ಮೊಬೈಲ್‌ ನಂಬರ್‌ ಲಿಂಕಾಗಿದ್ದರೆ ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ

By Kannadaprabha NewsFirst Published Sep 10, 2022, 12:14 PM IST
Highlights
  • ಮೊಬೈಲ್‌ ನಂಬರ್‌ ಲಿಂಕಾಗಿದ್ದರೆ ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ
  • -ಸಾರ್ವಜನಿಕ ಆಸ್ಪತ್ರೆಗೆ ಬರುವ ರೋಗಿಗಳು ಕಡ್ಡಾಯ ಆಧಾರ್‌ಕಾರ್ಡ್‌ ಜೊತೆಗೆ ಮೊಬೈಲ್‌ ತರಬೇಕು
  • ಆಧಾರ್‌ನಲ್ಲಿರುವ ಮೊಬೈಲ್‌ ನಂಬರ್‌ ಚಾಲ್ತಿಯಲ್ಲಿದ್ದರೆ ಚಿಕಿತ್ಸೆ ಲಭ್ಯ

ಗುಂಡ್ಲುಪೇಟೆ (ಸೆ.10): ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಆಧಾರ್‌ನಲ್ಲಿ ಮೊಬೈಲ್‌ ನಂಬರ್‌ ಲಿಂಕಾಗಿದ್ದರೆ ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ದೊರೆಯುತ್ತದೆ. ಆಧಾರ್‌ ಇದ್ದೂ ಆಧಾರ್‌ಗೆ ಮೊಬೈಲ್‌ ನಂಬರ್‌ ಇಲ್ಲದಿದ್ದರೆ ಚಿಕಿತ್ಸೆ ಸಿಗುವುದಿಲ್ಲ! ಸಾರ್ವಜನಿಕ ಆಸ್ಪತ್ರೆಗೆ ಬರುವ ರೋಗಿಗಳು ಕಡ್ಡಾಯ ಆಧಾರ್‌ಕಾರ್ಡ್‌ ಜೊತೆಗೆ ಮೊಬೈಲ್‌ ತರಬೇಕು. ಒಂದು ವೇಳೆ ಆಧಾರ್‌ ತರದಿದ್ದಲ್ಲಿ ಆಧಾರ್‌ನಲ್ಲಿರುವ ಮೊಬೈಲ್‌ ನಂಬರ್‌ ಚಾಲ್ತಿಯಲ್ಲಿದ್ದರೆ ಇನ್ಮುಂದೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗುತ್ತದೆ!

BIG 3 Hero: ಸರ್ಕಾರಿ ಕೆಲಸಕ್ಕೆ ರಾಜೀನಾಮೆ, ಬಡವರಿಗೆ ಉಚಿತ ಚಿಕಿತ್ಸೆ ನೀಡುವ ಡಾ ಜಯಮ್ಮ

ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗೆ ಬರುವ ರೋಗಿಗಳು ಆಧಾರ್‌ ಇಲ್ಲದಿದ್ದರೆ ಮನೆಗೆ ಫೋನಾಯಿಸಿ ಆಧಾರ್‌ ನಂಬರ್‌ ಪಡೆದು ಇಲ್ಲಿನ ಆಸ್ಪತ್ರೆಯಲ್ಲಿರುವ ಕೌಂಟರ್‌ ಸಿಬ್ಬಂದಿಗೆ ಹೇಳಬೇಕು. ನಂತರ ಆಧಾರ್‌ ನಂಬರ್‌ ಎಂಟ್ರಿಯಾದ ಬಳಿಕ ಓಟಿಪಿ ಹೇಳಬೇಕು. ಇದಾದ ನಂತರವೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗುತ್ತದೆ. ಆಧಾರ್‌ ನಂಬರ್‌ ಇದ್ದೂ ಮೊಬೈಲ್‌ ಆಧಾರ್‌ಗೆ ಲಿಂಕ್‌ ಆಗದಿದ್ದರೆ ಚಿಕಿತ್ಸೆ ಸಿಗುವುದಿಲ್ಲ ಎಂದು ಮಂಚಹಳ್ಳಿ ಗ್ರಾಮದ ಯುವಕ ಹರೀಶ್‌ ಅಳಲು ತೋಡಿಕೊಂಡಿದ್ದಾರೆ.

