Kidney Health: ಬರಲಿದೆ ಬೇಸಿಗೆ, ಕಿಡ್ನಿ ಕಾಪಾಡಿಕೊಳ್ಳಿ ಹೀಗೆ...

By Suvarna News  |  First Published Feb 14, 2022, 7:37 PM IST

ಬೇಸಿಗೆಯಲ್ಲಿ ನಿಮ್ಮ ಕಿಡ್ನಿಯ ಆರೋಗ್ಯದ ಬಗ್ಗೆ ನೀವು ಹೆಚ್ಚಿನ ಗಮನ ಹರಿಸಬೇಕು. ಯಾಕೆ ಗೊತ್ತೆ? ಇಲ್ಲಿದೆ ವಿವರ.


ಇನ್ನೇನು ಬೇಸಿಗೆ (Summer) ಬರುತ್ತಿದೆ. ಬೇಸಿಗೆಯಲ್ಲಿ ನಿಮ್ಮ ಚರ್ಮದ (Skin) ಆರೋಗ್ಯದಂತೆ ಕಿಡ್ನಿಯ (Kidney) ಆರೋಗ್ಯವನ್ನೂ ಸರಿಯಾಗಿ ಕಾಪಾಡಿಕೊಳ್ಳುವುದು ಅಗತ್ಯ. ಅದ್ಯಾಕೆ ಅಂತೀರಾ? ಬೇಸಿಗೆಯಲ್ಲಿ ಬಿಸಿಲು ಹೆಚ್ಚು. ದೇಹದಲ್ಲಿರುವ ನೀರಿನಂಶವೆಲ್ಲವೂ ಬೆವರಾಗಿ ಹೊರಟುಹೋಗುತ್ತದೆ. ನೀವು ಸಾಕಷ್ಟು ನೀರನ್ನು ಸೇವಿಸದೆ ಹೋದರೆ ಕಿಡ್ನಿಗೆ ಕೆಲಸವಿರುವುದಿಲ್ಲ ಅಥವಾ ಲವಣಾಂಶಗಳು ಕಿಡ್ನಿಯಲ್ಲಿ ಕಲ್ಲಾಗಿ ಶೇಖರಗೊಳ್ಳಲು ಆರಂಭಿಸುತ್ತವೆ. ಬೇಸಿಗೆಯಲ್ಲಿ ದಾಹವಾಯ್ತೆಂದು ಲಘು ಪಾನೀಯಗಳನ್ನು (Soft drinks) ಹೆಚ್ಚಾಗಿ ಕುಡಿದರೆ ಅದರಲ್ಲಿರುವ ಸಕ್ಕರೆಯ (Sugar) ಅಂಶ ಕಿಡ್ನಿಯನ್ನು ಹಾಳುಗೆಡವುತ್ತದೆ. ಬೇಸಿಗೆಯಲ್ಲಿ ಚಳಿಗಾಲಕ್ಕಿಂತ (Winter) ಬೇಗನೇ ಎದ್ದು ವ್ಯಾಯಾಮ (Excersice) ಮಾಡುತ್ತೀರಿ. ದೇಹದ ನೀರಿನಂಶ ಈಗ ಕಾಪಾಡಿಕೊಳ್ಳುವುದು ಅಗತ್ಯ.

ಯಾವ ಆಹಾರ ಸೇವಿಸಬಾರದು?
ಮೂತ್ರಪಿಂಡ ಅಥವಾ ಕಿಡ್ನಿಗಳನ್ನು ದೀರ್ಘಕಾಲದ ವರೆಗೂ ಆರೋಗ್ಯವಾಗಿರಿಸಿಕೊಳ್ಳಲು ಈ ಕೆಳಗೆ ಸೂಚಿಸುವ ಆಹಾರಗಳನ್ನು ಆದಷ್ಟು ಅವಾಯ್ಡ್ ಮಾಡಬೇಕು ಎಂದು ವೈದ್ಯರು ಸೂಚಿಸುತ್ತಾರೆ.

Tap to resize

Latest Videos

undefined

Brain Deathಗೂ ಸಾವಿಗೂ ಇದೆಯೇ ವ್ಯತ್ಯಾಸ?

