ಅಮೆರಿಕದಿಂದ ಬಂದ 100 ಅತ್ಯಾಧುನಿಕ ವೆಂಟಿಲೇಟರ್, ವಿಶೇಷ ಏನು?

By Suvarna News  |  First Published Jun 16, 2020, 5:45 PM IST

ಕೊರೋನಾ ವಿರುದ್ಧ ಭಾರತದ ಹೋರಾಟ/ ಅತ್ಯಾಧುನಿಕ ವೆಂಟಿಲೇಟರ್ ನೆರವು ನೀಡಿದ ಅಮೆರಿಕ/ ನೂರು ವೆಂಟಿಲೇಟರ್ ಗಳ ಕೊಡುಗೆ/ ಮಹಾಮಾರಿ ವಿರುದ್ಧ ಸಮರ


ನವದೆಹಲಿ(ಜೂ.  16) ಕೋವಿಡ್‌- 19 ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ನೆರವು ನೀಡಲು ಅಮೆರಿಕ ಯುಎಸ್‌ಎಐಡಿ ಮೂಲಕ 100 ಅತ್ಯಾಧುನಿಕ ತಂತ್ರಜ್ಞಾನದ ವೆಂಟಿಲೇಟರ್‌ಗಳನ್ನು ಕೊಡುಗೆ ನೀಡಿದೆ.  ಜಾಗತಿಕ ಆರೋಗ್ಯ ವಿಪತ್ತಿನ ವಿರುದ್ಧದ ಭಾರತದ ಹೋರಾಟಕ್ಕೆ ಅಮೆರಿಕದ ಅಧ್ಯಕ್ಷ ಟ್ರಂಪ್‌ ನೀಡಿದ ತುರ್ತು ಪ್ರತಿಕ್ರಿಯೆಯ ಫಲ ಇದು

ಅಮೆರಿಕದಲ್ಲಿ ತಯಾರಿಸಲಾಗಿರುವ ಈ ವೆಂಟಿಲೇಟರ್‌ಗಳು ಅತ್ಯಾಧುನಿಕ ಮತ್ತು ಅತ್ಯಂತ ಬೇಡಿಕೆಯಲ್ಲಿರುವ ತಂತ್ರಜ್ಞಾನವನ್ನು ಹೊಂದಿವೆ.  ಇವು ಚಿಕ್ಕದಾಗಿದ್ದು, ಅಗತ್ಯವಿದ್ದಕಡೆಗಳಲ್ಲಿ ನಿಯೋಜಿಸಬಹುದಾದ್ದರಿಂದ  ವೈರಸ್‌ ಸೋಂಕಿತರ ಚಿಕಿತ್ಸೆ ನೀಡಲು ಭಾರತಕ್ಕೆ ಸಹಾಯಕವಾಗುತ್ತವೆ.

Latest Videos

undefined

ಹೋರಾಟಕ್ಕೆ ಮಹೀಂದ್ರಾ ಸಾಥ್; ವೆಂಟಿಲೇಟರ್ ನೀಡಿದ ಮಹಾನುಭಾವ

ದೇಶಾದ್ಯಂತ ಇರುವ ಆಸ್ಪತ್ರೆಗಳಲ್ಲಿ ಕೆಲವನ್ನು ಆಯ್ದು, ಅಲ್ಲಿಗೆ ವೆಂಟಿಲೇಟರ್‌ಗಳ ಸಾಗಣೆ ಮತ್ತು ಅಳವಡಿಕೆಗೆ ಅನುವಾಗುವಂತೆ ಯುಎಸ್‌ಎಐಡಿಯು ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆ ಹಾಗೂ ಭಾರತ ಮತ್ತು ಅಮೆರಿಕದಲ್ಲಿರುವ ಸಹಭಾಗಿಗಳೊಂದಿಗೆ ಅವಿರತವಾಗಿ ಕೆಲಸ ಮಾಡುತ್ತಿದೆ.

