
ಮೂತ್ರ (Urine) ವಿಸರ್ಜಿಸುವಾಗ ಉರಿ ಅನುಭವ ಉಂಟಾಗುವುದು ಸಾಮಾನ್ಯ. ಇದಕ್ಕೆ ಒಂದು ಮುಖ್ಯ ಕಾರಣ ಹೆಚ್ಚಿನ ಪ್ರಮಾಣದಲ್ಲಿ ನೀರು (Water) ಕುಡಿಯದಿರುವುದು. ದೇಹಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಲಭ್ಯವಾಗದಿದ್ದಾಗ ಉರಿಮೂತ್ರದ ಸಮಸ್ಯೆ (Urinary Infections) ಕಾಣಿಸಿಕೊಳ್ಳುತ್ತದೆ. ಉರಿಮೂತ್ರಕ್ಕೆ ಇನ್ನೊಂದು ಮುಖ್ಯ ಕಾರಣವೆಂದರೆ ಮೂತ್ರನಾಳಗಳಲ್ಲಿ ಕಂಡು ಬರುವ ಸೋಂಕು. ಮೂತ್ರನಾಳಗಳಲ್ಲಿ ಏನಾದರೂ ಸೋಂಕಿದ್ದರೆ ಉರಿಯೂತ್ರದ ಸಮಸ್ಯೆ ಕಂಡು ಬರುತ್ತದೆ. ಇಂಥಾ ಸಮಸ್ಯೆ ಕಂಡು ಬಂದರೆ ಮೂತ್ರ ವಿಸರ್ಜಿಸಿದ ಬಳಿಕವೂ ಮೂತ್ರ ಬರುತ್ತಿರುತ್ತದೆ ಮತ್ತು ಇದು ಕಂಟ್ರೋಲ್‌ಗೆ ಬರುವುದಿಲ್ಲ. ಇದು ದೈಹಿಕವಾಗಿಯೂ, ಮಾನಸಿಕವಾಗಿಯೂ ತೊಂದರೆಯನ್ನುಂಟು ಮಾಡುತ್ತದೆ.
ಉರಿಮೂತ್ರದ ಲಕ್ಷಣಗಳು ಹೀಗಿವೆ
ಮೂತ್ರ ವಿಸರ್ಜಿಸುವಾಗ ಸುಡುವ ಸಂವೇದನೆ
ಆಗಾಗ ಮೂತ್ರ ವಿಸರ್ಜನೆಯಾಗುವುದು
ಗಾಢವಾಗಿ ಮೂತ್ರ ಬರುವುದು
ಬಲವಾದ ವಾಸನೆಯೊಂದಿಗೆ ಮೂತ್ರ
ಸ್ನಾನ ಮಾಡುವಾಗ ಜೊತೆಯಲ್ಲೇ ಮೂತ್ರ ಮಾಡ್ತೀರಾ ? ಆರೋಗ್ಯಕ್ಕೆಷ್ಟು ತೊಂದ್ರೆಯಿದೆ ತಿಳ್ಕೊಳ್ಳಿ
ಮೂತ್ರನಾಳದ ಸೋಂಕುಗಳು ಬಹಳ ಸಾಮಾನ್ಯವಾಗಿದೆ, ಪ್ರತಿ ವರ್ಷ ವಿಶ್ವಾದ್ಯಂತ ಸುಮಾರು 150 ಮಿಲಿಯನ್ ಜನರು ಈ ಸಮಸ್ಯೆಯಿಂದ ಬಳಲುತ್ತಾರೆ. ಯುಟಿಐಗಳು ಯಾರಿಗಾದರೂ ಪರಿಣಾಮ ಬೀರಬಹುದಾದರೂ, ಮಹಿಳೆಯರು ಸೋಂಕಿಗೆ ಹೆಚ್ಚು ಒಳಗಾಗುತ್ತಾರೆ ವಿಶ್ವಾಸಾರ್ಹ ಮೂಲ. ಏಕೆಂದರೆ ಮೂತ್ರಕೋಶದಿಂದ ಮೂತ್ರವನ್ನು ಹೊರಕ್ಕೆ ಸಾಗಿಸುವ ಮೂತ್ರನಾಳವು ಪುರುಷರಿಗಿಂತ ಮಹಿಳೆಯರಲ್ಲಿ ಚಿಕ್ಕದಾಗಿದೆ. ಕಡಿಮೆ ಅಂತರವು ಬ್ಯಾಕ್ಟೀರಿಯಾವನ್ನು ಪ್ರವೇಶಿಸಲು ಮತ್ತು ಮೂತ್ರಕೋಶವನ್ನು ತಲುಪಲು ಸುಲಭಗೊಳಿಸುತ್ತದೆ.
