Spicy Food : ಹಾಲುಣಿಸುವ ತಾಯಿ ಮಸಾಲೆ ಪದಾರ್ಥ ಸೇವನೆ ಮಾಡಿದ್ರೆ ಮಗು ಏನಾಗುತ್ತೆ ಗೊತ್ತಾ?

By Suvarna NewsFirst Published Dec 29, 2021, 10:50 AM IST
Highlights

ಈ ಆಹಾರ ತಿನ್ಬೇಡ,ಆ ಆಹಾರ ಮುಟ್ಟಬೇಡ,ನೀವು ಬಾಣಂತಿ. ಹೀಗಂತ ಅಜ್ಜಿಯಂದಿರು ಹೇಳ್ತಿರುತ್ತಾರೆ. ಈಗಿನ ದಿನಗಳಲ್ಲಿ ಹಿರಿಯರ ಮಾತಿಗೆ ಬೆಲೆಯಿಲ್ಲ ಬಿಡಿ. ಏನಾಗಲ್ಲ ಅಂತಾ ಎಲ್ಲ ಆಹಾರವನ್ನು ಹಾಲುಣಿಸುವ ತಾಯಿ ತಿನ್ನುತ್ತಾಳೆ. ನವಜಾತ ಶಿಶುವಿನ ತಾಯಿಯಾಗಿದ್ದು,ನಾಲಿಗೆಗೆ ಬಿಸಿ ಮುಟ್ಟಿಸುವ ಮಸಾಲೆ ಆಹಾರ ತಿನ್ನುತ್ತಿದ್ರೆ ಈ ಸುದ್ದಿ ಓದಿ.
 

ಹೆರಿಗೆ (Delivery )ಪ್ರತಿಯೊಬ್ಬ ಮಹಿಳೆಯ ಪುನರ್ಜನ್ಮ. ತಾಯಿ (Mother)ಯಾಗುವ ಬಯಕೆ ಎಲ್ಲ ಮಹಿಳೆಯರಿಗೆ ಇರುತ್ತದೆ. ಗರ್ಭ ಧರಿಸಿದ ನಂತ್ರ ಮಹಿಳೆ ದೇಹದಲ್ಲಿ ಅನೇಕ ಬದಲಾವಣೆಗಳು ಆಗುತ್ತವೆ. ಹೆರಿಗೆ ನಂತ್ರ ಮಹಿಳೆ ಹೆಚ್ಚು ಕಾಳಜಿವಹಿಸಬೇಕಾಗುತ್ತದೆ. ತನ್ನ ಆರೋಗ್ಯದ ಜೊತೆ ಮಗುವಿನ ಆರೋಗ್ಯ ರಕ್ಷಣೆ ಇಲ್ಲಿ ಮುಖ್ಯವಾಗುತ್ತದೆ. ನವಜಾತ ಶಿಶುವನ್ನು ನೋಡಿಕೊಳ್ಳುವುದು ಹೇಳಿದಷ್ಟು ಸುಲಭವಲ್ಲ. ಮಗುವಿಗೆ ಪೌಷ್ಠಿಕಾಂಶ ನೀಡುವುದು ಮುಖ್ಯವಾಗುತ್ತದೆ. ಸ್ತನ್ಯಪಾನ (Breastfeeding)ವು ಮಗುವಿಗೆ ಅನೇಕ ಪೋಷಕಾಂಶಗಳನ್ನು ನೀಡುತ್ತದೆ.  ಸ್ತನ್ಯಪಾನ ಮಾಡುವುದ್ರಿಂದ ತಾಯಿ ಆರೋಗ್ಯವೂ ಸುಧಾರಿಸುತ್ತದೆ. ಜನನದ ನಂತರದ ಮೊದಲ 6 ತಿಂಗಳು ಮಗುವಿಗೆ ತಾಯಿಯ ಹಾಲನ್ನು ಅವಶ್ಯಕವಾಗಿ ನೀಡಬೇಕು. ಇದು ಮಗುವಿನ ಪೌಷ್ಟಿಕಾಂಶದ ಏಕೈಕ ಮೂಲವಾಗಿರುತ್ತದೆ. ತಾಯಿ ಏನೇ ತಿಂದರೂ ಮಗುವಿಗೆ ಅದು, ಎದೆಹಾಲಿನ ಮೂಲಕ ಸಿಗುತ್ತದೆ. ಇದೇ ಕಾರಣಕ್ಕೆ ಹಾಲುಣಿಸುವ ಮಹಿಳೆ ತಾನು ಸೇವನೆ ಮಾಡುವ ಆಹಾರದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ತಣ್ಣನೆ ನೀರು ಸೇವನೆಯಿಂದ ಮಗುವಿಗೆ   ಆಹಾರದಿಂದ ದೂರವಿರುವುದು ಒಳ್ಳೆಯದು.

