ಈ ಬಾರಿ ಸದ್ಗುರು ಜೊತೆ ಅಂತರಾಷ್ಟ್ರೀಯ ಯೋಗ ದಿನ ಆಚರಿಸಿ

By Suvarna News  |  First Published Jun 19, 2023, 5:21 PM IST

ಅಂತಾರಾಷ್ಟ್ರೀಯ ಯೋಗ ದಿನದಂದು, ಉಚಿತ ಮಾರ್ಗದರ್ಶಿತ ಯೋಗ ಕಾರ್ಯಕ್ರಮಗಳನ್ನು ಈಶ ಫೌಂಡೇಶನ್ ಸಂಸ್ಥೆಯು - ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ನೀಡುತ್ತಿದೆ. ಯಾವುದೇ ಪೂರ್ವ ಯೋಗದ ಅನುಭವವಿಲ್ಲದೆಯೇ ಎಲ್ಲರೂ ಇದನ್ನು ಬಳಸಿಕೊಳ್ಳಬಹುದು. 


ಅಂತಾರಾಷ್ಟ್ರೀಯ ಯೋಗ ದಿನವಾದ ಜೂನ್ 21ರಂದು ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿರುವ ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ (ಯುನೆಸ್ಕೋ) ಪ್ರಧಾನ ಕಛೇರಿಯಲ್ಲಿ ವಿಶೇಷ ಯೋಗ ದಿನದ ಕಾರ್ಯಕ್ರಮವನ್ನು ಉದ್ದೇಶಿಸಿ ಸದ್ಗುರುಗಳು ಮಾತನಾಡಲಿದ್ದಾರೆ. ಈ ಕಾರ್ಯಕ್ರಮವು 'ಕ್ರಾಫ್ಟಿಂಗ್ ಎ ಕಾನ್ಷಿಯಸ್ ಪ್ಲಾನೆಟ್(ಒಂದು ಪ್ರಜ್ಞಾವಂತ ಪ್ರಪಂಚದ ರಚನೆ)' ಎಂಬ ವಿಷಯದ ಕುರಿತು ಸದ್ಗುರುಗಳ ಒಳನೋಟಗಳನ್ನು ಒಳಗೊಂಡಿರುತ್ತದೆ. ನಂತರ ಸದ್ಗುರುಗಳ ಮಾರ್ಗದರ್ಶನದಲ್ಲಿ ಧ್ಯಾನ ಮತ್ತು ಯೋಗದ ಕಾರ್ಯಕ್ರಮಗಳೂ ಇರುತ್ತದೆ. ವಿವಿಧ ದೇಶಗಳ ರಾಯಭಾರಿಗಳು, UNESCO ಗೆ ಭಾರತದ ಖಾಯಂ ನಿಯೋಗದ ಗಣ್ಯರು, UNESCO ಸಿಬ್ಬಂದಿ, ಫ್ಯಾಷನ್, ಸಂಗೀತ ಮತ್ತು ವ್ಯಾಪಾರ ಪ್ರಪಂಚದ ಜಾಗತಿಕ ನಾಯಕರು ಮತ್ತು ಸಾರ್ವಜನಿಕರನ್ನು ಒಳಗೊಂಡ ಸುಮಾರು 1300 ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮವನ್ನು ಕನ್ನಡ, ಹಿಂದಿ, ಸೇರಿದಂತೆ 14 ಭಾಷೆಗಳಲ್ಲಿ ಲೈವ್‌ಸ್ಟ್ರೀಮ್ ಮಾಡಲಾಗುತ್ತದೆ ಮತ್ತು ಪ್ರಪಂಚದಾದ್ಯಂತದ ಇತರ ಭಾರತೀಯ ಮತ್ತು ಜಾಗತಿಕ ಭಾಷೆಗಳಲ್ಲಿ ಯಾರಾದರೂ ಲೈವ್‌ಸ್ಟ್ರೀಮ್‌ಗೆ ಸೇರಬಹುದು. ಸಮಯ: ಭಾರತೀಯ ಕಾಲಮಾನ ಸಂಜೆ 6:30 ಕ್ಕೆ.

