ದಾಳಿಂಬೆ ಬಗ್ಗೆ ತಜ್ಞರು ಕಂಡುಕೊಂಡ ಅಚ್ಚರಿದಾಯಕ ಸತ್ಯ ಹೀಗಿತ್ತು!

By Suvarna News  |  First Published Oct 20, 2021, 2:02 PM IST

ಇತ್ತೀಚೆಗೆ ಅಮೆರಿಕದ ತಜ್ಞರು ಕಂಡುಕೊಂಡ ಪ್ರಕಾರ, ಕ್ಯಾನ್ಸರ್ ತಡೆಗಟ್ಟಲು ದಾಳಿಂಬೆ ದಿವ್ಯಾಹಾರ. ಆದರೆ ಅಮೆರಿಕದಲ್ಲಿ ದಾಳಿಂಬೆಯ ಬಗ್ಗೆ ಹೆಚ್ಚಿನವರಿಗೆ ಗೊತ್ತೇ ಇಲ್ಲ!


ದಾಳಿಂಬೆಯು (Pomegranate) ಸೃಷ್ಟಿಯ ಅದ್ಭುತ. ಇದು ಹಣ್ಣಿನ (Fruit) ರೂಪದಲ್ಲಿ ಇರುವ ದೊಡ್ಡ ಔಷಧೀಯ ಖಜಾನೆ. ಯಾಕೆಂದರೆ ಇದರಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಹಾಗೂ ವಿಟಮಿನ್‌ಗಳಿದ್ದು (Vitamins), ದೇಹದ ಆರೋಗ್ಯಕ್ಕೆ (healhty) ಇದು ತುಂಬಾ ಒಳ್ಳೆಯದು. ಹಲವಾರು ರೋಗಗಳನ್ನು ಇದು ತಡೆಯುತ್ತದೆ. ದಾಳಿಂಬೆ ಹೆಚ್ಚಾಗಿ ವರ್ಷಪೂರ್ತಿ ಸಿಗುವ ಕಾರಣ ಅದನ್ನು ನಮ್ಮ ಆಹಾರ ಕ್ರಮದಲ್ಲಿ ಬಳಸಿಕೊಳ್ಳಬಹುದು.

ಕ್ಯಾನ್ಸರ್ ತಡೆಯುತ್ತದೆ
ಮುಖ್ಯವಾಗಿ ಕ್ಯಾನ್ಸರ್ (Cancer) ತಡೆಗಟ್ಟುವ ದಾಳಿಂಬೆಯ ಆರೋಗ್ಯಕಾರಿ ಗುಣದ ಬಗ್ಗೆ ತಜ್ಞರು ಇತ್ತೀಚೆಗೆ ಹೆಚ್ಚಿನ ಸಂಶೋಧನೆಗಳನ್ನು ಮಾಡಿದ್ದಾರೆ. ದಾಳಿಂಬೆ ಸೇವನೆಯು ಹಲವಾರು ವಿಧದ ಕ್ಯಾನ್ಸರ್ ಅನ್ನು ತಡೆಯುವುದು ಮತ್ತು ವಿವಿಧ ಹಂತದಲ್ಲಿ ಇರುವಂತಹ ಕ್ಯಾನ್ಸರ್ ವಿರುದ್ಧ ಹೋರಾಡುವುದು ಗೊತ್ತಾಗಿದೆ. ಇದರಲ್ಲಿ ಇರುವಂತಹ ಉರಿಯೂತ ಶಮನಕಾರಿ ಗುಣ ಮತ್ತು ಪಾಲಿಫೆನಾಲ್‌ ಅಂಶವು ಡಿಎನ್ಎ (DNA) ಪರಿವರ್ತನೆ ಆಗುವುದರಿಂದ ರಕ್ಷಿಸುವುದು, ಕ್ಯಾನ್ಸರ್ ಗಡ್ಡೆಗಳ ಬೆಳವಣಿಗೆ ತಡೆಯುವುದು ಮತ್ತು ಕ್ಯಾನ್ಸರ್ ಹರಡದಂತೆ ತಡೆಯುತ್ತದೆ. ಇದರ ಬಗ್ಗೆ ಇನ್ನಷ್ಟು ಅಧ್ಯಯನಗಳು ನಡೆಯಬೇಕಾಗಿದೆ. ಆದರೆ ದಾಳಿಂಬೆಯಿಂದ ಪ್ರಾಸ್ಟ್ರೇಟ್, ಸ್ತನ (breast), ಕರುಳು (Intestine) ಮತ್ತು ಶ್ವಾಸಕೋಶದ ಕ್ಯಾನ್ಸರ್ (Lungs Cancer) ತಡೆಯಬಹುದು.

