ಕೊರೊನಾದಿಂದಾಗಿ ನಿಮ್ಮ ಜಿಮ್‌ಗಳು ಬಂದ್ ಆಗಿರಬಹುದು ಅಥವಾ ಬ್ಯುಸಿ ಕೆಲಸದ ಶೆಡ್ಯೂಲ್ ನಡುವೆ ವ್ಯಾಯಾಮ ಮಾಡೋಕೆ ಸಮಯವಿರಲಿಕ್ಕಿಲ್ಲ. ಈ ಹೊತ್ತಿನಲ್ಲಿ ನಿಮ್ಮ ದಿನಚರಿಯನ್ನೇ ವ್ಯಾಯಾಮದಂತೆ ಮಾಡಿ ಆರೋಗ್ಯದ ಲಾಭ ಪಡೆಯೋದು ಹೇಗೆ ಗೊತ್ತೇ?
ಕೊರೋನಾ ವೈರಸ್ (Corona virus) ಸಾಂಕ್ರಾಮಿಕದ ಮಧ್ಯೆ ಜಿಮ್‌ಗಳು (Gyms) ಮುಚ್ಚುತ್ತ ಮತ್ತು ತೆರೆಯುತ್ತ ಕಣ್ಣಾಮುಚ್ಚಾಲೆ ನಡೆಯುತ್ತಿದೆ. ನಮ್ಮಲ್ಲಿ ಹೆಚ್ಚಿನವರು ನಮ್ಮ ವೇಟ್ ಲಾಸ್ ಗುರಿಯನ್ನು ಕೈ ಬಿಟ್ಟಿದ್ದೇವೆ. ಆದರೆ ನೀವು ನಿಜವಾಗಿಯೂ ಬದ್ಧರಾಗಿದ್ದರೆ, ನಿಮ್ಮ ದೈನಂದಿನ ಕೆಲಸಗಳನ್ನು ಪರಿಣಾಮಕಾರಿ ವ್ಯಾಯಾಮಗಳಾಗಿ ಪರಿವರ್ತಿಸಬಹುದು. ನಾವೆಲ್ಲರೂ ಮಾಡುವ ಕೆಲವು ದೈನಂದಿನ ಕಾರ್ಯಗಳು ಇಲ್ಲಿವೆ. ಇದನ್ನು ಕೆಲವು ಸುಲಭವಾದ ಬದಲಾವಣೆಗಳೊಂದಿಗೆ ನಿಮ್ಮ ವ್ಯಾಯಾಮದ ದಿನಚರಿಯಾಗಿ ಪರಿವರ್ತಿಸಬಹುದು.
1. ಕುಡಿಯುವ ನೀರು (Drink water)
ನೀರು ಕುಡಿಯುವ ಸರಳ ಕ್ರಿಯೆಯನ್ನು ವ್ಯಾಯಾಮವಾಗಿ ಪರಿವರ್ತಿಸಬಹುದು. ಕೆಲಸದ ಸಮಯದಲ್ಲಿ ನೀವು ಹೆಚ್ಚು ಗಂಟೆಗಳ ಕಾಲ ಕುಳಿತುಕೊಳ್ಳಬೇಕಾದರೆ, ನಿಮ್ಮ ಮೇಜಿನ ಬಳಿ ನೀರಿನ ಬಾಟಲಿಯನ್ನು ಇಡುವ ಬದಲು, ಸ್ವಲ್ಪ ದೂರದಲ್ಲಿ ಇಟ್ಟುಕೊಳ್ಳಿ. ಒಂದು ಖಾಲಿ ಲೋಟ ಮೇಜಿನ ಮೇಲೆ ಇರಿಸಿಕೊಳ್ಳಿ. ದಿನಕ್ಕೆ ಹತ್ತಾರು ಬಾರಿ ಎದ್ದು ಓಡಾಡಿ ನೀರು ಕುಡಿಯಿರಿ. ಇದು ನಿಮಗೆ ಎರಡು ವಿಧಗಳಲ್ಲಿ ಸಹಾಯ ಮಾಡುತ್ತದೆ- ಒಂದು ಲೋಟದ ನಿರಂತರ ಉಪಸ್ಥಿತಿಯು ನೀರು ಕುಡಿಯುವಂತೆ ನಿಮಗೆ ನೆನಪಿಸುತ್ತದೆ ಮತ್ತು ನೀರು ಖಾಲಿಯಾದಾಗ, ಅದು ನಿಮ್ಮನ್ನು ತುಂಬಿಕೊಳ್ಳಳು ಎದ್ದೇಳುವಂತೆ ಮಾಡುತ್ತದೆ. ದಿನವಿಡೀ ನೀರು ಕುಡಿಯುವುದು ನಿಮ್ಮ ತೂಕ ನಷ್ಟ ಪ್ರಯಾಣವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಗಂಟೆಗಟ್ಟಲೆ ಕೂತ್ಕೊಂಡು ಕೆಲಸ ಮಾಡ್ತಿದ್ರೆ ಹೃದಯ ಜೋಪಾನ, ಹಾರ್ಟ್‌ಅಟ್ಯಾಕ್ ಸಾಧ್ಯತೆ ಹೆಚ್ಚಂತೆ !