ಎದೆ ಹಾಲಿನ ಬಗ್ಗೆ ಸಾಕಷ್ಟು ಅಧ್ಯಯನ ನಡೆದಿದೆ. ಹೊಸ ಅಧ್ಯಯನದಲ್ಲಿ, ಹಾಲುಣಿಸುವ ತಾಯಿ ಮಸಾಲೆಯುಕ್ತ ಆಹಾರವನ್ನು ಸೇವಿಸಿದಾಗ, ಅದರ ಕೆಲವು ಅಂಶಗಳು ಹಾಲಿಗೆ ಸೇರುತ್ತವೆ ಎಂಬುದು ಬಹಿರಂಗವಾಗಿದೆ. ಹಾಲುಣಿಸುವ ತಾಯಿ ನೀವಾಗಿದ್ದರೆ ಮೆಣಸಿನಕಾಯಿ (Chilli) ಸೇವನೆಯಿಂದ ಏನೆಲ್ಲ ಆಗುತ್ತದೆ ಎಂಬ ವಿವರ ಇಲ್ಲಿದೆ. ಮೆಣಸಿನಕಾಯಿಯನ್ನು ತಿಂದ ನಂತರ ಅದರ ಮಸಾಲೆಯುಕ್ತ (Spicy) ಅಂಶಗಳು ತಾಯಿಯ ಹಾಲಿಗೆ ಸೇರುತ್ತವೆ ಎಂದು  ಮ್ಯೂನಿಚ್ ತಾಂತ್ರಿಕ ವಿಶ್ವವಿದ್ಯಾಲಯ ನಡೆಸಿದ ಅಧ್ಯಯನ (Study)ದ ವರದಿಯಲ್ಲಿ ಹೇಳಲಾಗಿದೆ.  

Japan Couple: ಇಲ್ಲಿ ಪತಿಗೊಂದು ಹಾಸಿಗೆ, ಪತ್ನಿಗೊಂದು ಹಾಸಿಗೆ ಬೇಕು.. ಯಾಕೆ ಗೊತ್ತಾ?

ಅಧ್ಯಯನದಲ್ಲಿ ಏನಿದೆ ? : ಹಾಲುಣಿಸುವ ತಾಯಂದಿರು ಮೆಣಸಿನಕಾಯಿಯನ್ನು ತಿಂದಾಗ ಅವರ ಎದೆ ಹಾಲಿನಲ್ಲಿ ಮೆಣಸಿನಕಾಯಿಯ ಪೈಪರಿನ್ ಅಂಶ ಸೇರುತ್ತದೆ. ಪೈಪರಿನ್ ಮೆಣಸಿನಕಾಯಿಗೆ ಕಟುವಾದ ರುಚಿಯನ್ನು ನೀಡುತ್ತದೆ.
ಹಾಲುಣಿಸುವ ತಾಯಿ ಮೆಣಸಿನಕಾಯಿ ತಿಂದಾಗ ಎದೆ ಹಾಲಿನ ರುಚಿ ಬದಲಾಗುತ್ತದೆ. ಇದು ಮಗುವಿನ ಮೇಲೆ ಪರಿಣಾಮ ಬೀರುತ್ತದೆ. ಮಗುವಿನ ಟೇಸ್ಟ್ ಬಡ್ಸ್ ಮೇಲೆ ಪರಿಣಾಮ ಬೀರುತ್ತದೆ. ಮಗು ದೊಡ್ಡದಾದ ಮಸಾಲೆಯುಕ್ತ ಆಹಾರವನ್ನು ಹೆಚ್ಚು ಇಷ್ಟಪಡುತ್ತಾರೆ.ರುಚಿರುಚಿ ಆಹಾರ ಸೇವನೆ ಮಾಡುವ ತಿಂಡಿಪೋತನಾಗ್ತಾನೆ ಎಂದು ಅಧ್ಯಯನ ಹೇಳಿದೆ.