Tap to resize

Latest Videos

ನೆನಪಿನ ಶಕ್ತಿ ವೃದ್ಧಿ
ದಾಳಿಂಬೆಯಲ್ಲಿ ಇರುವಂತಹ ಪಾಲಿಫೆನಾಲ್ ಎನ್ನುವ ಅಂಶವು ನಮ್ಮ ನೆನಪಿನ ಶಕ್ತಿಯನ್ನು (Memory Power) ವೃದ್ಧಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದು. ದಾಳಿಂಬೆ ಹಣ್ಣನ್ನು ಹಾಗೆ ತಿಂದರೆ ಅದು ದೇಹದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರ ಜ್ಯೂಸ್ (Juice) ಮಾಡಿಕೊಂಡು ಕೂಡ ಕುಡಿಯಬಹುದು. ಇಂದಿನ ದಿನಗಳಲ್ಲಿ ನಿಮಗೆ ನೆನಪಿನ ಶಕ್ತಿಯು ಕಡಿಮೆ ಯಾಗುತ್ತಲಿದ್ದರೆ ಆಗ ನೀವು ಪ್ರತಿನಿತ್ಯವೂ ಬೆಳಗ್ಗೆ ಉಪಾಹಾರದ ಜತೆಗೆ ದಾಳಿಂಬೆ ಜ್ಯೂಸ್ ಸೇರಿಸಿಕೊಳ್ಳಿ. ಇದರಿಂದ ನೆನಪಿನ ಶಕ್ತಿಯು ಹೆಚ್ಚಾಗುತ್ತದೆ.

ರಕ್ತದೊತ್ತಡ ತಗ್ಗಿಸುವುದು
ಇಂದು ಅತಿಯಾದ ಒತ್ತಡದ ಜೀವನದಿಂದಾಗಿ ಪ್ರತಿಯೊಬ್ಬರಲ್ಲೂ ಅಧಿಕ ರಕ್ತದೊತ್ತಡದ (Blood Pressure) ಸಮಸ್ಯೆಯು ಕಂಡುಬರುತ್ತಲೇ ಇದೆ. ಆದರೆ ದಾಳಿಂಬೆ ಜ್ಯೂಸ್ ಪ್ರತಿನಿತ್ಯವೂ ಕುಡಿದರೆ ಅದರಿಂದ ರಕ್ತದೊತ್ತಡ ಕಡಿಮೆ ಆಗುವುದು, ಕೊಲೆಸ್ಟ್ರಾಲ್ (cholesterol) ಸುಧಾರಿಸುವುದು ಮತ್ತು ರಕ್ತನಾಳಗಳಲ್ಲಿ ಇರುವಂತಹ ಪದರಗಳನ್ನು ಇದು ತೆಗೆದುಹಾಕುವುದು. ಇದೆಲ್ಲವೂ ಹೃದಯಕ್ಕೆ ತುಂಬಾ ಒಳ್ಳೆಯದು.

