Kidney Health: ನಿಮ್ಮ ಕಿಡ್ನಿಗಳು ಸರಿಯಾಗಿ ಕೆಲಸ ಮಾಡುತ್ತಿವೆಯಾ? ಈ ಲಕ್ಷಣಗಳನ್ನು ಗಮನಿಸಿ

By Suvarna NewsFirst Published Dec 21, 2021, 12:33 PM IST
Highlights

ಕಿಡ್ನಿಗಳು ನಮ್ಮ ದೇಹದ ಪ್ರಮುಖ ಅಂಗಗಳಲ್ಲಿ ಒಂದು. ಇವು ಸರಿಯಾಗಿ ಕೆಲಸ ಮಾಡದಿದ್ದರೆ ಕೆಲವು ಲಕ್ಷಣಗಳನ್ನು ದೇಹ ತೋರಿಸಲು ಆರಂಭಿಸುತ್ತದೆ. ಆ ಲಕ್ಷಣಗಳು ಹಾಗೂ ಕಿಡ್ನಿಯ ಆರೋಗ್ಯ ಕಾಪಾಡಲು ನೀವು ಅನುಸರಿಸಬೇಕಾದ ಕ್ರಮಗಳು ಇಲ್ಲಿವೆ.

ನಮ್ಮ ಮೂತ್ರಪಿಂಡಗಳು (Kidneys) ದೇಹದಿಂದ ತ್ಯಾಜ್ಯವನ್ನು ಫಿಲ್ಟರ್ ಮಾಡುವ ಜವಾಬ್ದಾರಿಯನ್ನು ಹೊಂದಿವೆ. ದೈಹಿಕ ಗಾಯ, ಅಧಿಕ ರಕ್ತದೊತ್ತಡ (Blood preasure) ಅಥವಾ ಮಧುಮೇಹ(Diabetes)ದಂತಹ ಪರಿಸ್ಥಿತಿಗಳಿಂದ ಮೂತ್ರಪಿಂಡಗಳು ಹಾನಿಗೊಳಗಾದಾಗ, ಅವು ದೇಹದಿಂದ ವಿಷವನ್ನು ಫಿಲ್ಟರ್ ಮಾಡಲು ಸಾಧ್ಯವಿಲ್ಲ. ಇದು ವಿಷ ಸಂಗ್ರಹಗೊಳ್ಳಲು ಕಾರಣವಾಗುತ್ತದೆ. ಮೂತ್ರಪಿಂಡದ ಹಾನಿಯ ಚಿಹ್ನೆಗಳು ತುಂಬಾ ಸೂಕ್ಷ್ಮವಾಗಿದ್ದು, ಆರಂಭಿಕ ವರ್ಷಗಳಲ್ಲಿ ಇದು ಸಾಮಾನ್ಯವಾಗಿ ಗಮನಕ್ಕೆ ಬರುವುದಿಲ್ಲ. ಇದೇ ಕಾರಣಕ್ಕೆ ಇದನ್ನು ‘ಸೈಲೆಂಟ್ ಕಿಲ್ಲರ್’ (Silent Killer) ಎಂದೂ ಕರೆಯುತ್ತಾರೆ. ವಿಷಕಾರಿ ಮೂತ್ರಪಿಂಡದ ಕೆಲವು ಸಾಮಾನ್ಯ ಚಿಹ್ನೆಗಳು ಇಲ್ಲಿವೆ.

ಊದಿಕೊಂಡ ಕಣಕಾಲುಗಳು ಮತ್ತು ಪಾದಗಳು 
ಹೊಟ್ಟೆಯ ಕೆಳಭಾಗದಲ್ಲಿರುವ ಕಿಡ್ನಿಗಳು ದೇಹದಿಂದ ತ್ಯಾಜ್ಯ ಮತ್ತು ಹೆಚ್ಚುವರಿ ಸೋಡಿಯಂ ಅನ್ನು ಫಿಲ್ಟರ್ ಮಾಡಲು ಸಹಾಯ ಮಾಡುತ್ತವೆ. ಮೂತ್ರಪಿಂಡಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗದಿದ್ದಾಗ, ದೇಹವು ಸೋಡಿಯಂ ಅನ್ನು ಉಳಿಸಿಕೊಳ್ಳಲು ಪ್ರಾರಂಭಿಸುತ್ತದೆ. ಇದು ಅಂತಿಮವಾಗಿ ಕಣಕಾಲುಗಳು ಮತ್ತು ಪಾದ ಊತಕ್ಕೆ ಕಾರಣವಾಗುತ್ತದೆ. ಈ ಸ್ಥಿತಿಯನ್ನು ಎಡಿಮಾ ಎಂದು ಕರೆಯಲಾಗುತ್ತದೆ. ಕಣ್ಣುಗಳು ಮತ್ತು ಮುಖದಂತಹ ದೇಹದ ಇತರ ಭಾಗಗಳಲ್ಲಿ ಸಹ ಊತವನ್ನು ಗಮನಿಸಬಹುದು, ಆದರೆ ಇದು ಪ್ರಾಥಮಿಕವಾಗಿ ಕೈಗಳು, ತೋಳುಗಳು, ಪಾದಗಳು, ಕಣಕಾಲುಗಳು ಮತ್ತು ಕಾಲುಗಳ ಮೇಲೆ ಪರಿಣಾಮ ಬೀರುತ್ತದೆ.