ಉಪ್ಪು: (Salt) ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವವರು ಅಥವಾ ಕಿಡ್ನಿಗಳ ಆರೋಗ್ಯ ಕಾಪಾಡಿಕೊಳ್ಳಬೇಕು ಎನ್ನುವವರು ಉಪ್ಪನ್ನು ತೀರಾ ಕಡಿಮೆ ಸೇವಿಸಬೇಕು. ಉಪ್ಪಿನ ಅಂಶ ದೇಹಕ್ಕೆ ಬೇಕೇ ಬೇಕು. ಆದರೆ ಉಪ್ಪನ್ನು ಹಿತಮಿವಾಗಿ ಸೇವಿಸುವುದರಿಂದ ಕಿಡ್ನಿ ತುಂಬಾ ದಿನಗಳ ವರೆಗೆ ಸೇಫಾಗಿರುತ್ತವೆ. ಉಪ್ಪನ್ನು ಹೆಚ್ಚು ತಿಂದರೆ ಮೂತ್ರಪಿಂಡಗಳ ಕಾರ್ಯಗಳ ಮೇಲೆ ಪರಿಣಾಮ ಬೀರುತ್ತದೆ.

ರೆಡ್ ಮೀಟ್: (Red Meat) ರೆಡ್ ಮೀಟ್ ಸೇವನೆ ಕಡಿಮೆ ಮಾಡಬೇಕು. ಈ ಮಾಂಸವನ್ನು ಹೆಚ್ಚಾಗಿ ಸೇವಿಸಿದರೆ ದೇಹದ ಚಯಾಪಚಯ ಕ್ರಿಯೆಗೆ ತೊಂದರೆಯಾಗುತ್ತದೆ ಈ ಮೂಲಕ ಕಿಡ್ನಿಯಲ್ಲಿ ಹರಳಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಕೃತಕ ಸಕ್ಕರೆ: (Added sugar) ಸಕ್ಕರೆ ಅಥವಾ ಕೃತಕ ಸಕ್ಕರೆಗೆ ಆದಷ್ಟು ಬೇಗ ಗುಡ್‌ ಬೈ ಹೇಳಿ. ಈ ಸಕ್ಕರೆಯಿಂದ ಮಾಡಿದ ಸಿಹಿ ತಿಂಡಿ, ಕೇಕ್‌. ಕೂಲ್‌ಡ್ರಿಂಕ್ಸ್ ಸೇವನೆ ಮಾಡಿದರೆ ಇದರಲ್ಲಿನ ಕೃತಕ ಸಕ್ಕರೆ ಅಂಶ ಮೂತ್ರಪಿಂಡಗಳ ಮೇಲೆ ಅಡ್ಡ ಪರಿಣಾಮ ಬೀರುತ್ತದೆ.

ಕೆಫೀನ್‌: (Caffiene) ಕಾಫಿ ಸೇವನೆ ಕಿಡ್ನಿ ಆರೋಗ್ಯ ಕಾಪಾಡುವಲ್ಲಿ ನೆರವಾಗುವುದಿಲ್ಲ. ಇದರ ಹೆಚ್ಚು ಸೇವನೆ ಕಿಡ್ನಿಯನ್ನು ಹಾಳು ಮಾಡುತ್ತದೆ. ಕೆಫೇನ್‌ ಮೂತ್ರಪಿಂಡಗಳಿಗೆ ಹಾನಿಯುಂಟು ಮಾಡುತ್ತದೆ. ಕಾಫಿ ಹೆಚ್ಚಾಗಿ ಸೇವಿಸಿದರೆ ಮೂತ್ರಪಿಂಡದಲ್ಲಿ ಕಲ್ಲಾಗುವ ಸಾಧ್ಯತೆ ಕೂಡ ಹೆಚ್ಚಿರುತ್ತದೆ.