ಉರಿಮೂತ್ರದ ಸಮಸ್ಯೆಗೆ ಪರಿಹಾರವೇನು ?
1. ಹೆಚ್ಚು ನೀರು ಕುಡಿಯಿರಿ: ಉರಿಮೂತ್ರದ ಸಮಸ್ಯೆ ಕಡಿಮೆಯಾಗಬೇಕೆಂದರೆ ನೀವು ಮೊದಲು ಮಾಡಬೇಕಾದ ಕೆಲಸ ಹೆಚ್ಚೆಚ್ಚು ನೀರು ಕುಡಿಯಬೇಕು. ಅದು ನೀರು, ಎಳನೀರು, ಜ್ಯೂಸ್, ನೀರು ತುಂಬಿದ ತರಕಾರಿಗಳು ಯಾವುದೇ ರೂಪದಲ್ಲಾದರೂ ಸರಿ. ನೀರಿನಂಶವುಗಳ್ಳ ಹಣ್ಣು (Fruits), ತರಕಾರಿ (Vegetables)ಗಳನ್ನು ಹೆಚ್ಚು ಕುಡಿಯುವುದರಿಂದಲೂ ಉರಿಮೂತ್ರದ ಸಮಸ್ಯೆ ಕಡಿಮೆ ಮಾಡಿಕೊಳ್ಳಬಹುದು.
2. ವಿಟಮಿನ್ ಸಿ ಹೆಚ್ಚು ಸೇವಿಸಿ: ಪ್ರತಿನಿತ್ಯ ದಾಳಿಂಬೆ (Pomogranate) ರಸ ಸೇವನೆ ಮಾಡಿ. ದಾಳಿಂಬೆ ಹಣ್ಣಿನಲ್ಲಿರುವ ಆಂಟಿ ಆಕ್ಸಿಡೆಂಟ್ ಗಳು ಉರಿಮೂತ್ರ ಸಮಸ್ಯೆಯನ್ನು ಕಡಿಮೆ ಮಾಡುತ್ತವೆ. ವಿಟಮಿನ್ ಸಿ ಅಂಶ ಹೆಚ್ಚಿರುವ ಕಿತ್ತಳೆ ಹಣ್ಣು, ದ್ರಾಕ್ಷಿ ಹಾಗೂ ಕೀವಿ ಹಣ್ಣುಗಳನ್ನು ತಿನ್ನುವುದರಿಂದ ಉರಿ ಮೂತ್ರವನ್ನು ನಿಯಂತ್ರಣಕ್ಕೆ ತರಬಹುದು. ವಿಟಮಿನ್ (Vitamin) ಸಿ ಮೂತ್ರದ ಆಮ್ಲೀಯತೆಯನ್ನು ಹೆಚ್ಚಿಸುವ ಮೂಲಕ ಕೆಲಸ ಮಾಡುತ್ತದೆ ಎಂದು ಭಾವಿಸಲಾಗಿದೆ, ಇದರಿಂದಾಗಿ ಸೋಂಕನ್ನು ಉಂಟುಮಾಡುವ ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ.
