Bathing Time: 15 ನಿಮಿಷಕ್ಕಿಂತ ದೀರ್ಘಾವಧಿ ಸ್ನಾನ ಒಳ್ಳೆಯದಲ್ಲ

By Suvarna News  |  First Published Jan 31, 2022, 4:57 PM IST

ದೀರ್ಘ ಸಮಯ ಸ್ನಾನ ಮಾಡುವುದು ನಿಮಗೆ ಖುಷಿ ಕೊಡುವ ಸಂಗತಿಯಾಗಿರಬಹುದು. ಬಿಸಿಬಿಸಿ ನೀರನ್ನು ಹಾಕಿಕೊಂಡು ತಾಸುಗಟ್ಟಲೆ ಸ್ನಾನ ಮಾಡುವವರೂ ಇದ್ದಾರೆ. ಇದರಿಂದ ಚರ್ಮಕ್ಕೆ ತೀವ್ರವಾಗಿ ಹಾನಿಯಾಗಬಹುದು, ಎಚ್ಚರ.
 


ಅದೇನೋ ಗೊತ್ತಿಲ್ಲ, ಕೆಲವರಿಗೆ ಸ್ನಾನ(Bath)ಕ್ಕಿಳಿದರೆ ಮುಗಿದೇ ಹೋಯಿತು, ಸಮಯ(Time)ದ ಪರಿವೆಯೇ ಇರುವುದಿಲ್ಲ. ಸಾಬೂನಿನ (Soap) ನೊರೆಯಲ್ಲಿ ಮೈ ಅದ್ದಿಸಿಕೊಂಡು ತಿಕ್ಕಿ ತಿಕ್ಕಿ ಸ್ನಾನ ಮಾಡುತ್ತ ಸುಖ ತೆಗೆದುಕೊಳ್ಳುತ್ತಾರೆ. ಅಂಥವರ ಸ್ನಾನವನ್ನು “ಬಾಣಂತಿ ಸ್ನಾನ’ ಎಂದು ಲೇವಡಿ ಮಾಡುವುದೂ ಇದೆ. ಸಾಮಾನ್ಯವಾಗಿ ಬಾಣಂತಿಯರಿಗೆ ಹೆಚ್ಚು ಸಮಯ ಸ್ನಾನ ಮಾಡಿಸಲಾಗುತ್ತದೆಯಲ್ಲವೇ? ಹೀಗಾಗಿ, ಈ ಉಪಮೆ. ನೀವೂ ಹೀಗೆ ಬಾಣಂತಿ ಸ್ನಾನದ ಪೈಕಿಗೆ ಸೇರಿದ್ದೀರಾ? ಹೌದೆಂದಾದರೆ ಈಗಲೇ ಎಚ್ಚೆತ್ತುಕೊಳ್ಳಿ. 

ಸ್ನಾನ ಮಾಡುವಾಗ ತಿಳಿದೋ ತಿಳಿಯದೆಯೋ ನಾವು ಮಾಡುವ ಕೆಲವು ತಪ್ಪುಗಳಿಂದ ಆರೋಗ್ಯಕ್ಕೆ ಹಾನಿಯುಂಟಾಗಬಹುದು. ದೀರ್ಘ ಸಮಯ (Long Time) ಸ್ನಾನ ಮಾಡುವುದರಿಂದ ಚರ್ಮ (Skin), ತಲೆಗೂದಲಿಗೂ (Hair) ಹಾನಿಯಾಗಬಹುದು. ಸ್ನಾನ ಮಾಡುವಾಗ ಸಾಮಾನ್ಯವಾಗಿ ನಾವು ಸೋಪು ಅಥವಾ ಶಾಂಪೂ (Shampoo) ಬಳಕೆ ಮಾಡಿಯೇ ಮಾಡುತ್ತೇವೆ. ಅವುಗಳಲ್ಲಿರುವ ರಾಸಾಯನಿಕ (Chemical) ಅಂಶದಿಂದಾಗಿ ಹಲವು ಅಡ್ಡ ಪರಿಣಾಮ(Side Effect)ಗಳಾಗಬಹುದು.   

