Cholesterol Problem: ಎಷ್ಟು ಯತ್ನಿಸಿದ್ರೂ ಕೊಬ್ಬು ಕಡಿಮೆಯಾಗ್ತಿಲ್ವಾ? ಇದಿರಬಹುದು ಕಾರಣ

By Suvarna NewsFirst Published Feb 16, 2023, 5:42 PM IST
Highlights

ಔಷಧ ತೆಗೆದುಕೊಂಡರೂ ಕೆಟ್ಟ ಕೊಬ್ಬಿನ ಪ್ರಮಾಣ ಕಡಿಮೆ ಆಗುತ್ತಿಲ್ಲ ಎಂದು ಸಾಕಷ್ಟು ಜನ ಬೇಸರಿಸಿಕೊಳ್ಳುತ್ತಾರೆ. ಕೊನೆಕೊನೆಗೆ ಎಷ್ಟು ಬೇಸತ್ತು ಹೋಗುತ್ತಾರೆಂದರೆ, ವೈದ್ಯರು ನೀಡಿರುವ ಮಾತ್ರೆಗಳೇ ಸರಿಯಾಗಿ ಕೆಲಸ ಮಾಡುತ್ತಿಲ್ಲವೇನೋ ಎನ್ನುವ ಅನುಮಾನಕ್ಕೂ ಬೀಳುತ್ತಾರೆ. ಆದರೆ, ಕೇವಲ ಮಾತ್ರೆಗಳಿಂದ ಕೊಬ್ಬು ಕರಗುವುದಿಲ್ಲ. ನಿಮ್ಮ ಜೀವನಶೈಲಿಯಲ್ಲೇ ಏನೋ ಕೊರತೆ ಇರಬಹುದು, ಚೆಕ್ ಮಾಡಿಕೊಳ್ಳಿ.
 

ಎಷ್ಟೇ ಉತ್ತಮ ಆಹಾರ ಪದ್ಧತಿ ಅನುಸರಿಸಿದರೂ ದೇಹದ ಕೊಬ್ಬು ಮಾತ್ರ ಕರಗುತ್ತಿಲ್ಲ ಎನ್ನುವುದು ಅನೇಕರ ದೂರು. ಕೊಬ್ಬು ದೇಹದಲ್ಲಿ ಅಧಿಕವಾದರೆ ಸಮಸ್ಯೆ ಕಟ್ಟಿಟ್ಟ ಬುತ್ತಿ. ನಿಮಗೆ ಗೊತ್ತೇ ಇದೆ. ನಮ್ಮ ರಕ್ತದಲ್ಲಿ ವ್ಯಾಕ್ಸ್ ನಂತೆ ಇರುವ ಕೊಬ್ಬಿನ ಪ್ರಮಾಣ ಹೆಚ್ಚೂ ಆಗಬಾರದು, ಕಡಿಮೆಯೂ ಇರಬಾರದು. ಆದರೆ, ಒಳ್ಳೆಯ ಕೊಬ್ಬಿನಂಶ ಹೆಚ್ಚಿನ ಪ್ರಮಾಣದಲ್ಲಿದ್ದರೆ ತೊಂದರೆಯಿಲ್ಲ. ಕೆಟ್ಟ ಕೊಬ್ಬಿನ ಮಟ್ಟ ಹೆಚ್ಚಾದಾಗ ಹೃದಯ ಸಂಬಂಧಿ ಸಮಸ್ಯೆಗಳು ಸೇರಿದಂತೆ ಹಲವು ತೊಂದರೆಗಳು ಉಂಟಾಗುತ್ತವೆ. ಉತ್ತಮ ಕೊಬ್ಬು ರಕ್ತನಾಳಗಳಲ್ಲಿ ಶೇಖರಣೆಯಾಗುವ ಕೆಟ್ಟ ಕೊಬ್ಬನ್ನು ಕರಗಿಸುವಲ್ಲಿ ನೆರವಾಗುತ್ತದೆ. ನಾವು ಸುಲಭವಾಗಿ ಸೇವಿಸಬಹುದಾದ ಉತ್ತಮ ಕೊಬ್ಬು ಎಂದರೆ ತೆಂಗಿನೆಣ್ಣೆ ಮತ್ತು ತುಪ್ಪ. ಆದರೆ, ಕೆಟ್ಟ ಕೊಬ್ಬು ಆರೋಗ್ಯಕ್ಕೆ ಅಪಾಯಕಾರಿಯಾಗಿದ್ದು, ರಕ್ತನಾಳಗಳಲ್ಲಿ ಹೆಪ್ಪುಗಟ್ಟಿ ರಕ್ತಸಂಚಾರಕ್ಕೆ ಧಕ್ಕೆಯುಂಟುಮಾಡುತ್ತದೆ. ಜತೆಗೆ, ಕೆಟ್ಟ ಕೊಬ್ಬಿನಲ್ಲೇ ಇನ್ನೊಂದು ಮಾದರಿಯ ಕೊಬ್ಬಿದೆ, ಅದನ್ನು ಟ್ರಾನ್ಸ್ ಫ್ಯಾಟ್ ಎಂದು ಕರೆಯಲಾಗುತ್ತದೆ. ಇದು ಮತ್ತಷ್ಟು ಅಪಾಯಕಾರಿಯಾಗಿದ್ದು, ಇದರ ಬಗ್ಗೆ ಭಾರೀ ಎಚ್ಚರಿಕೆ ಬೇಕು. ಕೆಲವರು ತಾವು ಉತ್ತಮ ಆಹಾರ ಪದ್ಧತಿ ಅನುಸರಿಸಿದರೂ ಕೊಬ್ಬಿನ ಮಟ್ಟ ಮಾತ್ರ ಕರಗುತ್ತಿಲ್ಲ ಎಂದು ದೂರುತ್ತಾರೆ. ಆದರೆ, ಅವರಿಗೆ ಅರಿವಿಲ್ಲದೆ ಅವರ ಜೀವನಶೈಲಿಯಲ್ಲೇ ಎಲ್ಲೋ ಸಮಸ್ಯೆ ಇರುತ್ತದೆ. ನೀವೂ ಈ ಸಮಸ್ಯೆ ಎದುರಿಸುತ್ತಿದ್ದರೆ ಅದಕ್ಕೆ ಕಾರಣವೇನೆಂದು ಅರಿತುಕೊಳ್ಳಿ.