ಮಧ್ಯಪಾನ: ಮಧ್ಯಪಾನ ದೇಹದ ಆರೋಗ್ಯಕ್ಕೆ ಎಲ್ಲಾ ರೀತಿಯಿಂದಲೂ ಅಪಾಯವಿದೆ. ಕಿಡ್ನಿಗೂ ಹೊರತಾಗಿಲ್ಲ. ಆಲ್ಕೋಹಾಲ್‌ (Alcohol) ಯಕೃತ್‌ಗೆ ತೊಂದರೆ ಮಾಡುತ್ತದೆ ಹಾಗು ಇದು ಮೂತ್ರಪಿಂಡಗಳ ಕಾರ್ಯವನ್ನು ದುರ್ಬಲಗೊಳಿಸುತ್ತದೆ.

Chest Pain and Gastric: ಎದೆಯುರಿ ಉಪಶಮನಕ್ಕೆ ಸಿಂಪಲ್ ಟಿಪ್ಸ್ ಇಲ್ಲಿವೆ

ಯಾವುದನ್ನು ಸೇವಿಸಬೇಕು?
- ಆಂಟಿಆಕ್ಸಿಡೆಂಟ್ (Anti Oxydents) ಅಂಶದ ಪ್ರಮಾಣ ಹೆಚ್ಚಾಗಿರುವ, ವಿಟಮಿನ್-ಸಿ (Vitamin C) ಅಂಶವಿರುವ, ನಿಮ್ಮ ದೇಹದ ರೋಗನಿರೋಧಕ (Immunity) ವ್ಯವಸ್ಥೆಯನ್ನು ಬಲಗೊಳಿಸಿ ಆರೋಗ್ಯಕರವಾಗಿ ಕಾರ್ಯನಿರ್ವಹಿಸುವ ಆಹಾರವು ಮೂತ್ರಪಿಂಡಗಳಿಗೆ ದೇಹದಲ್ಲಿ ಯಾವುದಾದರೂ ತೊಂದರೆ ಉಂಟಾಗುತ್ತಿದ್ದರೆ ಅದನ್ನು ತಡೆಯುತ್ತದೆ. ವಿಟಮಿನ್ ಸಿ ನಿಮ್ಮ ದೇಹದಲ್ಲಿ ಕೆಂಪು ರಕ್ತ ಕಣಗಳ ಉತ್ಪತ್ತಿಯನ್ನು ಹೆಚ್ಚು ಮಾಡುತ್ತದೆ. ಸೀಬೆಹಣ್ಣು, ಬ್ಲೂ ಬೆರ್ರಿ ಹಣ್ಣು, ಟೊಮೆಟೋ ಹಣ್ಣು, ಚೆರ್ರಿ ಹಣ್ಣು, ಕಿತ್ತಳೆ ಹಣ್ಣು, ಬ್ಲಾಕ್ ಬೆರ್ರಿ ಹಣ್ಣುಗಳು, ಪಾಲಕ್ ಸೊಪ್ಪು ಇತ್ಯಾದಿ ವಿಟಮಿನ್ ಸಿ ಅಂಶದ ಪ್ರಮಾಣದಲ್ಲಿ ಹೆಚ್ಚಾಗಿವೆ.

