Cool Tips: ಪದೇ ಪದೇ ನೀವೂ ಕಿರುಚಾಡ್ತೀರಾ? ಆರೋಗ್ಯಕ್ಕೆ ಒಳ್ಳೇದಲ್ಲ ಬಿಟ್ಟು ಬಿಡಿ

By Suvarna News  |  First Published Feb 10, 2022, 5:23 PM IST

ಕೋಪದಲ್ಲಿ ಮೂಗು ಕೊಯ್ದುಕೊಂಡ್ರೆ ಮತ್ತೆ ಬರಲು ಸಾಧ್ಯವಿಲ್ಲ. ಕೋಪ ಬಂದಾಗ ಕೆಲವರು ವಸ್ತುಗಳನ್ನು ಎಸೆದ್ರೆ ಮತ್ತೆ ಕೆಲವರು ಕೈ,ತಲೆಯನ್ನು ಗೋಡೆಗೆ ಗುದ್ದಿಕೊಳ್ತಾರೆ. ಕೋಪ ನಿಯಂತ್ರಣ ಹೇಳಿದಷ್ಟು ಸುಲಭವಲ್ಲ. ಕೆಲ ಆಹಾರ ನಿಮ್ಮ ಕೋಪಕ್ಕೆ ಫುಲ್ ಸ್ಟಾಪ್ ನೀಡಬಹುದು.
 


ಕೋಪ (Anger)ವು ನಮ್ಮ ಜೀವನದ ಒಂದು ಭಾಗವಾಗಿದೆ. ಕೆಲಸದ ಹೊರೆ, ಹೆಚ್ಚುತ್ತಿರುವ ಜವಾಬ್ದಾರಿಗಳು ಮತ್ತು ಹಣಕಾಸಿನ ಸಮಸ್ಯೆ ಸಣ್ಣ ವಿಷ್ಯಕ್ಕೆ ಕೋಪ ತರಿಸುತ್ತಿದೆ. ನಮ್ಮನ್ನು ನಾವು ಹತೋಟಿಯಲ್ಲಿಟ್ಟುಕೊಳ್ಳಲು ಎಷ್ಟೇ ಪ್ರಯತ್ನಿಸಿದರೂ ನಮ್ಮ ಕೋಪವನ್ನು ನಿಯಂತ್ರಿಸಲು ಸಾಧ್ಯವಾಗ್ತಿಲ್ಲ. ಕೋಪ ಬಹಳ ಅಪಾಯಕಾರಿ. ಕೋಪದಲ್ಲಿ ಆಡಿದ ಮಾತು ಅಥವಾ ತೆಗೆದುಕೊಂಡ ನಿರ್ಧಾರ ನಮ್ಮ ಭವಿಷ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿರುತ್ತದೆ. 
ಕೋಪವು ನಮ್ಮ ಸಂಬಂಧ (Relationship)ಗಳ ಕೆಟ್ಟ ಪರಿಣಾಮ ಬೀರುತ್ತದೆ. ಕೋಪವು ಹೃದಯ (Heart), ಮೆದುಳು (Brain) ಮತ್ತು ರಕ್ತದೊತ್ತಡದ ಮೇಲೆ ಅಡ್ಡಪರಿಣಾಮ ಬೀರುತ್ತದೆ. ಕೆಲವೊಮ್ಮೆ ಹೆಚ್ಚಿದ ರಕ್ತದೊತ್ತಡದಿಂದಾಗಿ ಮೆದುಳಿನಲ್ಲಿ ರಕ್ತಸ್ರಾವವಾಗುವ ಸಾಧ್ಯತೆಯಿದೆ. ಪದೇ ಪದೇ ಸಣ್ಣ ವಿಷ್ಯಕ್ಕೆ ಕೋಪಗೊಳ್ಳುತ್ತಿದ್ದರೆ  ಅದನ್ನು ನಿಯಂತ್ರಿಸಲು ಕಲಿಯಿರಿ. ನೀವು ಕೋಪವನ್ನು ಕಡಿಮೆ ಮಾಡಿದರೆ, ನಿಮ್ಮ ಮನಸ್ಸು ಶಾಂತವಾಗಿರುತ್ತದೆ. ಒತ್ತಡದಿಂದ ಮುಕ್ತರಾಗುತ್ತೀರಿ. ನಿಮ್ಮ ಕೋಪವನ್ನು ಹೇಗೆ ನಿಯಂತ್ರಿಸಬಹುದು ಎಂಬುದನ್ನು ನಾವಿಂದು ಹೇಳ್ತೇವೆ. ಕೆಲ ಆಹಾರ ಸೇವನೆ ಮೂಲಕ ನಾವು ಕೋಪವನ್ನು ನಿಯಂತ್ರಿಸಬಹುದು. 

