ವಾಕಿಂಗ್ ಮಾಡ್ಬೇಕು ಅಂತಾ ಪ್ರತಿ ದಿನ ಅಂದುಕೊಳ್ತೇವೆ. ಆದ್ರೆ ಕೆಲಸದ ಮಧ್ಯೆ 300 ಹೆಜ್ಜೆ ನಡೆಯೋದೇ ಕಷ್ಟ. ದಿನಕ್ಕೆ 10 ಸಾವಿರ ಹೆಜ್ಜೆ ನಡೆಯೋದು ಸಾಧ್ಯವೇ ಇಲ್ಲ ಎನ್ನುವವರು ನೀವಾಗಿದ್ದರೆ ಈ ಟಿಪ್ಸ್ ಫಾಲೋ ಮಾಡಿ.
ಕಳೆದ ಕೆಲವು ವರ್ಷಗಳಿಂದ ಫಿಟ್ನೆಸ್ ಗೆ ಜನರು ಹೆಚ್ಚಿನ ಆದ್ಯತೆ ನೀಡ್ತಿದ್ದಾರೆ. ನಾನಾ ವಿಧದಲ್ಲಿ ನಿಮ್ಮ ದೇಹವನ್ನು ಫಿಟ್ ಆಗಿಟ್ಟುಕೊಳ್ಳಬಹುದು. ಜಿಮ್, ವ್ಯಾಯಾಮ, ಯೋಗ, ಎರೋಬಿಕ್ಸ್ ಸೇರಿದಂತೆ ಓಟ, ವಾಕಿಂಗ್ ಕೂಡ ನಮ್ಮ ದೇಹವನ್ನು ಆರೋಗ್ಯವಾಗಿಡುತ್ತದೆ. ಅನೇಕರು ವಾಕಿಂಗ್ ಇಷ್ಟಪಡ್ತಾರೆ. ಈಗಿನ ದಿನಗಳಲ್ಲಿ ವಾಕಿಂಗ್ ಮಾಡೋರ ಸಂಖ್ಯೆ ಕಡಿಮೆಯಾಗಿದೆ. ಆದ್ರೆ ಅದ್ರ ಲಾಭ ಹೆಚ್ಚು ಎಂಬುದು ಜನರಿಗೆ ತಿಳಿದಿಲ್ಲ. ವಾಕಿಂಗ್ ಗೆ ಹಣ ಖರ್ಚಾಗೋದಿಲ್ಲ. ಸಮಯ ನೀಡಬೇಕಾಗುತ್ತದೆ. ದಿನಕ್ಕೆ 10,000 ಹೆಜ್ಜೆ ನಡೆದ್ರೆ ನಾವು ಆರೋಗ್ಯವಾಗಿರಬಹುದು. ಆದ್ರೆ ದಿನಕ್ಕೆ 10,000 ಹೆಜ್ಜೆ ನಡೆಯೋದು ಸುಲಭವಲ್ಲ. ಎಲ್ಲಿ ಇಷ್ಟೊಂದು ಹೆಜ್ಜೆ ನಡೆಯೋದು ಎಂಬ ಪ್ರಶ್ನೆ ಒಂದಾದ್ರೆ ಮತ್ತೊಂದು ಹೇಗೆ ಎಂಬ ಪ್ರಶ್ನೆಯೂ ಕಾಡುತ್ತದೆ. ದಿನಕ್ಕೆ 10,000 ಹೆಜ್ಜೆ ನಡೆಯಬೇಕೆಂದು ನೀವು ಪಣತೊಟ್ಟಿದ್ರೆ ಅದನ್ನು ಹೇಗೆ ಪೂರೈಸಬಹುದು ಅಂತಾ ನಾವು ಹೇಳ್ತೇವೆ.
ದಿನಕ್ಕೆ 10 ಸಾವಿರ ಹೆಜ್ಜೆ (Step) ನಡೆಯೋದು ಹೇಗೆ ಗೊತ್ತಾ? :
ಲಿಫ್ಟ್ (Lift) ಬಿಟ್ಟು ಮೆಟ್ಟಿಲೇರಿ : ಈಗಿನ ದಿನಗಳಲ್ಲಿ ಕಚೇರಿಯಲ್ಲಿ ಮಾತ್ರವಲ್ಲ ಮನೆಯಲ್ಲೂ ಲಿಫ್ಟ್ ಸೌಲಭ್ಯವಿರುತ್ತದೆ. ಅಪಾರ್ಟ್ಮೆಂಟ್ ಗಳಲ್ಲಂತೂ ಲಿಫ್ಟ್ ಮಾಮೂಲಿ. ನಿಮ್ಮ ಕಚೇರಿಯನ್ನು ಅಥವಾ ಮನೆಯನ್ನು ನೀವು ಮೆಟ್ಟಿಲು ಹತ್ತಿ ತಲುಪಬಹುದು ಎಂದಾದ್ರೆ ಲಿಫ್ಟ್ ಬದಲು ಮೆಟ್ಟಿಲು ಬಳಸಿ. ಪ್ರತಿ ದಿನ ನೀವು ಮೆಟ್ಟಿಲು ಹತ್ತಿ ಇಳಿದು ಮಾಡಿದ್ರೆ ನಿಮ್ಮ 10 ಸಾವಿರ ಸ್ಟೆಪ್ಸ್ ಗುರಿಯನ್ನು ನೀವು ತಲುಪಬಹುದು.
PARENTING TIPS: ಮಕ್ಕಳ ಕೆಟ್ಟ ವರ್ತನೆ ಸರಿಪಡಿಸೋದು ಹೇಗೆ?
