ನೋವು ಯಾವುದೇ ಆಗಿದ್ರೂ ಸಹಿಸಿಕೊಳ್ಳೋದು ಕಷ್ಟ. ಅನಿವಾರ್ಯ ಕಾರಣಕ್ಕೆ ಗಂಟೆಗಟ್ಟಲೆ ಕುಳಿತು ಕೆಲಸ ಮಾಡುವ ಜನರಿಗೆ ನಂತ್ರ ಪಾದದಲ್ಲಾಗುವ ನೋವು, ಊತ ಸಹಿಸಲು ಅಸಾಧ್ಯ ಎನ್ನಿಸುತ್ತದೆ. ಅಂಥವರು ಕೆಲ ಸುಲಭ ಮನೆ ಮದ್ದಿನ ಮೂಲಕ ನೋವಿಗೆ ಗುಡ್ ಬೈ ಹೇಳ್ಬಹುದು.
ಕೆಲಸದಲ್ಲಿ ಜನರು ತಮ್ಮ ಆರೋಗ್ಯ ಮರೆಯುವುದು ಸಾಮಾನ್ಯ ಸಂಗತಿಯಾಗಿದೆ. ಕೆಲಸ, ಒತ್ತಡದಿಂದಾಗಿ ಜನರು ಅನಾರೋಗ್ಯಕ್ಕೆ ಒಳಗಾಗ್ತಿದ್ದಾರೆ. ಅದ್ರಲ್ಲೂ ಕಚೇರಿಯಲ್ಲಿ ಐದಾರು ಗಂಟೆ ಕುಳಿತು ಕೆಲಸ ಮಾಡುವ ಉದ್ಯೋಗಿಗಳಿಗೆ ಅನೇಕಾನೇಕ ಅನಾರೋಗ್ಯ ಕಾಡ್ತಿದೆ. ಬೆನ್ನು, ಸೊಂಟು ನೋವಿನಿಂದ ಹಿಡಿದು ದೃಷ್ಟಿ ಸಮಸ್ಯೆ ಸೇರಿದಂತೆ ಕಾಲು ಊದಿಕೊಳ್ಳುವುದು ಕೂಡ ಇದ್ರಲ್ಲಿ ಸೇರಿದೆ. ಒಂದೇ ಭಂಗಿಯಲ್ಲಿ ಗಂಟಗಟ್ಟಲ ಕುಳಿತಾಗ ರಕ್ತ ಪರಿಚಲನೆ ಸರಿಯಾಗಿ ಆಗುವುದಿಲ್ಲ. ಇದ್ರಿಂದ ಕಾಲು ಊದಿಕೊಳ್ಳುತ್ತದೆ. ಬರೀ ಇದೊಂದೇ ಕಾರಣಕ್ಕಲ್ಲ ಕಾಲು ಊದಿಕೊಳ್ಳಲು ಇನ್ನೂ ಅನೇಕ ಕಾರಣವಿದೆ. ತುಂಬಾ ಸಮಯ ಟ್ರಾವೆಲ್ ಮಾಡಿದ್ರೆ, ಎತ್ತರದ ಪ್ರದೇಶವನ್ನು ಹತ್ತಿದ್ರೆ ಇಲ್ಲವೆ ಸಾಕಷ್ಟು ಓಡಾಟ ಕೂಡ ಪಾದದ ಊತ ಹಾಗೂ ನೋವಿಗೆ ಕಾರಣವಾಗುತ್ತದೆ. ಈ ನೋವು ಒಮ್ಮೊಮ್ಮೆ ವಿಪರೀತವಾಗಿರುತ್ತದೆ. ಅದನ್ನು ಸಹಿಸಲು ಕಷ್ಟವೆನ್ನುವಂತಾಗುತ್ತದೆ. ಮಾರುಕಟ್ಟೆಯಲ್ಲಿ ನೋವಿಗೆ ಸಾಕಷ್ಟು ಮಾತ್ರೆಗಳಿವೆ. ಆದ್ರೆ ಈ ಮಾತ್ರೆಗಳ ಸೇವನೆಯಿಂದ ಆರೋಗ್ಯ ಸುಧಾರಿಸುವ ಬದಲು ಹದಗೆಡುವುದು ಹೆಚ್ಚು. ಹಾಗಾಗಿ ಪಾದದ ಊತ ಹಾಗೂ ನೋವಿಗೆ ಕೆಲ ಮನೆ ಮದ್ದುಗಳನ್ನು ಮಾಡಬಹುದು.