ಚರ್ಮ ತಜ್ಞರು (Skin Expert) ಇಂತಹ ಅನೇಕ ಪ್ರಕರಣಗಳನ್ನು ಸಮೀಪದಿಂದ ನೋಡಿರುತ್ತಾರೆ. ಡಾ. ಹುಸೇನ್ ಅಬ್ದೆಹ್ ಎನ್ನುವ ಚರ್ಮರೋಗ ತಜ್ಞರ ಪ್ರಕಾರ, ದೀರ್ಘಕಾಲದ ಸ್ನಾನದಿಂದ ಅನೇಕ ರೀತಿಯಲ್ಲಿ ಅಪಾಯವಾಗಬಹುದು. ಹೆಚ್ಚು ಕಾಲ ಸೋಪು ಅಥವಾ ಶಾಂಪೂವನ್ನು ಮೈ ಹಾಗೂ ತಲೆಕೂದಲಿಗೆ ಹಚ್ಚಿಕೊಂಡು ತಿಕ್ಕುತ್ತಿದ್ದರೆ ತ್ವಚೆಯ ಮೇಲೆ ಸಾಕಷ್ಟು ಪರಿಣಾಮಗಳು ಉಂಟಾಗುತ್ತವೆ. ಯಾವುದೇ ರೀತಿಯ ಶಾಂಪೂ ಅಥವಾ ಸೋಪು ಬಳಕೆ ಮಾಡಿದರೂ ಚೆನ್ನಾಗಿ ನೀರನ್ನು ಹಾಕಿಕೊಂಡು ಅವುಗಳ ಅಂಶ ಪೂರ್ತಿ ಹೋಗುವವರೆಗೂ ಸರಿಯಾಗಿ ಸ್ನಾನ ಮಾಡುವುದು ಅಗತ್ಯ. 

ಕೆಲವರಿಗೆ ಶವರ್ (Shower) ಕೆಳಗೆ ನಿಂತರೂ ಅದೇನೋ ಆನಂದ. ನೀರಿನ ಟ್ಯಾಂಕ್ ಖಾಲಿಯಾದರೂ ಇವರ ಸ್ನಾನ ಮುಗಿಯುವುದಿಲ್ಲ. ಅಷ್ಟು ದೀರ್ಘ ಕಾಲ ಸ್ನಾನ ಮಾಡಲು ಬಯಸುತ್ತಾರೆ. ಚಳಿಗಾಲದಲ್ಲಿ ಈ ಅಭ್ಯಾಸ ಹೆಚ್ಚು. ಆದರೆ ಇದರಿಂದ ಚರ್ಮ ಒರಟಾಗಬಹುದು. ತ್ವಚೆಯಲ್ಲಿರುವ ಎಣ್ಣೆಯಂಶ ಆರಿಹೋಗಿ, ಮೃದುತ್ವ ನಾಶವಾಗಿ, ಶುಷ್ಕವಾಗಬಹುದು. ಚರ್ಮ ಕೆಂಪಗಾಗಬಹುದು ಹಾಗೂ ತೀರ ಸೂಕ್ಷ್ಮ(Sensitive)ವಾಗಬಹುದು. ಹೀಗಾಗಿ, 15 ನಿಮಿಷ(15 Minute)ಗಳಿಗಿಂತ ಹೆಚ್ಚು ಅವಧಿಯ ಸ್ನಾನ ದೇಹಕ್ಕೆ ಬೇಕಾಗಿಲ್ಲ. ಅದು ಒಳ್ಳೆಯದೂ ಅಲ್ಲ. 

Super Food: ನಾರಿನಂಶಭರಿತ ಆಹಾರ ಹೆಚ್ಚಿಸುವುದು ಆಯಸ್ಸು

•    ಅಲರ್ಜಿ (Allergy)
ಹಾರ್ವರ್ಡ್ ಹೆಲ್ತ್ (Harvard Health) ಪ್ರಕಾರ, ಪರ್ಫ್ಯೂಮ್, ಶಾಂಪೂ, ಕಂಡಿಷನರ್ ಅಥವಾ ಸೋಪು ಯಾವುದಾದರೂ ಅವುಗಳಲ್ಲಿರುವ ಅಂಶ ತ್ವಚೆ(Dry)ಯನ್ನು ಶುಷ್ಕಗೊಳಿಸುವಂಥವೇ ಆಗಿವೆ. ಇವು ಅಲರ್ಜಿಗೆ ಕಾರಣವಾಗಬಲ್ಲವು ಹಾಗೂ ಅಲರ್ಜಿಯನ್ನು ಹೆಚ್ಚಿಸಬಲ್ಲವು. ಹೀಗಾಗಿ, ಸ್ನಾನ ಮಾಡುವ ಸಮಯದ ಬಗ್ಗೆ ಗಮನ ನೀಡಬೇಕು. 

