Skin Care: ಚಳಿಗಾಲದಲ್ಲಿ ಒಣ ಚರ್ಮದ ಕಿರಿಕಿರಿ ತಪ್ಪಿಸಲು ಇಲ್ಲಿವೆ ಟಿಪ್ಸ್

Suvarna News   | Asianet News
Published : Dec 06, 2021, 05:17 PM IST
Skin Care: ಚಳಿಗಾಲದಲ್ಲಿ ಒಣ ಚರ್ಮದ ಕಿರಿಕಿರಿ ತಪ್ಪಿಸಲು ಇಲ್ಲಿವೆ ಟಿಪ್ಸ್

ಸಾರಾಂಶ

ಒಣಚರ್ಮದವರಿಗೆ ಚಳಿಗಾಲ ಸ್ವಲ್ಪ ಕಷ್ಟ ನೀಡುತ್ತದೆ. ಒಣಚರ್ಮದಿಂದಾಗಿ ತುರಿಕೆ, ಚರ್ಮ ಕೆಂಪಗಾಗುವುದು, ದದ್ದು ಏಳುವುದು ಇಂತಹ ಸಮಸ್ಯೆಗಳು ಕಾಡಿಸಬಹುದು. ಸ್ವಲ್ಪ ಎಚ್ಚರಿಕೆ ತೆಗೆದುಕೊಳ್ಳುವ ಮೂಲಕ ಇಂತಹ ಕಿರಿಕಿರಿಗಳನ್ನು ನಿವಾರಣೆ ಮಾಡಿಕೊಳ್ಳಬಹುದು.   

ಹಿಂದಿನ ಚಳಿಗಾಲ(winter)ದ ಚಳಿ ಈಗಿಲ್ಲ. ಆಗಾಗ ಮಳೆ, ಮೋಡದ ಕಾರಣದಿಂದ ಚಳಿ ಮಾಯವಾಗಿದೆ. ಆದರೂ ಚಳಿಗಾಲದ ಒಣಹವೆ ನಿಧಾನವಾಗಿ ಕಾಣಿಸಿಕೊಳ್ಳುತ್ತಿದೆ. ಮುಖ, ಮೈಕೈಗಳೆಲ್ಲ ಗಾಳಿಗೆ ಉರಿಯೆನಿಸಲು ಶುರುವಾಗಿದೆ. ಚರ್ಮ(skin)ವೂ ಶುಷ್ಕ(dry)ವಾಗುತ್ತಿರುವ ಅನುಭವವಾಗುತ್ತಿದೆ. ಇದರ ಬೆನ್ನಿಗೇ, ತುರಿಸುವುದು, ಕೆಂಪಾಗುವ ಸಮಸ್ಯೆಗಳೆಲ್ಲ ಒಂದೊಂದಾಗಿ ಕಾಣಿಸುವ ಎಲ್ಲ ಸಾಧ್ಯತೆಗಳೂ ಇವೆ. ಚಳಿಗಾಲದಲ್ಲಿ ಚರ್ಮವನ್ನು ಚೆನ್ನಾಗಿಟ್ಟುಕೊಳ್ಳುವುದು ಒಂದು ಸವಾಲು. ಒಣಚರ್ಮದವರಿಗಂತೂ ಅದು ಇನ್ನಷ್ಟು ತಲೆನೋವಾಗುತ್ತದೆ. ಚರ್ಮ ಸುಕ್ಕುಗಟ್ಟಿದಂತಾಗುವುದರಿಂದ ಅಂದವೂ ಮೊದಲಿನಂತೆ ಇರುವುದಿಲ್ಲ. ಚರ್ಮ ಕಳೆಗುಂದುತ್ತದೆ. ಇಂತಹ ಸಮಯದಲ್ಲಿ ಕೆಲವು ವಿಧಾನಗಳನ್ನು ಅನುಸರಿಸುವ ಮೂಲಕ ಚರ್ಮವನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಬಹುದು. ಸಾಮಾನ್ಯವಾಗಿ ಎಲ್ಲರೂ ಯಾವುದೋ ಒಂದು ಮಾಯಿಶ್ಚರೈಸ್ ಕ್ರೀಮ್ ಗೆ ಅಂಟಿಕೊಂಡು ಅದನ್ನೊಂದೇ ಬಳಸುತ್ತಿರುತ್ತೇವೆ. ಚರ್ಮಕ್ಕಾಗುವ ಇತರ ಹಾನಿಗಳನ್ನು ನಿರ್ಲಕ್ಷಿಸುತ್ತೇವೆ. ಆದರೆ, ಈ ಚಳಿಗಾಲದಲ್ಲಿ ಹಾಗಾಗುವುದು ಬೇಡ. ಚಳಿಗಾಲದಲ್ಲೂ ಚರ್ಮ ಹಾನಿಗೆ ಒಳಗಾಗದೆ ಕಳೆಕಳೆಯಾಗಿಯೇ ಇರಬೇಕು.  ಅದಕ್ಕಾಗಿ ಕೆಲವು ಟಿಪ್ಸ್. 
ಸಾಧ್ಯವಾದಷ್ಟೂ ನೈಸರ್ಗಿಕ (natural) ಮಾಯಿಶ್ಚರೈಸ್ ಗಳನ್ನೇ ಮುಖಕ್ಕೆ ಬಳಸುವುದು ಉತ್ತಮ. ಚಳಿಗಾಲದಲ್ಲಿ ಬೆಣ್ಣೆ (butter), ಆಲಿವ್ ತೈಲ (olive oil), ತೆಂಗಿನೆಣ್ಣೆ (coconut oil)ಯನ್ನು ಹೆಚ್ಚು ಬಳಸುವುದು ಬೆಸ್ಟ್. ರಾಸಾಯನಿಕ (chemical) ಉತ್ಪನ್ನಗಳನ್ನು ಬಳಸುವುದರಿಂದ ಹಾನಿಯೇ ಹೆಚ್ಚು. ಚಳಿಗಾಲದಲ್ಲಿ ಚರ್ಮ ಸೂಕ್ಷ್ಮವಾಗಿರುತ್ತದೆ. ಈ ಸಮಯದಲ್ಲಿ ಅವುಗಳ ಬಳಕೆಯಿಂದ ದೂರವಿರಬೇಕು. 