2. ಕ್ಲೀನಿಂಗ್ (Cleaning)
ಮನೆಯ ಕ್ಲೀನಿಂಗ್ ಅತ್ಯಗತ್ಯ ಕೆಲಸ. ಇದನ್ನು ಕೆಲವರು ಪ್ರತಿದಿನ ಮಾಡುತ್ತಾರೆ. ಇತರರು ವಾರಾಂತ್ಯಕ್ಕೆ ತಳ್ಳುತ್ತಾರೆ. ಯಾವುದೇ ಸಂದರ್ಭದಲ್ಲಿ, ನಿಮ್ಮ ಮನೆ ಅಥವಾ ನಿಮ್ಮ ಕೋಣೆಯನ್ನು ಸ್ವಚ್ಛಗೊಳಿಸುವ ಕ್ರಿಯೆಯನ್ನು ಸೃಜನಶೀಲತೆ ಬಳಸಿಕೊಂಡು ವ್ಯಾಯಾಮದ ದಿನಚರಿಯಾಗಿ ಪರಿವರ್ತಿಸಬಹುದು. ನೀವು ದೈಹಿಕವಾಗಿ ಮತ್ತು ಮಾನಸಿಕವಾಗಿ ಚಟುವಟಿಕೆಗಳಲ್ಲಿ ನಿಮ್ಮನ್ನು ತೊಡಗಿಸಿಕೊಂಡಾಗ ಮತ್ತು ಸ್ವಚ್ಛಗೊಳಿಸುವಾಗ ನಿಮ್ಮ ದೇಹಕ್ಕೆ ಗಮನ ಕೊಡುತ್ತೀರಿ. ಕೆಲವು ಸಂಗೀತ ಹಾಕಿಕೊಂಡು, ಯಾವುದೇ ಕ್ಲೀನಿಂಗ್ ಮಾಡಿ. ಧೂಳು ತೆಗೆಯುವಾಗ ಮತ್ತು ಭಾರವಾದ ಪೀಠೋಪಕರಣಗಳನ್ನು ಸುತ್ತಲೂ ಚಲಿಸುವ ಮೂಲಕ ಅವುಗಳ ಅಡಿಯಲ್ಲಿ ಸ್ವಚ್ಛಗೊಳಿಸಿ.
3. ಮಾಲ್ ಭೇಟಿಯೇ ವಾಕಥಾನ್ (Walkathon)
ದೈನಂದಿನ ಅಗತ್ಯ ವಸ್ತುಗಳ ಶಾಪಿಂಗ್ ಅನ್ನು ಕೂಡ ಎಕ್ಸರ್‌ಸೈಜ್ ಮಾಡಬಹುದು. ನಿಮ್ಮ ಮಂಡಿರಜ್ಜು ಸ್ನಾಯುಗಳನ್ನು ಬಿಗಿ ಮಾಡಬಹುದು. ಆನ್‌ಲೈನ್ ಶಾಪಿಂಗ್ ಮಾಡುವ ಬದಲು ನಿಮ್ಮ ಸ್ಥಳೀಯ ಮಾರುಕಟ್ಟೆಗೆ ನಡೆಯಿರಿ ಅಥವಾ ಡಿಪಾರ್ಟ್‌ಮೆಂಟಲ್ ಸ್ಟೋರ್‌ಗೆ ಹೋಗಿ. ಅಂಗಡಿಯ ಪ್ರವೇಶದ್ವಾರದಿಂದ ದೂರದಲ್ಲಿ ಗಾಡಿಯನ್ನು ಪಾರ್ಕಿಂಗ್ ಮಾಡಿ. ಎಲಿವೇಟರ್‌ಗಳು ಮತ್ತು ಎಸ್ಕಲೇಟರ್‌ಗಳ ಬದಲಿಗೆ ಮೆಟ್ಟಿಲುಗಳನ್ನು ಬಳಸಿ. ನೀವು ಶಾಪಿಂಗ್ ಮಾಡಿದ ನಂತರ, ಲೋಡ್ ಮಾಡಿದ ಕಿರಾಣಿ ಚೀಲಗಳನ್ನು ನೀವೇ ಸಾಗಿಸಿ, ತೋಳಿಗೆ ವ್ಯಾಯಾಮ ಆಗುತ್ತದೆ.
