
ಇಂದಿನ ಕಾಲದಲ್ಲಿ, ತೂಕ ಇಳಿಸಿಕೊಳ್ಳಲು ಜನರು ವಿವಿಧ ಹೊಸ ಟ್ರೆಂಡ್ಸ್ ಅನುಸರಿಸುತ್ತಿದ್ದಾರೆ. ಅನೇಕ ಜನರು ತೂಕ ಇಳಿಸಲು ಜಿಮ್‌ನಲ್ಲಿ ಗಂಟೆಗಟ್ಟಲೆ ಬೆವರು ಸುರಿಸುತ್ತಿದ್ದರೆ, ಇನ್ನು ಕೆಲವರು ಕಟ್ಟುನಿಟ್ಟಿನ ಆಹಾರಕ್ರಮಗಳನ್ನು ಅನುಸರಿಸುತ್ತಾರೆ. ಆರೋಗ್ಯ ತಜ್ಞರ ಪ್ರಕಾರ, ತೂಕ ಇಳಿಸುವುದು ಕೇವಲ ಆಹಾರ ಪದ್ಧತಿ ಮತ್ತು ಜಿಮ್‌ಗೆ ಸೀಮಿತವಾಗಿಲ್ಲ; ಬದಲಾಗಿ, ಸಣ್ಣ ಜೀವನಶೈಲಿಯ ಅಭ್ಯಾಸಗಳು ಸಹ ಮಹತ್ವದ ಪಾತ್ರವನ್ನು ವಹಿಸುತ್ತವೆ. ಇಂಟರ್ನೆಟ್‌ನಲ್ಲಿ ತೂಕ ಇಳಿಸಿಕೊಳ್ಳಲು ನೀವು ಸಾವಿರಾರು ವಿಧಾನಗಳನ್ನು ಕಾಣಬಹುದು, ಆದರೆ ಇತ್ತೀಚೆಗೆ ಒಬ್ಬ ವ್ಯಕ್ತಿ ಸರಿಯಾದ ಆಹಾರ, ವ್ಯಾಯಾಮ ಮತ್ತು ಕೆಲವು ಅಸಾಂಪ್ರದಾಯಿಕ ಫಿಟ್‌ನೆಸ್ ಹ್ಯಾಕ್ ಕಾಂಬಿನೇಶನ್ ಟ್ರೈ ಮಾಡುವ ಮೂಲಕ ನೈಸರ್ಗಿಕವಾಗಿ 60 ಕಿಲೋಗ್ರಾಂಗಳಷ್ಟು ತೂಕ ಕಳೆದುಕೊಂಡಿರುವ ಬಗ್ಗೆ ತಿಳಿಸಿದ್ದಾರೆ. ಅದರ ಬಗೆಗ್ ತಿಳಿದ್ರೆ ನಿಮಗೂ ಅಚ್ಚರಿಯಾಗಬಹುದು.
ಕುವಾರ್ ಕಪೂರ್ ಎಂಬ ವ್ಯಕ್ತಿ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ತೂಕ ಇಳಿಸಿಕೊಳ್ಳಲು ಕೆಲವು ವಿಶಿಷ್ಟ ಬದಲಾವಣೆಗಳನ್ನು ಜಾರಿಗೆ ತಂದಿದ್ದಾಗಿ ಹಂಚಿಕೊಂಡಿದ್ದಾರೆ, ಇದು ಅವರನ್ನು 142 ಕೆಜಿಯಿಂದ 80 ಕೆಜಿಗೆ ಇಳಿಸಲು ಸಹಾಯ ಮಾಡಿತು. ಇವರು ಅದಕ್ಕಾಗಿ ಬಳಸಿದ್ದು ಡಯಟ್ ಸೋಡಾ. ಜನರು ಸಾಮಾನ್ಯವಾಗಿ ಕೂಲ್ ಡ್ರಿಂಕ್ಸ್ ನಿಂದ ದೂರ ಉಳಿಯಲು ಸಲಹೆ ನೀಡುತ್ತಾರೆ. ಆದರೆ ಈ ವ್ಯಕ್ತಿ ಊಟದ ಜೊತೆಗೆ ಜೀರೋ ಕ್ಯಾಲೋರಿ ಡಯಟ್ ಸೋಡಾ ಸೇವಿಸಿದ್ದಾರೆ. ಆವಾಗ ಹೊಟ್ಟೆ ತುಂಬಿದ ಭಾವನೆ ಉಂಟಾಗುತ್ತದೆ, ಇದರಿಂದಾಗಿ ಅತಿಯಾಗಿ ತಿನ್ನುವುದನ್ನು ತಡೆಯುತ್ತದೆ. ಇಷ್ಟೇ ಅಲ್ಲ, ಶುಗರ್ ಲೆಸ್ ಗಮ್ ಅಗಿಯುವುದು ಸಹ ತೂಕ ನಷ್ಟಕ್ಕೆ ಕೊಡುಗೆ ನೀಡುತ್ತದೆ. ಕುವಾರ್ ಕಪೂರ್ ಪ್ರಕಾರ, ಊಟದ ನಂತರ ಗಮ್ ಅಗಿಯುತ್ತಿದ್ದರೆ, ನಿಮ್ಮ ಮೆದುಳು ನೀವು ಇನ್ನೂ ತಿನ್ನುತ್ತಿದ್ದೀರಿ ಎಂದು ನಂಬುತ್ತದೆಯಂತೆ. ಇದು ಆಗಾಗ್ಗೆ ತಿಂಡಿ ತಿನ್ನುವ ಅಭ್ಯಾಸವನ್ನು ತಡೆಯಲು ಸಹಾಯ ಮಾಡುತ್ತದೆ ಮತ್ತು ಅನಗತ್ಯ ಕ್ಯಾಲೊರಿಗಳ ಸೇವನೆಯನ್ನು ತಡೆಯುತ್ತದೆ.