ಪಾದ (Foot) ದ ಊತಕ್ಕೆ ಮನೆ ಮದ್ದು (Home Remedy) :
ಐಸ್ ಪ್ಯಾಕ್ (Ice Pack) ನಲ್ಲಿದೆ ನೋವಿಗೆ ಪರಿಹಾರ : ಕಾಲುಗಳ ಊತ ವಿಪರೀತವಾಗಿದ್ರೆ ನೀವು ಐಸ್ ಪ್ಯಾಕ್ ಕೂಡ ಬಳಸಬಹುದು. ಐಸ್ ಪ್ಯಾಕ್‌ಗಳನ್ನು ನೀವು ನೇರವಾಗಿ ಊದಿರುವ ಜಾಗಕ್ಕೆ ಇಡಲು ಸಾಧ್ಯವಿಲ್ಲ. ಒಂದು ಬಟ್ಟೆ ಅಥವಾ ಟವೆಲ್ ನಲ್ಲಿ ಐಸ್ ಪ್ಯಾಕ್ ಸುತ್ತಿ. ನಂತ್ರ ಆ ಬಟ್ಟೆಯನ್ನು ನೋವಿರುವ ಜಾಗದ ಮೇಲೆ ನಿಧಾನವಾಗಿ ಇಡಿ. ಐಸ್ ಪ್ಯಾಕ್ (Ice Pack) ನೋವು ನಿವಾರಕವಾಗಿ ಕೆಲಸ ಮಾಡುತ್ತದೆ. ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ. ಐಸ್ ಪ್ಯಾಕ್ ಬಳಕೆಯಿಂದ ಉರಿಯೂತವೂ ನಿಧಾನವಾಗಿ ಶಮನವಾಗುತ್ತದೆ. ನೋವು ಬೇಗ ಕಡಿಮೆಯಾಗ್ಬೇಕೆಂದ್ರೆ ನೀವು ದಿನಕ್ಕೆ ಎರಡು ಬಾರಿ ಐಸ್ ಪ್ಯಾಕ್ ಇಡಬೇಕು.
ಪಾದದ ನೋವಿಗೆ ಮಸಾಜ್ ಮ್ಯಾಜಿಕ್ : ಪಾದಗಳ ಊತ ಕಡಿಮೆ ಮಾಡಲು ಮಸಾಜ್ ಕೂಡ ಪರಿಣಾಮಕಾರಿ ವಿಧಾನವಾಗಿದೆ. ಕೆಲವೊಂದು ಎಣ್ಣೆಗಳು ಊತವನ್ನು ಕಡಿಮೆ ಮಾಡಲು ನೆರವಾಗುತ್ತವೆ. ನೀವು ಸಾಸಿವೆ ಎಣ್ಣೆಯನ್ನು ಪಾದದ ಊತಕ್ಕೆ ಬಳಸಬಹುದು. ಸಾಸಿವೆ ಎಣ್ಣೆಯನ್ನು ಸ್ವಲ್ಪ ಬೆಚ್ಚಗೆ ಮಾಡಿ ಅದನ್ನು ಊದಿರುವ ಜಾಗಕ್ಕೆ ಹಚ್ಚಬೇಕು. ನಂತ್ರ ನಿಧಾನವಾಗಿ ಮಸಾಜ್ ಮಾಡ್ಬೇಕು. ಮಜಾಸ್ ಹೆಸರಿನಲ್ಲಿ ಎಲ್ಲ ಭಾರವನ್ನು ಪಾದದ ಮೇಲೆ ಹಾಕ್ಬೇಡಿ. ಒಂದು ಹತ್ತು ನಿಮಿಷ ಮಸಾಜ್ ಮಾಡಿದ್ರೆ ಸ್ನಾಯುಗಳಲ್ಲಿ ರಕ್ತ ಪರಿಚಲನೆ ಸುಧಾರಿಸುತ್ತದೆ. ಸಾಸಿವೆ ಎಣ್ಣೆ ಮಾತ್ರವಲ್ಲ ನೀವು ತೆಂಗಿನ ಎಣ್ಣೆಯನ್ನು ಕೂಡ ಮಸಾಜ್ ಗೆ ಬಳಸಬಹುದು. ತೆಂಗಿನ ಎಣ್ಣೆಯನ್ನು ನೋವಿರುವ ಜಾಗಕ್ಕೆ ಹಚ್ಚಿ ನಿಧಾನವಾಗಿ ಉಜ್ಜಬೇಕು. ಎಣ್ಣೆ ಹಾಕಿದ ಜಾಗ ಬಿಸಿಯಾಗುವಂತೆ ಮಸಾಜ್ ಮಾಡುವುದು ಮುಖ್ಯ.
