ನಿಮ್ದು ಯಾವ ಬಗೆಯ ಚರ್ಮ?

By Web DeskFirst Published Oct 7, 2019, 2:18 PM IST
Highlights

ಆಯ್ಲೀ ಸ್ಕಿನ್ನೋ, ಡ್ರೈಸ್ಕಿನ್ನೋ ಅಥವಾ ನಾರ್ಮಲ್‌ ಚರ್ಮವಾ, ನೋಡೋದು ಹೇಗೆ, ಸಿಂಪಲ್‌ ಟೆಸ್ಟ್‌ ಒಂದಿದೆ. ನೀಟಾಗಿ ಮುಖ ತೊಳೆಯಿರಿ. ಒಂದು ಗಂಟೆ ಮುಖಕ್ಕೆ ಏನೂ ಹಚ್ಚದೇ ಚರ್ಮಕ್ಕೆ ಉಸಿರಾಡಲು ಬಿಡಿ.

ಆಯ್ಲೀ ಸ್ಕಿನ್ನೋ, ಡ್ರೈಸ್ಕಿನ್ನೋ ಅಥವಾ ನಾರ್ಮಲ್‌ ಚರ್ಮವಾ.. ನೋಡೋದು ಹೇಗೆ, ಸಿಂಪಲ್‌ ಟೆಸ್ಟ್‌ ಒಂದಿದೆ. ನೀಟಾಗಿ ಮುಖ ತೊಳೆಯಿರಿ. ಒಂದು ಗಂಟೆ ಮುಖಕ್ಕೆ ಏನೂ ಹಚ್ಚದೇ ಚರ್ಮಕ್ಕೆ ಉಸಿರಾಡಲು ಬಿಡಿ. ಆಮೇಲೆ ಗಮನಿಸಿ.

ಮಿಲ್ಕಿ ಬ್ಯೂಟಿಗಾಗಿ ಹಾಲು, ಕೇಸರಿ ಪೇಸ್ಟ್!

ಜಿಡ್ಡಿನಂಶ ಕಂಡು ಚರ್ಮ ಹೊಳೆಯುತ್ತಿದ್ದರೆ ಆಯ್ಲೀ ಸ್ಕಿನ್‌. ಆರೋಗ್ಯಕರವಾಗಿದೆ, ಸಹಜವಾಗಿದೆ ಅನಿಸಿದರೆ ಅದು ನಾರ್ಮಲ್‌ ಸ್ಕಿನ್‌. ಮೂಗು, ಹಣೆ, ಗದ್ದದ ಭಾಗ ಟಿ ಶೇಪ್‌ನಲ್ಲಿ ಸಪರೇಟ್‌ ಆಗಿ ಕಾಣ್ತಿದೆ, ಚರ್ಮದಲ್ಲಿ ತೇವಾಂಶ ಇಲ್ಲ, ಹೊಳಪೂ ಇಲ್ಲ ಅನಿಸಿದರೆ ನಿಮ್ಮದು ಡ್ರೈ ಸ್ಕಿನ್‌. ಮಾಯಿಶ್ಚರೈಸ್‌ ಮಾಡ್ಕೊಳ್ಳೋದು ಅನಿವಾರ್ಯ. ಮುಖ ಒಣಗಲು ಬಿಡಬಾರದು, ತೆಂಗಿನ ಹಾಲಿನ ಎಣ್ಣೆ, ಹಾಲಿನ ಕೆನೆ, ಮಾಯಿಶ್ಚರೈಸರ್‌ ಇತ್ಯಾದಿ ಹಚ್ಚಬಹುದು.

click me!