•    ನಿಮ್ಮ ಆಹಾರದಲ್ಲಿರಬಹುದು ಟ್ರಾನ್ಸ್ ಫ್ಯಾಟ್ (Trans Fat)
ಅನ್ ಸ್ಯಾಚುರೇಟೆಡ್ (Unsaturated) ಕೊಬ್ಬಿನ ಪೈಕಿಯಲ್ಲಿ ಒಂದಾದ ಟ್ರಾನ್ಸ್ ಅನ್ ಸ್ಯಾಚುರೇಟೆಡ್ ಫ್ಯಾಟಿ ಆಸಿಡ್ (Fatty Acid) ನಿಮ್ಮ ದೈನಂದಿನ ಆಹಾರದಲ್ಲೇ (Food) ಇರಬಹುದು. ನಿಮಗೆ ಕೊಬ್ಬಿನ ಸಮಸ್ಯೆ ಇದ್ದು, ಎಷ್ಟು ಪ್ರಯತ್ನ ಮಾಡಿದರೂ ಕಡಿಮೆ ಆಗುತ್ತಿಲ್ಲ ಎಂದಾದರೆ ನೀವು ದೈನಂದಿನ ಆಹಾರದಲ್ಲಿ ಗಾಣದಿಂದ ತೆಗೆದ ಯಾವುದೇ ಎಣ್ಣೆಗಳನ್ನು (ನೀವು ಯಾವುದನ್ನು ಬಳಸುತ್ತೀರೋ ಅದು) ಬಳಕೆ ಮಾಡುವುದು ಉತ್ತಮ. ನೂರೆಂಟು ಕಂಪೆನಿಗಳ ಅತ್ಯಾಕರ್ಷಕ ಪ್ಯಾಕೆಟ್ ನಲ್ಲಿರುವ ಎಣ್ಣೆಯ (Oil) ಬಳಕೆಯನ್ನು ಕೈಬಿಡಬೇಕು.

Latest Videos

Health Tips: ಕಾಲು ನೋವು ನಿರ್ಲಕ್ಷ್ಯಿಸಬೇಡಿ: ದೇಹದಲ್ಲಿನ ಈ ಸಮಸ್ಯೆ ಲಕ್ಷಣವಿರಬಹುದು!