ಮೇಕಪ್ ನಿಂದ ದೂರವಿರಿ
ಚಳಿಗಾಲದಲ್ಲಿ ಮುಖಕ್ಕೆ ಹೆಚ್ಚಿನ ಮೇಕಪ್ ಬೇಡ. ಲಿಪ್ ಸ್ಟಿಕ್ ದೂರವಿಡಿ. ಸ್ನಾನವಾದ ಬಳಿಕ ಪೌಡರ್ ಹಾಕಿಕೊಂಡರೆ ಚರ್ಮಕ್ಕೆ ಹಾನಿಯಾಗುತ್ತದೆ. ಒಂದೊಮ್ಮೆ ಅನಿವಾರ್ಯವಾಗಿ ಮೇಕಪ್ ಬಳಕೆ ಮಾಡಿದರೂ ಅದನ್ನು ಸರಿಯಾದ ಪದ್ಧತಿಯಲ್ಲಿ ತೆಗೆಯಬೇಕು. ಮೇಕಪ್ ಸಾಮಗ್ರಿಗಳ ಗುಣಮಟ್ಟ ಚೆನ್ನಾಗಿರಲಿ. ರಾತ್ರಿ ಸಂಪೂರ್ಣವಾಗಿ ಮೇಕಪ್ ತೆಗೆದ ಬಳಿಕವೇ ಮಲಗಬೇಕು. ಇದಕ್ಕೂ ನೈಸರ್ಗಿಕ ಕ್ಲೆನ್ಸರ್ ಗಳನ್ನು ಬಳಸಬೇಕು. 