ಕೋಪ ನಿಯಂತ್ರಣಕ್ಕೆ ಆಹಾರ :
ಆಹಾರದಲ್ಲಿ ವಿವಿಧ ಬಣ್ಣಗಳ ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸುವ ಮೂಲಕ ಕೋಪವನ್ನು ನಿಯಂತ್ರಿಸಬಹುದು. 

Tap to resize

Latest Videos

ಅಣಬೆಗಳು, ಬೀಜಗಳು, ವಾಲ್‌ನಟ್‌ಗಳಂತಹ ಒಮೆಗಾ 3 ಕೊಬ್ಬಿನಾಮ್ಲಗಳನ್ನು ಹೊಂದಿರುವ ಆಹಾರ ಸೇವನೆ ಒಳ್ಳೆಯದು. 
ಮೊಟ್ಟೆ, ಮೀನು ಮತ್ತು ಕೋಳಿಯಂತಹ ಡೋಪಮೈನ್ ಆಹಾರವು ಕೋಪವನ್ನು ಕಡಿಮೆ ಮಾಡಲು ಪರಿಣಾಮಕಾರಿಯಾಗಿದೆ. 
ಕೋಪ ನಿಯಂತ್ರಿಸಬೇಕೆಂದ್ರೆ ಸಿಹಿ ಪದಾರ್ಥಗಳನ್ನು ತಿನ್ನುವುದನ್ನು ತಪ್ಪಿಸಬೇಕು.
ಹಣ್ಣಿನ ರಸ ತೆಗೆದು ಸೇವನೆ ಮಾಡುವ ಬದಲು ಹಣ್ಣನ್ನು ಹಾಗೆಯೇ ಸೇವನೆ ಮಾಡುವುದು ಒಳ್ಳೆಯದು.  
ಕೋಪ ನಿಯಂತ್ರಣಕ್ಕೆ ವಿಟಮಿನ್ ಡಿ ಕೂಡ ಪರಿಣಾಮಕಾರಿ. ಹಾಗಾಗಿ ನಿಮ್ಮ ದೇಹವನ್ನು ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳಿ.
ಸೂರ್ಯಕಾಂತಿ ಬೀಜಗಳು, ಕುಂಬಳಕಾಯಿ ಬೀಜಗಳು, ಪಾಲಕ ಮುಂತಾದ ಮೆಗ್ನೀಸಿಯಮ್ ಸಮೃದ್ಧವಾಗಿರುವ ಆಹಾರವನ್ನು ಸೇವಿಸಿದ್ರೆ ಕೋಪ ಕಡಿಮೆಯಾಗುತ್ತದೆ. ಡ್ರೈ ಫ್ರೂಟ್ಸ್ ಗಳನ್ನು ಹಸಿಯಾಗಿ ಸೇವನೆ ಮಾಡುವುದು ಒಳ್ಳೆಯದಲ್ಲ. ಅದು ಕೋಪ ಹೆಚ್ಚಿಸುವ ಸಾಧ್ಯತೆಯಿದೆ. ಹಾಗಾಗಿ ಅವುಗಳನ್ನು ರಾತ್ರಿ ನೀರಿನಲ್ಲಿ ನೆನೆಸಿ ಬೆಳಿಗ್ಗೆ ಎದ್ದ ನಂತರ ತಿನ್ನುವುದು ಉತ್ತಮ.
ಇನ್ನು ನೀವು ಬದನೆಕಾಯಿ ಪ್ರೇಮಿಗಳಾಗಿದ್ದರೆ ಅದರ ಸೇವನೆ ಕಡಿಮೆ ಮಾಡಿ. ಬದನೆಕಾಯಿಯನ್ನು ದೊಡ್ಡ ಪ್ರಮಾಣದಲ್ಲಿ ತಿನ್ನಬೇಡಿ.ಅದು ಕೋಪವನ್ನು ಹೆಚ್ಚಿಸುತ್ತದೆ.
ಎಲ್ಲ ಅಡುಗೆಗೂ ನಾವು ಟೋಮ್ಯಾಟೊ ಬಳಸುತ್ತೇವೆ. ಟೋಮ್ಯಾಟೊ ದೇಹದಲ್ಲಿ ಶಾಖವನ್ನು ಹೆಚ್ಚಿಸಬಹುದು ಮತ್ತು ಇದನ್ನು ಹೆಚ್ಚು ತಿನ್ನುವುದರಿಂದ ಕೋಪ ಹೆಚ್ಚಾಗಬಹುದು. ಹಾಗಾಗಿ ಈಗಾಗಲೇ ಹೆಚ್ಚು ಕೋಪವಿದೆ ಎನ್ನುವವರು ಟೋಮ್ಯಾಟೊದಿಂದ ದೂರವಿರಿ.  

Exercise Tips: ದಿನಕ್ಕೆ ಜಸ್ಟ್ ಮೂರು ಸೆಕೆಂಡ್ ವ್ಯಾಯಾಮ ಮಾಡಿದರೂ ಸಾಕು !