ತ್ವಚೆಗೆ ತೇವಾಂಶ
ಚರ್ಮರೋಗ ತಜ್ಞರು ಹೇಳುವ ಪ್ರಕಾರ ಒಣ ಹಾಗೂ ನಿಸ್ತೇಜ ಚರ್ಮಕ್ಕೆ ಇದು ತುಂಬಾ ಒಳ್ಳೆಯದು. ವಿಟಮಿನ್ ಸಿ ಕೂಡ ಇದರಲ್ಲಿ ಇರುವ ಕಾರಣದಿಂದಾಗಿ ಮೈಮೇಲೆ ಇದನ್ನು ಹಚ್ಚಿಕೊಂಡರೆ ಅದು ಚರ್ಮವನ್ನು ಕಾಂತಿಯುತವಾಗಿಸುವುದು ಮತ್ತು ಹೊಳಪು ನೀಡುವುದು. ಚರ್ಮವು ಒಣ ಹಾಗೂ ನಿಸ್ತೇಜವಾಗಿದ್ದರೆ ಆಗ ನೀವು ಈ ದಾಳಿಂಬೆ ಸ್ಕ್ರಬ್ ನ್ನು ಬಳಸಿಕೊಳ್ಳಿ. ಇದಕ್ಕಾಗಿ ನೀವು ಮೂರು ಚಮಚ ದಾಳಿಂಬೆ ಬೀಜ, ಒಂದು ಕಪ್ ಬೇಯಿಸಿದ ಓಟ್ ಮೀಲ್, 2 ಚಮಚ ಎಕ್ಸ್ಟ್ರಾ ವರ್ಜಿನ್ ಆಲಿವ್ ತೈಲ ಮತ್ತು ಒಂದು ಚಮಚ ಜೇನುತುಪ್ಪ. ಇದನ್ನು ಫೇಸ್ ಪ್ಯಾಕ್ ಮಾಡಿಕೊಂಡು ಮುಖಕ್ಕೆ ಹಚ್ಚಿಕೊಂಡು ಹತ್ತು ನಿಮಿಷ ಕಾಲ ಹಾಗೆ ಬಿಡಿ. ಇದರ ಬಳಿಕ ಬಿಸಿ ನೀರಿನಿಂದ ತೊಳೆಯಿರಿ.

ಕೂದಲಿನ ಬೆಳವಣಿಗೆ  (Hair Care)
ದಾಳಿಂಬೆ ಹಣ್ಣಿನಲ್ಲಿ ಇರುವಂತಹ ಆಂಟಿಆಕ್ಸಿಡೆಂಟ್ ಅಂಶವು ಕೂದಲಿನ ಸೆಲ್‌ಗಳನ್ನು ಬಲಪಡಿಸುವುದು ಮತ್ತು ರಕ್ತ ಸಂಚಾರವನ್ನು ಸುಧಾರಿಸುವುದು. ಇದರಿಂದ ಕೂದಲಿನ ಬೆಳವಣಿಗೆ ಸರಾಗವಾಗಿ ಆಗುವುದು. ಕೂದಲು ಆರೋಗ್ಯವಾಗಿ ಇರಬೇಕಾದರೆ ನೀವು ದಾಳಿಂಬೆ ಜ್ಯೂಸ್ ಬೆಳಗ್ಗಿನ ಉಪಾಹಾರದಲ್ಲಿ ಸೇವಿಸಿ.

ಕ್ಯಾನ್ಸರ್‌ಗೆ ಕಾರಣವಾಗೋ ಆಹಾರಗಳಿವು, ಸೇವಿಸುವಾಗ ಎಚ್ಚರಿಕೆ!