ಆರೋಗ್ಯ, ಸೌಂದರ್ಯ ವೃದ್ಧಿಗಾಗಿ ಏಳು ವರ್ಷದಿಂದ ಮೂತ್ರ ಕುಡಿಯುತ್ತಿದ್ದಾನೆ ವ್ಯಕ್ತಿ !
4. ನೀವು ಮಾತನಾಡುವಾಗ ನಡೆಯಿರಿ (Walking)
ನೀವು ಫೋನ್ ಕರೆ ಮಾಡಿದಾಗ ಈ ಸರಳ ಟ್ರಿಕ್ ನಿಮ್ಮ ಫಿಟ್‌ನೆಸ್ ಅನ್ನು ಹೆಚ್ಚಿಸಲು ಅದ್ಭುತಗಳನ್ನು ಮಾಡಬಹುದು. ಇವುಗಳು ಕೆಲಸದ ಕರೆಗಳಾಗಲಿ, ನಿಮ್ಮ ಸ್ನೇಹಿತರು ಅಥವಾ ಕುಟುಂಬದ ಸದಸ್ಯರೊಂದಿಗೆ ಸಂಪರ್ಕದಲ್ಲಿರಲಿ ಅಥವಾ ಕೆಲವು ಗ್ರಾಹಕ ಸೇವಾ ಪ್ರತಿನಿಧಿಗಳೊಂದಿಗೆ ಮಾತನಾಡಿರಿ, ನಿಮ್ಮ ಫೋನ್ ರಿಂಗ್ ಆದ ತಕ್ಷಣ ಚಲಿಸಿ. ಪ್ರತಿ ಹೆಜ್ಜೆಯೂ ಗಣನೆಯಾಗುತ್ತದೆ. ನಿಮ್ಮ ಕುಳಿತುಕೊಳ್ಳುವ ದಿನಚರಿಯನ್ನು ಮುರಿಯುವುದು ನಿಮ್ಮ ಬೆನ್ನಿನ ಸ್ನಾಯುಗಳಿಗೆ ಪ್ರಯೋಜನಕಾರಿ. ವಾಕಿಂಗ್ ನಿಮಗೆ ರಿಫ್ರೆಶ್, ಆರೋಗ್ಯ ಅನುಭವಿಸಲು ಸಹಾಯ ಮಾಡುತ್ತದೆ.
5. ಸ್ನಾನ (Bath)
ಈಜುವುದನ್ನು ಅತ್ಯುತ್ತಮ ವ್ಯಾಯಾಮವೆಂದು ಪರಿಗಣಿಸಲಾಗುತ್ತದೆ. ಆದರೆ ನೀವು ಪ್ರತಿದಿನ ಪೂಲ್‌ಗೆ ಹೋಗಲು ಸಾಧ್ಯವಾಗದಿದ್ದರೆ, ರಿಫ್ರೆಶ್ ವ್ಯಾಯಾಮಕ್ಕಾಗಿ ನಿಮ್ಮ ಸ್ನಾನದ ದಿನಚರಿಯನ್ನು ಬಳಸಿ. ಶವರ್ ಬದಲಿಗೆ ಬಕೆಟ್ ನೀರನ್ನು ಬಳಸಿ ಮತ್ತು ನೀವು ಸ್ನಾನ ಮಾಡುವಾಗ ಸ್ಟೂಲ್ ಮೇಲೆ ಕುಳಿತುಕೊಳ್ಳಬೇಡಿ. ಇದು ನಿಮ್ಮ ಬಕೆಟ್ ಅನ್ನು ತುಂಬಲು ಪ್ರತಿ ಬಾರಿಯೂ ಕುಳಿತುಕೊಳ್ಳುವಂತೆ ಮಾಡುತ್ತದೆ ಮತ್ತು ನೀವು ಮುಗಿಸುವ ವೇಳೆಗೆ, ನೀವು ವೃತ್ತಿಪರರಂತೆ ಸುಮಾರು 40-50 ಮಂಡಿ ವ್ಯಾಯಾಮ ಪೂರ್ಣಗೊಳಿಸುತ್ತೀರಿ. ಉತ್ತಮ ಫಲಿತಾಂಶ ಸಾಧಿಸಲು ಸ್ಕ್ವಾಟ್ ಮಾಡುವಾಗ ನಿಮ್ಮ ಬೆನ್ನನ್ನು ನೇರವಾಗಿ ಇರಿಸಿಕೊಳ್ಳಲು ಮರೆಯದಿರಿ.
