ಕೂದಲುದುರೋದು ನಿಲ್ಲಿಸೋಕೆ ಈ ಆಹಾರಗಳನ್ನು ಸೇವಿಸಿ

By Suvarna NewsFirst Published Jun 16, 2020, 4:33 PM IST
Highlights

ದೇಹಕ್ಕೆ ಬೇಕಾದ ಪ್ರಮುಖ ವಿಟಮಿನ್‌ಗಳು ಹಾಗೂ ಮಿನರಲ್‌ಗಳ ಕೊರತೆಯಾದರೆ ನಿಮ್ಮ ಕೂದಲು ಡಲ್ ಆಗುತ್ತದೆ, ಉದುರಲು ಪ್ರಾರಂಭವಾಗುತ್ತದೆ ಹಾಗೂ ಸೀಳಾಗುತ್ತದೆ. 

ಹಣೆಯನ್ನು ದೊಡ್ಡದಾಗಿಸುತ್ತಿರುವ, ತೆಳ್ಳಗಾಗುತ್ತಿರುವ ಕೂದಲಿಗಿಂತ ದೊಡ್ಡದಾಗಿ ನಿಮ್ಮ ವಯಸ್ಸನ್ನು ಕೂಗಿ ಹೇಳುವ ಮತ್ತೊಂದು ಇದ್ದರೆ ಅದು ಸುಕ್ಕಿರಬಹುದು. ಆದರೆ, 30 ದಾಟುತ್ತಿದ್ದಂತೆ ಮೊದಲು ಕಾಡುವುದು ಕೂದಲುದುರುವಿಕೆ, ಬಿಳಿಯಾಗುವುದು ಸೇರಿದಂತೆ ಕೂದಲಿನ ಇತರೆ ಸಮಸ್ಯೆಗಳು. ಕೂದಲುದುರಲು ಮೊದಲ ಕಾರಣ ಜೆನೆಟಿಕ್ಸ್. ಜೀನ್ಸನ್ನು ಬದಲಿಸಲು ಬರುವುದಿಲ್ಲ. ಆದರೆ, ಕೂದಲಿನ ಗುಣಮಟ್ಟ ಹೆಚ್ಚಿಸಲು, ಕೂದಲುದುರುವಿಕೆಯನ್ನು ನಿಧಾನಗತಿಯಾಗಿಸಲು ಆಹಾರ, ಜೀವನಶೈಲಿ ನಿಮ್ಮ ಸಹಾಯಕ್ಕೆ ಬರಬಹುದು. 

ಕೆಲವೊಮ್ಮೆ ಆಹಾರದಲ್ಲಿ ಪ್ರಮುಖ ವಿಟಮಿನ್‌ಗಳು ದೇಹಕ್ಕೆ ಸಿಗದ ಕಾರಣವೂ ಕೂದಲುದುರುತ್ತಿರುತ್ತದೆ. ಡಯಟ್‌ನಲ್ಲಿ ಬದಲಾವಣೆ ಮಾಡಿಕೊಂಡರೆ ಜೆನೆಟಿಕ್‌ನಲ್ಲಿ ಇರದೆ ಬಂದ ಸಮಸ್ಯೆಯಾದರೆ ಪೂರ್ತಿಯಾಗಿ ಕೂದಲುದುರುವುದನ್ನು ತಡೆಯಬಹುದು. ಯಾವೆಲ್ಲ ವಿಟಮಿನ್ ಹಾಗೂ ಮಿನರಲ್‌ಗಲು ಕೂದಲ ಪೋಷಣೆಗೆ ಅಗತ್ಯ ನೋಡೋಣ.

ಆತ್ಮಹತ್ಯೆ ಯೋಚನೆಗಳಿಂದ ಹೊರಬರೋದು ಹೇಗೆ?