ಕಣ್ಣುಗಳಲ್ಲಿ ಈ ಬದಲಾವಣೆ ಕಂಡ್ರೆ ಕಬ್ಬಿಣಾಂಶದ ಕೊರತೆ ಇದೆ ಎಂದರ್ಥ
ಅಕ್ಕಿ ನೀರಿನ ಜೊತೆ ಅಡಿಗೆ ಸೋಡಾ: ಅಕ್ಕಿ ತೊಳೆದ ನೀರು ಹಾಗೂ ಅಡುಗೆ ಸೋಡಾ ಕೂಡ ನಿಮಗೆ ಪರಿಹಾರ ನೀಡಬಲ್ಲದು. ಮೊದಲು ಅಕ್ಕಿ ಅಕ್ಕಿ ತೊಳೆದ ನೀರನ್ನು ಚೆನ್ನಾಗಿ ಕುದಿಸಿ. ಅದಕ್ಕೆ ಅಡುಗೆ ಸೋಡಾ ಸೇರಿಸಿ. ನಂತ್ರ ನೀರು ತಣ್ಣಗಾದ್ಮೇಲೆ ನೋವಿರುವ ಜಾಗಕ್ಕೆ ಇದನ್ನು ಹಚ್ಚಿ. ಒಂದು 15 ನಿಮಿಷ ಹಾಗೆಯೇ ಬಿಡಿ. ನಂತ್ರ ಕಾಲುಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳಿ. ಈ ಮಿಶ್ರಣ ಕೂಡ ನಿಮ್ಮ ಪಾದದ ಊತವನ್ನು ಕಡಿಮೆ ಮಾಡುತ್ತದೆ.
ಬಾಯಿ, ಹಲ್ಲಿನಷ್ಟೇ ಒಸಡಿನ ಆರೋಗ್ಯದ ಕಡೆಗೂ ಇರಲಿ ಕಾಳಜಿ
ಪಾದದ ಊತಕ್ಕೆ ಕಲ್ಲು ಉಪ್ಪು : ಕಾಲುಗಳ ಊತವನ್ನು ಕಡಿಮೆ ಮಾಡಲು ಕಲ್ಲು ಉಪ್ಪನ್ನು ನೀವು ಬಳಕೆ ಮಾಡ್ಬಹುದು. ಅರ್ಧ ಬಕೆಟ್ ಉಗುರು ಬೆಚ್ಚಗಿನ ನೀರಿಗೆ ಕಲ್ಲು ಉಪ್ಪ ಹಾಕಿ ಚೆನ್ನಾಗಿ ಮಿಕ್ಸ್ ಮಾಡಬೇಕು. ಈ ನೀರಿನಲ್ಲಿ ನಿಮ್ಮ ಕಾಲುಗಳನ್ನು 15 ನಿಮಿಷ ಇಡಿ. ನಂತ್ರ ಪಾದಗಳನ್ನು ಸ್ವಚ್ಛಗೊಳಿಸಿಕೊಳ್ಳಿ. ಇದು ಪಾದದ ಊತಕ್ಕೆ ಮಾತ್ರವಲ್ಲ ನೋವು ಹಾಗೂ ಪಾದದ ಉರಿಗೂ ಪರಿಹಾರ ನೀಡುತ್ತದೆ.