ನಮ್ಮಲ್ಲಿ ಶೇ.60 ರಷ್ಟು ಜನರು ತಮ್ಮ ಜೀವನ ಶೈಲಿಯಿಂದಾಗಿ ಮೃತಪಡುತ್ತಿದ್ದು, ಅದರಲ್ಲಿಯೂ ಇತ್ತೀಚಿನ ಜನರು ಸ್ಟೀನ್ ಎಡಿಕ್ಸನ್ ಮತ್ತು ಒಟ್ಟಿತನದಿಂದ ಬಳಲುತ್ತಿದ್ದು, ತಮ್ಮ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಬೇಕು ಎಂದ ಡಾ. ಸಿ.ಎನ್. ಮಂಜುನಾಥ್
ಮಂಗಳೂರು(ಜ.12): ಹೃದಯಾಘಾತ ಮತ್ತು ಬ್ರೈನ್ ಸ್ಟ್ರೋಕ್ಗೆ ಎಜಿಯೋಪ್ಲಾಸ್ಟ್ ಮತ್ತು ಎಂಜಿಯೋಗ್ರಾಂ ಚಿಕಿತ್ಸೆ ನೀಡುತ್ತಿದ್ದು, ಇದಕ್ಕಿಂದ ಹಬ್ ಆಡ್ ಸ್ಪೋಕ್ ಮಾದರಿ ಚಿಕಿತ್ಸೆ ಉತ್ತಮ ಎಂದು ಸಂಸದ, ಜಯದೇವ್ ಆಸ್ಪತ್ರೆಯ ಕಾಡ್ರಿಯಲಜಿಸ್ಟ್ ಡಾ.ಸಿ.ಎನ್.ಮಂಜುನಾಥ್ ಹೇಳಿದರು.
ಅವರು ಶನಿವಾರ ನಗರದ ಖಾಸಗಿ ಹೋಟೆಲ್ನಲ್ಲಿ ನಡೆದ 'ಸ್ಪೆಕ್ಟ್ರಮ್-2024' 14 ಆವೃತ್ತಿಯನ್ನು ಉದ್ಘಾಟಿಸಿ ಮಾತನಾಡಿದರು. ಜನಸಂಖ್ಯೆಯಲ್ಲಿ ಶೇ.30 ರಷ್ಟು ಜನರು ಹೃದಯಾಘಾತದಿಂದ ಮತ್ತು ಬ್ರೈನ್ ಸ್ಟ್ರೋಕ್ನಿಂದ 45 ವರ್ಷದ ಕೆಳಗಿನ ಜನರು ಮೃತಪಡುತ್ತಿದ್ದು, ಇದರಲ್ಲಿಯೂ ನಗರ ಪ್ರದೇಶದಲ್ಲಿ ಶೇ.15 ರಷ್ಟು ಮಂದಿ ಮೃತಪಟ್ಟರೆ, ಗ್ರಾಮೀಣ ಪ್ರದೇಶದಲ್ಲಿ ಶೇ.22 ರಷ್ಟು ಜನರು ಮೃತಪಡುತ್ತಿದ್ದಾರೆ. ಅದನ್ನು ನಿವಾರಿಸುವ ನಿಟ್ಟಿನಲ್ಲಿ 2 ವರ್ಷಗಳ ಹಿಂದೆ 45 ತಾಲೂಕು ಆಸ್ಪತ್ರೆಗಳಲ್ಲಿ ಹಬ್ ಆಡ್ ಸ್ಪೋಕ್ ಮಾದರಿ ಚಿಕಿತ್ಸೆಯನ್ನು ತೆರೆದಿದ್ದು, ಈ ವರ್ಷ 90ಕ್ಕೆ ಏರಿಸಲು ಯೋಜನೆ ರೂಪುಗೊಂಡಿದ್ದು, ಇದರ ಅಡಿಯಲ್ಲಿ 8 ಜಿಲ್ಲೆಗಳು ಬರಲಿವೆ ಎಂದರು.
ಸರಿಯಾಗಿ ನಿದ್ದೆ ಮಾಡದಿದ್ದರೆ ಹಾರ್ಟ್ ಸಮಸ್ಯೆ ಹೆಚ್ಚು, ತಜ್ಞರು ಸೂಚನೆ ಏನು?
ನಮ್ಮಲ್ಲಿ ಶೇ.60 ರಷ್ಟು ಜನರು ತಮ್ಮ ಜೀವನ ಶೈಲಿಯಿಂದಾಗಿ ಮೃತಪಡುತ್ತಿದ್ದು, ಅದರಲ್ಲಿಯೂ ಇತ್ತೀಚಿನ ಜನರು ಸ್ಟೀನ್ ಎಡಿಕ್ಸನ್ ಮತ್ತು ಒಟ್ಟಿತನದಿಂದ ಬಳಲುತ್ತಿದ್ದು, ತಮ್ಮ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.