Blood in Urine: ಮೂತ್ರದ ಬಣ್ಣ ಬದಲಾಗೋದ್ಯಾಕೆ? ಎಚ್ಚರಿಕೆ ವಹಿಸಿ
2007ರ ಹಳೆಯ ಅಧ್ಯಯನವು ಗರ್ಭಿಣಿ ಮಹಿಳೆಯರಲ್ಲಿ ಯುಟಿಐಗಳ ವಿಶ್ವಾಸಾರ್ಹ ಮೂಲವು ಪ್ರತಿದಿನ 100 ಮಿಲಿಗ್ರಾಂ ವಿಟಮಿನ್ ಸಿ ತೆಗೆದುಕೊಳ್ಳುವ ಪರಿಣಾಮಗಳನ್ನು ನೋಡಿದೆ. ವಿಟಮಿನ್ ಸಿ ರಕ್ಷಣಾತ್ಮಕ ಪರಿಣಾಮವನ್ನು ಹೊಂದಿದೆ ಎಂದು ಅಧ್ಯಯನವು ಕಂಡುಹಿಡಿದಿದೆ, ನಿಯಂತ್ರಣ ಗುಂಪಿನೊಂದಿಗೆ ಹೋಲಿಸಿದರೆ ವಿಟಮಿನ್ ಸಿ ತೆಗೆದುಕೊಳ್ಳುವವರಲ್ಲಿ ಅರ್ಧಕ್ಕಿಂತ ಹೆಚ್ಚು ಯುಟಿಐಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
3. ಸಿಹಿಗೊಳಿಸದ ಕ್ರ್ಯಾನ್ಬೆರಿ ರಸವನ್ನು ಕುಡಿಯಿರಿ: ಸಿಹಿಗೊಳಿಸದ ಕ್ರ್ಯಾನ್ಬೆರಿ ರಸವನ್ನು ಕುಡಿಯುವುದು ಮೂತ್ರನಾಳದ ಸೋಂಕುಗಳಿಗೆ ಅತ್ಯಂತ ಪ್ರಸಿದ್ಧವಾದ ನೈಸರ್ಗಿಕ ಪರಿಹಾರಗಳಲ್ಲಿ ಒಂದಾಗಿದೆ. ಸಿಹಿಗೊಳಿಸದ ಕ್ರ್ಯಾನ್ಬೆರಿ ರಸವನ್ನು ಕುಡಿಯುವುದು ಇಷ್ಟವಿಲ್ಲದಿದ್ದರೆ ಇದನ್ನು ಕ್ಯಾಪ್ಸುಲ್ ರೂಪದಲ್ಲಿ ತೆಗೆದುಕೊಳ್ಳಬಹುದು. ಕ್ರ್ಯಾನ್‌ಬೆರಿಗಳು ಮೂತ್ರದ ಪ್ರದೇಶಕ್ಕೆ ಅಂಟಿಕೊಳ್ಳುವ ಬ್ಯಾಕ್ಟೀರಿಯಾವನ್ನು ತಡೆಗಟ್ಟುವ ಮೂಲಕ ಕಾರ್ಯನಿರ್ವಹಿಸುತ್ತವೆ, ಹೀಗಾಗಿ ಸೋಂಕನ್ನು ತಡೆಯುತ್ತದೆ.
4. ಆಹಾರ ಸೇವಿಸಿದ ಬಳಿಕ ಸೋರೆಕಾಯಿ ರಸ: ಆಹಾರ ಸೇವಿಸಿದ ಬಳಿಕ ಸೋರೆಕಾಯಿ ರಸಕ್ಕೆ ನಿಂಬೆಹಣ್ಣಿನ ರಸ ಸೇರಿಸಿ ಕುಡಿಯುವುದರಿಂದ ಸಹ ಉರಿಯೂತ್ರ ಸಮಸ್ಯೆಯನ್ನು ಸುಲಭವಾಗಿ ನಿವಾರಿಸಿಕೊಳ್ಳಬಹುದು. ತಿಳಿ ಮಜ್ಜಿಗೆಗೆ ನಿಂಬೆ ರಸ ಹಾಗೂ ಕಲ್ಲು ಸಕ್ಕರೆ ಮಿಕ್ಸ್ ಮಾಡಿ ಪ್ರತಿನಿತ್ಯ ಕುಡಿಯುವುದರಿಂದಲೂ ಉರಿಮೂತ್ರ ಸಮಸ್ಯೆಯನ್ನು ಹೋಗಲಾಡಿಸಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.