
ಕೆಲವು ಜನರಿಗೆ ಟ್ರಾವೆಲ್ ಮಾಡೋದು ಅಂದ್ರೆ ತುಂಬಾನೆ ಇಷ್ಟ. ಇನ್ನೂ ಕೆಲವು ಜನರಿಗೆ ಹೇಗಪ್ಪಾ ಅಂದ್ರೆ, ಪ್ರಯಾಣದ ಹೆಸರನ್ನು ಕೇಳಿದ ತಕ್ಷಣ, ಸಂತೋಷದ ಬದಲು, ಅವರ ಮುಖದಲ್ಲಿ ಚಿಂತೆಯ ಗೆರೆ ಕಾಣಿಸಿಕೊಳ್ಳುತ್ತದೆ.ಯಾಕೆ ಹೀಗಾಗುತ್ತೆ ಅಂದ್ರೆ ಅವರಿಗೆ ಕಾರು ಅಥವಾ ಬಸ್ ನಲ್ಲಿ ಕುಳಿತ ತಕ್ಷಣ ವಾಕರಿಕೆ ಬರೋದಕ್ಕೆ ಆರಂಭವಾಗುತ್ತೆ. ಈ ಸಮಸ್ಯೆಯನ್ನು ಮೋಷನ್ ಸಿಕ್ ನೆಸ್ (motion sickness) ಎಂದು ಕರೆಯಲಾಗುತ್ತದೆ. ಮೋಷನ್ ಸಿಕ್ನೆಸ್ ಅಂದ್ರೆ ನಿಮ್ಮ ಮೆದುಳು ನಿಮ್ಮ ದೇಹದ ವಿವಿಧ ಭಾಗಗಳಿಂದ ವಿರೋಧಾಭಾಸ ಸಂಕೇತಗಳನ್ನು ಸ್ವೀಕರಿಸಿದಾಗ ಉಂಟಾಗುವ ಸ್ಥಿತಿಯಾಗಿದೆ. ಉದಾಹರಣೆಗೆ, ನೀವು ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ, ನೀವು ಮುಂದೆ ಸಾಗುತ್ತಿದ್ದೀರಿ ಎಂದು ನಿಮ್ಮ ಕಣ್ಣುಗಳು ನಿಮಗೆ ಹೇಳುತ್ತವೆ, ಆದರೆ ನಿಮ್ಮ ಕಿವಿಯೊಳಗಿನ ವೆಸ್ಟಿಬ್ಯುಲರ್ ವ್ಯವಸ್ಥೆಯು ನೀವು ಸ್ಥಿರವಾಗಿದ್ದೀರಿ ಎಂದು ಭಾವಿಸುತ್ತದೆ. ಈ ವಿರೋಧಾಭಾಸವು ನಿಮ್ಮ ಮೆದುಳನ್ನು ಗೊಂದಲಗೊಳಿಸಬಹುದು, ಇದರಿಂದಾಗಿ ವಾಂತಿ (Vomiting), ತಲೆತಿರುಗುವಿಕೆ ಮತ್ತು ವಾಕರಿಕೆಯಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತೆ.
Health Tips : ದೀರ್ಘ ಪ್ರಯಾಣದ ವೇಳೆ ನಿದ್ರೆ ಬರೋದೇಕೆ?
ನಿಮಗೂ ಕೂಡ ಈ ಮೋಷನ್ ಸಿಕ್ನೆಸ್ ಇದ್ರೆ, ನೀವು ಪ್ರಯಾಣದ ಸಮಯದಲ್ಲಿ ಈ 4 ಕ್ರಮಗಳನ್ನು ಅನುಸರಿಸುವುದನ್ನು ಮರಿಬೇಡಿ :
ಸರಿಯಾದ ಸ್ಥಳದಲ್ಲಿ ಕುಳಿತುಕೊಳ್ಳಿ
ಕಾರು ಅಥವಾ ಬಸ್ ನಲ್ಲಿ ಕುಳಿತುಕೊಳ್ಳುವಾಗ ನಿಮ್ಮ ಸೀಟನ್ನು ಎಚ್ಚರಿಕೆಯಿಂದ ಆರಿಸಿ. ನೀವು ಕಡಿಮೆ ಚಲನೆಯನ್ನು ಅನುಭವಿಸುವ ಸ್ಥಳವನ್ನು ಆಯ್ಕೆ ಮಾಡೋದು ಉತ್ತಮ. ಕಾರಿನಲ್ಲಿ ಮುಂಭಾಗದ ಸೀಟ್ ಮತ್ತು ಬಸ್ ನಲ್ಲಿ ಮಧ್ಯದ ಸೀಟ್ ಆಯ್ಕೆ ಮಾಡೋದು ಬೆಸ್ಟ್. ಅಷ್ಟೇ ಅಲ್ಲ, ಕಿಟಕಿಯ ಬಳಿ ಕುಳಿತುಕೊಳ್ಳುವುದು ಮೋಷನ್ ಸಿಕ್ನೆಸ್ ಸಮಸ್ಯೆಯನ್ನು ಕಡಿಮೆ ಮಾಡುತ್ತೆ.