ಆಯುಷ್ಠಾನ್ ಭಾರತ್ ಯೋಜನೆಯಡಿ ನಮ್ಮ ದೇಶದಲ್ಲಿ 60 ಕೋಟಿ ಜನರು ತಮ್ಮ ಹೆಸರನ್ನು ನೊಂದಾಯಿಸಿಕೊಂಡಿದ್ದು, 7 ಕೋಟಿ ಜನರು ಇದರ ಪ್ರಯೋಜನವನ್ನು ಪಡೆಯುತ್ತಿದ್ದಾರೆ. ಈ ಯೋಜನೆಯನ್ನು ಪಡೆಯಲು ಆಸ್ಪತ್ರೆಗೆ ಬರುವ ಫಲಾನುಭವಿಗಳು ಎಲ್ಲಾ ರೀತಿಯಲ್ಲಿಯೂ ಚಿಕಿತ್ಸೆ ಉಚಿತವಾಗಿ ಸಿಗುತ್ತದೆ ಎಂದು ಭಾವಿಸಿ ಬರುತ್ತಾರೆ ಆದರೆ ಅಲ್ಲಿಯ ಕೆಲವೊಂದು ನಿಯಮಗಳನ್ನು ಕೇಳಿ ಬೇಸರಗೊಳ್ಳುತ್ತಾರೆ. ಸರ್ಕಾರ ಇದರ ನಿಯಮಗಳನ್ನು ಸಡಿಲಗೊಳಿಸಿ, ಈಗ ನೀಡುತ್ತಿರುವ ಅನುದಾನಕ್ಕಿಂತ ಹೆಚ್ಚಿನ ಅನುದಾನವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಬಿಡುಗಡೆಗೊಳಿಸಬೇಕು ಎಂದು ಅವರು ಹೇಳಿದರು.
Heart attack: ಹೃದಯಾಘಾತವಾಗುವ ತಿಂಗಳ ಮೊದಲೇ ಈ ಲಕ್ಷಣಗಳು ಕಾಣಿಸಿಕೊಂಡರೆ ಎಚ್ಚರ!
ಕ್ಲಿನಿಕಲ್ ಮೆಡಿಸಿನ್ ಮರೆಯಾಗುತ್ತದೆ
ಕ್ಲಿನಿಕಲ್ ಮೆಡಿಸಿನ್ನಲ್ಲಿ ಈಗ ತಂತ್ರಜ್ಞಾನ ಬೆಳೆದಂತೆ ಆನ್ಲೈನ್ ಮೂಲಕ ಚಿಕಿತ್ಸೆ ನೀಡಲು ಪ್ರಾರಂಭವಾಗಿದ್ದು, ಈ ಬೆಳವಣಿಗೆ ಒಳ್ಳೆಯದಲ್ಲ. ಯಾವಾಗಲೂ ನಾವು ರೋಗಿಯನ್ನು ಅರಿತು ಯಾವ ರೀತಿ ಚಿಕಿತ್ಸೆ ನೀಡಬೇಕು ಎಂದು ನಿರ್ದರಿಸಬೇಕು ಎಂದು ಡಾ. ಸಿ.ಎನ್. ಮಂಜುನಾಥ್ ಹೇಳಿದರು.
2030ಕ್ಕೆ ವೈದ್ಯಕೀಯ ಕ್ಷೇತ್ರದಲ್ಲಿ ಉದ್ಯೋಗ ಕ್ಷಾಮ:
ಈಗಾಗಲೇ ದೇಶದಲ್ಲಿ 712 ಮೆಡಿಲಕ್ ಕಾಲೇಜುಗಳಿಂದ ಲಕ್ಷಾಂತರ ವೈದ್ಯರು ಪದವಿ ಪಡೆದು ಹೊರಬರುತ್ತಿದ್ದು, ಈಗಾಗಲೇ 16 ಲಕ್ಷ ಅಲೋಪತಿ ಹಾಗೂ 5 ಲಕ್ಷ ಆಯುರ್ವೇದ ಕ್ಷೇತ್ರದಲ್ಲಿ ವೈದ್ಯರು ಕಾರ್ಯ ನಿರ್ವಹಿಸುತ್ತಿದ್ದು, 2030ಕ್ಕೆ ವೈದ್ಯಕೀಯ ಪದವಿ ಪಡೆದವರು ಹೆಚ್ಚಾಗಿ ವೈದ್ಯಕೀಯ ಕ್ಷೇತ್ರದಲ್ಲಿ ಉದ್ಯೋಗಕ್ಕೆ ಕ್ಷಾಮ ಬರಲಿದೆ ಎಂದು ಡಾ. ಸಿ.ಎನ್. ಮಂಜುನಾಥ್ ಹೇಳಿದರು.