•    ಒತ್ತಡ (Stress) ಹೆಚ್ಚು, ದೈಹಿಕ ಕ್ರಿಯಾಶೀಲತೆ (Activity) ಕಡಿಮೆ 
ದೇಹದಲ್ಲಿರುವ ಕೆಟ್ಟ ಕೊಬ್ಬು (Bad Cholesterol) ಕರಗಲು ಕೇವಲ ಆಹಾರದ ಮಾರ್ಗವೊಂದೇ ಸಾಕಾಗುವುದಿಲ್ಲ. ದಿನವೂ ನಿಯಮಿತವಾಗಿ ವ್ಯಾಯಾಮ (Exercise) ಮಾಡುವುದು ಅತ್ಯಂತ ಅಗತ್ಯ. ಪ್ರತಿನಿತ್ಯ 30 ನಿಮಿಷಗಳ ಕಾಲ ವಾಕ್ ಮಾಡುವುದು ಆರೋಗ್ಯಕ್ಕೆ ಉತ್ತಮ. ಅಧ್ಯಯನದ ಪ್ರಕಾರ, ದೇಹದಿಂದ ಹೊರಹೋಗುವ ಬೆವರಿನ ಮೂಲಕವೂ ಕೊಬ್ಬು ಕರಗುತ್ತದೆ. ಅಲ್ಲದೆ, ವ್ಯಾಯಾಮದ ಬಳಿಕ ಬಿಡುಗಡೆಯಾಗುವ ಉತ್ತಮ ಹಾರ್ಮೋನುಗಳಿಂದ ಒತ್ತಡ ಕಡಿಮೆಯಾಗಿ ಕೆಟ್ಟ ಕೊಬ್ಬು ನಿವಾರಣೆಯಾಗುತ್ತದೆ. ಒತ್ತಡ ಹೆಚ್ಚಿದಾಗಲೂ ದೇಹದಲ್ಲಿ ಕೆಟ್ಟ ಕೊಬ್ಬಿನ ಸಂಗ್ರಹವಾಗುವುದು ದೃಢಪಟ್ಟಿದ್ದು, ಒತ್ತಡದಿಂದ ದೂರವಿರಬೇಕಾದುದು ಅತ್ಯಗತ್ಯ.

•    ಮದ್ಯಪಾನ (Alcohol)
ನೀವು ಉತ್ತಮ ಆಹಾರ ಪದ್ಧತಿ ಅನುಸರಿಸಿದರೂ ಮದ್ಯಪಾನಿಗಳಾಗಿದ್ದರೆ ಕೆಟ್ಟ ಕೊಬ್ಬು ಕರಗುವುದಿಲ್ಲ. ಮದ್ಯಪಾನದಿಂದ ಕೊಬ್ಬಿನ ಸಂಗ್ರಹ ಹೆಚ್ಚುತ್ತದೆ. ನೀವು ಕೊಬ್ಬು ಕರಗಲು ಮಾತ್ರೆ ತೆಗೆದುಕೊಳ್ಳುವವರಾಗಿದ್ದು, ಮದ್ಯಪಾನವನ್ನೂ ಮಾಡುತ್ತಿದ್ದರೆ ಆ ಔಷಧಗಳು (Medicines) ನಿಮ್ಮ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಅಮೆರಿಕನ್ ಹಾರ್ಟ್ (Heart) ಅಸೋಸಿಯೇಷನ್ ಪ್ರಕಾರ, ಕೊಬ್ಬು ಸಮಸ್ಯೆ ಇರುವವರು ದಿನಕ್ಕೆ ಎರಡು ಸ್ಟ್ಯಾಂಡರ್ಡ್ ಡ್ರಿಂಕ್ ಮಾತ್ರ ಸೇವನೆ ಮಾಡಬಹುದು.

ದಿನಾ ಮೊಟ್ಟೆ ಸೇವಿಸಿದ್ರೆ ಹಾರ್ಟ್ ಅಟ್ಯಾಕ್ ಆಗೋ ಸಾಧ್ಯತೆ ಹೆಚ್ಚುತ್ತಾ?

•    ಔಷಧಗಳ ಡೋಸ್ (Dose) ಸರಿಯಾಗಿದೆಯೇ?
ಸಾಮಾನ್ಯವಾಗಿ ನಮ್ಮಲ್ಲಿ ಹಲವರು ಏನು ಮಾಡುತ್ತಾರೆಂದರೆ, ವೈದ್ಯರು (Doctor) ಹೇಳುವುದೇ ಒಂದು, ಇವರು ಮಾಡುವುದೇ ಒಂದು. ವೈದ್ಯರು ದಿನಕ್ಕೆ ಎರಡು ಮಾತ್ರೆ ಹೇಳಿದರೆ ಇವರು ಒಂದನ್ನೇ ಸೇವಿಸುತ್ತಾರೆ. ದೇಹದಲ್ಲಿರುವ ಕೊಬ್ಬಿನ ಪ್ರಮಾಣ ಗಮನಿಸಿ ಔಷಧಗಳ ಪ್ರಮಾಣ ಎಷ್ಟಿರಬೇಕೆಂದು ನಿರ್ಧರಿಸುವವರು ವೈದ್ಯರು. ಔಷಧಗಳನ್ನು ಸರಿಯಾದ ಸಮಯ ಹಾಗೂ ಪ್ರಮಾಣದಲ್ಲಿ ಸೇವನೆ ಮಾಡುವುದು ಸಹ ಅಗತ್ಯ. 
 

click me!