಂಬಿದ್ದಾರೆ. ನಿಜವಾಗಲೂ ಬೆಳಗ್ಗೆ ಖಾಲಿ ಹೊಟ್ಟೇಲಿ ವರ್ಕ್ಔಟ್ ಮಾಡುವುದು ಸರಿಯೇ? ಇಲ್ಲಿ ತಿಳಿಯೋಣ. ನೀವು ಕೂಡ ಖಾಲಿ ಹೊಟ್ಟೆಯಲ್ಲಿ ವರ್ಕೌಟ್ ಮಾಡುವವರಾಗಿದ್ದಾರೆ ನಿಮಗಿದು ಸೂಕ್ತ ಲೇಖನ. ಮುಂದೆ ಓದಿ.
ಬೆಳಗಿನ ಸಮಯ ಏನೂ ತಿನ್ನದೆ ಖಾಲಿ ಹೊಟ್ಟೆಯಲ್ಲಿ ವರ್ಕ್ಔಟ್ ಮಾಡೋದ್ರಿಂದ ತಲೆಸುತ್ತು, ವಾಕರಿಕೆ ಅಥವಾ ಅಥವಾ ಪ್ರಜ್ಞೆ ತಪ್ಪೋ ಸಾಧ್ಯತೆ ಹೆಚ್ಚಾಗಿರುತ್ತೆ. ಏಕೆಂದರೆ ರಾತ್ರಿ ಊಟದ ಬಳಿಕ ಬೆಳಗಿನವರೆಗೆ ಅಂದರೆ 8 ರಿಂದ 10 ಗಂಟೆಗಳ ಕಾಲ ಏನೂ ತಿಂದಿರೋದಿಲ್ಲ. ಹೀಗಾಗಿ ನಾವು ಬೆಳಗ್ಗೆ ಏಳುವಾಗ, ನಮ್ಮ ಲಿವರ್‌ನಲ್ಲಿ ಸಂಗ್ರಹವಾಗಿರುವ ಗ್ಲೈಕೋಜೆನ್ (ಸಂಗ್ರಹವಾದ ಕಾರ್ಬೋಹೈಡ್ರೇಟ್) ಮಟ್ಟ ಗಣನೀಯವಾಗಿ ಕಡಿಮೆ ಆಗಿರುತ್ತೆ. ಇನ್ಸುಲಿನ್ ಮಟ್ಟ ಕೂಡಾ ತುಂಬಾನೇ ಕೆಳಗಿಳಿದಿರುತ್ತೆ. ಈ ಸಮಯದಲ್ಲಿ ದೇಹಕ್ಕೆ ಶಕ್ತಿ ಬೇಕಾದಾಗ, ನಮ್ಮ ಮೆಟಬಾಲಿಸಂ ಸಂಗ್ರಹವಾದ ಕೊಬ್ಬಿನ ಆಮ್ಲಗಳನ್ನು (fatty acids) ಬಳಸಿಕೊಂಡು ಶಕ್ತಿಯನ್ನು ಉತ್ಪಾದಿಸಲು ಶುರುಮಾಡುತ್ತೆ.
ಈ ಬಗ್ಗೆ ಸಾಕೇತ್‌ನ ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಆರ್ತ್ರೋಸ್ಕೊಪಿ ಮತ್ತು ಸ್ಪೋರ್ಟ್ಸ್ ಮೆಡಿಸಿನ್ ವಿಭಾಗದ ಹಿರಿಯ ಸಲಹೆಗಾರರಾದ ಡಾ. ಪುಷ್ಪೀಂದರ್ ಸಿಂಗ್ ಬಜಾಜ್ ಅವರು ವಿವರಿಸಿದ್ದಾರೆ. ವೈದ್ಯರು ಹೇಳುವಂತೆ, ಖಾಲಿ ಹೊಟ್ಟೆಯಲ್ಲಿ ವರ್ಕ್ಔಟ್ ಮಾಡೋದ್ರಿಂದ ಏನಾಗುತ್ತೆ ಅಂದ್ರೆ, ಹೇಳಿಕೇಳಿ ವರ್ಕ್ಔಟ್ ಅಥವಾ ಜಿಮ್ ಮಾಡೋದು ಒಂದು ಅತ್ಯಂತ ಶ್ರಮ, ಶಕ್ತಿ ಬೇಡುವ ವ್ಯಾಯಮ. ಅದರಲ್ಲಿ high-intensity exercise ಮಾಡಿದರೆ, ನಿಮ್ಮ ಪವರ್ ಔಟ್‌ಪುಟ್ ಕಡಿಮೆಯಾಗಬಹುದು. ಅಷ್ಟೇ ಅಲ್ಲ, ಸ್ನಾಯುಗಳು ಬೇಗನೆ ದಣಿಯುತ್ತವೆ ಮತ್ತು ಗಾಯಗಳಾಗುವ ಅಪಾಯವೂ ಹೆಚ್ಚಾಗುತ್ತದೆ ಎಂದು ಎಚ್ಚರಿಸುತ್ತಾರೆ.
ಖಾಲಿ ಹೊಟ್ಟೆಯಲ್ಲಿ ವ್ಯಾಯಾಮ ಮಾಡುವುದರಿಂದ ಕಾರ್ಟಿಸೋಲ್ ಮಟ್ಟ ದಿಢೀರ್ ಅಂತಾ ಹೆಚ್ಚಾಗುತ್ತೆ. ಈಗಾಗಲೇ ದೀರ್ಘಕಾಲದ ಮಾನಸಿಕ ಒತ್ತಡ, ನಿದ್ರಾಹೀನತೆ ಮತ್ತು ಥೈರಾಯ್ಡ್ ಅಸಮತೋಲನದಿಂದ ಬಳಲುತ್ತಿರುವವರಲ್ಲಿ ಈ ಹೆಚ್ಚುವರಿ ಒತ್ತಡವು ನಿರಂತರ ಆಯಾಸಕ್ಕೆ ಕಾರಣವಾಗಬಹುದು.
ಇನ್ನೊಂದು ಮುಖ್ಯ ವಿಚಾರ ಅಂದ್ರೆ, ರಕ್ತದಲ್ಲಿ ಸಕ್ಕರೆ ಅಂಶ ಕಡಿಮೆ ಇದ್ದಾಗ ವ್ಯಾಯಾಮ ಮಾಡಿದ್ರೆ ತಲೆಸುತ್ತು, ವಾಕರಿಕೆ ಅಥವಾ ಪ್ರಜ್ಞೆ ತಪ್ಪುವ ಸಾಧ್ಯತೆ ಇರುತ್ತೆ. ಒಂದು ವೇಳೆ ನೀವು ಬೆಳಗ್ಗೆ ಎದ್ದ ತಕ್ಷಣವೇ ವ್ಯಾಯಾಮ ಮಾಡಬೇಕು ಅಂತ ಅಂದುಕೊಂಡಿದ್ದರೆ, ತುಂಬಾನೇ ಹಗುರವಾದ ವ್ಯಾಯಾಮಗಳನ್ನು ಮಾಡುವುದು ಉತ್ತಮ. ವ್ಯಾಯಾಮಕ್ಕೆ 30 ರಿಂದ 45 ನಿಮಿಷಗಳ ಮೊದಲು ಕಾರ್ಬೋಹೈಡ್ರೇಟ್ ಇರುವಂತಹ ಲಘು ಉಪಾಹಾರ ಸೇವಿಸಿದರೆ, ದೇಹಕ್ಕೆ ಬೇಕಾದ ಶಕ್ತಿ ಸಿಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.