ಬ್ರೇಕ್ (Break) ಟೈಂನಲ್ಲಿ ವಾಕ್ ಮಾಡಿ : ಕಚೇರಿಯಲ್ಲಿ ಕೆಲಸದ ಮಧ್ಯೆ ಬಿಡುವಿದ್ರೆ ದಯವಿಟ್ಟು ಅಲ್ಲಿಯೇ ಕುಳಿತು ಟೈಂ ಪಾಸ್ ಮಾಡ್ಬೇಡಿ. ಬಿಡುವಿನ ಸಮಯದಲ್ಲಿ ಅಲ್ಲಿಯೇ ಆಕೆ ಈಕಡೆ ಓಡಾಡಿ. ಜಾಗವಿದ್ರೆ ನೀವು ಅಲ್ಲಿಯೇ 10 ನಿಮಿಷದ ವಾಕ್ ಮಾಡ್ಬಹುದು.
ಫೋನ್ (Phone) ನಲ್ಲಿ ಮಾತನಾಡುವಾಗ ವಾಕಿಂಗ್ : ಸಹೋದ್ಯೋಗಿಗಳು, ಸ್ನೇಹಿತರು ಅಥವಾ ಕುಟುಂಬಸ್ಥರ ಕರೆ ಬಂದಾಗ ನಾವು ಕೆಲಸ ಬಿಟ್ಟು ಮಾತನಾಡೋಕೆ ಜಾಗ ಹುಡುಕ್ತೇವೆ. ನೀವು ಹೀಗೆ ಮಾಡ್ತಿದ್ದರೆ ಇನ್ಮುಂದೆ ಬಿಡಿ. ಫೋನ್ ನಲ್ಲಿ ಮಾತನಾಡ್ತಾ ವಾಕಿಂಗ್ ಮಾಡಿ. ಆಗ ನಿಮ್ಮ ನಿತ್ಯದ ವಾಕಿಂಗ್ ಕೌಂಟ್ ಹೆಚ್ಚಾಗುತ್ತದೆ.
ಸ್ವಲ್ಪ ದೂರ ಕಾರ್ ಪಾರ್ಕ್ ಮಾಡಿ : ಕಚೇರಿ ಬಳಿ ಅಥವಾ ಶಾಪಿಂಗ್ ಜಾಗದ ಹತ್ತಿರವೇ ಕಾರ್ ಪಾರ್ಕಿಂಗ್ ಗೆ ಜಾಗ ಸಿಗಲಿಲ್ಲವೆಂದು ಟೆನ್ಷನ್ ಮಾಡ್ಕೊಳ್ಳಬೇಡಿ. ಸ್ವಲ್ಪ ದೂರದಲ್ಲೇ ಕಾರ್ ಪಾರ್ಕ್ ಮಾಡಿ. ಅಲ್ಲಿಂದ ನಡೆದು ಕಚೇರಿಗೆ ಬರುವಷ್ಟು ನಿಮಗೆ ವಾಕ್ ಆಗಿರುತ್ತದೆ.
Health Tips : ದೀರ್ಘ ಪ್ರಯಾಣದ ವೇಳೆ ನಿದ್ರೆ ಬರೋದೇಕೆ?
ಊಟವಾದ ನಂತ್ರ ಚಿಕ್ಕದೊಂದು ವಾಕ್ ಇರಲಿ : ಊಟವಾದ್ಮೇಲೆ ವಾಕ್ ಮಾಡಬಹುದು. ನೀವು ಪ್ರತಿ ದಿನ ಊಟವಾದ ತಕ್ಷಣ ಕುಳಿತು ಕೆಲಸ ಮಾಡೋದು ಅಥವಾ ಮಲಗೋದು ಮಾಡ್ತಿದ್ದರೆ ಅದನ್ನು ಅವೈಡ್ ಮಾಡಿ. ಊಟವಾದ ತಕ್ಷಣ ಸಣ್ಣದೊಂದು ವಾಕ್ ಗೆ ಹೋಗಿ. ಇದು ನಿಮ್ಮ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ನಿಮ್ಮ ದಿನದ ವಾಕ್ ಕೌಂಟ್ ಹೆಚ್ಚಿಸಲು ನೆರವಾಗುತ್ತದೆ.
ವಾಕಿಂಗ್ ನಿಂದಾಗುವ ಲಾಭಗಳು ? : ದೈಹಿಕ ಸಾಮರ್ಥ್ಯಕ್ಕಾಗಿ ವಾಕಿಂಗ್ ಸರಳವಾದ ಆದರೆ ಪರಿಪೂರ್ಣ ವ್ಯಾಯಾಮವಾಗಿದೆ. ಇದು ಹೃದಯವನ್ನು ಆರೋಗ್ಯಕರವಾಗಿರಿಸುತ್ತದೆ. ತೂಕ ಇಳಿಸಲು ಇದು ಸಹಾಯ ಮಾಡುತ್ತದೆ. ಗಂಭೀರ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ದೇಹಕ್ಕೆ ಶಕ್ತಿ ನೀಡುವ ಕೆಲಸ ಮಾಡುತ್ತದೆ. ವಾಕಿಂಗ್ ರಕ್ತದ ಹರಿವು ಮತ್ತು ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಇದು ಕೀಲುಗಳನ್ನು ಆರೋಗ್ಯವಾಗಿರಿಸುತ್ತದೆ. ಸಂಧಿವಾತದ ಅಪಾಯವನ್ನು ಕಡಿಮೆ ಮಾಡುತ್ತದೆ.