ಈ ದಿನದಂದು ಉಚಿತ ಮಾರ್ಗದರ್ಶಿತ ಯೋಗ ಕಾರ್ಯಕ್ರಮಗಳನ್ನು ಈಶ ಫೌಂಡೇಶನ್ ಸಂಸ್ಥೆಯು - ಆನ್‌ಲೈನ್ ಮತ್ತು ಆಫ್‌ಲೈನ್ (ಖುದ್ದಾಗಿ) ನೀಡುತ್ತಿದೆ. ಯಾವುದೇ ಪೂರ್ವ ಯೋಗದ ಅನುಭವವಿಲ್ಲದೆಯೇ ಎಲ್ಲರೂ ಇದನ್ನು ಬಳಸಿಕೊಳ್ಳಬಹುದು. 

Tap to resize

Latest Videos

ಸದ್ಗುರುಗಳೊಂದಿಗೆ ಅಂತರಾಷ್ಟ್ರೀಯ ಯೋಗ ದಿನವನ್ನು ಆಚರಿಸಲು ಮಾರ್ಗದರ್ಶಿತ ಧ್ಯಾನ, ಯೋಗ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮತ್ತು 'ಒಂದು ಪ್ರಜ್ಞಾವಂತ ಪ್ರಪಂಚ'ದ ರಚನೆಯ ಭಾಗವಾಗಿ. ಅಂತಾರಾಷ್ಟ್ರೀಯ ಯೋಗ ದಿನದಂದು ಎಲ್ಲರೂ ತಮ್ಮ ಸ್ಥಳದಿಂದಲೇ ನೇರಪ್ರಸಾರದಲ್ಲಿ ಸೇರುವ ಮೂಲಕ ಅದರ ಭಾಗವಾಗಬಹುದು.

ನೇರ ಪ್ರಸಾರಕ್ಕೆ: https://www.youtube.com/watch?v=81J_pa88Mi4\

ಕರಾಗ್ರೇ ವಸತೇ.. ಬೆಳಗ್ಗೆ ಎದ್ದು ಕೈ ನೋಡಿಕೊಳ್ಳೋದು ಏಕೆ?

ಯೋಗ ದಿನದ ವಿಶೇಷ ಕಾರ್ಯಕ್ರಮವನ್ನು ಯುನೆಸ್ಕೋ, ಆಯುಷ್ ಸಚಿವಾಲಯ ಮತ್ತು UNESCO ಗೆ ಭಾರತದ ಖಾಯಂ ನಿಯೋಗವು ಜಂಟಿಯಾಗಿ ಪ್ರಸ್ತುತಪಡಿಸುತ್ತಿದೆ. ಇದು ಯುನೆಸ್ಕೋದ ಮಹಾನಿರ್ದೇಶಕ ಆಡ್ರೆ ಅಝೌಲೆ ಅವರ ಸಂಬೋಧನೆಯನ್ನೂ ಒಳಗೊಂಡಿರುತ್ತದೆ.

ಯೋಗ ಕೇವಲ ವ್ಯಾಯಾಮವಲ್ಲ
ಯೋಗದ ನಿಜವಾದ ಸಾರಸತ್ವದ ಕುರಿತು ಮಾತನಾಡುತ್ತಾ ಸದ್ಗುರುಗಳು ಹೇಳುತ್ತಾರೆ, 'ಯಾರಾದರೂ "ಯೋಗ" ಎಂಬ ಪದವನ್ನು ಉಚ್ಚರಿಸಿದರೆ, ಜನರು ಅಸಾಧ್ಯವಾದ ದೈಹಿಕ ಭಂಗಿಗಳ ಬಗ್ಗೆ ಯೋಚಿಸುತ್ತಾರೆ. ಇದು ಯೋಗ ಎಂದರೇನು ಎಂಬುದಕ್ಕೆ ಬಹಳ ಸೀಮಿತ ಕಲ್ಪನೆಯಾಗಿದೆ. ಯೋಗವು ನಿಮ್ಮ ದೇಹವನ್ನು ಬಗ್ಗಿಸುವುದು ಮತ್ತು ತಿರುಚುವುದು ಅಥವಾ ನಿಮ್ಮ ಉಸಿರನ್ನು ಹಿಡಿದಿಟ್ಟುಕೊಳ್ಳುವುದರ ಬಗ್ಗೆ ಅಲ್ಲ. ಯೋಗ ಒಂದು ತಂತ್ರಜ್ಞಾನ. ನೀವು ಅದನ್ನು ಬಳಸಲು ಕಲಿತರೆ, ಅದು ಪರಿಣಾಮ ತೋರಿಸುತ್ತದೆ.'