ಬೆಳ್ಳುಳ್ಳಿ ಮತ್ತು ಕಾಫಿ : ಎದೆ ಹಾಲಿನ ಮೇಲೆ ಬೆಳ್ಳುಳ್ಳಿ ಮತ್ತು ಕಾಫಿ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದನ್ನು ಅಧ್ಯಯನ ನಡೆಸಲಾಗಿದೆ. ಇದು ಕೂಡ ಎದೆ ಹಾಲಿನ ವಾಸನೆ ಮೇಲೆ ಪರಿಣಾಮ ಬೀರುತ್ತದೆ ಎಂಬುದು ಗೊತ್ತಾಗಿದೆ. ಈ ಹಿಂದೆ, ಮೆಣಸಿನಕಾಯಿ, ಶುಂಠಿ ಎದೆ ಹಾಲಿನ ಮೇಲೆ ಯಾವ ಪರಿಣಾಮದ ಬೀರಲಿದೆ ಎಂಬ ಬಗ್ಗೆ ಹೆಚ್ಚಿನ ಅಧ್ಯಯನ ಆಗಿರಲಿಲ್ಲ. 

Hot Food : ಚಳಿಗಾಲದಲ್ಲಿ ಬಿಸಿ ಆಹಾರ ಸೇವಿಸೋದು ಒಳ್ಳೇಯದಲ್ಲ!

ರೋಗನಿರೋಧಕ ಶಕ್ತಿ : ಈ ಅಧ್ಯಯನದ ಸಂಶೋಧಕ ರೋಮನ್ ಲಾಂಗ್, ಹಾಲಿನಲ್ಲಿ ಮೆಣಸಿನಕಾಯಿಯ ರುಚಿ ಹೆಚ್ಚು ಇರಲಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದಿದ್ದಾರೆ. ಮಗುವಿಗೆ ಅದರ ಬಗ್ಗೆ ಹೆಚ್ಚು ತಿಳಿದಿರುವುದಿಲ್ಲ. ಎದೆ ಹಾಲು ಸೇರುವ ಮೆಣಸಿನ ಸ್ವಲ್ಪ ಪ್ರಮಾಣ ,ಮಗುವಿನ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ ಎಂದಿದ್ದಾರೆ. ಮೆಣಸಿನಕಾಯಿ ಆಹಾರವನ್ನು ಸೇವಿಸಿದ ಹಲವಾರು ಗಂಟೆಗಳ ನಂತರವೂ ಎದೆ ಹಾಲಿನಲ್ಲಿ ಪೈಪರಿನ್ ಇತ್ತು ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.

ಕಾಳಜಿ ವಹಿಸಿ : ಹಾಲುಣಿಸುವ ಸಮಯದಲ್ಲಿ ಮಸಾಲೆಯುಕ್ತ ಆಹಾರವನ್ನು ಸೇವಿಸಬಾರದು ಎಂದು ಸಂಶೋಧನೆ ಹೇಳಿಲ್ಲ. ಅದರ ಪ್ರಮಾಣದ ಬಗ್ಗೆ ಕಾಳಜಿ ವಹಿಸಬೇಕು. ಏಕೆಂದರೆ ಹೆಚ್ಚಿನ ಪ್ರಮಾಣದಲ್ಲಿ ಯಾವುದೇ ಆಹಾರ ಸೇವನೆ ಮಾಡಿದರೂ ಅದು ಹಾನಿಯುಂಟು ಮಾಡುತ್ತದೆ. ಹಾಗಾಗಿ ಹಾಲುಣಿಸುವ ತಾಯಿ ಕಡಿಮೆ ಮಸಾಲೆಯುಕ್ತ ಆಹಾರ ಸೇವನೆ ಮಾಡುವುದು ಒಳ್ಳೆಯದು. 
 

click me!