ಐರನ್
ಐರನ್ ಅಧಿಕವಿರುವ ಆಹಾರಗಳನ್ನು ಹೆಚ್ಚಾಗಿ ಸೇವಿಸಿ. ಇದು ಕೂದಲ ಪೋಷಣೆಗಷ್ಟೇ ಅಲ್ಲದೆ, ಮೂಳೆಗಳ ಆರೋಗ್ಯಕ್ಕೆ ಕೂಡಾ ಒಳ್ಳೆಯದು. ಬೆಲ್ಲ, ಸೊಪ್ಪುಸದೆಗಳಲ್ಲಿ ಐರನ್ ಹೆಚ್ಚಾಗಿರುತ್ತದೆ. ಅದರಲ್ಲೂ ಪಾಲಕ್ ಐರನ್‌ಭರಿತವಷ್ಟೇ ಅಲ್ಲ, ಕೂದಲ ಆರೋಗ್ಯಕ್ಕೆ ಬೇಕಾದ ಬಹುತೇಕ ಪೋಷಕಸತ್ವಗಳು ಇದರಲ್ಲಿವೆ. 

ಝಿಂಕ್
ಕೂದಲುದುರುವುದಕ್ಕೆ ಚಿಕಿತ್ಸಕವಾಗಿ ಝಿಂಕ್ ಬೇಕಾಗುತ್ತದೆ. ಕೂದಲುದುರುವ ಸಮಸ್ಯೆ ಇರುವವರಲ್ಲಿ ಝಿಂಕ್ ಕಡಿಮೆ ಇರುತ್ತದೆ ಎಂಬುದನ್ನು ಅಧ್ಯಯನಗಳೂ ತೋರಿಸಿವೆ. ಓಯ್ಸ್ಟರ್ಸ್, ಪಾಲಕ್, ತೆಳುವಾದ ರೆಡ್ ಮೀಟ್, ಬೀನ್ಸ್, ಮೊಟ್ಟೆ- ಇವುಗಳಲ್ಲಿ ಝಿಂಕ್ ಅಧಿಕವಾಗಿರುತ್ತದೆ. 

ವಿಟಮಿನ್ ಎ
ವಿಟಮಿನ್ ಎಯಿಂದ ಸಮೃದ್ಧವಾಗಿರುವ ಆಹಾರಗಳಲ್ಲಿ ಬೀಟಾ ಕೆರೋಟಿನ್ ಕೂಡಾ ಹೆಚ್ಚಿರುತ್ತದೆ. ಕೂದಲ ಆರೋಗ್ಯಕ್ಕಾಗಿ ಸೇವಿಸಿದರೆ ಇವು ದೇಹಾರೋಗ್ಯಕ್ಕೂ ಒಳ್ಳೆಯದೇ. ಏಕೆಂದರೆ ಬೀಟಾ ಕೆರೋಟಿನ್ ದೃಷ್ಟಿಗೆ, ರೋಗ ನಿರೋಧಕ ಶಕ್ತಿ ಹೆಚ್ಚಿಸಲು, ಕ್ಯಾನ್ಸರ್ ತಡೆಯಲು ಸಹಾಯಕವಾಗಿದೆ. ಆರೇಂಜ್ ಬಣ್ಣದಲ್ಲಿರುವ ಆಹಾರಗಳನ್ನು ಸಾಧ್ಯವಾದಷ್ಟು ಹೆಚ್ಚಾಗಿ ಸೇವಿಸಿ. ಕ್ಯಾರಟ್, ಗೆಣಸು, ಪಾಲಕ್ ಮುಂತಾದವಲ್ಲಿ ಬೀಟಾ ಕೆರೋಟಿನ್ ಹೆಚ್ಚಾಗಿರುತ್ತದೆ. ಸಾಧ್ಯವಾದಷ್ಟು ಬೇಯಿಸದೆ, ಹಸಿಯಾಗಿಯೇ ತಿನ್ನಲು ಪ್ರಯತ್ನಿಸಿ. 