ಖಾಲಿ ಹೊಟ್ಟೆಯಲ್ಲಿ ಪ್ರಯಾಣ ಮಾಡಬೇಡಿ.
ಪ್ರಯಾಣಿಸುವ ಮೊದಲು ಲಘು ಊಟ ಮಾಡಿ. ಖಾಲಿ ಹೊಟ್ಟೆಯಲ್ಲಿ(do not travel in empty stomach) ಟ್ರಾವೆಲ್ ಮಾಡೊದರಿಂದ ಮೋಷನ್ ಸಿಕ್ನೆಸ್ ಕಾಣಿಸಿಕೊಳ್ಳುತ್ತೆ. ಆದರೆ, ಅತಿಯಾಗಿ ತಿನ್ನುವುದನ್ನು ಕೂಡ ತಪ್ಪಿಸಿ ಏಕೆಂದರೆ ಇದು ವಾಂತಿಗೂ ಕಾರಣವಾಗಬಹುದು.
Travel Sickness: ಪ್ರಯಾಣದ ವೇಳೆ ಕಾಡುವ ವಾಂತಿಗೆ ಹೇಳಿ ಗುಡ್ ಬೈ
ಶುಂಠಿ ಸೇವಿಸಿ
ಮೋಷನ್ ಸಿಕ್ನೆಸ್ ಲಕ್ಷಣಗಳನ್ನು ಕಡಿಮೆ ಮಾಡುವಲ್ಲಿ ಶುಂಠಿ (Ginger) ತುಂಬಾ ಪರಿಣಾಮಕಾರಿಯಾಗಿದೆ. ಹಾಗಾಗಿ ಟ್ರಾವೆಲ್ ಮಾಡುವ ಮೊದಲು ಶುಂಠಿ ಚಹಾ ಕುಡಿಯಿರಿ ಅಥವಾ ಸಣ್ಣ ತುಂಡು ಶುಂಠಿಯನ್ನು ಜಗಿಯಿರಿ. ನೀವು ಶುಂಠಿ ಮಾತ್ರೆಗಳನ್ನು ಸಹ ಕ್ಯಾರಿ ಮಾಡಬಹುದು.
ಶಾಂತವಾಗಿರಿ ಮತ್ತು ಆಳವಾದ ಉಸಿರನ್ನು ತೆಗೆದುಕೊಳ್ಳಿ
ಪ್ರಯಾಣದ ಸಮಯದಲ್ಲಿ ಶಾಂತವಾಗಿರುವುದು ಮತ್ತು ಆಳವಾದ ಉಸಿರಾಟವನ್ನು (Deep breathing) ತೆಗೆದುಕೊಳ್ಳುವುದು ಮೋಷನ್ ಸಿಕ್ನೆಸ್ ಕಡಿಮೆ ಮಾಡಲು ಸಹಾಯ ಮಾಡುತ್ತೆ. ಈ ಸಮಯದಲ್ಲಿ , ನೀವು ನಿಮ್ಮ ನೆಚ್ಚಿನ ಸಂಗೀತವನ್ನು ಕೇಳಬಹುದು. ನಿಮ್ಮ ಮನಸ್ಸನ್ನು ಶಾಂತವಾದ ವಿಚಾರ, ಸ್ಥಳದ ಬಗ್ಗೆ ಕೇಂದ್ರೀಕರಿಸಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.