Vaginal Swelling : ಮುಜುಗರ ತರಿಸುವ ಯೋನಿಯ ಊತ, ತುರಿಕೆಗೆ ಇವು ಕಾರಣ

ದೌರ್ಬಲ್ಯ ಮತ್ತು ದಣಿವು (Fatigue)
ಸಾರ್ವಕಾಲಿಕ ದಣಿದ ಅಥವಾ ದುರ್ಬಲ ಭಾವನೆ ಸಾಮಾನ್ಯವಾಗಿ ಯಕೃತ್ತಿನ ಸಮಸ್ಯೆಯ ಆರಂಭಿಕ ಚಿಹ್ನೆಯಾಗಿದೆ. ಮೂತ್ರಪಿಂಡದ ಅಸ್ವಸ್ಥತೆಯು ತೀವ್ರವಾಗುತ್ತಿದ್ದಂತೆ, ವ್ಯಕ್ತಿಯು ಹೆಚ್ಚು ಹೆಚ್ಚು ದುರ್ಬಲ ಮತ್ತು ದಣಿದ ಭಾವನೆಯನ್ನು ಅನುಭವಿಸುತ್ತಾನೆ. ಕೆಲವು ಸರಳವಾದ ಮನೆಕೆಲಸಗಳನ್ನು ಮಾಡುವುದು ಅಥವಾ ಸ್ವಲ್ಪ ನಡೆಯುವುದು ಸಹ ವ್ಯಕ್ತಿಗೆ ಕಷ್ಟಕರವಾಗಿ ಕಾಣಿಸಬಹುದು. ಮೂತ್ರಪಿಂಡಗಳ ಅಸಮರ್ಥತೆಯಿಂದಾಗಿ ರಕ್ತದಲ್ಲಿ ವಿಷಗಳು ಸಂಗ್ರಹವಾಗುವುದರಿಂದ ಇದು ಸಂಭವಿಸುತ್ತದೆ.

ಹಸಿವು ಕಡಿಮೆಯಾಗುವುದು (Less hunger)
ದೇಹದಲ್ಲಿನ ವಿಷ ಮತ್ತು ತ್ಯಾಜ್ಯಗಳ ಸಂಗ್ರಹಣೆಯು ಹಸಿವನ್ನು ಕಡಿಮೆ ಮಾಡುತ್ತದೆ, ಅಂತಿಮವಾಗಿ ತೂಕ ನಷ್ಟಕ್ಕೆ ಕಾರಣವಾಗುತ್ತದೆ. ಕಡಿಮೆ ಹಸಿವಿನ ಮತ್ತೊಂದು ಕಾರಣವೆಂದರೆ ಮುಂಜಾನೆ ವಾಕರಿಕೆ ಮತ್ತು ವಾಂತಿ. ಈ ಅಹಿತಕರ ಭಾವನೆಯಿಂದಾಗಿ ಆಹಾರ ಸೇರಲಿಕ್ಕಿಲ್ಲ. ವ್ಯಕ್ತಿ ಸಾರ್ವಕಾಲಿಕ ಹೊಟ್ಟೆ ತುಂಬಿದ ಅನುಭವ ಹೊಂದಬಹುದು. ಇದು ಆತಂಕಕಾರಿ ಚಿಹ್ನೆಯಾಗಿರಬಹುದು.

Latest Videos

Bedroom secret: ಹುಡುಗಿಯರಿಗೆ ಸೆಕ್ಸ್‌ನಲ್ಲಿ ಏನಿಷ್ಟ..?

