ಪದೇ ಪದೇ ಬಾಯಿ ಒಣಗೋದು ಯಾಕೆ?

By Web DeskFirst Published Oct 7, 2019, 2:00 PM IST
Highlights

ಬಾಯಲ್ಲಿ ಪಸೆ ಇರಲ್ಲ. ಪದೇ ಪದೇ ಒಣಗುತ್ತಿರುತ್ತೆ. ಎರಡು ಮೂರು ಗ್ಲಾಸ್‌ ನೀರು ಕುಡಿದರೂ ಮತ್ತೊಂದು ಕ್ಷಣದಲ್ಲಿ ಬಾಯಿ ಡ್ರೈ ಅನಿಸಲಿಕ್ಕೆ ಶುರುವಾಗುತ್ತದೆ. ಈ ಥರ ಆಗ್ತಿದ್ರೆ ಸ್ವಲ್ಪ ಹೆಚ್ಚೇ ಕೇರ್‌ ತಗೊಳ್ಬೇಕು. ಕ್ಸಿರೋಸ್ಟೋಮಿಯಾ ಅನ್ನುವ ಸಮಸ್ಯೆ ಇದು.  

ನಾಲಿಗೆ ಕುಲ ಹೇಳಿದ್ರೆ ಅದರ ಬಣ್ಣ ಆರೋಗ್ಯ ಹೇಳುತ್ತೆ!

ಎಂಜಲು ಉತ್ಪಾದಿಸುವ ಗ್ರಂಥಿಗಳು ಸರಿಯಾಗಿ ಕೆಲಸ ಮಾಡದಿದ್ದಾಗ ಈ ಲಕ್ಷಣ ಕಂಡುಬರುತ್ತದೆ. ತುಟಿ ಒಡೆಯೋದು, ಆಹಾರ ನುಂಗಲಿಕ್ಕೆ ಕಷ್ಟಆಗೋದು, ಉಸಿರಾಡುವಾಗ ದುರ್ಗಂಧ ಬರೋದು ಇತ್ಯಾದಿಗಳಾಗುತ್ತದೆ. ಹೆಚ್ಚೆಚ್ಚು ನೀರು ಕುಡಿದರೆ, ಆಗಾಗ ಬಾಯಿ ಮುಕ್ಕಳಿಸುತ್ತಿದ್ದರೆ ಸ್ವಲ್ಪ ಮಟ್ಟಿಗೆ ನಿಯಂತ್ರಿಸಬಹುದು. ಪ್ರತೀದಿನ ಒಂದು ಲೋಟ ನೀರಿಗೆ ನಿಂಬೆ ರಸ ಹಾಕಿ, ಜೇನುತುಪ್ಪ ಹಾಕಿ ಖಾಲಿ ಹೊಟ್ಟೆಗೆ ಕುಡಿಯೋದೂ ಒಳ್ಳೆಯದು.

click me!