ಸಂಧಿವಾತದಿಂದ ಪರಿಹಾರ
ಹದಲ್ಲಿ ಗಂಟು ನೋವಿನ ಸಮಸ್ಯೆ ಇಂದು ಹೆಚ್ಚಾಗಿ ಪ್ರತಿಯೊಬ್ಬರನ್ನು ಕಾಡುತ್ತಿರುತ್ತದೆ. ದಾಳಿಂಬೆ ಜ್ಯೂಸ್ ನಿಮ್ಮ ನೆರವಿಗೆ ಬರುವುದು. ಇದರಲ್ಲಿ ಉನ್ನತ ಮಟ್ಟದ ಉರಿಯೂತ ಶಮನಕಾರಿ ಗುಣಗಳು ಇವೆ. ಇದು ಗಂಟಿನ ಊತ, ನೋವು ಮತ್ತು ಮೆತ್ತಗಾಗುವುದನ್ನು ತಡೆಯುವುದು. ಕೆಲವೊಂದು ಅಧ್ಯಯನಗಳ ಪ್ರಕಾರ ದಾಳಿಂಬೆ ಸಾರವು ಸಂಧಿವಾತವನ್ನು ಹೆಚ್ಚಿಸುವಂತಹ ಕಿಣ್ವದ ಉತ್ಪತ್ತಿಯನ್ನು ತಡೆಯುತ್ತದೆ.

ಮೂಳೆಗಳ ಆರೋಗ್ಯ (Bone Health)
ಅಸ್ಥಿರಂಧ್ರ ಸಮಸ್ಯೆ ಇರುವಂತಹ ಪ್ರಾಣಿಗಳ ಮೇಲೆ ದಾಳಿಂಬೆಯನ್ನು ಪ್ರಯೋಗ ಮಾಡಿದ ವೇಳೆ ಇದು ಮೂಳೆಗಳನ್ನು ಬಲಪಡಿಸುವುದು ಎನ್ನುವ ಅಂಶವು ಬಹಿರಂಗವಾಗಿದೆ. ಇದರಲ್ಲಿ ಇರುವಂತಹ ಶಕ್ತಿಶಾಲಿ ಆಂಟಿಆಕ್ಸಿಡೆಂಟ್ ಇದಕ್ಕೆ ಪ್ರಮುಖ ಕಾರಣವಾಗಿದೆ. ಇದು ಮೂಳೆಗಳನ್ನು ಬಲಪಡಿಸುವುದು. ದಾಳಿಂಬೆಯನ್ನು ಸಲಾಡ್ (Salad) ರೂಪದಲ್ಲಿ ಅಥವಾ ಮೊಸರಿಗೆ (Curd) ಹಾಕಿಕೊಂಡು ತಿಂದರೆ ಅದ್ಭುತ ವಾಗಿರುವುದು.

ಮಹಿಳೆಯರಲ್ಲಿ ಮಾತ್ರವಲ್ಲ ಪುರುಷರಲ್ಲೂ ಕಾಣಿಸಿಕೊಳ್ಳುತ್ತೆ ಸ್ತನ ಕ್ಯಾನ್ಸರ್

ಮೊಡವೆ ವಿರುದ್ಧ ಹೋರಾಟ
ದಾಳಿಂಬೆ ಹಣ್ಣಿನಲ್ಲಿ ಇರುವಂತಹ ಆಂಟಿಆಕ್ಸಿಡೆಂಟ್ ಮೊಡವೆಗಳಿಗೆ ಕಾರಣವಾಗುವಂತಹ ಉರಿಯೂತ ಕಡಿಮೆ ಮಾಡುವುದು. ದಾಳಿಂಬೆಯು ಆಂಟಿಆಕ್ಸಿಡೆಂಟ್ ನಿಂದ ಸಮೃದ್ಧವಾಗಿದೆ ಮತ್ತು ಇದು ತ್ವಚೆಗೆ ತುಂಬಾ ಒಳ್ಳೇಯದು. ಇದನ್ನು ನೀವು ಕರಿದ ತಿಂಡಿ ತಿನ್ನುವ ಬದಲಿಗೆ ತಿನ್ನಬಹುದು. ಆಗ ದಾಳಿಂಬೆಯಲ್ಲಿ ಇರುವಂತಹ ಪೋಷಕಾಂಶಗಳು ದೇಹಕ್ಕೆ ಲಭ್ಯವಾಗುವುದು. ಜಂಕ್ ಫುಡ್‌ನಿಂದ ಆಗುವ ಮೊಡವೆ ನಿವಾರಣೆ ಆಗುವುದು.

click me!