ಮೂತ್ರದ ಆವರ್ತನದಲ್ಲಿ ಬದಲಾವಣೆಗಳು (Urination)
ಒಬ್ಬ ಸಾಮಾನ್ಯ ಆರೋಗ್ಯವಂತ ವ್ಯಕ್ತಿ ದಿನಕ್ಕೆ 6-10 ಬಾರಿ ಮೂತ್ರ ವಿಸರ್ಜಿಸುತ್ತಾನೆ. ಅದಕ್ಕಿಂತ ಹೆಚ್ಚಾಗಿ ಟಾಯ್ಲೆಟ್ ಬಳಸಿದರೆ ಮೂತ್ರಪಿಂಡದ ಹಾನಿಯ ಸೂಚನೆಯಾಗಿರಬಹುದು. ಮೂತ್ರಪಿಂಡದ ಸಮಸ್ಯೆಯ ಸಂದರ್ಭದಲ್ಲಿ ವ್ಯಕ್ತಿಯು ತುಂಬಾ ಕಡಿಮೆ ಅಥವಾ ಆಗಾಗ್ಗೆ ಮೂತ್ರ ವಿಸರ್ಜಿಸಬಹುದು. ಎರಡೂ ಪರಿಸ್ಥಿತಿಗಳು ಮೂತ್ರಪಿಂಡವನ್ನು ಮತ್ತಷ್ಟು ಹಾನಿಗೊಳಿಸಬಹುದು. ಕೆಲವು ಜನರು ತಮ್ಮ ಮೂತ್ರದಲ್ಲಿ ರಕ್ತ ಬರುವುದನ್ನೂ ಗುರುತಿಸಬಹುದು. ಹಾನಿಗೊಳಗಾದ ಮೂತ್ರಪಿಂಡಗಳ ಕಾರಣದಿಂದಾಗಿ ರಕ್ತ ಕಣಗಳು ಮೂತ್ರದಲ್ಲಿ ಸೋರಿಕೆಯಾಗಲು ಪ್ರಾರಂಭಿಸುವುದರಿಂದ ಇದು ಸಂಭವಿಸುತ್ತದೆ.

ಒಣ ಮತ್ತು ತುರಿಕೆ ಚರ್ಮ (Dry Itchy skin)
ಮೂತ್ರಪಿಂಡದ ಹಾನಿಯ ಇತರ ರೋಗಲಕ್ಷಣಗಳೊಂದಿಗೆ ಒಣ ಮತ್ತು ತುರಿಕೆ ಚರ್ಮವು ಮುಂದುವರಿದ ಹಂತದ ಮೂತ್ರಪಿಂಡದ ಅಸ್ವಸ್ಥತೆಯ ಸಂಕೇತವಾಗಿದೆ. ಮೂತ್ರಪಿಂಡಗಳು ದೇಹದಿಂದ ವಿಷವನ್ನು ಹೊರಹಾಕಲು ಸಾಧ್ಯವಾಗದಿದ್ದಾಗ ಮತ್ತು ಅವು ರಕ್ತದಲ್ಲಿ ಶೇಖರಗೊಳ್ಳಲು ಪ್ರಾರಂಭಿಸಿದಾಗ ಇದು ಸಂಭವಿಸುತ್ತದೆ, ಇದು ತುರಿಕೆ, ಶುಷ್ಕತೆ ಮತ್ತು ದುರ್ವಾಸನೆಯ ಚರ್ಮಕ್ಕೆ ಕಾರಣವಾಗುತ್ತದೆ.

ತಡೆಗಟ್ಟುವುದು ಹೇಗೆ?