ದೀರ್ಘಕಾಲದ ಸ್ನಾನದಿಂದ ಚರ್ಮ ಸೂಕ್ಷ್ಮವಾಗಿ, ಅಲರ್ಜಿಗೆ ಕಾರಣವಾಗುವ ಬ್ಯಾಕ್ಟೀರಿಯಾ ಅಥವಾ ಯಾವುದೇ ಅಂಶ ಚರ್ಮದ ಮೇಲೆ ಸುಲಭವಾಗಿ ನೆಲೆನಿಲ್ಲುವಂತಾಗುತ್ತದೆ. ಆಂಟಿಬ್ಯಾಕ್ಟೀರಿಯಲ್ (Antibacterial) ಶಾಂಪೂ ಸಾಮಾನ್ಯ ಬ್ಯಾಕ್ಟೀರಿಯಾವನ್ನೂ ನಾಶಪಡಿಸುತ್ತದೆ. ಚರ್ಮದ ಮೇಲಿನ ಸೂಕ್ಷ್ಮಾಣುಜೀವಜಾಲದ ಸಮತೋಲಿತ ವ್ಯವಸ್ಥೆಯನ್ನು ಬಿಗಡಾಯಿಸುತ್ತದೆ. ಇದರಿಂದ ಚರ್ಮಕ್ಕೆ ಹಾನಿಯಾಗುತ್ತದೆ. ಕ್ರಮೇಣ ಆಂಟಿಬಯಾಟಿಕ್ ಗೂ ಜಗ್ಗದ ಸೂಕ್ಷ್ಮಜೀವಿಗಳು ಹೆಚ್ಚುತ್ತವೆ. 
ಇನ್ನು, ನಾವು ಬಳಸುವ ನೀರಿನಲ್ಲೂ ಹಲವು ಅಂಶಗಳಿರುತ್ತವೆ. ಕ್ಲೋರಿನ್ (Chlorine), ಫ್ಲೋರೈಡ್ (Floride), ಕೆಲವು ಭಾರ ಲೋಹ (Heavy Metal), ಉಪ್ಪು, ಕ್ರಿಮಿನಾಶಕಗಳು (Pesticides) ಅಲ್ಪ ಪ್ರಮಾಣದಲ್ಲಾದರೂ ಇರುತ್ತವೆ. ಇವುಗಳಿಂದಲೂ ಚರ್ಮಕ್ಕೆ ಹಾನಿಯಾಗಬಹುದು. 

Health Tips : ಬಹಳ ಆರೋಗ್ಯಕಾರಿ ಎಂದುಕೊಂಡ ಕ್ಯಾರೆಟ್‌ನಲ್ಲೂ ಇದೆ ಕೆಟ್ಟ ಗುಣ

ಒಟ್ಟಾರೆ, ದಿನಕ್ಕೆ 15 ನಿಮಿಷಕ್ಕಿಂತ ಹೆಚ್ಚು ಸಮಯ ಸ್ನಾನ ಮಾಡುವುದು ಉತ್ತಮ ಅಭ್ಯಾಸವಲ್ಲ. ಚರ್ಮದ ರೋಗನಿರೋಧಕ ಶಕ್ತಿ (Immunity) ಹೆಚ್ಚಲು ಸಾಮಾನ್ಯ ಬ್ಯಾಕ್ಟೀರಿಯಾಗಳು ಅದರ ಸಂಪರ್ಕಕ್ಕೆ ಬರುತ್ತಿರಬೇಕು. ಆಗಲೇ ಅದರ ಬ್ಯಾಕ್ಟೀರಿಯಾನಿರೋಧಕ ಗುಣ ಸದೃಢಗೊಳ್ಳುತ್ತದೆ. ನಿರೋಧಕ ಆಗ ರೋಗನಿರೋಧಕ ಶಕ್ತಿಯ ಸ್ಮರಣೆಯೂ ಚೆನ್ನಾಗಿ ವೃದ್ಧಿಯಾಗುತ್ತದೆ.    
  

Tap to resize

Latest Videos

click me!