ವಿಟಮಿನ್ ಡಿ
ನೀವು ಸೂರ್ಯನ ಬಿಸಿಲಿಗೆ ಮೈಯೊಡ್ಡಿದಾಗ ದೇಹವು ತನಗೆ ಬೇಕಾದ ವಿಟಮಿನ್ ಡಿ ಉತ್ಪಾದಿಸಿಕೊಳ್ಳುತ್ತದೆ. ಆದರೆ, ಹೆಚ್ಚಿನವರು ಬಿಸಿಲಿಗೆ ಹೋಗುವುದಿಲ್ಲ, ಹೋಗುವವರೂ ಸನ್‌ಸ್ಕ್ರೀನ್ ಹಚ್ಚಿರುತ್ತಾರೆ. ನೀವೂ ಅಂಥವರಲ್ಲೊಬ್ಬರಾಗಿದ್ದರೆ ಟೂನಾ, ಸಾಲ್ಮೋನ್, ಎಗ್ ಯೋಕ್ಸ್, ಆರೆಂಜ್ ಜ್ಯೂಸ್, ಹಾಲು, ಸೆರೀಲ್ಸ್‌ ಮೂಲಕ ದೇಹಕ್ಕೆ ವಿಟಮಿನ್ ಡಿ ಒದಗಿಸಿಕೊಡಿ. 

ಸೆಲೆನಿಯಂ
ಹೈಪೋಥೈರಾಯ್ಡಿಸಂ, ಎಚ್ಐವಿ ಇರುವವರಲ್ಲಿ, ಡಯಾಲಿಸಿಸ್‌ಗೆ ಒಳಗಾಗುತ್ತಿರುವವರಲ್ಲಿ ಸೆಲೆನಿಯಂ ಕೊರತೆ ಹೆಚ್ಚು. ಇದರಿಂದ ರೋಗ ನಿರೋಧಕ ಶಕ್ತಿ ತಗ್ಗುವ ಜೊತೆಗೆ ಕೂದಲುದುರಲು ಆರಂಭವಾಗುತ್ತದೆ. ಹಾಗಾಗಿ ಸೆಲೆನಿಯಂ ಹೆಚ್ಚಿರುವ ಆಹಾರಗಳನ್ನು ಡಯಟ್‌ಗೆ ಸೇರಿಸಿ.

ಕಾಣೆಯಾದವರ ಮುಖ ಹಾಲಿನ ಪ್ಯಾಕೆಟ್‌ ಮೇಲೆ; ಕುಟುಂಬದವರ ಜತೆ ಒಟ್ಟಾದವರು ನೂರಾರು?

ಬಯೋಟಿನ್
ಬಯೋಟಿನ್ ಎಂದರೆ ವಿಟಮಿನ್ ಬಿ7. ಇದರ ಕೊರತೆಯು ಕೂದಲ ಉದುರುವಿಕೆ, ನರಗಳ ಹಾನಿ ಹಾಗೂ ಚರ್ಮ ಆರೋಗ್ಯದ ಮೇಲೆ ಹಾನಿ ಉಂಟು ಮಾಡುತ್ತದೆ. ಮೊಟ್ಟೆಗಳು, ಗೆಣಸು, ಪಾಲಕ್‌ನಲ್ಲಿ ಬಯೋಟಿನ್ ಹೆಚ್ಚಾಗಿರುತ್ತದೆ. 
 
ಒಮೆಗಾ ಆಯಿಲ್
ಒಮೆಗಾ 3 ಮತ್ತು 6 ಹೃದಯ ಹಾಗೂ ಮೆದುಳಿಗೆ ಒಳ್ಳೆಯದು ಎಂದು ನೀವು ಕೇಳಿರಬಹುದು. ಕೂದಲು ಮತ್ತೆ ಹುಟ್ಟುವಂತೆ ಮಾಡುವಲ್ಲೂ ಇವು ಸಹಾಯಕ. ಸಲ್ಮೋನ್‌ಗಳಲ್ಲಿ ಒಮೆಗಾ 3 ಹೇರಳವಾಗಿರುತ್ತದೆ. ಮೂನು ತಿನ್ನುವುದಿಲ್ಲವಾದರೆ ಬೀಜಗಳು, ಡ್ರೈಫ್ರೂಟ್ಸ್, ಸನ್‌ಫ್ಲವರ್ ಎಣ್ಣೆ, ಕೊಬ್ಬರಿ ಎಣ್ಣೆ, ಎಳ್ಳೆಣ್ಣೆಗಳಲ್ಲಿ ಇದನ್ನು ಪಡೆಯಬಹುದು. 

click me!