​- ನಿಮ್ಮ ದೇಹದಲ್ಲಿ ಕೊಬ್ಬಿನ ಅಂಶ ಅತಿಯಾಗಿ ಕಂಡುಬಂದಿದೆ ಎಂದು ವೈದ್ಯರು ಹೇಳಿದರೆ ನೀವು ವಿಟಮಿನ್ ಡಿ (Vitamin D)  ಇರುವ ಆಹಾರಗಳನ್ನು ನಿಮ್ಮ ಆಹಾರ ಪದ್ಧತಿಯಲ್ಲಿ ಸೇರಿಸಿಕೊಂಡರೆ ಉತ್ತಮ. ಏಕೆಂದರೆ ಮೂತ್ರಪಿಂಡಗಳ ಸ್ವಚ್ಛತೆಯಲ್ಲಿ ವಿಟಮಿನ್ ಡಿ ಅಂಶ ಹೆಚ್ಚು ಕೆಲಸ ಮಾಡುತ್ತದೆ. ಮೂತ್ರಪಿಂಡಗಳಲ್ಲಿ ಕಂಡುಬರುವ ವಿಷಕಾರಿ ಅಂಶವನ್ನು ತೆಗೆದು ಹಾಕುವ ಜೊತೆಗೆ ನಿಮ್ಮ ದೇಹದಲ್ಲಿ ಬೇಡದ ತ್ಯಾಜ್ಯ ನಿರ್ವಹಣೆಯಲ್ಲಿ ವಿಟಮಿನ್-ಡಿ ಅಂಶ ಹೆಚ್ಚು ಕೆಲಸ ಮಾಡುತ್ತದೆ. ಆಹಾರದಲ್ಲಿ ಕಂಡು ಬರುವ ಕ್ಯಾಲ್ಸಿಯಂ ಅಂಶವನ್ನು ನಿಮ್ಮ ದೇಹ ಹೀರಿಕೊಳ್ಳುವಂತೆ ನೋಡಿಕೊಳ್ಳುವ ಕಾರ್ಯ ನಿರ್ವಹಣೆಯನ್ನು ವಿಟಮಿನ್-ಡಿ ಪೂರೈಸುತ್ತದೆ. ಕೋಳಿ ಮೊಟ್ಟೆ, ಮೊಸರು, ಕಿತ್ತಳೆ ಹಣ್ಣಿನ ಜ್ಯೂಸ್ ಇತ್ಯಾದಿಗಳಲ್ಲಿ ವಿಟಮಿನ್ ಡಿ ಅಂಶ ಹೆಚ್ಚು ಸಿಗುತ್ತದೆ.

- ನಿಮ್ಮ ದೇಹದ ರೋಗನಿರೋಧಕ ವ್ಯವಸ್ಥೆಯಲ್ಲಿ ವಿಟಮಿನ್ ಇ (Vitamin E) ಅಂಶದ ಪಾತ್ರ ಹೆಚ್ಚಾಗಿರುತ್ತದೆ. ಇದು ನಿಮ್ಮ ಮೂತ್ರಪಿಂಡಗಳನ್ನು ಫ್ರೀ ರಾಡಿಕಲ್ ಅಂಶಗಳ ಹಾನಿಯ ವಿರುದ್ಧ ಹೋರಾಡಿ ತಪ್ಪಿಸುತ್ತದೆ. ಇಷ್ಟೇ ಅಲ್ಲದೆ ನಿಮ್ಮ ದೇಹದಿಂದ ಆಕ್ಸಿಡೇಟಿವ್ ಒತ್ತಡವನ್ನು ದೂರ ಮಾಡುವ ಜೊತೆಗೆ ದೇಹದ ಎಲ್ಲಾ ಭಾಗಗಳಿಗೆ ಆಮ್ಲಜನಕವನ್ನು ಪೂರೈಸಿ, ಪೌಷ್ಠಿಕಾಂಶಗಳನ್ನು ಮತ್ತು ರಕ್ತ ಸಂಚಾರವನ್ನು ಒದಗಿಸುತ್ತದೆ. ಮೂತ್ರಪಿಂಡಗಳ ಸೋಂಕನ್ನು ನಿವಾರಣೆ ಮಾಡುವಲ್ಲಿ ವಿಟಮಿನ್ ಇ ಅಂಶದ ಪಾತ್ರವನ್ನು ಮರೆಯುವಂತಿಲ್ಲ. ನಿಮ್ಮ ಆಹಾರದಲ್ಲಿ ಮಾವಿನಹಣ್ಣು, ಬ್ರೊಕೋಲಿ, ಪೀನಟ್ ಬಟರ್, ಬಾದಾಮಿ ಬೀಜಗಳು, ಟೊಮೇಟೊ, ಪಾಲಕ್ ಸೊಪ್ಪು ಇತ್ಯಾದಿಗಳನ್ನು ಸೇರಿಸಿಕೊಂಡರೆ ಮೂತ್ರಪಿಂಡಗಳ ಆರೋಗ್ಯ ರಕ್ಷಣೆ ಮಾಡಿಕೊಳ್ಳಬಹುದು.

click me!