ಕೋಪವನ್ನು ನಿಯಂತ್ರಿಸಲು ನೈಸರ್ಗಿಕ ಮಾರ್ಗ :
ನೀವು ಕೋಪಗೊಂಡಾಗ ಅದನ್ನು ತೋರ್ಪಡಿಸಲು ಹೋಗಬೇಡಿ. ಮನಸ್ಸಿನಲ್ಲಿ ಅಥವಾ ದೊಡ್ಡದಾಗಿ 10 ಅಂಕೆಯವರೆಗೆ ಎಣಿಕೆ ಮಾಡಿ. ಆಗ ನಿಮ್ಮ ಮನಸ್ಸು ಎಣಿಕೆಯ ಮೇಲೆ ಹೋಗುತ್ತದೆ. ಕೋಪ ನಿಯಂತ್ರಣಕ್ಕೆ ಬರುತ್ತದೆ.
ನೀವು ತುಂಬಾ ಕೋಪಗೊಳ್ಳುತ್ತಿದ್ದರೆ, ಆ ಸ್ಥಳದಿಂದ ದೂರ ಹೋಗಿ. ಸಾಧ್ಯವಾದ್ರೆ ಮೆಟ್ಟಿಲುಗಳನ್ನು ಹತ್ತಿರಿ. ನಡೆಯುವಾಗ ಅಥವಾ ಮೆಟ್ಟಿಲುಗಳನ್ನು ಹತ್ತುವುದರ ಮೂಲಕ ಕೋಪವು ನಿಯಂತ್ರಿಸಬಹುದು. 
ಕೋಪವನ್ನು ಕಡಿಮೆ ಮಾಡಲು ಪ್ರತಿದಿನ ವ್ಯಾಯಾಮ ಮಾಡಿ. ಕೋಪವನ್ನು ನಿಯಂತ್ರಿಸಲು ದೀರ್ಘವಾದ ಉಸಿರನ್ನು ತೆಗೆದುಕೊಳ್ಳಿ.  
ಸಾಕಷ್ಟು ನಿದ್ರೆ ಮಾಡುವುದ್ರಿಂದಲೂ ಕೋಪ ಕಡಿಮೆಯಾಗುತ್ತದೆ. ಅನೇಕ ಬಾರಿ ನಿದ್ರಾಹೀನತೆ ಕೋಪಕ್ಕೆ ಕಾರಣವಾಗುತ್ತದೆ.  

Urinary Tract Infection: ಸಂತಾನೋತ್ಪತ್ತಿಗೂ ತರುತ್ತಾ ಕುತ್ತು?

ಕೋಪ ನಿಯಂತ್ರಿಸಲು ಆಕ್ಯುಪ್ರೆಶರ್ ಪಾಯಿಂಟ್‌ಗಳು :
ಕೋಪವನ್ನು ನಿಯಂತ್ರಿಸಲು, ಬೆಳಿಗ್ಗೆ 5-7 ನಿಮಿಷಗಳ ಕಾಲ ಚಪ್ಪಾಳೆ ಹೊಡೆಯಬಹುದು. ಇದು ಕೈಗಳ ಆಕ್ಯುಪ್ರೆಶರ್ ಪಾಯಿಂಟ್‌ಗಳನ್ನು ಜಾಗೃತಗೊಳಿಸುತ್ತದೆ.
ಪ್ರತಿದಿನ ಬೆಳಗ್ಗೆ ಹಲ್ಲುಜ್ಜುವುದರ ಜೊತೆಗೆ ನಾಲಿಗೆಯನ್ನು ಚೆನ್ನಾಗಿ ಸ್ವಚ್ಛಗೊಳಿಸಿ. ನಾಲಿಗೆ ಸ್ವಚ್ಛಗೊಳಿಸಿದಾಗ ಹೃದಯ ಮತ್ತು ಮೂತ್ರಪಿಂಡದ ಬಿಂದುಗಳು ಒತ್ತುತ್ತವೆ.
ಪ್ರತಿದಿನ 10-15 ನಿಮಿಷಗಳ ಕಾಲ ಬರಿಗಾಲಿನಲ್ಲಿ ನಡೆಯಿರಿ. ಬರಿಗಾಲಿನಲ್ಲಿ  ವಾಕಿಂಗ್ ಮಾಡಿದಾಗ ಇದು ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ. ಆಯಾಸ ಮತ್ತು ಒತ್ತಡವನ್ನು ಕಡಿಮೆ ಮಾಡುತ್ತದೆ.ಅಂಗೈಗಳ ನಡುವಿನ ಬಿಂದುವನ್ನು ಒತ್ತಿ, ಕೋಪವು ಕಡಿಮೆಯಾಗುತ್ತದೆ. ಎಲ್ಲಾ ಕಾಲ್ಬೆರಳುಗಳ ಮೇಲ್ಭಾಗವನ್ನು ಒತ್ತಿದರೂ ಕೋಪ ಕಡಿಮೆಯಾಗುತ್ತದೆ.

click me!