ಮಕ್ಕಳಲ್ಲಿ ಹೆಪಟೈಟಿಸ್ ಪ್ರಕರಣಗಳು ಇದ್ದಕ್ಕಿದ್ದಂತೆ ಹೆಚ್ಚಾಗ್ತಿದೆ. ಅದರ ಬಗ್ಗೆ ಪೋಷಕರಿಗೆ ಎಚ್ಚರಿಕೆ ನೀಡಲಾಗುತ್ತಿದೆ. ಈ ರೋಗಕ್ಕೆ ಕಾರಣವೇನು ಎಂಬುದು ಪತ್ತೆಯಾಗ್ತಿಲ್ಲ. ಅದ್ರ ಲಕ್ಷಣ ಗೊತ್ತಾಗ್ತಿದ್ದಂತೆ ಸೂಕ್ತ ಚಿಕಿತ್ಸೆ ನೀಡುವ ಅಗತ್ಯವಿದೆ. ಮಿತಿ ಮೀರಿದ್ರೆ ಪ್ರಾಣ ಹೋಗುವ ಅಪಾಯವಿದೆ.
ಕೊರೊನಾ (Corona) ವೈರಸ್ ಮತ್ತೆ ಆತಂಕ ಮೂಡಿಸಿದೆ. ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ಮಕ್ಕಳಲ್ಲೂ (Children) ಕೊರೊನಾ ಭಯ (Fear) ಹೆಚ್ಚಾಗಿದೆ. ಈ ಮಧ್ಯೆ ಪಾಲಕರ ಚಿಂತೆ ಹೆಚ್ಚಿಸುವ ಸುದ್ದಿಯೊಂದಿದೆ. ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಹೆಪಟೈಟಿಸ್ ಸಮಸ್ಯೆ ಜೋರಾಗಿದೆ. ಈ ಬಗ್ಗೆ ಪಾಲಕರಿಗೆ ಎಚ್ಚರಿಕೆ ನೀಡಲಾಗ್ತಿದೆ. ವಿಶ್ವದಾದ್ಯಂತ 169 ಮಕ್ಕಳು ಹೆಪಟೈಟಿಸ್ ನಿಂದ ಬಳಲುತ್ತಿದ್ದಾರೆ. ಬ್ರಿಟನ್ ನಲ್ಲಿ 114 ಮಕ್ಕಳಿಗೆ ಹೆಪಟೈಟಿಸ್ ಕಾಣಿಸಿಕೊಂಡಿದೆ. ಈ ಬಗ್ಗೆ ವಿಶ್ವ ಆರೋಗ್ಯ ಸಂಘಟನೆ (WHO) ಕೂಡ ಅಲರ್ಟ್ ಘೋಷಣೆ ಮಾಡಿದೆ. ಮಕ್ಕಳಲ್ಲಿ ಅತಿಸಾರ, ವಾಕರಿಕೆ ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ ಎಂದು ವೈದ್ಯರು ವರದಿ ಮಾಡಿದ್ದಾರೆ. ಚರ್ಮದ ಮೇಲೆ ಹಳದಿ ಬಣ್ಣ, ಅಂದರೆ ಕಾಮಾಲೆಯಂತ ಲಕ್ಷಣಗಳು ಕಾಣಿಸಿಕೊಂಡಿವೆ ಎಂದು ತಜ್ಞರು ಹೇಳಿದ್ದಾರೆ.
ಯುಕೆ ಆರೋಗ್ಯ ಭದ್ರತಾ ಸಂಸ್ಥೆ (UKHSA) ಪ್ರಕಾರ, ಅಡೆನೊವೈರಸ್ ಸೋಂಕು ಇದಕ್ಕೆ ಕಾರಣ ಎನ್ನಲಾಗ್ತಿದೆ. ವರದಿ ಪ್ರಕಾರ, ವರ್ಷದ ಆರಂಭದಲ್ಲಿ ಹೆಪಟೈಟಿಸ್ ಕಾಣಿಸಿಕೊಂಡ ಮಕ್ಕಳಲ್ಲಿ ಶೇಕಡಾ 75 ಮಕ್ಕಳಲ್ಲಿ ಅಡೆನೊವೈರಸ್ ಪತ್ತೆಯಾಗಿದೆ.
