ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಸರ್ಕಾರದ ಸಭೆಯೊಂದರಲ್ಲಿ ಟಿಎಂಸಿ ನಾಯಕಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಟಿಎಂಸಿ ನಾಯಕನೋರ್ವನ ಹೊಟ್ಟೆ ಮೇಲೆ ಕಣ್ಣು ಹಾಕಿದ್ದಾರೆ. ಸಭೆಯ ಮಧ್ಯೆ ಮಾತುಕತೆ ವೇಳೆ ದೀದಿ ಜಲ್ಡಾ ಪುರಸಭೆಯ ಅಧ್ಯಕ್ಷ ಸುರೇಶ್ ಕುಮಾರ್ ಅಗರ್ವಾಲ್ ಅವರ ಹೊಟ್ಟೆಯ ಗಾತ್ರ ಈ ರೀತಿ ಹೆಚ್ಚಿದ್ದು ಹೇಗೆ ಎಂದು ಪ್ರಶ್ನಿಸಿದರು. ಇದರಿಂದ ಸಭೆಯಲ್ಲಿದ್ದ ಗಂಭೀರ ವಾತಾವರಣ ತಿಳಿಯಾಗಿ ಹಾಸ್ಯಕ್ಕೆ ಬದಲಾಯಿತು. ಸಿಎಂ ಮಮತಾ ಅವರು ಮೊದಲಿಗೆ ಎದ್ದು ನಿಂತು ತನ್ನ ಎಲ್ಲಾ ಸಮಸ್ಯೆಗಳನ್ನು ವಿಸ್ತಾರವಾಗಿ ತಿಳಿಸುವಂತೆ ಪುರಸಭೆಯ ಅಧ್ಯಕ್ಷ ಸುರೇಶ್ ಕುಮಾರ್ ಅಗರ್ವಾಲ್ ಅವರ ಬಳಿ ಕೇಳಿದರು.
ಅಗರ್ವಾಲ್ ಎದ್ದು ನಿಂತಾಗ ಮಮತಾ ಬ್ಯಾನರ್ಜಿ ಯಾಕೆ ಹೊಟ್ಟೆ ಉಬ್ಬಿದೆ ಎಂದು ಕೇಳಿದರು ಅಲ್ಲದೇ ಅದು ಬೆಳೆಯುತ್ತಿರುವ ರೀತಿ ನೋಡಿದರೆ ನೀವು ಸದ್ಯದಲ್ಲೇ ಹೃದಯ ಸಂಬಂಧಿ ತೊಂದರೆಯನ್ನು ಅನುಭವಿಸಲಿದ್ದೀರಿ ಎಂದು ಮಮತಾ ಬ್ಯಾನರ್ಜಿ ತನ್ನ ಪಕ್ಷದ ನಾಯಕನ ಬಗ್ಗೆ ಕಾಳಜಿಯಿಂದ ಮಾತನಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ಸುರೇಶ್ ಅಗರ್ವಾಲ್ ದೀದಿ, ನನಗೆ ಶುಗರ್ ಇಲ್ಲ, ರಕ್ತದೊತ್ತಡವೂ ಇಲ್ಲ ಎಂದು ಉತ್ತರಿಸಿದರು. ಇದನ್ನು ಕೇಳಿದ ಮಮತಾ ವ್ಯಂಗ್ಯವಾಡಿದ್ದಾರೆ. ಖಂಡಿತವಾಗಿ ಏನೋ ಇದೆ. ಒಂದೋ ನಿಮ್ಮ ಯಕೃತ್ತು ದೊಡ್ಡದಾಗಿರಬೇಕು ಏನೂ ಇಲ್ಲದಿದ್ದರೆ ಇಷ್ಟು ದೊಡ್ಡ 'ಮಧ್ಯಪ್ರದೇಶ' ಹೇಗೆ ಅಸ್ತಿತ್ವದಲ್ಲಿದೆ ಎಂದು ಪ್ರಶ್ನಿಸಿದ್ದಾರೆ.
ಈ ವೇಳೆ ತಮ್ಮ ಮಾತಿನ ಮೂಲಕ ಮಮತಾ ಅವರನ್ನು ಒಪ್ಪಿಸಲು ಯತ್ನಿಸಿದ ಸುರೇಶ್, ದೀದಿ, ನಾನು ಪ್ರತಿದಿನ ಮೂರು ಗಂಟೆಗಳ ಕಾಲ ವ್ಯಾಯಾಮ ಮಾಡುತ್ತೇನೆ ಎಂದಿದ್ದಾರೆ. ಇದಕ್ಕೆ ಮಮತಾ ನೀವು ಎಲ್ಲಿ ವ್ಯಾಯಾಮ ಮಾಡುತ್ತೀರಿ? ನನಗೆ ತೋರಿಸಿ, ಕಪಾಲ್ ಭಾತಿ ಮಾಡಿ. ನೋಡೋಣ! ಅದನ್ನೇ ನೀವು ಮಾಡುತ್ತಿರುವಿರಿ! ದಿನಕ್ಕೆ ಎಷ್ಟು ಬಾರಿ ಎಂದು ಪ್ರಶ್ನಿಸಿದರು. ಇದಕ್ಕೆ ಸುರೇಶ್, ದೀದಿ, ಸಾವಿರ ಬಾರಿ ಮಾಡುತ್ತೀರುವೆ ಎಂದು ಉತ್ತರಿಸಿದರು.
