ಜನರಿಗೆ ಕೊರೋನಾ ಲಸಿಕೆ ಒದಗಿಸಲು 51 ಸಾವಿರ ಕೋಟಿ ಮೀಸಲಿಟ್ಟ ಸರ್ಕಾರ

Suvarna News   | Asianet News
Published : Oct 23, 2020, 04:12 PM ISTUpdated : Oct 23, 2020, 04:23 PM IST
ಜನರಿಗೆ ಕೊರೋನಾ ಲಸಿಕೆ ಒದಗಿಸಲು 51 ಸಾವಿರ ಕೋಟಿ ಮೀಸಲಿಟ್ಟ ಸರ್ಕಾರ

ಸಾರಾಂಶ

ಕೊರೋನಾ ಔಷಧ | 51000 ಸಾವಿರ ಕೋಟಿ ರೂಪಾಯಿ ಮೀಸಲಿಟ್ಟ ಕೇಂದ್ರ ಸರ್ಕಾರ | ಒಂದು ಇಂಜೆಕ್ಷನ್ ಬೆಲೆ 150

ದೆಹಲಿ(ಅ.23): ಕೊರೋನಾ ವೈರಸ್‌ ಎದುರಾಗಿ ಭಾರತೀಯರಿಗೆ ಕೊರೋನಾ ಔಷಧ ಒದಗಿಸಲು 7 ಬಿಲಿಯನ್ ಡಾಲರ್ ಅಂದರೆ ಸುಮಾರು 51000 ಕೋಟಿ ರೂಪಾಯಿಯನ್ನು ಕೇಂದ್ರ ಮೀಸಲಿಟ್ಟಿದೆ. ಪ್ರತಿ ವ್ಯಕ್ತಿಗೆ 450ರಿಂದ 550 ರೂಪಾಯಿ ವೆಚ್ಚ ತಗುಲುವ ಸಾಧ್ಯತೆ ಇದೆ ಎನ್ನಲಾಗಿದೆ.

ಕೊರೋನಾ ಔಷಧ ಒದಗಿಸುವ ನಿಟ್ಟಿನಲ್ಲಿ ಈ ಆರ್ಥಿಕ ವರ್ಷದ ಫಂಡ್‌ನಲ್ಲಿ ಕೊರತೆಯಾಗುವುದಿಲ್ಲ ಎನ್ನಲಾಗಿದೆ. ಪ್ರತಿ ವ್ಯಕ್ತಿಗೆ ಒಂದು ಶಾಟ್‌ನಲ್ಲಿ 2 ಇಂಜೆಕ್ಷನ್‌ಗಳನ್ನು ನೀಡುವ ಅಗತ್ಯವಿದ್ದು, ಒಂದರ ಬೆಲೆ 150 ಇರಲಿದೆ.

ಕೊರೋನಾ ಲಸಿಕೆ: ಗುಡ್‌ ನ್ಯೂಸ್ ಕೊಟ್ಟ ಸೆರಂ ಸಂಸ್ಥೆ!

ಕೆಲವೊಮ್ಮೆ ಮೂಲಸೌಕರ್ಯ, ಸಾಗಾಟ ಸೇರಿ ಒಂದು ಎಂಜೆಕ್ಷನ್ ಬೆಲೆ 225 ಇರಲಿದೆ. ಇತ್ತೀಚಿನ ಭಾಷಣದಲ್ಲಿ ಮೋದಿ ಕೊರೋನಾ ವ್ಯಾಕ್ಸೀನ್ ಪ್ರತಿ ಭಾರತೀಯನಿಗೆ ತಲುಪಿಸುವ ಭರವಸೆ ನೀಡಿದ್ದರು.

ಈಗಾಗಲೇ ಅನ್‌ಲಾಕ್‌ ಪ್ರಕ್ರಿಯೆ ಆರಂಭಗೊಂಡಿದ್ದು, ಕೊರೋನಾ ಪ್ರಕರಣಗಳ ಸಂಖ್ಯೆಯೂ ಹೆಚ್ಚಿದೆ. ಈ ನಡುವೆ ಮಾಸ್ಕ್ ಧರಿಸುವುದನ್ನು ಮಾತ್ರ ತಪ್ಪಿಸಲೇಬಾರದು ಎಂದು ಪ್ರಧಾನಿ ತಿಳಿಸಿದ್ದಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮಹಿಳೆಯರೇ ಎಚ್ಚರ.. ದೇಹ ತೋರಿಸುವ ಈ ಲಕ್ಷಣಗಳು ಕ್ಯಾನ್ಸರ್‌ನ ಆರಂಭಿಕ ಸೂಚನೆಗಳು!
ಒಂದು ಗ್ಲಾಸ್ ನೀರಿನ ಜೊತೆ ಇದನ್ನ ಬೆರೆಸಿದ್ರೆ ಅದೆಷ್ಟೋ ಸಮಸ್ಯೆ ನಿವಾರಣೆಯಾಗುತ್ತೆ