ಡೆಸ್ಕ್ ಜಾಬ್ ಮಾಡೋರಲ್ಲಿ ಶೇ.20ರಷ್ಟು ಹೆಚ್ಚು ಹೃದಯಾಘಾತದ ಅಪಾಯ

Published : Jul 14, 2022, 05:42 PM IST
ಡೆಸ್ಕ್ ಜಾಬ್ ಮಾಡೋರಲ್ಲಿ ಶೇ.20ರಷ್ಟು ಹೆಚ್ಚು ಹೃದಯಾಘಾತದ ಅಪಾಯ

ಸಾರಾಂಶ

ಇತ್ತೀಚಿನ ದಿನಗಳಲ್ಲಿ ದೈಹಿಕ ಕೆಲಸಕ್ಕಿಂತ ಮಾನಸಿಕ ಕೆಲಸಕ್ಕೆ ಹೆಚ್ಚಿನ ಆದ್ಯತೆ ಸಿಗ್ತಿದೆ. ಜನರು ಒಂದೇ ಕಡೆ ಕುಳಿತು 8 -9 ಗಂಟೆಗಳ ಕಾಲ ಕೆಲಸ ಮಾಡ್ತಾರೆ. ಈ ಜಡತ್ವ ಜೀವನಶೈಲಿ ಅವರ ಆರೋಗ್ಯದ ಮೇಲೆ ದೊಡ್ಡ ಮಟ್ಟದಲ್ಲಿ ಪರಿಣಾಮ ಬೀರ್ತಿದೆ.  

ಕೆಲ ವರ್ಷಗಳಿಂದ ವಿಶ್ವದಾದ್ಯಂತ ಹೆಚ್ಚುತ್ತಿರುವ ಆರೋಗ್ಯ (Health) ಸಮಸ್ಯೆಗಳಲ್ಲಿ ಹೃದಯ (Heart) ಸಮಸ್ಯೆ ಕೂಡ ಒಂದು. ಕಳೆದ ಕೆಲವು ವರ್ಷಗಳಲ್ಲಿ ಯುವಕರಲ್ಲಿ ಹೃದ್ರೋಗ ಮತ್ತು ಹೃದಯಾಘಾತ (Heart Attack) ದಂತಹ ಮಾರಣಾಂತಿಕ ಸಮಸ್ಯೆಗಳ ಪ್ರಕರಣಗಳು ವೇಗವಾಗಿ ಹೆಚ್ಚಾಗುತ್ತಿರುವುದು ಆಶ್ಚರ್ಯಕರವಾಗಿದೆ. ಯುವಕರಲ್ಲಿ ಅದರಲ್ಲೂ ಹೆಚ್ಚಾಗಿ ಡೆಸ್ಕ್‌ ಜಾಬ್‌ ಮಾಡುವವರು ಅಂದರೆ ದಿನದ 7-8 ಗಂಟೆ ಕಚೇರಿಯಲ್ಲೇ ಕುಳಿತು ಕೆಲಸ ಮಾಡುವವರಲ್ಲಿ ಹೃಯದ ಖಾಯಿಲೆ ಅಪಾಯ ಹೆಚ್ಚು ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ. ಬೇರೆ ಕೆಲಸ ಮಾಡುವ ಜನರಿಗೆ ಹೋಲಿಕೆ ಮಾಡಿದ್ರೆ ಡೆಸ್ಕ್ ಕೆಲಸ ಮಾಡುವ ಜನರಲ್ಲಿ ಪಾರ್ಶ್ವವಾಯು ಮತ್ತು ಹೃದಯಾಘಾತದ ಅಪಾಯವು ಗಮನಾರ್ಹವಾಗಿ ಹೆಚ್ಚಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ. ನಿಷ್ಕ್ರಿಯ ಜೀವನಶೈಲಿ ಅನೇಕ ರೀತಿಯ ಕಾಯಿಲೆಗಳ ಅಪಾಯವನ್ನು ಹೆಚ್ಚಿಸಿದೆಯಾದ್ರೂ, ಹೃದ್ರೋಗದ ಪ್ರಕರಣಗಳು ಇದರಲ್ಲಿ ಗಮನಾರ್ಹವಾಗಿ ಹೆಚ್ಚಿವೆ ಎಂದು ಸಂಶೋಧಕರು ಹೇಳುತ್ತಾರೆ. ಕಚೇರಿಯಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರೂ ಈ ಬಗ್ಗೆ ಗಮನ ಹರಿಸಬೇಕು. ಹೃದಯ ರೋಗದ ಬರದಂತೆ ತಡೆಯಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ತಜ್ಞರು ಸಲಹೆ ನೀಡಿದ್ದಾರೆ.  ಅನಾರೋಗ್ಯಕರ ಜೀವನಶೈಲಿ ಹೃದಯದ ಆರೋಗ್ಯದ ಮೇಲೆ ಗಂಭೀರವಾಗಿ ಪರಿಣಾಮ ಬೀರುತ್ತದೆ. ಹಾಗಾಗಿ ಎಂದಿಗೂ ಇದನ್ನು ಕಡೆಗಣಿಸಬಾರದು. ಹೃದಯ ರೋಗ ಬರದಂತೆ ತಡೆಯಲು ಯಾವ ಕ್ರಮಕೈಗೊಳ್ಳಬೇಕೆಂದು ನಾವಿಂದು ಹೇಳ್ತೇವೆ. 