https://www.instagram.com/p/Ctduh3fOoTX/ 

ಅಂತರಾಷ್ಟ್ರೀಯ ಯೋಗ ದಿನಾಚರಣೆಗೆ ಸಿದ್ಧರಾಗಿ..
ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ, ಉಚಿತ ಆನ್‌ಲೈನ್ ಯೋಗ ಸೆಷನ್‌ಗಳನ್ನು ಈಶ ಫೌಂಡೇಶನ್ ಸಂಸ್ಥೆಯು ಜೂನ್ ತಿಂಗಳು ಪೂರ್ತಿ ನಡೆಸುತ್ತದೆ. ಇದರ ಮೂಲಕ ಯಾವುದೇ ಪೂರ್ವ ಯೋಗದ ಅನುಭವವಿಲ್ಲದ ಯಾರಾದರೂ 45 ನಿಮಿಷಗಳ ಮಾರ್ಗದರ್ಶಿತ ಯೊಗ ಸೆಷನ್‌ಗಳಿಗೆ ಸೇರಬಹುದು ಮತ್ತು ತಮ್ಮ ಯೋಗ ಪ್ರಯಾಣವನ್ನು ಪ್ರಾರಂಭಿಸಬಹುದು. ನಂತರದಲ್ಲೂ ನಿರಂತರ ಯೋಗ ಬೆಂಬಲವನ್ನು ಪಡೆಯಲು, 12 ಭಾಷೆಗಳಲ್ಲಿ ಲಭ್ಯವಿರುವ 'ಸದ್ಗುರು ಆ್ಯಪ್‌' ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಸದ್ಗುರುಗಳ ವೀಡಿಯೊಗಳು, ಉಚಿತ ಮಾರ್ಗದರ್ಶಿತ ಧ್ಯಾನಗಳು ಮತ್ತು ಯೋಗಾಭ್ಯಾಸಗಳನ್ನು ಕಲಿಯಬಹುದು. ಭಾರತ ಮತ್ತು ಪ್ರಪಂಚದಾದ್ಯಂತ ಕಾರ್ಪೊರೇಟ್ ಸಂಸ್ಥೆಗಳು, ವೈದ್ಯಕೀಯ ಸಂಸ್ಥೆಗಳು, ಶಾಲೆಗಳು ಮತ್ತು ಕಾಲೇಜುಗಳಲ್ಲಿ ಯೋಗ ಅಧಿವೇಶನಗಳನ್ನು ಆಯೋಜಿಸಲಾಗಿದೆ.

https://www.instagram.com/p/CtJH8kTu2O8/  
https://www.instagram.com/p/CtRsJ2UpXYG/ 

Health Tips: ತೂಕವನ್ನಷ್ಟೇ ಇಳಿಸ್ಕೊಳಿ, ದೇಹದ ಎನರ್ಜಿ ಮಟ್ಟವನ್ನಲ್ಲ, ಹೇಗಪ್ಪಾ ಅದು?

ಯೋಗ ವೀರರಾಗುವ ಅವಕಾಶ
ಈಶ ಫೌಂಡೇಶನ್ ಸಂಸ್ಥೆಯು ಸಾರ್ವಜನಿಕರಿಗಾಗಿ, 'ಯೋಗ ವೀರ'ರಾಗಲು ಅವಕಾಶವನ್ನು ತೆರೆದಿದೆ. 'ಯೋಗ ವೀರ' ಎಂದರೆ ತಮ್ಮ ಸಂಸ್ಥೆಗಳು, ನೆರೆಹೊರೆಗಳು, ಸ್ನೇಹಿತರು ಮತ್ತು ಕುಟುಂಬಗಳಿಗೆ ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ಸರಳ ಯೋಗ ಅಭ್ಯಾಸಗಳನ್ನು ನೀಡಲು ತರಬೇತಿ ಪಡೆಯಲು ಸಿದ್ಧರಿರುವ ಸ್ವಯಂಸೇವಕರು. ಯೋಗ ವೀರರಾಗಲು ಯಾವುದೇ ನಿರ್ದಿಷ್ಟ ವಯಸ್ಸು, ಲಿಂಗ ಅಥವಾ ಹಿನ್ನೆಲೆಯ ಅವಶ್ಯಕತೆಗಳಿಲ್ಲ ಮತ್ತು ಈಶ ಕಾರ್ಯಕ್ರಮಗಳನ್ನು ಪೂರ್ಣಗೊಳಿಸುವ ಅಗತ್ಯವೂ ಇಲ್ಲ. 