ಮಾಧುರಿಯ ಬ್ಯೂಟಿ ಸೀಕ್ರೇಟ್ಸ್

ಮೈಮುಚ್ಚುವ ಬಟ್ಟೆ (dress) ಧರಿಸಿ
ಚಳಿಗೆ ಸೂಕ್ಷ್ಮವಾಗಿ ವರ್ತಿಸುವ ಚರ್ಮ ನಿಮ್ಮದಾಗಿದ್ದರೆ ಸ್ನಾನವಾದ ಬಳಿಕ ಇಡೀ ದೇಹಕ್ಕೆ ಮಾಯಿಶ್ಚರೈಸ್ ಕ್ರೀಮ್ ಬಳಕೆ ಮಾಡಿ. ತೆಂಗಿನೆಣ್ಣೆಯನ್ನೂ ಸವರಿಕೊಳ್ಳಬಹುದು. ಚರ್ಮದ ಮೃದುತ್ವ ಉಳಿಸಿಕೊಳ್ಳುವುದು ಮುಖ್ಯ. ಇಡೀ ದೇಹ ಮುಚ್ಚುವಂತಹ, ಮುಖ್ಯವಾಗಿ ಕೈ ತೋಳು ಮುಚ್ಚುವಂತಹ ಬಟ್ಟೆ ಧರಿಸಿ. ಗಾಳಿಗೆ ದೇಹವನ್ನು ಒಡ್ಡಬೇಡಿ. ಮುಖದ ಮೃದುತ್ವ ಉಳಿಸಿಕೊಳ್ಳಲು ಮನೆಯಲ್ಲೇ ಲಭ್ಯವಾಗುವ ಟೋನರ್ ಹಾಗೂ ಸ್ಕ್ರಬ್ ಗಳನ್ನು ಬಳಕೆ ಮಾಡಬೇಕು. ಹಾಲಿನ ಪುಡಿ, ಗ್ಲೀಸರಿನ್ ಗೆ ಕೆಲವು ಲಿಂಬೆ ಹನಿಗಳನ್ನು ಸೇರಿಸಿ ಮುಖಕ್ಕೆ ಹಚ್ಚಿಕೊಳ್ಳಬಹುದು. ವಾರಕ್ಕೊಮ್ಮೆ ಇದನ್ನು ಮಾಡಿದರೆ ಮುಖ ಕಳೆಕಳೆಯಾಗಿರುವ ಜತೆಗೆ ಹೊಳಪು ಮಾಸುವುದಿಲ್ಲ.  ಅಲೋವೆರಾ ಬಳಕೆ ಮಾಡುವುದು ಒಣಚರ್ಮಕ್ಕೆ ಉತ್ತಮ. ಲೋಳೆಸರಕ್ಕೆ ಚರ್ಮದಲ್ಲಿ ಆಳವಾಗಿಳಿದು ತಂಪು ನೀಡುವ ಗುಣವಿರುವುದರಿಂದ ಚರ್ಮದ ಗುಣಮಟ್ಟ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ.   

ಒಣಹಣ್ಣು (dry fruit)ಗಳ ಸೇವನೆ ಬೆಸ್ಟ್
ಒಣಚರ್ಮಕ್ಕೆ ಕೆಲವರು ಔಷಧೀಯ ಗುಣವಿರುವ ಸಪ್ಲಿಮೆಂಟ್ ಗಳನ್ನೂ ಸೇವನೆ ಮಾಡುತ್ತಾರೆ. ಆದರೆ, ವೈದ್ಯರ ಸಲಹೆ ಮೇರೆಗೆ ಮಾತ್ರ ತೆಗೆದುಕೊಳ್ಳುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ. 
ಅಗಸೆ ಬೀಜ ಹಾಗೂ ಒಣಹಣ್ಣುಗಳನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದಲೂ ಒಣಚರ್ಮದ ಸಮಸ್ಯೆಗೆ ಬೈ ಹೇಳಬಹುದು. ಒಟ್ಟಿನಲ್ಲಿ ಚಳಿಗಾಲದಲ್ಲಿ ಒಣಚರ್ಮದಿಂದಾಗಿ ತುರಿಕೆ, ದದ್ದು ಏಳುವುದು ಮುಂತಾದ ಸಮಸ್ಯೆಗೆ ತುತ್ತಾಗದೆ ಇರುವುದು ಮುಖ್ಯ. ಇದು ನಿಮ್ಮ ಕೈಯಲ್ಲೇ ಇದೆ. ಯಾವುದೇ ಕಾರಣಕ್ಕೂ ನಿರ್ಲಕ್ಷಿಸದೆ ಕೆಲವಾದರೂ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಚಳಿಗಾಲದಲ್ಲೂ ಸುಂದರವಾದ ಹಾಗೂ ನಳನಳಿಸುವ ಮುಖದೊಂದಿಗೆ ನಲಿಯಬಹುದು.

ಮದ್ಯ ವಯಸ್ಸಲ್ಲೂ ಬ್ಯೂಟಿಫುಲ್ ಆಗಿ ಕಾಣೋದು ಹೇಗೆ?

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರಾತ್ರಿ ಮಲಗುವ ಮುನ್ನ ನೀರು ಕುಡಿಯುತ್ತೀರಾ?, ಈ ವಿಷಯಗಳನ್ನು ನೀವು ತಿಳಿದಿರಲೇಬೇಕು
ಕೊಲೊನ್ ಕ್ಯಾನ್ಸರ್.. 30 ವರ್ಷದ ನಂತ್ರ ಈ ಲಕ್ಷಣ ಕಾಣಿಸಿಕೊಂಡರೆ ನಿರ್ಲಕ್ಷಿಸಬೇಡಿ