ಜಡ ಜೀವನಶೈಲಿ  ಹೆಚ್ಚುತ್ತಿರುವ ಹೃದಯ ಕಾಯಿಲೆಗೆ ಮೂಲ ಕಾರಣ : ಚೀನೀ ಅಕಾಡೆಮಿ ಆಫ್ ಮೆಡಿಕಲ್ ಸೈನ್ಸ್ ಮತ್ತು ಪೀಕಿಂಗ್ ಯೂನಿಯನ್ ಮೆಡಿಕಲ್ ಕಾಲೇಜ್ ಈ ಬಗ್ಗೆ ಅಧ್ಯಯನ ನಡೆಸಿದೆ. ಡೆಸ್ಕ್ ಜಾಬ್ ಮಾಡುವವರಿಗೆ ಹೃದಯ ಕಾಯಿಲೆಗಳ ಅಪಾಯ ಎಷ್ಟು ಹೆಚ್ಚು ಎನ್ನುವ ಬಗ್ಗೆ ಅಧ್ಯಯನ ನಡೆಸಿದೆ. ಇದರಲ್ಲಿ, ದಿನಕ್ಕೆ ಎಂಟರಿಂದ ಒಂಬತ್ತು ಗಂಟೆಗಳ ಕಾಲ ಕುರ್ಚಿ ಮೇಲೆ ಕುಳಿತು ಕೆಲಸ ಮಾಡುವ ಕೆಲಸಗಾರರು ಹೃದಯಾಘಾತ ಅಥವಾ ಪಾರ್ಶ್ವವಾಯುವಿಗೆ ಒಳಗಾಗುವ ಸಾಧ್ಯತೆ ಶೇಕಡಾ 20ರಷ್ಟು ಎಂಬುದು ಪತ್ತೆಯಾಗಿದೆ. 

ದಿನವಿಡೀ ಬಿಸಿ ನೀರು ಕುಡಿಯೋ ಅಭ್ಯಾಸ ಒಳ್ಳೇದಾ ?

11 ವರ್ಷಗಳ ಅವಧಿಯಲ್ಲಿ, ಸಂಶೋಧಕರು 21 ದೇಶಗಳ 105,677 ಜನರ ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಅಧ್ಯಯನದ ಅಂತ್ಯದ ವೇಳೆಗೆ  6,200 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಅದರಲ್ಲಿ 2,300 ಹೃದಯಾಘಾತ, 3,000 ಪಾರ್ಶ್ವವಾಯು ಮತ್ತು 700 ಹೃದಯ ವೈಫಲ್ಯದಿಂದ ಸಾವನ್ನಪ್ಪಿದ್ದರು.

ಕುರ್ಚಿಯಲ್ಲಿ ನಿರಂತರವಾಗಿ ಕುಳಿತುಕೊಳ್ಳುವ ಅಭ್ಯಾಸ  ಹಾನಿಕಾರಕ : ದೀರ್ಘಕಾಲ ಒಂದೇ ಕಡೆ ಕುಳಿತುಕೊಳ್ಳುವ ಅಭ್ಯಾಸದ ಅನೇಕ ಅಪಾಯಗಳನ್ನು ತರುತ್ತದೆ. ಡೆಸ್ಕ್ ನಲ್ಲಿ ಕಳೆಯುವ ಸಮಯವನ್ನು ಕಡಿಮೆ ಮಾಡ್ಬೇಕು. ಮಧ್ಯೆ ಮಧ್ಯೆ ಎದ್ದು ಓಡಾಡಬೇಕು. ದೈಹಿಕ ವ್ಯಾಯಾಮಕ್ಕೆ ಆದ್ಯತೆ ನೀಡ್ಬೇಕು. ನೀವು ಸಿಗರೇಟ್ ಬಿಟ್ಟಾಗ ಸಿಗುವ ಲಾಭವೇ ಕೆಲಸದ ಮಧ್ಯೆ ಬಿಡುವು ತೆಗೆದುಕೊಳ್ಳುವುದ್ರಿಂದ ಸಿಗುತ್ತದೆ ಎಂದು ತಜ್ಞರು ಹೇಳಿದ್ದಾರೆ.