ರೇಪ್ ಬಗ್ಗೆ ಬೇಜವಾಬ್ದಾರಿ ಹೇಳಿಕೆ, ಮಮತಾ ಸಿಎಂ ಆಗಲು ಲಾಯಕ್ಕಲ್ಲ ಎಂದ ನಿರ್ಭಯಾ ತಾಯಿ!
ಇದನ್ನು ಕೇಳಿದ ಮುಖ್ಯಮಂತ್ರಿಗಳು ತಕ್ಷಣವೇ ಸಾವಿರ ಸಲ? ಸಾವಿರ ಸಲ ಮಾಡಿದಂತೆ ಕಾಣಿಸ್ತಿಲ್ಲ. ಹಾಗಾದರೆ ನೋಡೋಣ ನೀವು ಈಗ ಅದನ್ನು ಎಲ್ಲಿ ಮಾಡುತ್ತೀರಿ ಎಂದು ಕೇಳಿದರು. ಆದರೆ ಇದಕ್ಕೆ ಯಾವುದೇ ಪೂರ್ವ ತಯಾರಿಯಿಲ್ಲದೆ ಇದ್ದ ಸುರೇಶ್, ದೀದಿ, ನಿಮಗೆ ಈಗಲೇ ತೋರಿಸಬೇಕಾ ಎಂದು ಕೇಳಿದ್ದಾನೆ. ಇದಕ್ಕೆ ಮಮತಾ ಎಸ್ ಸ್ಟೇಜ್ ಮೇಲೆ ಬಂದು ತೋರಿಸು. ನೀವು ಇದನ್ನು ಸಾವಿರ ಬಾರಿ ಮಾಡಲು ಸಾಧ್ಯವಾದರೆ, ನಾನು ನಿಮಗೆ ಹತ್ತು ಸಾವಿರ ರೂಪಾಯಿಗಳನ್ನು ನೀಡುತ್ತೇನೆ ಎಂದು ಹೇಳಿದ್ದಾರೆ. ಆಗ ಸುರೇಶ ಹೇಳಿದ, ದೀದಿ, ಮಧ್ಯಾಹ್ನದ ನಂತರ ಐದು ಗಂಟೆಯೊಳಗೆ ಇದನ್ನು ಮಾಡಲಾಗುವುದಿಲ್ಲ ಎಂದು ಹೇಳಿದ್ದಾರೆ.
ಅಜಾದಿ ಕಾ ಅಮೃತ್ ಮಹೋತ್ಸವ ಕಾರ್ಯಕ್ರಮದಿಂದ ಹಿಂದೆ ಸರಿದ ಪಶ್ಚಿಮ ಬಂಗಾಳ
ಸುರೇಶ್ ಮಾತಿನಿಂದ ಸಮಾಧಾನಗೊಳ್ಳದ ನಾಯಕಿ ಮಮತಾ ಪಕೋರಾ (pakora) ಗಳನ್ನು ತಿನ್ನುವುದನ್ನು ನಿಲ್ಲಿಸುವಂತೆ ಸಲಹೆ ನೀಡಿದರು. “ನೀವು ನಿಮ್ಮ ಪಕೋರಗಳನ್ನು ತಿನ್ನುವುದನ್ನು ನಿಲ್ಲಿಸಿದರೆ ನೀವು ಬಹಳಷ್ಟು ತೂಕವನ್ನು ಕಳೆದುಕೊಳ್ಳುತ್ತೀರಿ. ಒಂದು ತಿಂಗಳ ಕಾಲ ಬೇಯಿಸಿದ ಅನ್ನವನ್ನು ತಿನ್ನಿರಿ ಆದರೆ ರಾತ್ರಿ 7 ಗಂಟೆಗೆ ನಿಮ್ಮ ರಾತ್ರಿಯ ಊಟವನ್ನು ಮುಗಿಸಿ. ಮತ್ತು ನೀವು ತಡವಾಗಿ ತಿಂದರೆ, ಮರುದಿನ 12 ಗಂಟೆಗಳ ಕಾಲ ಏನನ್ನೂ ತಿನ್ನಬೇಡಿ ಮತ್ತು ಪ್ರತಿದಿನ ಒಂದು ಕಿಲೋಮೀಟರ್ ನಡೆಯಿರಿ ಎಂದು ಸಿಎಂ ತನ್ನ ಪಕ್ಷದ ನಾಯಕನಿಗೆ ಆರೋಗ್ಯ ಸಲಹೆ ನೀಡಿದರು.
ಪಕ್ಷದ ವರಿಷ್ಠರ ಸಲಹೆಯನ್ನು ಅನುಸರಿಸಲು ಖಂಡಿತವಾಗಿಯೂ ಪ್ರಯತ್ನಿಸುತ್ತೇನೆ ಎಂದು 62 ವರ್ಷದ ಅಗರ್ವಾಲ್ ಪಿಟಿಐಗೆ ತಿಳಿಸಿದ್ದಾರೆ. ಈ ಸುಂದರ ಸಂಭಾಷಣೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.