ಇನ್ನು ತೂಕ ಇಳಿಸಿಕೊಳ್ಳಲು, ಕುವಾರ್ ಕಪೂರ್ ಫಿಟ್‌ನೆಸ್ ತಜ್ಞರು ಹೇಳಿರುವ ವಿಧಾನವನ್ನೂ ಸಹ ಅನುಸರಿಸುತ್ತಾರೆ. ಇವುಗಳಲ್ಲಿ "ಪ್ರೋಟೀನ್ ಮೊದಲು" ಎಂಬ ನಿಯಮವೂ ಸೇರಿದೆ: ನಿಮ್ಮ ತಟ್ಟೆಯಲ್ಲಿ ಪ್ರೋಟೀನ್‌ಗೆ ಆದ್ಯತೆ ನೀಡಿ, ಮತ್ತು ನಂತರ ಮಾತ್ರ ಕಾರ್ಬೋಹೈಡ್ರೇಟ್‌ಗಳು ಮತ್ತು ಕೊಬ್ಬನ್ನು ಸೇರಿಸಿ. ತಟ್ಟೆಯಲ್ಲಿ ತರಕಾರಿಗಳನ್ನು ಸೇರಿಸುವುದು ಅತ್ಯಗತ್ಯ, ಏಕೆಂದರೆ ಅವು ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತವೆ ಮತ್ತು ದೀರ್ಘಕಾಲದವರೆಗೆ ಹೊಟ್ಟೆ ತುಂಬಿರುವಂತೆ ಮಾಡುತ್ತದೆ. ಇದರ ಜೊತೆಗೆ ದಿನವಿಡೀ ಸಣ್ಣ ಚಲನೆಗಳಲ್ಲಿ ತೊಡಗಿಸಿಕೊಳ್ಳುವುದು ಸಹ ಸೇರಿಕೊಂಡಿದೆ.ಇದನ್ನು ನಿರಂತರವಾಗಿ ಮಾಡುತ್ತಾ ಬಂದರೆ ತೂಕ ನಿಧಾನವಾಗಿ ಕಡಿಮೆಯಾಗುತ್ತದೆ.
ಅದೇ ರೀತಿ, ದೀರ್ಘಕಾಲ ಕುಳಿತುಕೊಳ್ಳುವ ಬದಲು ನಿಲ್ಲುವ ಅಭ್ಯಾಸವನ್ನು ಸಹ ಪ್ರಯೋಜನಕಾರಿ ಎಂದಿದ್ದಾರೆ ಕುವಾರ್ ಕಪೂರ್. ನೀವು ನಿಮ್ಮ ಸ್ಕ್ರೀನ್ ಸಮಯದ ಒಂದು ಭಾಗವನ್ನು ನಿಂತುಕೊಂಡು ಕಳೆದರೆ, ನಿಮ್ಮ ದೇಹವು ಹೆಚ್ಚಿನ ಶಕ್ತಿಯನ್ನು ವ್ಯಯಿಸುತ್ತದೆ, ಇದರಿಂದಾಗಿ ಕ್ಯಾಲೊರಿ ವೆಚ್ಚವು ಕ್ರಮೇಣ ಹೆಚ್ಚಾಗುತ್ತದೆ. ಇದಲ್ಲದೆ, ಅವರು "3-2-1 ನಿಯಮ"ವನ್ನು ಹೆಚ್ಚು ಪರಿಣಾಮಕಾರಿ ಎಂದು ವಿವರಿಸಿದ್ದಾರೆ. ಈ ನಿಯಮದ ಪ್ರಕಾರ, ಒಬ್ಬರು ಮಲಗುವ ಸಮಯಕ್ಕೆ ಮೂರು ಗಂಟೆಗಳ ಮೊದಲು ಊಟವನ್ನು ಮುಗಿಸಬೇಕು, ಎರಡು ಗಂಟೆಗಳ ಮೊದಲು ದ್ರವ ಸೇವನೆಯನ್ನು ಕಡಿಮೆ ಮಾಡಬೇಕು ಮತ್ತು ನಿದ್ರೆಗೆ ಹೋಗುವ ಒಂದು ಗಂಟೆ ಮೊದಲು ಸ್ಕ್ರೀನ್‌ಗಳಿಂದ ಸಂಪರ್ಕ ಕಡಿತಗೊಳಿಸಬೇಕು. ಇದು ಜೀರ್ಣಕ್ರಿಯೆಯನ್ನು ಸುಧಾರಿಸುವುದಲ್ಲದೆ ಉತ್ತಮ ನಿದ್ರೆಯನ್ನು ಉತ್ತೇಜಿಸುತ್ತದೆ ಮತ್ತು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.
ಕೊನೆಯದಾಗಿ, ಅವರು "ಡೈಜೆಶನ್ ವಾಕ್’ ಬೆಸ್ಟ್. ಅಂದರೆ ಊಟದ ನಂತರ ಐದು ನಿಮಿಷಗಳ ಚುರುಕಾದ ನಡಿಗೆ. ಇದು ದೇಹವು ಆಹಾರವನ್ನು ಹೆಚ್ಚು ಪರಿಣಾಮಕಾರಿಯಾಗಿ ಜೀರ್ಣಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ ಮತ್ತು ಸಮತೋಲಿತ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ, ಇದರಿಂದಾಗಿ ಕೊಬ್ಬು ಸಂಗ್ರಹವಾಗುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.