ಸದ್ಗುರುಗಳ ಮಾರ್ಗದರ್ಶನದಲ್ಲಿ, ಯೋಗದ ಪ್ರಾಚೀನ ವಿಜ್ಞಾನವನ್ನು ಅದರ ಶುದ್ಧ ರೂಪದಲ್ಲಿ ಈಶ ಫೌಂಡೇಶನ್ ಸಂಸ್ಥೆಯು, 30 ವರ್ಷಗಳಿಂದ ಅರ್ಪಿಸುತ್ತಿದೆ. ಪ್ರಪಂಚದಾದ್ಯಂತ 300 ಕೇಂದ್ರಗಳಲ್ಲಿ, 17 ಮಿಲಿಯನ್ ಸ್ವಯಂಸೇವಕರಿಂದ ಬೆಂಬಲಿತವಾದ, ಈಶ ಫೌಂಡೇಶನ್‌ನ ಚಟುವಟಿಕೆಗಳು ಮಾನವ ಯೋಗಕ್ಷೇಮದ ಎಲ್ಲಾ ಅಂಶಗಳನ್ನು ಒಳಗೊಂಡಿವೆ. ಆಂತರಿಕ ಪರಿವರ್ತನೆಗಾಗಿ ಅದರ ಶಕ್ತಿಯುತ ಯೋಗ ಕಾರ್ಯಕ್ರಮಗಳಿಂದ ಹಿಡಿದು ಸಮಾಜ, ಪರಿಸರ ಮತ್ತು ಶಿಕ್ಷಣಕ್ಕಾಗಿ ಅದರ ಸ್ಪೂರ್ತಿದಾಯಕ ಯೋಜನೆಗಳವರೆಗೆ, ಈಶದ ಚಟುವಟಿಕೆಗಳು ಮಾನವ ಪ್ರಜ್ಞೆಯನ್ನು ಹೆಚ್ಚಿಸಲು ಮತ್ತು ವೈಯಕ್ತಿಕ ಪರಿವರ್ತನೆಯ ಮೂಲಕ ಜಾಗತಿಕ ಸಾಮರಸ್ಯವನ್ನು ಬೆಳೆಸಲು ವಿನ್ಯಾಸಗೊಳಿಸಲಾಗಿದೆ.

ಜೂನ್ 21, 2023 ರಂದು ಭಾರತೀಯ ಕಾಲಮಾನ ಸಂಜೆ 6.30 ಕ್ಕೆ ಯುನೆಸ್ಕೋ, ಪ್ಯಾರಿಸ್‌ನಿಂದ ಸದ್ಗುರುಗಳನ್ನು ನೇರವಾಗಿ ಸೇರಲು ಇಲ್ಲಿ ನೋಂದಾಯಿಸಿ.

ಸದ್ಗುರು ಮತ್ತು ಈಶ ಫೌಂಡೇಶನ್ ಕುರಿತು ಇನ್ನಷ್ಟು ತಿಳಿದುಕೊಳ್ಳಲು, ಭೇಟಿ ನೀಡಿ: https://isha.sadhguru.org/in/en

ಫೋಟೋಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಇದರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ದಯವಿಟ್ಟು +91 94874 75346 ಗೆ ಕರೆ ಮಾಡಿ ಅಥವಾ ಈ-ಮೇಲ್ ಮಾಡಿ: mediarelations@ishafoundation.org

click me!