ತೊಂದರೆಯೇ ಹೆಚ್ಚು: ಆಧಾರ್‌ ತಂದ ರೋಗಿ ಅಥವಾ ರೋಗಿ ಜೊತೆಗೆ ಬಂದವರು ರೋಗಿ ಕೂರಿಸಿ ಎಂಟ್ರಿಯಾಗುವ ತನಕ ಕಾದು ನಿಲ್ಲಬೇಕು. ಒಂದು ವೇಳೆ ಸರ್ವರ್‌ ಡೌನಾಗಿದ್ದರೆ ಕಾದು ನಿಲ್ಲಬೇಕಾಗುತ್ತಿದೆ. ಆಸ್ಪತ್ರೆಗೆ ಬರುವ ರೋಗಿಗೆ ಸರ್ಕಾರದ ಆದೇಶದಿಂದ ತೊಂದರೆಯಾಗುತ್ತಿದೆ ಎಂಬ ದೂರು ವ್ಯಾಪಕವಾಗಿ ಕೇಳಿ ಬಂದಿದೆ. ನೂಕು ನುಗ್ಗಲು: ಆಸ್ಪತ್ರೆಯಲ್ಲಿ ಆಧಾರ್‌ ನಂಬರ್‌ ಎಂಟ್ರಿ ಮಾಡಿಸಿ, ಒಟಿಪಿ ಬರುವ ತನಕ ಕಾಯಬೇಕು. ಆಸ್ಪತ್ರೆಗೆ ಪ್ರತಿದಿನ ಹೊಸದಾಗಿ ಬರುವ ರೋಗಿಗಳು ಆಧಾರ್‌ ಎಂಟ್ರಿ ಮಾಡಿಸಬೇಕು. ಒಂದು ಬಾರಿ ಎಂಟ್ರಿಯಾದವರು ಮತ್ತೆ ಎಂಟ್ರಿ ಮಾಡಿಸಂಗಿಲ್ಲವಂತೆ. ಈ ಸಂಬಂಧ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಮಂಜುನಾಥ್‌ ಕನ್ನಡಪ್ರಭದೊಂದಿಗೆ ಮಾತನಾಡಿ, ಇದು ಕೇಂದ್ರ ಸರ್ಕಾರದ ಸೂಚನೆಯಾಗಿದೆ ಎಂದರು. ಆಧಾರ್‌ ಎಂಟ್ರಿಯಾಗದೆ ಚಿಕಿತ್ಸೆ ನೀಡಂಗಿಲ್ಲ ಎಂದು ಆದೇಶವಿದೆ ಹಾಗಾಗಿ, ಕಡ್ಡಾಯವಾಗಿ ಆಧಾರ್‌ ಎಂಟ್ರಿ ಮಾಡಿಸಬೇಕಿದ್ದು ಸರ್ಕಾರದ ನಿಯಮ ಪಾಲಿಸುವುದು ಆಸ್ಪತ್ರೆಯ ಕೆಲಸ ಎಂದರು.

ಬಿಪಿಎಲ್‌ ಪಡಿತರ ಕಾರ್ಡ್‌ದಾರರಿಗೆ 5 ಲಕ್ಷವರೆಗೆ ಉಚಿತ ಚಿಕಿತ್ಸೆ

ಇದು ಕೇಂದ್ರ ಸರ್ಕಾರದ ಆದೇಶ. ಸರ್ಕಾರದ ಆದೇಶದಂತೆ ಚಿಕಿತ್ಸೆಗೆ ಆಧಾರ್‌ ಕಡ್ಡಾಯಗೊಳಿಸಲಾಗಿದೆ. ಆಧಾರ್‌ ಎಂಟ್ರಿಯಾದ ಬಳಿಕವೇ ಚಿಕಿತ್ಸೆ ನೀಡುವಂತೆ ಸೂಚನೆಯಿದೆ.

-ಡಾ.ಮಂಜುನಾಥ್‌, ವೈದ್ಯಾಧಿಕಾರಿ

ತುರ್ತು ಚಿಕಿತ್ಸೆಯ ಸಮಯದಲ್ಲಿ ಆಧಾರ್‌ ಎಂಟ್ರಿ ಕಡ್ಡಾಯ ಸರಿಯಲ್ಲ, ಆಧಾರ್‌ ಇದ್ದು ಮೊಬೈಲ್‌ ಇಲ್ಲದವರ ಸಂಖ್ಯೆಯೂ ಹೆಚ್ಚಿದೆ, ಸರ್ಕಾರದ ಆದೇಶದಿಂದ ಜನ ಸಾಮಾನ್ಯರಿಗೆ ತೊಂದರೆ ಆಗುತ್ತಿದೆ.

-ಹರೀಶ್‌, ಮಂಚಹಳ್ಳಿ

click me!