
ಚಳಿಗಾಲ ಸಮೀಪಿಸುತ್ತಿದ್ದಂತೆ, ಕೋವಿಡ್ ಜೊತೆಗೆ ಸಾಮಾನ್ಯ ಶೀತ ಅಥವಾ ಜ್ವರ ಪ್ರಕರಣಗಳು ಹೆಚ್ಚಾಗುತ್ತಿವೆ. ನೆಗಡಿ ಮತ್ತು COVID-19ನ ಲಕ್ಷಣಗಳು ಸಾಮಾನ್ಯವಾಗಿ ಹೋಲುತ್ತವೆ. ಕೆಮ್ಮು, ಜ್ವರ, ದಣಿವು ಮತ್ತು ಸ್ನಾಯು ನೋವುಗಳು, ಜ್ವರ ಮತ್ತು ಕೋವಿಡ್ ಎರಡಕ್ಕೂ ಸಾಮಾನ್ಯವಾಗಿದೆ. ಶೀತಗಳು, ಜ್ವರ ಮತ್ತು ಕೋವಿಡ್‌ಗೆ ಕಾರಣವಾಗುವ ವೈರಸ್‌ಗಳು ಒಂದೇ ರೀತಿಯಲ್ಲಿ ಹರಡುತ್ತವೆ. ಸೋಂಕಿತ ಜನರ ಮೂಗು ಮತ್ತು ಬಾಯಿಯಿಂದ ಹನಿಗಳ ಮೂಲಕ ವ್ಯಕ್ತಿಯಿಂದ ವ್ಯಕ್ತಿಗೆ ಹರಡಲು ಶುರುವಾಗುತ್ತದೆ. ಜನರು ಸೋಂಕಿಗೆ ಒಳಗಾಗಿದ್ದಾರೆಂದು ವ್ಯಕ್ತಿಯು ಅರಿತುಕೊಳ್ಳುವ ಮೊದಲು ಅವುಗಳು ಹರಡಬಹುದು.
ಯಾವುದೇ ಕಾಯಿಲೆ (Disease)ಯಿಂದ ಬಳಲುತ್ತಿರುವ ವ್ಯಕ್ತಿಯು ಯಾವಾಗ ಅನಾರೋಗ್ಯವನ್ನು ಅನುಭವಿಸಲು ಪ್ರಾರಂಭಿಸುತ್ತಾನೆ ಎಂಬುದನ್ನು ನಿರ್ಧಿಷ್ಟವಾಗಿ ತಿಳಿದುಕೊಳ್ಳಲು ಸಾಧ್ಯವಾಗುವುದಿಲ್ಲ. ಕೊರೋನಾ ವೈರಸ್ ಸೋಂಕಿಗೆ ಒಳಗಾದ ಕೆಲವರಲ್ಲಿ ಯಾವುದೇ ರೋಗಲಕ್ಷಣ (Symptoms) ಕಂಡು ಬರುವುದಿಲ್ಲ. ಆದರೆ ಕೆಮ್ಮು ಕೊರೊನಾವೈರಸ್ ಮತ್ತು ಫ್ಲೂ ಎರಡಕ್ಕೂ ಒಂದೇ ರೀತಿಯ ಲಕ್ಷಣವಾಗಿ ಉಳಿದಿದೆ ಮತ್ತು ಎರಡರ ನಡುವೆ ವ್ಯತ್ಯಾಸ (Difference)ವನ್ನು ಕಂಡುಹಿಡಿಯುವುದು ಕೆಲವೊಮ್ಮೆ ತುಂಬಾ ಕಷ್ಟವಾಗಿದೆ. ಹೀಗಿದ್ದೂ ನೀವು ಅನುಭವಿಸುತ್ತಿರುವುದು ಸಾಮಾನ್ಯ ಕೆಮ್ಮು (Cough) ಅಥವಾ ಕೋವಿಡ್ ಕೆಮ್ಮು ಎಂಬುದನ್ನು ತಿಳಿದುಕೊಳ್ಳುವುದು ತುಂಬಾ ಮುಖ್ಯವಾಗಿದೆ. ಅದನ್ನು ತಿಳಿದುಕೊಳ್ಳುವುದು ಹೇಗೆ ಎಂಬುದರ ಕುರಿತಾದ ಮಾಹಿತಿ ಇಲ್ಲಿದೆ.
ಗ್ಯಾಂಬಿಯಾದಲ್ಲಿ 66 ಮಕ್ಕಳ ಸಾವು ಪ್ರಕರಣ; ಕೆಮ್ಮಿನ ಸಿರಪ್‌ನಲ್ಲಿ ಕೆಮಿಕಲ್ ಇರುತ್ತಾ ?