6. ಡೆಸ್ಕರ್ಸೈಸ್ (Deskercise)
ತೂಕ ಹೆಚ್ಚಾಗಲು ದೊಡ್ಡ ಕಾರಣಗಳಲ್ಲಿ ಒಂದು ನಿಮ್ಮ ಕುಳಿತುಕೊಳ್ಳುವ ಸಮಯ ಹೆಚ್ಚಾಗಿರುವುದು. ಇಮೇಲ್‌ಗಳನ್ನು ಓದುವಾಗ ಸ್ವಲ್ಪ ಕೈ ತೂಕವನ್ನು ಎತ್ತಿರಿ ಮತ್ತು ಬೈಸೆಪ್ಸ್ ಕರ್ಲ್ಸ್ ಮಾಡಿ. ಕುರ್ಚಿಯ ಬದಲು ಸ್ಟೂಲ್‌ನಲ್ಲಿ ಕುಳಿತರೆ ಆಗಾಗ ಬೆನ್ನು ನೆಟ್ಟಿಗಿಡುವ ವ್ಯಾಯಾಮ ಮಾಡಬಹುದು. ಕುತ್ತಿಗೆಯನ್ನು ಆಗಾಗ ಅತ್ತಿತ್ತ ತಿರುಗಿಸುವುದು, ಕಾಲು ಸ್ಟ್ರೆಚಿಂಗ್, ಭುಜಗಳನ್ನು ಕೊಡವುವುದು, ಮಣಿಕಟ್ಟನ್ನು ತಿರುಗಿಸುವುದು ಮುಂತಾದ ಕೆಲಬವೇ ಸೆಕೆಂಡ್ ಬೇಡುವ ವ್ಯಾಯಾಮಗಳನ್ನು ಡೆಸ್ಕ್‌ನಲ್ಲಿ ಅಭ್ಯಾಸ ಮಾಡುವುದು ಫಿಟ್ ಮತ್ತು ಸಕ್ರಿಯ ದೇಹವನ್ನು ಸಾಧಿಸಲು ನಿಮಗೆ ಸಹಾಯ ಮಾಡುತ್ತದೆ.
Covid Fourth Wave: ಸೋಂಕಿನಿಂದ ಪಾರಾಗಲು ಸ್ಟಿರಾಯ್ಡ್ ಬಳಕೆ ನೆರವಾಗುತ್ತಾ ?
7. ಮಕ್ಕಳಂತೆ ರನ್ನಿಂಗ್ (Running)
ನಾವು ಚಿಕ್ಕ ಮಕ್ಕಳಾಗಿದ್ದಾಗ ಮನೆಯ ಸುತ್ತಲೂ ಓಡುತ್ತಾ ಇರುತ್ತಿದ್ದೆವು ನೆನಪಿದೆಯೇ? ಪ್ರತಿ ಬಾರಿ ಯಾರಾದರೂ ಬಾಗಿಲು ತಟ್ಟಿದಾಗ, ಬೇರೆಯವರು ಎದ್ದೇಳಲು ಕಾಯುವ ಬದಲು, ನೀವೇ ಹೋಗಿ. ಮಕ್ಕಳಂತೆ ಚುರುಕಾಗಿರುವು ತುಂಬಾ ಮಜಾ ಕೊಡುತ್ತದೆ ಮತ್ತು ನಿಮ್ಮ ದೇಹದಲ್ಲಿನ ಯಾವುದೇ ಆಲಸ್ಯವನ್ನು ಹೋಗಳಾಡಿಸಲು ಸಹಾಯ ಮಾಡುತ್ತದೆ. ನೀವು ಈ ಚಿಕ್ಕ ದಿನಚರಿಗಳನ್ನು ಅನುಸರಿಸಿದರೆ, ನೀವು ದಿನವಿಡೀ ಕ್ಯಾಲೊರಿಗಳನ್ನು ಸುಡುತ್ತೀರಿ ಮತ್ತು ಸದಾ ತೂಕವನ್ನು ಕಳೆದುಕೊಳ್ಳುತ್ತಿರುತ್ತೀರಿ!