 ಮೆರಿಕದ ರಾಯಭಾರಿ ಕೆನ್ನೆತ್‌ ಐ. ಜಸ್ಟರ್‌ ಮಾತನಾಡಿ  ಕೋವಿಡ್‌-19ಸಾಂಕ್ರಾಮಿಕವು ಹಿಂದೆಂದೂ ಕಂಡರಿಯದ ಜಾಗತಿಕ ಆರೋಗ್ಯ ಆಪತ್ತನ್ನು ತಂದೊಡ್ಡಿದೆ.  ಕೇವಲ ಸಹಭಾಗಿತ್ವ ಮತ್ತು ಸಹಕಾರಗಳ ಮೂಲಕ ಮಾತ್ರ ನಾವು ಜಗತ್ತಿನಾದ್ಯಂತ ಎಲ್ಲರಿಗೂ ಆರೋಗ್ಯಪೂರ್ಣ ಭವಿಷ್ಯವನ್ನು ಖಚಿತಪಡಿಸಿಕೊಳ್ಳಬಹುದಾಗಿದೆ. ಈ ಸಹಕಾರತತ್ತ್ವದ ಹಿನ್ನೆಲೆಯಲ್ಲಿ, ಭಾರತದ ಜನರಿಗೆ ವೆಂಟಿಲೇಟರ್‌ ದೇಣಿಗೆ ನೀಡುತ್ತಿರುವುದು ಅಮೆರಿಕಕ್ಕೆ ಸಂತಸ ತಂದಿದೆ. ಇದು ಸಾಧ್ಯವಾಗಿದ್ದು, ಅಮೆರಿಕದ ಜನತೆಯ ಔದಾರ್ಯ ಮತ್ತು ಅಮೆರಿಕದ ಖಾಸಗಿ ಉದ್ಯಮಗಳ ಆವಿಷ್ಕಾರದ ನೆರವಿನಿಂದ ಎಂದು ತಿಳಿಸಿದರು.

ಮನೆಯಲ್ಲಿಯೇ ಐಸಿಯು ಸೆಟಪ್ ಮಾಡಿಕೊಳ್ಳುತ್ತಿದ್ದಾರೆ ಜನ

ಈ ನೂರು ವೆಂಟಿಲೇಟರ್‌ಗಳ ಒಟ್ಟಾರೆ ಮೌಲ್ಯವು ಸುಮಾರು 1.2 ಮಿಲಿಯನ್‌ ಡಾಲರ್‌ಗಳಾಗಿದೆ.  ಅದಲ್ಲದೆ ಯುಎಸ್‌ಎಐಡಿ ಹೆಚ್ಚುವರಿಯಾಗಿ ಅವುಗಳ ಸಾಗಣೆ, ತಾಂತ್ರಿಕ ನೆರವು, ಸಲಕರಣೆಗಳ ಜೊತೆಗೆ ಬೇಕಾಗುವ ವೈದ್ಯಕೀಯ ಅಗತ್ಯವಸ್ತುಗಳ ವೆಚ್ಚವನ್ನು ಭರಿಸಲು ಪ್ರತ್ಯೇಕ ಪ್ಯಾಕೇಜ್‌ ಅನ್ನು ಕೊಡುತ್ತಿದೆ. ಇವುಗಳ ಮೌಲ್ಯವು 9.5 ಮಿಲಿಯನ್‌ ಡಾಲರ್‌ಗಳಾಗಲಿದೆ.  ಇದಲ್ಲದೆ ಯುಎಸ್‌ ಸೆಂಟರ್ಸ್‌ ಫಾರ್‌ ಡಿಸೀಸ್‌ ಕಂಟ್ರೋಲ್‌ ಅಂಡ್‌ ಪ್ರಿವೆನ್ಶನ್‌  ಸಂಸ್ಥೆಯು, ಶುಶ್ರೂಷೆ,  ಅಗತ್ಯ ಆರೋಗ್ಯ ಸಂದೇಶಗಳ ವಿತರಣೆ, ರೋಗದ ಸರ್ವೇಕ್ಷಣೆ ಸೇರಿದಂತೆ ಹಲವು ವಿಧದಲ್ಲಿ ಭಾರತಕ್ಕೆ ಸಹಾಯಹಸ್ತ ಚಾಚುತ್ತಿದೆ.

ಅಮೆರಿಕವು ಹಲವು ದಶಕಗಳಿಂದ ಅತ್ಯಂತ ಹೆಚ್ಚು ದ್ವಿಪಕ್ಷೀಯ ಆರೋಗ್ಯ ನೆರವು ನೀಡುತ್ತಿರುವ ರಾಷ್ಟ್ರವಾಗಿದೆ.  ಅಮೆರಿಕದ ತೆರಿಗೆದಾರರು 2009 ರಿಂದ ಇಲ್ಲಿಯವರೆಗೆ ಆರೋಗ್ಯ ನೆರವಿಗಾಗಿ 100 ಬಿಲಿಯನ್‌ ಡಾಲರ್‌ಗಳನ್ನು  ದೇಣಿಗೆ ನೀಡಿದ್ದಾರೆ ಹಾಗೂ ಸುಮಾರು 70 ಬಿಲಿಯನ್‌ ಡಾಲರ್‌ಗಳನ್ನು ಸಾಮಾಜಿಕ ಕೆಲಸಕ್ಕೆ ನೀಡಿದ್ದಾರೆ.

click me!