ಕೆಮ್ಮಿನ ಬಗ್ಗೆ ತಿಳಿದುಕೊಳ್ಳಬೇಕಾದ ಕೆಲ ವಿಷಯಗಳು
ಒಣ ಕೆಮ್ಮು: ಕೋವಿಡ್ ಕೆಮ್ಮು ಸಾಮಾನ್ಯವಾಗಿ ಒಣ ಸ್ವಭಾವವನ್ನು ಹೊಂದಿರುತ್ತದೆ. ಇದು ಕೋವಿಡ್ ಕೆಮ್ಮಿನ ಪ್ರಾಥಮಿಕ ಲಕ್ಷಣಗಳಲ್ಲಿ ಒಂದಾಗಿದೆ.
ನಿರಂತರವಾಗಿ ಕೆಮ್ಮು: ಕೋವಿಡ್‌ನಿಂದ ಉಂಟಾಗುವ ಕೆಮ್ಮು ಸಹ ನಿರಂತರವಾಗಿರುತ್ತದೆ. ಇದು ಮುಖ್ಯವಾಗಿ ಕಫ ಮುಕ್ತವಾಗಿದೆ ಮತ್ತು ಹೆಚ್ಚು ಕಾಲ ಹಾಗೆಯೇ ಇರುತ್ತದೆ.
ಕೆಮ್ಮಿನ ತೀವ್ರತೆ: ಕೋವಿಡ್ ಕೆಮ್ಮು ದೀರ್ಘವಾಗಿರುತ್ತದೆ ಮತ್ತು ಕಾಲಾನಂತರದಲ್ಲಿ ಅದರ ತೀವ್ರತೆಯು ಹೆಚ್ಚಾಗುತ್ತದೆ. ನಿಯಮಿತ ಕೆಮ್ಮಿನಲ್ಲಿ, ಸಮಯದೊಂದಿಗೆ ಅದರ ತೀವ್ರತೆಯು ಹೆಚ್ಚಾಗುವುದನ್ನು ನೀವು ಸಾಮಾನ್ಯವಾಗಿ ಅನುಭವಿಸುವುದಿಲ್ಲ.
ನೋವಿನಿಂದ ಕೂಡಿರುತ್ತದೆ: ಕೋವಿಡ್ ಕೆಮ್ಮುಗಳು ಶುಷ್ಕವಾಗಿರುತ್ತವೆ ಮತ್ತು ಕಫದಿಂದ ಕೂಡಿರುತ್ತವೆ. ಇದು ನೋವಿನಿಂದ ಕೂಡಿದೆ.
ಆಳವಾದ ಉಸಿರಾಟ: ಪ್ರತಿ ಕೆಮ್ಮಿನಲ್ಲೂ ನೀವು ದಣಿದಿರುವಿರಿ ಮತ್ತು ಆಳವಾದ ಉಸಿರಾಟದ ಸಾಮರ್ಥ್ಯವು ಕಷ್ಟಕರವಾಗುತ್ತದೆ.
ನೀವು ಸ್ವಲ್ಪ ಸಮಯದಿಂದ ಕೆಮ್ಮುತ್ತಿದ್ದರೆ ಮತ್ತು ಇತರ ರೀತಿಯ COVID-ತರಹದ ರೋಗಲಕ್ಷಣಗಳನ್ನು ಸಹ ಅಭಿವೃದ್ಧಿಪಡಿಸಿದ್ದರೆ, ನೀವು ಸೋಂಕಿಗೆ ಒಳಗಾಗಿದ್ದೀರಾ ಎಂದು ಕಂಡುಹಿಡಿಯಲು ಉತ್ತಮ ಮಾರ್ಗವೆಂದರೆ ನಿಮ್ಮನ್ನು ಪರೀಕ್ಷಿಸಿಕೊಳ್ಳುವುದು. ಅದರ ಬದಲು ಇದು ಸಾಮಾನ್ಯ ಕೆಮ್ಮಾಗಿರಬಹುದು ಎಂದು ನಿಮ್ಮಷ್ಟಕ್ಕೇ ನೀವು ಅಂದುಕೊಂಡು ಜೀವಕ್ಕೆ ಅಪಾಯ ತಂದುಕೊಳ್ಳಬೇಡಿ.
ದಿನಾ ರಾತ್ರಿ ಒಣಕೆಮ್ಮು ಕಾಟನಾ ? ಮಲಗೋ ಮುಂಚೆ ಇವಿಷ್ಟನ್ನು ಸೇವಿಸಿ ಸಾಕು
ಸಾಮಾನ್ಯ ಕೆಮ್ಮಿಗೆ ನೈಸರ್ಗಿಕ ಪರಿಹಾರಗಳು ಇಲ್ಲಿವೆ
1. ಅರಿಶಿಣ ಹಾಲು
ರಾತ್ರಿ ಒಣ ಕೆಮ್ಮಿಗೆ ಅರಿಶಿಣದ ಹಾಲು ಉತ್ತಮ ಔಷಧವಾಗಿದೆ. ಅರಿಶಿಣದಲ್ಲಿ (Turmeric) ಆಂಟಿ ಬ್ಯಾಕ್ಟೀರಿಯಲ್, ಆಂಟಿ ಫಂಗಲ್, ಉರಿಯೂತದ ಗೂಣಲಕ್ಷಣಗಳನ್ನು ಹೊಂದಿದೆ. ಇದರಲ್ಲಿ ಕರ್ಕ್ಯುಮಿನ್ ಅಂಶ ಇರುವುದರಿಂದ ಯಾವುದೇ ಸೋಂಕುಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ.