ಒಂದರಿಂದ ಐದು ವರ್ಷದ ಮಕ್ಕಳಲ್ಲಿ ಅಪಾಯ ಹೆಚ್ಚು : ಹೆಪಟೈಟಿಸ್ ನಿಂದ ಬಳಲುತ್ತಿರುವ ಶೇಕಡಾ 16ರಷ್ಟು ಮಕ್ಕಳಲ್ಲಿ ಕೊರೊನಾ ಸೋಂಕಿತ್ತು ಎಂದು ತಜ್ಞರು ಹೇಳಿದ್ದಾರೆ. ಲ್ಯಾಬ್ ವರದಿ ಪ್ರಕಾರ, ಒಂದರಿಂದ ಐದು ವರ್ಷದ ಮಕ್ಕಳಲ್ಲಿ ಅಪಾಯ ಹೆಚ್ಚೆಂದು ತಿಳಿದು ಬಂದಿದೆ. ಯುಕೆ ಆರೋಗ್ಯ ಭದ್ರತಾ ಸಂಸ್ಥೆ ವೈದ್ಯ ಮೀರಾ ಚಂದ್, ಹೆಪಟೈಟಿಸ್ ಬಗ್ಗೆ ಪಾಲಕರು ಎಚ್ಚರಿಕೆಯಿಂದಿರಬೇಕು. ರೋಗದ ಲಕ್ಷಣ ಕಾಣಿಸಿಕೊಳ್ತಿದ್ದಂತೆ ವೈದ್ಯರನ್ನು ಸಂಪರ್ಕಿಸಿ ಎಂದು ಅವರು ಹೇಳಿದ್ದಾರೆ.
ಸೋಂಕಿನ ಸರಪಳಿ ಮುರಿಯೋದು ಹೇಗೆ? : ಈ ರೋಗವನ್ನು ಗಂಭೀರವಾಗಿ ಪರಿಗಣಿಸುವ ಅವಶ್ಯಕತೆಯಿದೆ. ಆಗಾಗ ಕೈ ತೊಳೆಯುವುದು ಹಾಗೂ ನೈರ್ಮಲ್ಯದ ಬಗ್ಗೆ ಹೆಚ್ಚು ಗಮನ ನೀಡಬೇಕಾಗಿದೆ. ಇವುಗಳ ಪಾಲನೆ ಮಾಡಿದ್ರೆ ಇದು ಅಡೆನೊವೈರಸ್ ಸೇರಿದಂತೆ ಅನೇಕ ರೀತಿಯ ಸಾಮಾನ್ಯ ಸೋಂಕುಗಳನ್ನು ಹರಡುವ ಅಪಾಯವನ್ನು ಕಡಿಮೆ ಮಾಡುತ್ತದೆ. ವಾಂತಿ ಅಥವಾ ಭೇದಿಯಂತಹ ಜಠರಗರುಳಿನ ಸೋಂಕಿನ ಲಕ್ಷಣಗಳು ಗೋಚರಿಸಿದರೆ ಮಕ್ಕಳನ್ನು ಅಪ್ಪಿತಪ್ಪಿಯೂ ಶಾಲೆಗೆ ಕಳುಹಿಸಬೇಡಿ. ಇದ್ರಿಂದ ಬೇರೆ ಮಕ್ಕಳಿಗೆ ಸೋಂಕು ಹರಡುವ ಅಪಾಯವಿರುತ್ತದೆ. ಮಕ್ಕಳು ಗುಣಮುಖರಾಗಿದ್ದು, 48 ಗಂಟೆಯವರೆಗೆ ಯಾವುದೇ ಲಕ್ಷಣ ಕಂಡಿಲ್ಲವೆಂದ್ರೆ ಅವರನ್ನು ನೀವು ಶಾಲೆಗೆ ಕಳುಹಿಸಬಹುದು.