  • ಆರಂಭಿಕ ಹಂತದಲ್ಲೇ ಇದನ್ನೆಲ್ಲ ಗಮನಿಸಿ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಮೂತ್ರಪಿಂಡದ ಅಸ್ವಸ್ಥತೆಗಳನ್ನು ತಡೆಗಟ್ಟಬಹುದು. 
  • ಅಧಿಕ ರಕ್ತದೊತ್ತಡ, ಸಕ್ಕರೆ (Sugar) ಮತ್ತು ಹೆಚ್ಚಿನ ಕೊಲೆಸ್ಟ್ರಾಲ್ (cholestrol) ಮಟ್ಟದಿಂದ ಬಳಲುತ್ತಿರುವವರಲ್ಲಿ ಮೂತ್ರಪಿಂಡದ ಅಸ್ವಸ್ಥತೆ ಉಂಟಾಗುವ ಅಪಾಯ ಹೆಚ್ಚು. ಇದನ್ನು ತಿಳಿಯಲು ವಾರ್ಷಿಕ ಆರೋಗ್ಯ ತಪಾಸಣೆಗಳನ್ನು ಮಾಡಿಸಬೇಕು. 
  • ಎಲ್ಲಾ ಸಂಸ್ಕರಿಸಿದ ಕಾರ್ಬೋಹೈಡ್ರೇಟ್‌ಗಳನ್ನು (Carbohydrates) ತಪ್ಪಿಸಿ. ಪಾಸ್ತಾ, ಅಕ್ಕಿಯ ಆಹಾರ, ಬ್ರೆಡ್ ಕಡಿಮೆ ಮಾಡಿ. 
  • ಎಲ್ಲಾ ರೀತಿಯ ಸಕ್ಕರೆಯನ್ನು ತಪ್ಪಿಸಿ. ನಿಮ್ಮ ದೇಹವು ಈಗಾಗಲೇ ಕಾರ್ಬೋಹೈಡ್ರೇಟ್‌ಗಳು ಮತ್ತು ಸಕ್ಕರೆಗಳನ್ನು ಸರಿಯಾಗಿ ಸಂಸ್ಕರಿಸಲು ಸಾಧ್ಯವಾಗದ ಸ್ಥಿತಿಯಲ್ಲಿದ್ದರೆ, ಎಲ್ಲಾ ಸಕ್ಕರೆಗಳನ್ನು ಸಂಪೂರ್ಣವಾಗಿ ತೊಡೆದುಹಾಕಿ. 
  • ಎಲ್ಲಾ ಸಿಹಿ ಪಾನೀಯಗಳನ್ನು ತಪ್ಪಿಸಿ. ನೀರು, ಚಹಾ, ಕಾಫಿಗೆ ಅಂಟಿಕೊಳ್ಳುವುದು ಉತ್ತಮ.
  • ಉತ್ತಮ ಗುಣಮಟ್ಟದ, ಆರೋಗ್ಯಕರ, ನೈಸರ್ಗಿಕ ಕೊಬ್ಬು - ಆವಕಾಡೊಗಳು, ಆಲಿವ್‌ಗಳು, ಬಾದಾಮಿ ಇತ್ಯಾದಿಗಳನ್ನು ಸೇವಿಸಿ. 
  • ಕ್ಯಾಲೊರಿಗಳನ್ನು ಎಣಿಸಸುತ್ತಾ ನಿಮ್ಮ ಶಕ್ತಿ ವ್ಯರ್ಥ ಮಾಡಬೇಡಿ. ನೀವು ತಿನ್ನುವ ಆಹಾರದ ಗುಣಮಟ್ಟದತ್ತ ಕೇಂದ್ರೀಕರಿಸಿ.
  • ಪ್ರತಿದಿನ ಐದು ಬಾರಿ ವಿವಿಧ ಬಣ್ಣದ ತರಕಾರಿಗಳನ್ನು ತಿನ್ನುವ ಮೂಲಕ ನಿಮ್ಮ ಕರುಳಿನ ಆರೋಗ್ಯವನ್ನು ಸುಧಾರಿಸಿಕೊಳ್ಳಿ. ತರಕಾರಿಗಳಲ್ಲಿನ ಫೈಬರ್ ನಿಮ್ಮ ಕರುಳಿನ ಬ್ಯಾಕ್ಟೀರಿಯಾಕ್ಕೆ ಅಗತ್ಯ. 
  • ಸಾಕಷ್ಟು ವ್ಯಾಯಾಮ (EExcercise) ಮಾಡಿ. ಸಾಕಷ್ಟು ನೀರು ಕುಡಿಯಿರಿ. ಹಸಿವಾಗದೇ ಊಟ ಮಾಡಬೇಡಿ.
  • ಬಿಸ್ಕತ್ತುಗಳಂತಹ ಸಂಸ್ಕರಿಸಿದ ಕಾರ್ಬೋಹೈಡ್ರೇಟ್‌ಗಳ ಬದಲು ಒಣಹಣ್ಣುಗಳನ್ನು ಸೇವಿಸಿ. 
  • ಪ್ರತಿ ಊಟದ ಜೊತೆಗೆ ಉತ್ತಮ ಗುಣಮಟ್ಟದ ಪ್ರೋಟೀನ್ ಮತ್ತು ಕೊಬ್ಬನ್ನು ಸೇರಿಸಿಕೊಳ್ಳಿ. ಇದು ನಿಮ್ಮ ರಕ್ತದಲ್ಲಿನ ಸಕ್ಕರೆಯನ್ನು ಸ್ಥಿರಗೊಳಿಸಲು ಸಹಾಯ ಮಾಡುತ್ತದೆ.
  • - ಟಿವಿ ಅಥವಾ ಮೊಬೈಲ್ ನೋಡುತ್ತಾ ಊಟ ಮಾಡುವುದು ಕೆಟ್ಟದು. ತಿನ್ನುವ ಆಹಾರದ ಪ್ರಮಾಣ ತಿಳಿಯುವುದೇ ಇಲ್ಲ. ಆಹಾರವನ್ನು ಆನಂದಿಸುತ್ತಾ ಸೇವಿಸಿ.
click me!