2. ಅಮೃತಬಳ್ಳಿ ಜ್ಯೂಸ್
ಹಲವು ಕಾಯಿಲೆಗಳಿಗೆ ರಾಮಬಾಣದಂತೆ ಕೆಲಸ ಮಾಡುವ ಅಮೃತ ಬಳ್ಳಿ ಜ್ಯೂಸ್ ಮನೆಯಲ್ಲಿದ್ದರೆ ವೈದ್ಯರೇ ಮನೆಯಲ್ಲಿದ್ದಂತೆ. ಪ್ರತಿರಕ್ಷೆಯನ್ನು ನಿರ್ಮಿಸುವುದರ ಹೊರತಾಗಿ, ಇದು ಅಲರ್ಜಿ ವಿರೋಧಿಯಾಗಿದೆ. ಹೊಗೆ, ಮಾಲಿನ್ಯ (Pollution), ಪರಾಗಕ್ಕೆ ಅಲರ್ಜಿಯು ಎದುರಾದರೆ ಹಾಗೂ ಕೆಮ್ಮಿಗೂ ಚಿಕಿತ್ಸೆ ನೀಡುತ್ತದೆ. ದೀರ್ಘಕಾಲದ ಕೆಮ್ಮು ಕಾಡುತ್ತಿದ್ದರೆ ಒಂದು ಲೋಟ ಅಮೃತಬಳ್ಳಿ ಜ್ಯೂಸ್ ಕುಡಿದರೆ ಬಹುಬೇಗ ಫಲಿತಾಂಶ ಪಡೆಯಬಹುದು.
ದಾಳಿಂಬೆ ಜೀವ ರಕ್ಷಕ, ಅಂತದ್ದೇನಿದೆ ವಿಶೇಷ ಈ ಕಾಳಿನ ಹಣ್ಣಿನಲ್ಲಿ?
3. ಜೇನುತುಪ್ಪ ಮತ್ತು ಶುಂಠಿ
ಕೆಮ್ಮಿಗೆ ಜೇನುತುಪ್ಪ ಮತ್ತು ಶುಂಠಿ (Ginger) ಎರಡೂ ಅತ್ಯುತ್ತಮ ಔಷಧವೆಂದು ಸಾಬೀತಾಗಿದೆ. ಮಕ್ಕಳಲ್ಲಿ ಕೆಮ್ಮು ಕಾಣಿಸಿಕೊಂಡಾಗ ಮೊದಲು ಮನೆಮದ್ದು ಮಾಡುವುದು ಇದನ್ನೇ. ಕಡಿಮೆ ದಿನಗಳಲ್ಲಿ ತೃಪ್ತಿದಾಯಕ ಫಲಿತಾಂಶಗಳನ್ನು ಪಡೆಯಬಹುದು. ಅಗತ್ಯ ಪ್ರಮಾಣದ ಶುಂಠಿ ರಸದೊಂದಿಗೆ ಜೇನುತುಪ್ಪವನ್ನು ಬೆರೆಸಿ ಸೇವಿಸಬೇಕು.
4. ಕಾಳುಮೆಣಸು
ವಯಸ್ಕರಲ್ಲಿ ಕೆಮ್ಮು ಹೆಚ್ಚು ಕಾಣಿಸಿಕೊಂಡರೆ ಮೆಣಸು ಉತ್ತಮ ಔಷಧ. ಇದು ತಾಪನ ಗುಣಗಳನ್ನು ಹೊಂದಿದ್ದು, ಕೆಮ್ಮು ಹೆಚ್ಚಾಗುವುದನ್ನು ತಡೆಯುತ್ತದೆ. ಕಾಳುಮೆಣಸಿನ ಪುಡಿಯನ್ನು ದೇಸಿ ತುಪ್ಪ (Ghee)ದೊಂದಿಗೆ ಬೆರೆಸಿ ಸೇವಿಸಬೇಕು. ನಿಯಮಿತವಾಗಿ ದಿನಕ್ಕೆ ಎರಡು ಬಾರಿ ಹೀಗೆ ಮಾಡಿದ್ದಲ್ಲಿ ಉತ್ತಮ ಫಲಿತಾಂಶ ಪಡೆಯಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.