ಭಾರತದಲ್ಲಿ ಇದ್ರ ವೇಗ ಹೆಚ್ಚು : ಭಾರತದ ಹೃದಯ ರೋಗದ ಖಾಯಿಲೆ ವೇಗವಾಗಿ ಬೆಳೆಯುತ್ತಿರುವ ಅಪಾಯವಾಗಿದೆ. ಪ್ರಪಂಚದಾದ್ಯಂತದ ಎಲ್ಲಾ ಹೃದ್ರೋಗ ಪ್ರಕರಣಗಳಲ್ಲಿ ಭಾರತ ಪಾಲು ಶೇಕಡಾ 60 ರಷ್ಟಿದೆ. ಹೃದ್ರೋಗಗಳ ಹೊರತಾಗಿ, ದೀರ್ಘಕಾಲ ಕುಳಿತುಕೊಳ್ಳುವುದ್ರಿಂದ ಮಾನಸಿಕ ಅನಾರೋಗ್ಯ ಮತ್ತು ಒತ್ತಡದ ಸಮಸ್ಯೆಗೂ ಕಾರಣವಾಗುತ್ತದೆ. 

ಲೈಟಿದ್ದರೆ ಮಾತ್ರ ನಿದ್ರೆ ಬರೋದಾ? ಇದಷ್ಟು ಒಳ್ಳೆ ಅಭ್ಯಾಸವಲ್ಲ!

ಹೃದ್ರೋಗಕ್ಕೆ ಮುಖ್ಯ ಕಾರಣ  ನಿದ್ರೆಯ ಕೊರತೆಯ ಮುಖ್ಯ ಕಾರಣವೆಂದು ಅಮೇರಿಕನ್ ಹಾರ್ಟ್ ಅಸೋಸಿಯೇಷನ್ ಹೇಳಿದೆ. ಜಡ ಜೀವನಶೈಲಿಯೊಂದ ಸರಿಯಾಗಿ ನಿದ್ರೆ ಬರುವುದಿಲ್ಲ. ನಿದ್ರಾಹೀನತೆ ಹೃದಯರಕ್ತನಾಳದ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಉತ್ತಮ ಆರೋಗ್ಯಬೇಕು ಎನ್ನುವವರು ದಿನನಿತ್ಯ ವ್ಯಾಯಾಮ ಮಾಡ್ಬೇಕು. ಹಾಗೆ ಉತ್ತಮ ನಿದ್ರೆಗೆ ಗಮನ ನೀಡಬೇಕು ಎನ್ನುತ್ತಾರೆ ತಜ್ಞರು. 

ಮೆಟ್ಟಿಲುಗಳನ್ನು ಏರುವುದಲ್ಲದೆ ಆಹಾರದ ಬಗ್ಗೆ ವಿಶೇಷ ಕಾಳಜಿಯನ್ನು ತೆಗೆದುಕೊಳ್ಳಬೇಕು. ಹೆಚ್ಚಿನ ಕೊಬ್ಬಿನ ವಸ್ತುಗಳ ಸೇವನೆ ಮಾಡಬಾರದು. ವಾಕಿಂಗ್ ಅಭ್ಯಾಸ ಮಾಡಿಕೊಳ್ಳಿ ಎನ್ನುತ್ತಾರೆ ತಜ್ಞರು. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

NIMHANS MindNote app: ಮಾನಸಿಕ ಆರೋಗ್ಯಕ್ಕೆ ನಿಮ್ಹಾನ್ಸ್ ಮೈಂಡ್‌ ನೋಟ್‌ ಆ್ಯಪ್: ಈಗ ಕನ್ನಡದಲ್ಲಿ!
ದಟ್ಟ, ನೀಳ ಕೂದಲು ನಿಮ್ಮದಾಗಲು ಖರ್ಜೂರದ ಜೊತೆ ತುಪ್ಪ ಬೆರೆಸಿ….. ನೋಡಿ