HEAT WAVE: ಹೆಚ್ಚುತ್ತಿರುವ ತಾಪಮಾನದ ಮಧ್ಯೆ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ ?
ಯಾವ ದೇಶದಲ್ಲಿ ಹೆಚ್ಚಾಗ್ತಿದೆ ಪ್ರಕರಣ : ಮಕ್ಕಳಲ್ಲಿ ಕಾಣಿಸಿಕೊಳ್ತಿರುವ ಹೆಪಿಟೈಟಿಸ್ ಯುಕೆಯಲ್ಲಿ ಹೆಚ್ಚಿದೆ. ಯುಕೆಯಲ್ಲಿ 114 ಮಕ್ಕಳಿಗೆ ಈ ಸಮಸ್ಯೆ ಕಾಣಿಸಿಕೊಂಡಿದೆ. ಸ್ಪೇನ್ ನಲ್ಲಿ 13, ಇಸ್ರೇಲ್ ನಲ್ಲಿ 12 , ಅಮೆರಿಕದಲ್ಲಿ 9, ಡೆನ್ಮಾರ್ಕ್ ನಲ್ಲಿ6 , ಐರ್ಲೆಂಡ್ ನಲ್ಲಿ 5, ನೆದರ್ಲ್ಯಾಂಡ್ಸ್ ನಲ್ಲಿ 4 , ಫ್ರಾನ್ಸ್ ನಲ್ಲಿ 2, ನಾರ್ವೆಯಲ್ಲಿ 2, ರೊಮೇನಿಯಾದಲ್ಲಿ 2 ಮತ್ತು ಬೆಲ್ಜಿಯಂನಲ್ಲಿ 1 ಪ್ರಕರಣ ಪತ್ತೆಯಾಗಿದೆ. ವರದಿ ಪ್ರಕಾರ ಈ ರೋಗದಿಂದ ಒಂದು ಮಗು ಸಾವನ್ನಪ್ಪಿದೆ. ಯಾವ ದೇಶದಲ್ಲಿ ಮಗು ಸಾವನ್ನಪ್ಪಿದೆ ಎಂಬ ಬಗ್ಗೆ ಯಾವುದೇ ಮಾಹಿತಿಯಿಲ್ಲ. 17 ಮಕ್ಕಳ ಸ್ಥಿತಿ ಗಂಭೀರವಾಗಿದ್ದುಮ ಯಕೃತ್ತಿನ ಕಸಿ ಅಗತ್ಯವಿತ್ತು. ಕೋವಿಡ್-19 ಲಸಿಕೆಯಿಂದ ಮಕ್ಕಳ ದೇಹಕ್ಕೆ ಯಾವುದೇ ಹಾನಿ ಇಲ್ಲ ಎಂದು ತಜ್ಞರು ಹೇಳಿದ್ದಾರೆ.
Fact Check: ತಣ್ಣಗಾದ ನಿಂಬೆ ಸಿಪ್ಪೆ ಕ್ಯಾನ್ಸರ್ ಗುಣಪಡಿಸಬಹುದು ಎಂಬುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ
ಹೆಪಟೈಟಿಸ್‌ನ ಲಕ್ಷಣಗಳು : ಮೂತ್ರ ಹಳದಿಯಾಗುವುದು, ಮಲದ ಬಣ್ಣ ಬದಲಾಗುವುದು, ಚರ್ಮದ ತುರಿಕೆ, ಕಣ್ಣುಗಳು ಅಥವಾ ಚರ್ಮದ ಮೇಲೆ ಹಳದಿ ಬಣ್ಣ, ಸ್ನಾಯು-ಕೀಲು ನೋವು, ಅತಿಯಾದ ಜ್ವರ, ಅನಾರೋಗ್ಯ, ಹಸಿವಾಗದಿರುವುದು, ಹೊಟ್ಟೆ ನೋವು ಇವೆಲ್ಲವೂ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತವೆ.